Ad
Home ಎಲ್ಲ ನ್ಯೂಸ್ ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ…ಆ ದೃಶ್ಯ ನೋಡಿದ್ರೆ ಕಣ್ಣಲ್ಲಿ...

ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ…ಆ ದೃಶ್ಯ ನೋಡಿದ್ರೆ ಕಣ್ಣಲ್ಲಿ ನೀರು ಜಾರುತ್ತೆ…

ಹೌದು ಅಪ್ಪು ಇನ್ನಿಲ್ಲ ಅನ್ನೂವ ಮಾತು ಕನ್ನಡ ಜನತೆಯ ನಿದ್ರೆ ಕೆಡಿಸಿದೆ. ಹೌದು ಯಾಕಪ್ಪ ವಿಧಿ ಇಷ್ಟು ಕ್ರೂರಿ ನೀನು ಅನ್ನೋ ಜನರ ನಡುವೆ ದೇವರ ಪ್ರಾರ್ಥನೆ ಮಾಡುವವರು ಇನ್ನಷ್ಟು ಜನ. ಈ ವಿಚಾರ ಇನ್ನೂ ಕೂಡ ಸುಳ್ಳು ಮಾಡಪ್ಪ ಅಂತ ಬೇಡುವ ಮುಗ್ಧ ಮನಸ್ಸುಗಳ ಪ್ರಾರ್ಥನೆ ಯಾಕೆ ಆ ದೇವರು ಮುಟ್ಟಲಿಲ್ಲ. ಸೌದೆ ಹೃದಯಾಘಾತದಿಂದ ಅಸು ಅವರು ಇನ್ನಿಲ್ಲ ಎಂಬ ವಿಚಾರ ಕ್ಷಣಮಾತ್ರದಲ್ಲಿ ಇಡೀ ರಾಜ್ಯಾದ್ಯಂತ ಮಾತ್ರವಲ್ಲ ದೇಶಾದ್ಯಂತ ವೇ ಹಬ್ಬಿಬಿಟ್ಟಿತು ಎನ್ನುವ ಸೆಲೆಬ್ರಿಟಿಗಳು ಅಪ್ಪು ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಇವರು ಇಲ್ಲ ಅನ್ನೋ ನೋವು ಅವರ ಕುಟುಂಬಕ್ಕೆ ಬರಸಿಡಿಲು ನಂತೆ ಭಾರಿಸಿತ್ತು ಇಡೀ ಕುಟುಂಬ ವರ್ಗದ ಆಕ್ರಂದನ ಮುಗಿಲು ಮುಟ್ಟಿತ್ತು.

ಅಪ್ಪು ಅವರ ಸದಾಶಿವನಗದರ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ದೊಡ್ಮನೆಯ ಕಿರಿಯ ಪುತ್ರ ಇನ್ನಿಲ್ಲ ಎಂಬ ಆಘಾತದ ಸುದ್ದಿ ಬರುತ್ತಲೆ ಪುನೀತ್ ರಾಜ್‍ಕುಮಾರ್ ಅವರ ಇಡೀ ಕುಟುಂಬ ಕಣ್ಣೀರ ಕಡಲಿನಲ್ಲಿ ಮುಳುಗಿದೆ. ಪುನೀತ್ ಅವರ ನಿವಾಸ ಕಂಠೀರವ ಸ್ಟೇಡಿಯಂ ಮುಂದೆ ಅಪ್ಪು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತೂ.ಜಿಮ್ ಮಾಡುವ ವೇಳೆ ಸುಸ್ತಾಗಿ ಎದೆ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬ ವೈದ್ಯರ ಸಲಹೆ ಮೇರೆಗೆ ಗುರುವಾರ ಅಂದರೆ ಅ.೨೯ 11 ಗಂಟೆಯ ಸುಮಾರಿಗೆ ವಿಕ್ರಂ ಆಸ್ಪತ್ರೆಗೆ ಅಪ್ಪು ಅವರನ್ನು ದಾಖಲು ಮಾಡಲಾಗಿತ್ತು. ಆದರೆ ಅಷ್ಟೊತ್ತಿಗೆ ಆಗಲೆ ವಿಧಿ ತನ್ನ ಆಟ ಮುಗಿಸಿತ್ತು. ನಟ ಪುನೀತ್ ಇನ್ನಿಲ್ಲ ಎಂಬ ಸುದ್ದಿ ಬರುತ್ತಲೇ ಇಡಿ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಪತಿ ನಿಧನದ ಸುದ್ದಿ ಕೇಳುತ್ತ ಇದ್ದಂತೆಯೇ ಅಶ್ವಿನಿ ಕಣ್ಣೀರು ಇಡುತ್ತಲೇ ಮೌನಕ್ಕೆ ಶರಣಾಗಿದ್ದಾರೆ, ಹೌದು ನಂಬಲಾರದ ಈ ಘಟನೆ ಕೇಳಿ ನಟ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಮೌನಕ್ಕೆ ಶರಣಾಗಿದ್ದರು. ಇತ್ತ ಮಗಳು ಕೂಡ ಬಿಕ್ಕಿಬಿಕ್ಕಿ ಅಳುತ್ತಿದ್ದು, ಹಿರಿಯ ಮಗಳು ಧೃತಿ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಶನಿವಾರದ ಸಂಜೆಯ ಸಮಯಕ್ಕೆ ಬೆಂಗಳೂರು ಆಗಮಿಸಿದ ಭದ್ರತೆ ಈ ಕಾರಣಕ್ಕಾಗಿಯೇ ಪುನೀತ್ ಅವರ ಅಂತ್ಯಕ್ರಿಯೆ ಭಾನುವಾರ ಮಾಡುವುದಾಗಿ ನಿರ್ಧಾರ ಮಾಡಲಾಗಿತ್ತು.

ಪುನೀತ್ ಅವರ ನಿಧನದ ಸುದ್ದಿ ತಿಳಿದ ಸ್ನೇಹಿತರು, ಚಿತ್ರರಂಗದ ಕಲಾವಿದರು, ಗಣ್ಯರು ಆಸ್ಪತ್ರೆಗೆ ದೌಡಾಯಿಸಿದ್ದರು, ಹೌದು ಕರ್ನಾಟಕದ ಪ್ರೀತಿಯ ಸಿಎಂ ಬೊಮ್ಮಾಯಿ ಅವರು ಅಪ್ಪು ಇನ್ನಿಲ್ಲ ಎಂಬ ವಿಚಾರ ಕೇಳ್ತಿದ್ದ ಹಾಗೆ ಆಸ್ಪತ್ರೆಗೆ ಧಾವಿಸಿದ್ದರು ಏನೋ ಪುನೀತ್ ಅವರ ಕುಟುಂಬದವರ ಜತೆ ನಿಂತು ಅಂತ್ಯಕ್ರಿಯೆ ನಡೆಯುವ ವರೆಗೂ ಕೊನೆಸಾಗರ ಕುಟುಂಬದವರೊಡನೆ ಇದ್ದು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಶನಿವಾರದ ದಿನದಂದು ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಅಭಿಮಾನಿಗಳ ದರ್ಶನಕ್ಕೆಂದು ಕಂಠೀರವ ಸ್ಟೇಡಿಯಂನಲ್ಲಿ ಇರಿಸುವ ವ್ಯವಸ್ಥೆಯನ್ನು ಸರ್ಕಾರವೇ ಪೂರ್ತಿಯಾಗಿ ತೆಗೆದುಕೊಂಡಿದ್ದು ಅಭಿಮಾನಿಗಳು ಸಾಲು ಸಾಲಾಗಿ ಬಂದು ಪುನೀತ್ ಅವರ ಅಂತ್ಯ ದರ್ಶನವನ್ನು ಪಡೆದು ಕೊಂಡು ಹೋಗಿದ್ದರು. ಹೌದು ಶುಕ್ರವಾರ ದಿನದಂದು ಎಲ್ಲ ವ್ಯವಸ್ಥೆಯನ್ನು ಮಾಡಿದ್ದು ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ಅವರ ದರ್ಶನವನ್ನು ಲಕ್ಷಾಂತರ ಅಭಿಮಾನಿಗಳು ಸೆಲಬ್ರಿಟಿಗಳು ರಾಜಕಾರಣಿಗಳು ಜನಸಾಮಾನ್ಯರು ಪಡೆದುಕೊಂಡಿದ್ದರು.

ನೋಡಿ ನಮ್ಮ ನಟ ಪುನೀತ್ ರಾಜ್ ಕುಮಾರ್ ಅವರನ್ನು ಅಜಾತಶತ್ರು ಅಂತ ಕರೆಯಬಹುದು ಇವರ ದರ್ಶನ ಪಡೆಯುವುದಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದಲೂ ಜನರು ಆಗಮಿಸಿದ್ದರು ಇನ್ನು ವಯೋವೃದ್ಧರು ಸಹ ಕಣ್ಣೀರಿಟ್ಟು ಪುನೀತ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದ್ದರು ಹಾಗೆ ಮಕ್ಕಳ ಮನಸ್ಸು ಗೆದ್ದಿದ್ದ ಪುನೀತ್ ಅವರು ಪುನೀತ್ ಅವರು ಬೇಕೆಂದು ಮಕ್ಕಳು ಅಳುತ್ತಿದ್ದರು ಇವರ ಹಟವನ್ನು ತಾಳಲಾರದೆ ಪೋಷಕರು ಸುಳ್ಳು ಹೇಳಿರುವುದು ಕೂಡ ಉಂಟು. ಇನ್ನು ಪುನೀತ್ ಅವರನ್ನ ನೋಡುತ್ತಾ ಇದ್ದರೆ ಮನುಷ್ಯ ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ ಎಂಬುದು ಇದರಿಂದ ನಮಗೆ ತಿಳಿಯುತ್ತದೆ ಇವರು ಸದಾ ನಮ್ಮ ಕನ್ನಡ ಜನತೆಯ ಮನಸ್ಸಿನಲ್ಲಿ ಅಮರರಾಗಿರುತ್ತಾರೆ ಓಂ ಶಾಂತಿ.

Exit mobile version