Ad
Home ಅರೋಗ್ಯ ನಿಮ್ಮ ಹೊಟ್ಟೆಯಲ್ಲಿ ಗ್ಯಾಸು , ಬೇಡವಾದ ಕಲ್ಮಶಗಳನ್ನ ಕಡಿಮೆ ಮಾಡುವ ಶಕ್ತಿಶಾಲಿ ಮನೆಮದ್ದು , ಒಂದು...

ನಿಮ್ಮ ಹೊಟ್ಟೆಯಲ್ಲಿ ಗ್ಯಾಸು , ಬೇಡವಾದ ಕಲ್ಮಶಗಳನ್ನ ಕಡಿಮೆ ಮಾಡುವ ಶಕ್ತಿಶಾಲಿ ಮನೆಮದ್ದು , ಒಂದು ಸಾರಿ ಬಳಸಿ ನೋಡಿದರೆ ಮತ್ತೆ ಮತ್ತೆ ಬಳಸುತ್ತೀರಿ…

ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಲ್ಲಿ ಈ ಪರಿಹಾರ ಪಾಲಿಸಿ ಇದರಿಂದ ಗ್ಯಾಸ್ಟ್ರಿಕ್ ತಕ್ಷಣಕ್ಕೆ ನಿವಾರಣೆಯಾಗುತ್ತದೆ, ಎದೆ ಉರಿ ಅಜೀರ್ಣತೆ ಹೊಟ್ಟೆ ಉಬ್ಬರಿಸುವುದು ಇಂತಹ ಯಾವುದೇ ಸಮಸ್ಯೆ ಕಾಡುತ್ತಿದ್ದಲ್ಲಿ ತಕ್ಷಣವೇ ಪರಿಹಾರಕ್ಕಾಗಿ ಈ ಪರಿಹಾರ ಪಾಲಿಸಿ.ನಮಸ್ಕಾರಗಳು ಗ್ಯಾಸ್ಟ್ರಿಕ್ ಸಮಸ್ಯೆ ಎಂಬುದು ಇಂದು ಬಹಳಷ್ಟು ಮಂದಿಯಲ್ಲಿ ಕಾಡುತ್ತಿದೆ ವಿಪರ್ಯಾಸ ಅಂದರೆ ಚಿಕ್ಕವರಲ್ಲಿಯೂ ಈ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಈ ಹೊಟ್ಟೆ ಉಬ್ಬರಿಸುವ ಸಮಸ್ಯೆ ನಿಮಗೂ ಕೂಡ ಬಾಧಿಸುತ್ತಿದ್ದಲ್ಲಿ ಈ ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಹೊಟ್ಟೆಉರಿ ಎದೆ ಉರಿ ಹುಳಿ ತೇಗು ಊಟ ಸೇರುತ್ತಿಲ್ಲ

ಈ ಎಲ್ಲ ತೊಂದರೆಗಳು ನಿಮ್ಮನ್ನು ಸಹ ಬಾಧಿಸುತ್ತಿದ್ದಲ್ಲಿ ಮಾಡಿ ಸರಳ ಉಪಾಯ, ಈ ಪರಿಹಾರವನ್ನು ಈ ವಿಧಾನವನ್ನು ನೀವು ಮನೆಯಲ್ಲೇ ಮಾಡಬಹುದು ಇದಕ್ಕಾಗಿ ನಿಮ್ಮ ಮನೆಯಲ್ಲಿ ಅಡುಗೆ ಮನೆಯಲ್ಲಿರುವ ಮಸಾಲೆ ಡಬ್ಬದಲ್ಲಿರುವ ಕೆಲವೊಂದು ಪದಾರ್ಥಗಳೇ ಸಾಕು ಗ್ಯಾಸ್ಟ್ರಿಕ್ ಮಂಗಮಾಯವಾಗುತ್ತೆ.ಹೌದು ಗ್ಯಾಸ್ಟ್ರಿಕ್ ಬಂದಾಗ ಊಟ ಬೇಡ ಅನಿಸುತ್ತೆ, ಕೆಲವರಿಗೆ ಹೊಟ್ಟೆ ಹಸಿದಿದ್ದರೂ ಊಟ ಬೇಡ ಅನಿಸುತ್ತೆ ಯಾಕೆಂದರೆ ಗ್ಯಾಸ್ಟ್ರಿಕ್ ಹುಳಿತೇಗು ಹೊಟ್ಟೆ ಉರಿ, ಈ ಎಲ್ಲಾ ಕಾರಣಗಳಿಂದ ಊಟ ಬೇಡ ಅನಿಸುತ್ತೆ ಆದರೆ ನೀವೇನಾದರೂ ಈ ಪರಿಹಾರ ಪಾಲಿಸಿದ್ದೇ ಆದಲ್ಲಿ ಹೊಟ್ಟೆ ತುಂಬ ಊಟ ಮಾಡುತ್ತೀರಾ

ತಿಂದ ತಕ್ಷಣ ಒಳ್ಳೆಯ ತೇಗು ಬರತ್ತೆ ಹೌದು ಇದಕ್ಕಾಗಿ ನೀವು ಮಾಡಬೇಕಿರುವುದೇನು ಗೊತ್ತಾ ಈ ಮನೆಮದ್ದು ಪಾಲಿಸುವುದಕ್ಕೆ ನಮಗೆ ಬೇಕಾಗಿರು ಪದಾರ್ಥಗಳು ಜೀರಿಗೆ ಮೆಣಸು ಬೆಳ್ಳುಳ್ಳಿ ಓಂಕಾಳು ಇದಿಷ್ಟು ಪದಾರ್ಥಗಳು ಬೇಕಾಗಿರುತ್ತದೆ ಮೊದಲು ಈ ಪದಾರ್ಥಗಳನ್ನು ಹುರಿದುಕೊಳ್ಳಬೇಕು ಹುರಿದಿಟ್ಟುಕೊಂಡ ನಂತರ ಪುಡಿ ಮಾಡಬೇಕು.ಅದೆಷ್ಟು ಯಾವುದೇ ಪರಿಹಾರ ಮಾಡಬೇಕಾದರೂ ನೈಸರ್ಗಿಕವಾಗಿ ಪರಿಹಾರ ಮಾಡಿಕೊಳ್ಳಿ ಈಗ ಹುರಿದು ಕೊಂಡ ನಂತರ ಈ ಪದಾರ್ಥಗಳನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ ಈ ಕುಟ್ಟಿ ಪುಡಿ ಮಾಡಿ ಕೊಂಡಂತಹ ಪುಡಿಗಳು ತುಂಬ ರುಚಿಯಾಗಿರುತ್ತದೆ ಹಾಗೂ ಆರೋಗ್ಯಕ್ಕೆ ಇನ್ನೂ ಸಹ ಒಳ್ಳೆಯದಾಗಿರುತ್ತದೆ ಹಾಗೂ ಈ ಪದಾರ್ಥಗಳಿಂದ ಇನ್ನೂ ಪ್ರಭಾವವಾಗಿ ನೀವು ಆರೋಗ್ಯಕರ ಲಾಭಗಳನ್ನು ಪಡೆದುಕೊಂಡು

ಆರೋಗ್ಯಕರ ಪ್ರಯೋಜನಗಳನ್ನೂ ಪಡೆದುಕೊಳ್ಳುತ್ತೀರಾ ಮತ್ತು ನಿಮ್ಮ ಆರೋಗ್ಯವನ್ನು ಇನ್ನಷ್ಟು ವೃದ್ಧಿಸುತ್ತದೆ. ಹಾಗಾಗಿ ನಾವು ಹೇಳಿದ ವಿಧಾನದಲ್ಲಿ ಅಂದರೆ ಆದಷ್ಟು ನೈಸರ್ಗಿಕ ವಿಧಾನದಲ್ಲಿ ಮನೆಮದ್ದುಗಳನ್ನು ಪಾಲಿಸಿ.ಈಗ ಈ ಕುಟ್ಟಿ ಪುಡಿ ಮಾಡಿ ಕೊಂಡಂತಹ ಪದಾರ್ಥಗಳನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ ಯಾರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಅಂಥವರು ಮಧ್ಯಾಹ್ನದ ಸಮಯದಲ್ಲಿ ಅನ್ನಕ್ಕೆ ಈ ಮಿಶ್ರಣವನ್ನು ಹಾಕಿ ಇದಕ್ಕೆ ಉಪ್ಪು ಹಾಕಿ ಮಿಶ್ರ ಮಾಡಿಕೊಂಡು ತಿನ್ನಬೇಕು ಈ ರೀತಿ ಮಾಡುವುದರಿಂದ ನಾಲಿಗೆಗೆ ರುಚಿ ದೊರೆಯುವುದಲ್ಲದೆ ನಿಮ್ಮ ಅಜೀರ್ಣದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಈ ಪರಿಹಾರ ಪಾಲಿಸುವುದರಿಂದ ಆಗುವ ಮತ್ತೊಂದು ಲಾಭವೇನು ಅಂದರೆ ಈ ಪರಿಹಾರವನ್ನು ಮಾಡುವುದರಿಂದ ನಿಮಗೆ ಹಸಿವೆ ಆಗುವುದಿಲ್ಲ ಆದರೆ ಸಮಯಕ್ಕೆ ಸರಿಯಾಗಿ ಹಸಿವಾಗುವ ಹಾಗೆ ನಿಮ್ಮ ದೇಹದ ಕ್ರಿಯೆಯನ್ನು ಬದಲಾಯಿಸಲು ಸಹ ಈ ಮನೆಮದ್ದು ಉಪಯುಕ್ತಕಾರಿಯಾಗಿದೆ.ಗ್ಯಾಸ್ಟ್ರಿಕ್ ಹುಳಿ ತೇಗು ಹೊಟ್ಟೆ ಉಬ್ಬರಿಸುವುದು ಇದೆಲ್ಲವೂ ತುಂಬಾ ಬಾಧೆ ನೀಡುವ ಸಮಸ್ಯೆಯಾಗಿದೆ ಹಾಗೂ ಇದಕ್ಕೆ ಮಾತ್ರೆ ತೆಗೆದುಕೊಂಡರೆ ತಕ್ಷಣಕ್ಕೆ ಪರಿಹಾರ ದೊರೆಯುವುದಿಲ್ಲ ಮತ್ತು ಗ್ಯಾಸ್ಟ್ರಿಕ್ ಉಂಟಾದಾಗ ಒಂದೇ ತೇಗು ಬಹಳಷ್ಟು ರಿಲೀಫ್ ನೀಡುತ್ತದೆ.ಆದರೆ ನೀವು ಈ ಜೀರಿಗೆ ಮೆಣಸು ಬೆಳ್ಳುಳ್ಳಿ ಓಂಕಾಳಿನ ಮಿಶ್ರಣದ ಪುಡಿಯನ್ನ ಅನ್ನದೊಂದಿಗೆ ಸೇವಿಸಿದರೆ ಜೀರ್ಣ ಕ್ರಿಯೆ ವೃದ್ಧಿಸಿ ಒಳ್ಳೆಯ ತೇಗು ಬರುತ್ತದೆ ಸಮಸ್ಯೆ ಬಹಳ ಬೇಗ ನಿವಾರಣೆಯಾಗುತ್ತದೆ.

Exit mobile version