ತಲೆನೋವು ಸಮಸ್ಯೆಗೆ ಮನೆಯಲ್ಲಿಯೇ ಇದೆ ಪರಿಹಾರ ತಲೆನೋವು ಎಂದು ಆಚೆ ಹೋಗ್ಬೇಡ್ರಿ ಅಥವಾ ಚುಚ್ಚುಮದ್ದು ಮಾತ್ರೆ ಔಷಧಿ ಬೇಡ್ವೇ ಬೇಡ!ನಮಸ್ಕಾರ ಓದುಗರೇ ನಿಮಗೆ ಸಹ ಈ ತಲೆ ನೋವು ಆಗಾಗ ಕಾಣಿಸಿಕೊಂಡು ಬಾಧೆ ನೀಡುತ್ತಾ ಇರುತ್ತದೆಯೆ? ಹಾಗಾದರೆ ತಲೆನೋವು ಸಮಸ್ಯೆಗೆ ಇಲ್ಲಿದೆ ನೋಡಿ ಬಹಳಷ್ಟು ವಿಧಾನಗಳು ಈ ತಲೆನೋವು ಪರಿಹಾರಕ್ಕೆ ಈ ಕೆಲವೊಂದು ವಿಧಾನಗಳನ್ನೂ ಪಾಲಿಸುತ್ತಾ ಬನ್ನಿ ನಿಮ್ಮ ಸಮಸ್ಯೆಗಳಿಗೆ ಶಮನ ಪಡೆದುಕೊಳ್ಳಿ ಹೌದು ಈ ತಲೆನೋವು ಹಲವು ಕಾರಣಗಳಿಗೆ ಬರುತ್ತೆ ಕೆಲವರಿಗೆ ಬಿಸಿಲಿಗೆ ಹೋದಾಗ ತಲೆನೋವು ಬಂದರೆ ಇನ್ನೂ ಕೆಲವರಿಗೆ ಸರಿಯಾದ ಸಮಯಕ್ಕೆ ಊಟ ಮಾಡದೇ ಇದ್ದಾಗ ತಲೆನೋವು ಇನ್ನು ಕೆಲವರಿಗೆ ಅಂದುಕೊಂಡ ಕೆಲಸ ಆಗದೆ ಹೋದಾಗ ಗಡಿಬಿಡಿಗೆ ತಲೆನೋವು ಬಂದರೆ ಇನ್ನೂ ಹಲವರಿಗೆ ಸ್ಟ್ರೆಸ್ ನಿಂದಾಗಿ ತಲೆನೋವು ಬಂದಿರುತ್ತೆ.
ಹೌದು ಹೆಚ್ಚಿನ ಮಂದಿಗೆ ಇವತ್ತಿನ ದಿನಗಳಲ್ಲಿ ಈ ಸ್ಟ್ರೆಸ್ ನಿಂದಾಗಿ ತಲೆನೋವು ಬಂದಿರುತ್ತದೆ. ಈ ಕಾರಣಕ್ಕೆ ತಲೆನೋವು ಬರುತ್ತದೆ ಅಂದರೆ ಮುಖ್ಯವಾಗಿ ನೀವು ಮಾಡಬೇಕಿರುವುದು ಏನು ಅಂದರೆ ಪ್ರೇಮ ಮತ್ತು ಧ್ಯಾನ ಹಾಗೂ ಅದಷ್ಟು ದಿನಕ್ಕೆ 1 ಗಂಟೆಗಳಾದರೂ ಒಂಟಿ ಯಾಕೆ ನೀವು ನಿಮ್ಮ ಸಮಯವನ್ನು ಕಳೆಯಬೇಕು ಈ ರೀತಿ ಮಾಡುವುದರಿಂದ ತಲೆನೋವು ಎಂಬುದು ಬಹಳ ಬೇಗ ಕಡಿಮೆಯಾಗುತ್ತದೆ.
ಮತ್ತೊಂದು ಪರಿಹಾರವೇನು ಅಂದರೆ ಹಲವು ಮಂದಿ ತಲೆನೋವು ಬಂದಾಗ ಕಾಫಿ ಕುಡಿತಾರೆ, ಹೌದು ಕಾಫಿಯಲ್ಲಿ ಇರುವ ಕೆಫೇನ್ ಅಂಶ ತಲೆನೋವು ನಿವಾರಣೆಗೆ ಸಹಕಾರಿಯಾಗಿದೆ. ಹಾಗಾಗಿ ಈ ಕೆಫೇನ್ ಅಂಶ ಇರುವ ಕಾಫಿ ಕುಡಿಯುವುದರಿಂದ ಅದರಲ್ಲೂ ಬ್ಲಾಕ್ ಕಾಫಿ ಕುಡಿಯುವುದರಿಂದ ತಲೆನೋವು ಬಹಳ ಬೇಗ ಕಡಿಮೆ ಆಗುತ್ತೆ .
ಬಜೆ ಇದನ್ನು ಮಕ್ಕಳ ತಾಯಿ ಅಂತ ಕೂಡ ಕರೆಯಲಾಗುತ್ತದೆ, ಈ ಬಜೆ ಅನ್ನು ಮನೆಗೆ ಒಯ್ಯಬೇಕು ಬಳಿಕ ಇದನ್ನು ಬಟ್ಟೆಯಲ್ಲಿ ಸಂಗ್ರಹ ಮಾಡಿ ಇದರ ವಾಸನೆಯನ್ನು ತೆಗೆದುಕೊಂಡು ಬಂದರೆ ತಲೆನೋವು ನಿವಾರಣೆಯಾಗುತ್ತದೆ.ಬಿಸಿಲಿಗೆ ಹೋಗಿ ಬಂದರೆ ಕಣ್ಣು ಮತ್ತು ತಲೆ ನೋಯುತ್ತದೆ ಅನ್ನುವವರು ಗಂಧವನ್ನು ತೇಯ್ದು ಹಣೆಯ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ತಲೆನೋವು ತಲೆ ಬಿಸಿ ಕಣ್ಣು ನೋವು ಕಡಿಮೆಯಾಗುತ್ತದೆ.
ಆಕಳಿನ ತುಪ್ಪಕ್ಕೆ ಬೆಲ್ಲವನ್ನು ಮಿಶ್ರಮಾಡಿ ತಿನ್ನುತ ಬರುವುದರಿಂದ ಕೂಡ ತಲೆನೋವು ಆದಷ್ಟು ಬೇಗ ನಿವಾರಣೆ ಆಗುತ್ತೆ.ಶುಂಠಿಯನ್ನು ತೇಯ್ದು ಅದರ ರಸಕ್ಕೆ ಸ್ವಲ್ಪ ಮೆಣಸಿನ ಪುಡಿಯನ್ನು ಮಿಶ್ರಮಾಡಿ ಪಟ್ಟಿ ಕಟ್ಟಬೇಕು ಈ ರೀತಿ ತಲೆನೋವು ಇರುವ ಭಾಗಕ್ಕೆ ಮಾಡುವುದರಿಂದ ಕೂಡ ತಲೆನೋವು ಕಡಿಮೆ ಆಗುತ್ತೆ.ನಿಂಬೆ ಹಣ್ಣಿನ ಹೋಳನ್ನು ತಲೆ ನೋವು ಇರುವ ಭಾಗದಲ್ಲಿ ಇಟ್ಟು ನೋವು ಇರುವ ಜಾಗಕ್ಕೆ ಮಸಾಜ್ ಮಾಡುವುದರಿಂದ ಕೂಡ ತಲೆನೋವು ಕಡಿಮೆಯಾಗುತ್ತದೆ.
ಕರ್ಪೂರವನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಇದಕ್ಕೆ ತುಪ್ಪ ಸೇರಿಸಿ ಪೇಸ್ಟ್ ಮಾಡಿಕೊಂಡು ತಲೆನೋವು ಇರುವ ಭಾಗಕ್ಕೆ ಲೇಪ ಮಾಡಿ ಸ್ವಲ್ಪ ಸಮಯ ಹಾಗೆ ಮಲಗುವುದರಿಂದ ತಲೆನೋವು ಕಡಿಮೆಯಾಗುತ್ತದೆ.ಮೊದಲಿಗೆ ಕಲ್ಲಿನ ಮೇಲೆ ನಿಂಬೆ ಹಣ್ಣಿನ ರಸವನ್ನು ಹಾಕಿ ಬಳಿಕ ದಾಲ್ಚಿನ್ನಿ ಚಕ್ಕೆಯನ್ನು ಇದರ ಮೇಲೆ ಉಜ್ಜಬೇಕು ಅಂದರೆ ತೇಯಬೇಕು, ಬಳಿಕ ಬಂದ ಗಂಧವನ್ನು ತಲೆನೋವು ಇರುವ ಭಾಗಕ್ಕೆ ದಪ್ಪನಾಗಿ ಹಚ್ಚಬೇಕು, ಇದರಿಂದ ಕೂಡ ತಲೆನೋವು ನಿವಾರಣೆಯಾಗುತ್ತದೆ.ನುಗ್ಗೆ ಸೊಪ್ಪನ್ನು ತೆಗೆದುಕೊಂಡು ಅದರಿಂದ ರಸವನ್ನು ಬೇರ್ಪಡಿಸಿ ಇದಕ್ಕೆ ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಾಕಿ ತಲೆನೋವು ಇರುವ ಭಾಗಕ್ಕೆ ಹಚ್ಚುತ್ತಾ ಬರುವುದರಿಂದ ತಲೆನೋವು ತಲೆ ನೋವಿನ ತೀವ್ರತೆ ಕಡಿಮೆಯಾಗುತ್ತದೆ.