Ad
Home ಅರೋಗ್ಯ ಬಿಸಿ ನೀರಿಗೆ ಈ ಒಂದು ವಸ್ತುವನ್ನು ಬೆರೆಸಿ ತಿನ್ನಿರಿ ಸಾಕು ಮಲಬದ್ಧತೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು…

ಬಿಸಿ ನೀರಿಗೆ ಈ ಒಂದು ವಸ್ತುವನ್ನು ಬೆರೆಸಿ ತಿನ್ನಿರಿ ಸಾಕು ಮಲಬದ್ಧತೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು…

ಈ ದಿನದ ಮಾಹಿತಿಯಲ್ಲಿ ಮಲಬದ್ಧತೆ ಸಮಸ್ಯೆಗೆ 2 ವಿಧಾನ ತಿಳಿಸುತ್ತೇವೆ, ಈ ಮನೆಮದ್ದನ್ನು ನೀವು ಕೂಡ ಪಾಲಿಸುವುದರಿಂದ ಮಲಬದ್ಧತೆ ಎಂಬ ಸಮಸ್ಯೆಗೆ ಪೂರ್ಣವಾಗಿ ಗುಡ್ ಬೈ ಹೇಳಬಹುದು. ಹಾಗಾದರೆ ಮಲಬದ್ಧತೆ ಸಮಸ್ಯೆಗೆ ಮಾಡಬಹುದಾದ ಸರಳ ವಿಧಾನವನ್ನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ.

ನಮಸ್ಕಾರಗಳು ಸ್ನೇಹಿತರೇ ಇವತ್ತಿನ ದಿನಗಳಲ್ಲಿ ಹೆಚ್ಚಿನ ಮಂದಿಗೆ ಮಲಬದ್ಧತೆ ಎಂಬ ಸಮಸ್ಯೆ ಕಾಡುತ್ತಾ ಇದೆ. ಆದರೆ ಇದೊಂದು ಸಮಸ್ಯೆ ಕಾಡುತ್ತಿರುವುದು ಹಲವರ ಗಮನಕ್ಕೆ ಬಂದಿರುವುದಿಲ್ಲ ತಮ್ಮ ಸಮಯ ಸೇವ್ ಮಾಡುವುದಕ್ಕೆ ಬೆಳಗಿನ ನಿತ್ಯ ಕರ್ಮಗಳನ್ನ ಮುಗಿಸಿ ಹಾಗೆ ಟೈಮ್ ಸಿಕ್ಕಿತು ಎಂದು, ಆಫೀಸ್ ಕಡೆ ಓಡುವ ಮಂದಿಯೇ ಹೆಚ್ಚು.

ಹೌದು ಈ ರೀತಿ ನೀವು ಕೂಡ ನಿಮ್ಮ ದಿನನಿತ್ಯದ ಬದುಕಿನಲ್ಲಿ ಮಾಡಿರುತ್ತೀರಿ, ಆದರೆ ಈ ತಪ್ಪನ್ನು ನೀವು ಮಾಡುತ್ತಿದ್ದೀರ ಎಂದರೆ ಅದನ್ನು ಸರಿಪಡಿಸಿಕೊಳ್ಳಿ ಯಾಕೆಂದರೆ ಮುಂದೊಂದು ದಿನ ನಿಮ್ಮ ಆರೋಗ್ಯದ ಮೇಲೆ ಇಂತಹದೊಂದು ರೂಢಿ ದೊಡ್ಡ ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆ ಹೆಚ್ಚು ಇರುತ್ತದೆ.

ಹಾಗಾಗಿ ಈ ದಿವಸ ಮಾಹಿತಿಯಲ್ಲಿ ಮಲಬದ್ಧತೆ ದೂರ ಮಾಡುವುದಕ್ಕೆ 2 ಸರಳ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ ಇದನ್ನ ನೀವು ಕಡ್ಡಾಯವಾಗಿ ಪಾಲಿಸಿಕೊಂಡು ಬಂದದ್ದೇ ಆದಲ್ಲಿ ನಿಮ್ಮ ಈ ಮಲಬದ್ಧತೆ ತೊಂದರೆ ಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬಹುದು.

ಮೊದಲನೆಯದಾಗಿ ಹಲವು ಮಂದಿಗೆ ಮಲಬದ್ಧತೆ ಸಮಸ್ಯೆ ಉಂಟಾಗಿರುವುದು ತಮ್ಮ ಆಹಾರ ಪದ್ಧತಿಯಿಂದಾಗಿ ಯಾವ ವ್ಯಕ್ತಿ ತನ್ನ ಆಹಾರ ಪದ್ಧತಿಯ ಬಗ್ಗೆ ಕಾಳಜಿ ಮಾಡುವುದಿಲ್ಲ ಅಂಥವರಿಗೆ ಸಾಮಾನ್ಯವಾಗಿ ಸಹಜವಾಗಿ ಈ ಮಲಬದ್ಧತೆ ಕಾಡಿರುತ್ತದೆ ಅಂಥವರು ಪ್ರತಿದಿನ ಬೆಳಗ್ಗೆ ಬಿಸಿ ನೀರಿಗೆ ಅರ್ಧ ಚಮಚದಷ್ಟು ಹಸುವಿನ ತುಪ್ಪವನ್ನು ಮಿಶ್ರ ಮಾಡಿ ಕುಡಿದು ಸ್ವಲ್ಪ ಸಮಯ ವಾಕ್ ಮಾಡಬೇಕು. ಇದರಿಂದ ಕೂಡಲೆ ನಿಮಗೆ ವಾಷ್ ರೂಂಗೆ ಹೋಗುವ ಹಾಗೆ ಆಗುತ್ತದೆ ಮತ್ತು ಬೆಳಗಿನ ನಿತ್ಯಕರ್ಮಗಳನ್ನು ನೀವು ಸರಳವಾಗಿ ಮುಗಿಸಿಕೊಳ್ಳಬಹುದು.

ಹೌದು ಇದೊಂದು ಪರಿಹಾರ ಹೊಟ್ಟೆ ಕ್ಲೀನ್ ಮಾಡೋದಕ್ಕೆ ಬಹಳ ಉತ್ತಮವಾಗಿ ಕೆಲಸ ಮಾಡುತ್ತದೆ. ಆದ್ದರಿಂದ ನೀವು ಈ ಸರಳ ವಿಧಾನವನ್ನು ಪಾಲಿಸಬಹುದು ಹದಿನೈದು ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಪರಿಹಾರವನ್ನು ಮಾಡಿಕೊಳ್ಳಬಹುದು, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನಿಮ್ಮ ಹೊಟ್ಟೆ ಕ್ಲೀನ್ ಆಗೋದಕ್ಕೆ ಈ ಪರಿಹಾರ ಪ್ರಯೋಜನಕಾರಿಯಾಗಿದೆ.

ಎರಡನೆಯದಾಗಿ ಸಮಪ್ರಮಾಣದ ಜೀರಿಗೆ ಅಧ್ವಾನ ಮತ್ತು ಸೋಂಪಿನ ಕಾಳು ಗಳನ್ನು ತೆಗೆದುಕೊಳ್ಳಿ ಒಂದೊಂದು ಚಮಚ ತೆಗೆದುಕೊಂಡು ಅದನ್ನು ಹುರಿದುಕೊಂಡು ಪುಡಿ ಮಾಡಿ ಇಟ್ಟುಕೊಳ್ಳಿ ಈ ಪುಡಿಯನ್ನೂ ಹೆಚ್ಚು ಪ್ರಮಾಣದಲ್ಲಿ ಮಾಡಿ ಇಟ್ಟುಕೊಳ್ಳಬೇಡಿ, ಆಗಾಗ ಫ್ರೆಶ್ ಆಗಿ ಈ ಪುಡಿಯನ್ನು ತಯಾರಿಸಿಕೊಂಡು ಪ್ರತಿ ದಿನ ರಾತ್ರಿ ಊಟದ ಬಳಿಕ ಈ ತಯಾರಿ ಮಾಡಿಕೊಂಡಂತಹ ಪುಡಿಯನ್ನು ಬಿಸಿನೀರಿಗೆ ಮಿಶ್ರ ಮಾಡಿ ಊಟದ ಅರ್ಧ ಗಂಟೆಯ ಬಳಿಕ ಕುಡಿಯಿರಿ.

ಈ ವಿಧಾನವು ಊಟ ಹೊಟ್ಟೆ ಕ್ಲೀನ್ ಮಾಡೋದಕ್ಕೆ ಪ್ರಯೋಜನಕಾರಿಯಾಗಿದೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಹೊಟ್ಟೆ ಕ್ಲೀನ್ ಮಾಡುತ್ತ ಜೊತೆಗೆ ಕರುಳಿನ ಸಂಬಂಧ ಯಾವುದೇ ಸಮಸ್ಯೆಗಳಿದ್ದರೂ ಪರಿಹರ ಮಾಡುತ್ತೆ ಕರುಳಿನಲ್ಲಿರುವ ತ್ಯಾಜ್ಯವಲ್ಲ ಕೆಟ್ಟ ಬ್ಯಾಕ್ಟೀರಿಯವನ್ನು ಹೊರ ಹಾಕಲು ಸಹಕಾರಿ ಆಗಿರುತ್ತದೆ ಈ ಮನೆ ಮದ್ದು, ಈ ಮೇಲೆ ತಿಳಿಸಿದಂತಹ 2 ವಿಧಾನದಲ್ಲಿ ಯಾವುದೇ ಮನೆಮದ್ದು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಮತ್ತು ಇರುವ ಸರಳ ಸಮಸ್ಯೆಯನ್ನು ಸರಳವಾಗಿಯೇ ಪರಿಹಾರ ಮಾಡಿಕೊಳ್ಳಿ.

Exit mobile version