Ad
Home ಅರೋಗ್ಯ ನಿಮ್ಮ ಮನೆಯ ಶೈಲಿಯನ್ನೇ ಬದಲಿಸುತ್ತೆ ಈ ಒಂದು ಕಾರಂಜಿ ಹೇಗೆ ಗೊತ್ತ …!!!

ನಿಮ್ಮ ಮನೆಯ ಶೈಲಿಯನ್ನೇ ಬದಲಿಸುತ್ತೆ ಈ ಒಂದು ಕಾರಂಜಿ ಹೇಗೆ ಗೊತ್ತ …!!!

ಇವತ್ತಿನ ದಿವಸಗಳಲ್ಲಿ ಮನೆಯ ಅನ್ನೋ ಕಟ್ಟಿಸಿಕೊಳ್ಳುವುದು ಕೂಡ ತಮ್ಮ ಕನಸಿಗೆ ತಕ್ಕಹಾಗೆ ಹಾಗೂ ಮನೆ ಕಟ್ಟಿಸಿದ ನಂತರ ಮನೆಯನ್ನು ಅಲಂಕಾರ ಮಾಡುವುದಕ್ಕಾಗಿ ಕೂಡ ಜನ ಅಷ್ಟೇ ಕಷ್ಟ ಪಡುತ್ತಾರೆ ಮನೆ ಕಟ್ಟಿಸಿದರೆ ಸಾಲದು ಮನೆಯನ್ನು ಅದರ ತಕ್ಕ ಹಾಗೆ ಅಲಂಕಾರ ಮಾಡಬೇಕು ಆಗಲೇ ಮನೆಯ ಅಂದ ಚಂದ ಹೆಚ್ಚುತ್ತದೆ ಎಂದು ಹೇಳುವ ಜನರೇ ಹೆಚ್ಚು. ಇನ್ನು ನೀವು ಕೂಡ ಮನೆ ಕಟ್ಟಿಸಿದರೆ ಆ ಮನೆಯಲ್ಲಿ ಸದಾಕಾಲ ಶಾಂತಿ ನೆಮ್ಮದಿ ನೆಲಸಿರಬೇಕು ಎಂದರೆ ಈ ಪರಿಹಾರದ ಬಗ್ಗೆ ತಿಳಿಯಿರಿ ಹಾಗೂ ಮನೆ ಕಟ್ಟಿಸಬೇಕಂತ ಇದ್ದರೂ ಸಹ ಈ ವಿಚಾರವನ್ನು ತಿಳಿದು ತಪ್ಪದೆ ನಿಮ್ಮ ಅನುಕೂಲಕ್ಕಾಗಿ ಈ ಪರಿಹಾರವನ್ನು ಪಾಲಿಸಿಕೊಂಡು ಬನ್ನಿ.

ಹೌದು ಕಾರಂಜಿ ಕೇಳಿರುತ್ತೀರಾ ಇದನ್ನು ಆಂಗ್ಲ ಭಾಷೆಯಲ್ಲಿ ಫೌಂಟೇನ್ ಎಂದೂ ಕರೆಯುತ್ತಾರೆ. ಯಾರ ಮನೆಯಲ್ಲಿ ಫೌಂಟೇನ್ ಇರುತ್ತದೆ ಅಂಥವರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಹಾಗೂ ನೆಗೆಟಿವ್ ಎನರ್ಜಿ ಎಂಬುದು ಮನೆಯಲ್ಲಿರುವುದಿಲ್ಲ ಎಂಬ ಮಾತಿದೆ ಹಾಗೂ ಈ ಪರಿಹಾರವನ್ನು ಸಾಕಷ್ಟು ಜನರು ಪಾಲಿಸುತ್ತಿದ್ದಾರೆ ಕೂಡ.ಮನೆಯಲ್ಲಿ ಹೆಚ್ಚಿನ ಜನರು ಅಲಂಕಾರಕ್ಕಾಗಿ ಕಾರಂಜಿ ಅನ್ನು ಮಾರುಕಟ್ಟೆಯಿಂದ ಕೊಂಡು ಕೊಂಡು ಬಂದು ಮನೆಯಲ್ಲಿ ಇಟ್ಟಿರುತ್ತಾರೆ. ಆದರೆ ಆರ್ಟಿಫಿಷಿಯಲ್ ಆಗಿ ಕಾರಂಜಿ ಅನ್ನು ಮನೆಯ ಅಲಂಕಾರಕ್ಕಾಗಿಯೇ ತಂದು ಇಟ್ಟ ನಂತರವೂ ಕೂಡ ನೀವು ತಿಳಿಯಲೇಬೇಕಾದ ವಿಚಾರ ಏನು ಎಂದರೆ ಕಾರಂಜಿ ಅನ್ನೋ ಎಲ್ಲೆಂದರೆ ಅಲ್ಲಿ ಇಡುವಂತಿಲ್ಲ ತಪ್ಪದೆ ಈಶಾನ್ಯ ಮೂಲೆಯಲ್ಲಿ ಈ ಕಾರಂಜಿ ಅನ್ನೋ ಇರಿಸಬೇಕಾಗುತ್ತದೆ.

ಆರ್ಟಿಫಿಷಿಯಲ್ ಕಾರಂಜಿಯನ್ನು ತಂದು ಇಡುವುದಕ್ಕಿಂತ ಮನೆಯಲ್ಲಿ ದೊಡ್ಡ ಕಾರಂಜಿಯನ್ನು ಅಂದರೆ ಕೆಲವರು ಮನೆ ಕಟ್ಟಿಸುವಾಗಲೇ ಕಾರಂಜಿಯನ್ನು ಕೂಡ ಮಾಡಿಸಿರುತ್ತಾರೆ.ಈ ರೀತಿ ಕಾರಂಜಿಯನ್ನು ಈಶಾನ್ಯ ಮೂಲೆಯಲ್ಲಿ ಇರಿಸಬೇಕು ಹಾಗೂ ಇಲ್ಲಿ ಹರಿದ ನೀರು ಮನೆಯ ಹೊರಗೆ ಹರಿಯುವಂತಿಲ್ಲ. ಈ ರೀತಿ ಪರಿಹಾರವನ್ನು ಮಾಡಿಕೊಂಡು ಬಂದ ದೇಹದಲ್ಲಿ ಮನೆಯಲ್ಲಿ ನೆಗೆಟಿವ್ ಎನರ್ಜಿ ದೂರವಾಗುತ್ತದೆ ಹಾಗೂ ಮನೆಯಲ್ಲಿ ದಂಪತಿಗಳ ಮಧ್ಯೆ ಕಲಹ ಉಂಟಾಗುತ್ತಾ ಇದೆ ಅನ್ನುವವರು ತಪ್ಪದೆ ತಿಳಿಯಿರಿ ಮನೆಯ ಪೂರ್ವ ದಿಕ್ಕಿನಲ್ಲಿ ಲವ್ ಬರ್ಡ್ಸ್ ನ ಫೋಟೋವನ್ನು ಇರಿಸುವುದರಿಂದ ಕೂಡ ದಂಪತಿಗಳ ನಡುವಿನ ಕಿತ್ತಾಟ ಪರಿಹಾರವಾಗುತ್ತದೆ ಅಂತ ಸಹ ಹೇಳಲಾಗುತ್ತದೆ.

ಇನ್ನು ಮನೆಯಲ್ಲಿ ರೌದ್ರಾವತಾರ ತಾಳಿರುವ ದೇವರ ಫೋಟೋ ಆಗಲಿ ಅಥವಾ ನೆಗೆಟಿವ್ ಎನರ್ಜಿ ಹಬ್ಬಿಸುವಂತಹ ಫೋಟೋಗಳನ್ನು ಇರಿಸಬಾರದು ಎನ್ನುವ ಮನೆಯಲ್ಲಿ ಹರಿಯುವ ನೀರು ಪ್ರಶಾಂತವಾದ ಸಮುದ್ರದ ಫೋಟೊ ಇವುಗಳನ್ನು ಮನೆಯಲ್ಲಿ ಇರಿಸುವುದರಿಂದ ಇದು ಮನೆಯ ಸದಸ್ಯರ ಮನಸ್ಸಿನಲ್ಲಿ ಪ್ರಶಾಂತತೆಯನ್ನು ಕಾಪಾಡುತ್ತದೆ ಹಾಗೂ ನೆಗೆಟಿವ್ ಎನರ್ಜಿ ಹಬ್ಬುವುದನ್ನು ದೂರಮಾಡುತ್ತದೆ. ಈ ರೀತಿ ಕೆಲವೊಂದು ಬದಲಾವಣೆಗಳನ್ನು ಮನೆಯಲ್ಲಿ ಮಾಡಿಕೊಳ್ಳುವುದರಿಂದ ಇನ್ನೂ ಕಾರಂಜಿಯನ್ನು ಮನೇಲೇ ಇಟ್ಟುಕೊಂಡರು ಸಹ ಅದನ್ನು ಈಶಾನ್ಯ ಮೂಲೆಯಲ್ಲಿ ಇರಿಸುವುದರಿಂದ ಬಹಳ ಉತ್ತಮ ಫಲವನ್ನು ನೀವು ಪಡೆದುಕೊಳ್ಳಬಹುದು ಧನ್ಯವಾದಗಳು.

Exit mobile version