ಮಜ್ಜಿಗೆಯಲ್ಲಿ ಇದೊಂದು ಪದಾರ್ಥ ಮಿಶ್ರಮಾಡಿ ಕುಡಿಯುತ್ತ ಬಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಬಹುಬೇಗ ನಿವಾರಣೆಯಾಗುತ್ತೆ!ನಮಸ್ಕಾರಗಳು ಇವತ್ತಿನ ಲೇಖನದಲ್ಲಿ ಮಜ್ಜಿಗೆ ಅಲ್ಲಿ ಯಾವ ಒಂದು ಪದಾರ್ಥವನ್ನು ಮಿಶ್ರಣ ಮಾಡಿ ಕುಡಿದರೆ ಗ್ಯಾಸ್ಟ್ರಿಕ್ ಎಂಬ ಸಮಸ್ಯೆ ನಿವಾರಣೆ ಆಗುತ್ತದೆ ಎಂಬುದನ್ನು ಕುರಿತು ಮಾತನಾಡುತ್ತಿದ್ದೇವೆ, ಬನ್ನಿ ಲೇಖನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಮಾಹಿತಿ ತಿಳಿದ ಮೇಲೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಸರಳ ಮನೆಮದ್ದಿನ ಪರಿಚಯ ಮಾಡಿಕೊಡಿ.
ಹೌದು ವಾಯು ಸಮಸ್ಯೆಗೆ ಮಾಡಬಹುದಾದ ಸರಳ ಮನೆಮದ್ದು ಈ ದಿನದ ಲೇಖನದಲ್ಲಿ ತಿಳಿಸುತ್ತಿದ್ದೇವೆ ಈ ಗ್ಯಾಸ್ಟ್ರಿಕ್ ಸಮಸ್ಯೆ ಎಂಬುದು ಹಲವರಿಗೆ ಕಾಡುತ್ತ ಇರುತ್ತದೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿಯೂ ಕೂಡ ವಾಯು ಸಮಸ್ಯೆ ಕಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.
ಈ ದಿನ ನಮ್ಮ ಆರೋಗ್ಯ ಹೇಳುತ್ತಿರುವುದಕ್ಕೆ ಕಾರಣ ನಾವು ಪಾಲಿಸುತ್ತಿರುವಂತೆ ಆಹಾರಪದ್ಧತಿ ಮುಖ್ಯವಾಗಿ ನಾವು ಯಾವುದೆಂದರೆ ಆ ಸಮಯದಲ್ಲಿ ಊಟ ಮಾಡುವುದರಿಂದ ಕೂಡ ಈ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚುತ್ತದೆ ಜೊತೆಗೆ ಯಾವುದೆಂದರೆ ಆ ಸಮಯದಲ್ಲಿ ಊಟ ಮಾಡುವುದು ಆರೋಗ್ಯಕ್ಕೆ ಅಂತೂ ಒಳ್ಳೆಯದೆ ಅಲ್ಲ ಹಾಗಾಗಿ ಈ ಅಭ್ಯಾಸ ಯಾರೇ ರೂಢಿಸಿಕೊಂಡಿದ್ದರು ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿ
ಮೊದಲು ಈ ಅಭ್ಯಾಸದಿಂದ ಹೊರ ಬನ್ನಿ ಆಗ ನಿಮ್ಮ ಆರೋಗ್ಯ ವೃದ್ಧಿ ಆಗುತ್ತದೆ ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಎಂಬುದು ಪರಿಹಾರ ನೀವೇ ಸ್ವಲ್ಪ ದಿನಗಳಲ್ಲಿಯೇ ಕಾಣಬಹುದು, ಹಾಗಾಗಿ ಸಮಯಕ್ಕೆ ಸರಿಯಾಗಿ ಮೊದಲು ಊಟ ಮಾಡುವಂತಹ ರೂಢಿಯನ್ನು ರೂಢಿಸಿಕೊಳ್ಳಿ. ಈಗ ಮಾಹಿತಿ ಕುರಿತು ಹೇಳುವುದಾದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಸಹ ಬಾಧಿಸುತ್ತಿದ್ದಲ್ಲಿ ಅದನ ಪರಿಹಾರ ಮಾಡುವುದಕ್ಕೆ ಈ ಮನೆಮದ್ದು ಮಾಡಿ ಇದಕ್ಕೆ ಬೇಕಾದ ಪದಾರ್ಥಗಳು ಅಂದರೆ ಅದು ಮಜ್ಜಿಗೆ ಜೊತೆಗೆ ಓಮಿನಕಾಳು.
ಹೌದು ಓಮಿನಕಾಳು ಈ ಪದಾರ್ಥ ಎಂತಹಾ ಅತ್ಯದ್ಬುತ ಆರೋಗ್ಯಕರ ಲಾಭಗಳನ್ನು ಹೊಂದಿದೆ ಅಂದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಿಸುವತ್ತ ಜೊತೆಗೆ ಹಸಿವು ಹೆಚ್ಚಿಸುತ್ತದೆ ಹಾಗಾಗಿ ಈ ಪರಿಹಾರದಲ್ಲಿ ನಾವು ಓಮಿನ ಕಾಳಿನ ಮಹತ್ವವನ್ನು ಕೂಡ ಹೇಳಲೇಬೇಕು.ಹೌದು ಮಜ್ಜಿಗೆಯೊಂದಿಗೆ ಓಮಿನ ಕಾಳಿನ ಪುಡಿಯನ್ನು ಮಿಶ್ರಮಾಡಿ ಊಟದ ನಂತರ ಕುಡಿಯಬೇಕು ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬಹಳ ಬೇಗ ನಿವಾರಣೆಯಾಗುತ್ತದೆ ಜೊತೆಗೆ ಮೆಟಬಾಲಿಸಮ್ ರೇಟ್ ಹೆಚ್ಚಿಸುವ ಈ ಸರಳ ಮನೆಮದ್ದು ಯಾರಿಗೆ ಹಸಿವಾಗುವುದಿಲ್ಲ ಹೊಟ್ಟೆ ಉಬ್ಬರಿಸಿದೆ ಅನುಭವವಾಗುತ್ತದೆ.
ಊಟ ಬೇಡ ಅನ್ನಿಸುವ ಅನುಭವವಾಗುತ್ತದೆ ಅಂಥವರು ಈ ಪರಿಹಾರ ಮಾಡುವುದರಿಂದ ಸಮಯಕ್ಕೆ ಸರಿಯಾಗಿ ಹಸಿವಾಗುತ್ತದೆ ಹಾಗೂ ಹಾರ್ಮೋನ್ ಇಂಬ್ಯಾಲೆನ್ಸ್ ಕೂಡ ನಿವಾರಣೆ ಆಗುತ್ತದೆ ಈ ಸರಳ ಮನೆಮದ್ದನ್ನು ಪಾಲಿಸುವುದರಿಂದ. ಮತ್ತೊಂದು ವಿಚಾರವೇನು ಅಂದರೆ ಮಜ್ಜಿಗೆ ಕುಡಿಯುವುದರಿಂದ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಮಜ್ಜಿಗೆ ಕುಡಿಯುವುದರಿಂದ ದೇಹದಲ್ಲಿ ಆಮ್ಲ ಹೆಚ್ಚಾಗಿದ್ದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಸಹಕಾರಿ ಆಗಿರುತ್ತದೆ ಈ ಮಜ್ಜಿಗೆ.
ಹಾಗಾಗಿ ಊಟದ ನಂತರ ಮಜ್ಜಿಗೆ ಕುಡಿಯುವುದು ತುಂಬಾನೇ ಉತ್ತಮ ರೂಢಿ ಆಗಿದೆ ಹಾಗೂ ಜೀರ್ಣಶಕ್ತಿ ವೃದ್ಧಿಸಿಕೊಳ್ಳುವುದಕ್ಕೆ ಮಜ್ಜಿಗೆಯನ್ನ ಕುಡಿಯಿರಿ, ಪ್ರತಿದಿನ ಹೆಚ್ಚು ಮಜ್ಜಿಗೆ ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಮೊಸರು ಸೇವನೆ ಮಾಡಲು ಇಷ್ಟ ಇಲ್ಲ ಅನ್ನೋರು ಮಜ್ಜಿಗೆ ಕುಡಿಯಬಹುದು ಇದರಿಂದ ಆರೋಗ್ಯಕ್ಕೆ ತಂಪು ಜತೆಗೆ ದೇಹದಲ್ಲಿ ಉಷ್ಣಾಂಶ ಅಧಿಕವಾದ ಕಾರಣ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಅದನ್ನೆಲ್ಲಾ ನಿಯಂತ್ರಣಕ್ಕೆ ತರಬಹುದು ಈ ಸರಳ ಮನೆಮದ್ದು ಪಾಲಿಸುವ ಮೂಲಕ.