ನಮಸ್ಕಾರ ಪ್ರಿಯ ವೀಕ್ಷಕರೆ, ಇಂದಿನ ಸಮಾಜದ ವಾತಾವರಣ ಹೇಗೆ ಆಗಿದೆ ಅಂದರೆ, ನಿಜವಾಗಲೂ ಸಹಾಯ ಮಾಡುವುದಕ್ಕೆ ಬರ್ತೀನಿ ಅಂದರೂ ಜನ ಅಂಥವರನ್ನು ನಂಬುವುದಿಲ್ಲ. ಅಂತಹ ಒಂದು ವಾತಾವರಣ ಸೃಷ್ಟಿಯಾಗಿಬಿಟ್ಟಿದೆ. ಯಾಕೆ ಅಂದರೆ ಎಲ್ಲಿ ನೋಡಿದರೂ ಕಳ್ಳತನ ದರೋಡೆ ಅತ್ಯಾಚಾರ ಇಂತಹ ಘಟನೆಗಳೆ ನೋಡಿ ಮತ್ತು ಕೇಳಿ ಜನರಿಗೆ ಯಾರನ್ನು ನಂಬುವುದು ಯಾರನ್ನು ಬಿಡುವುದು ಅನ್ನೋದೇ ಗೊತ್ತಾಗುವುದೆ ಇಲ್ಲ. ಜನರಿಗೆ ಯಾರನ್ನು ನಂಬುವುದು ಯಾರನ್ನು ಬಿಡುವುದು ಅನ್ನೋ ಒಂದು ವಿಚಾರವೂ ಕೂಡ ತಿಳಿಯುವುದಿಲ್ಲ. ಒಂದೆ ಸಲ ಯಾರನ್ನು ನಂಬುವುದಕ್ಕೂ ಸಾಧ್ಯವಾಗುವುದಿಲ್ಲ. ಹಾಗಂತ ಒಂದೆ ಸಲ ಅವರು ಕಳ್ಳರು ದರೋಡೆಕೊರರು ಮೋಸಗಾರರು ಅನ್ನೊ ಒಂದು ತೀರ್ಮಾನಕ್ಕೂ ಕೂಡ ಬರುವುದಕ್ಕೆ ಆಗುವುದಿಲ್ಲ.
ಯಾಕೆ ಈ ತರ ಒಂದು ವಿಚಾರವನ್ನು ನಿಮಗೆ ಹೇಳ್ತಾ ಇದ್ದೀನಿ ಅಂದ್ರೆ ಒಂದು ನೈಜ ಘಟನೆಯ ಬಗ್ಗೆ ನಿಮಗೆ ಈ ಮಾಹಿತಿಯ ಮುಖಾಂತರ ತಿಳಿಸುತ್ತೇನೆ ಫ್ರೆಂಡ್ಸ್ ಯಾರಿಗೇ ಆಗಲಿ ಒಂದಲ್ಲ ಒಂದು ಸಮಯದಲ್ಲಿ ಸಹಾಯದ ಅವಶ್ಯಕತೆ ಇರುತ್ತದೆ ಹಾಗಂತ ನಾವು ಯಾರಲ್ಲಿಯೂ ಸಹಾಯ ಕೇಳುವುದಿಲ್ಲ ಅಂತ ಅಂದುಕೊಳ್ಳಬಾರದು. ಮನುಷ್ಯ ಸಂಘಜೀವಿ ಆತನಿಗೆ ಒಂದಲ್ಲ ಒಂದು ಬಾರಿ ಒಬ್ಬರ ಸಹಾಯವನ್ನು ಪಡೆದುಕೊಳ್ಳುವ ಸನ್ನಿವೇಶ ಬಂದೇ ಬರುತ್ತದೆ.ತಮಿಳುನಾಡಿನ ಲಚ್ಚಿ ಅನ್ನೋ ಒಂದು ಸ್ಥಳದಲ್ಲಿ ಈ ಒಂದು ಘಟನೆ ನಡೆದಿದೆ ಒಬ್ಬ ಹುಡುಗಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಒಮ್ಮೆ ತನ್ನ ಕೆಲಸವನ್ನು ಮುಗಿಸಿ ತನ್ನ ಗೆಳತಿಯ ರಿಸೆಪ್ಷನ್ ಗಾಗಿ ಸಂಜೆ ಹೋಗುತ್ತಾಳೆ. ಅಲ್ಲಿ ತಡವಾಗಿ ಬಿಡುತ್ತದೆ. ರಾತ್ರಿ ಹನ್ನೊಂದು ಗಂಟೆಯಲ್ಲಿ ಸ್ಕೂಟಿಯನ್ನು ಓಡಿಸಿಕೊಂಡು ತನ್ನ ಮನೆಯ ದಾರಿಯಲ್ಲಿ ಹೋಗುವಾಗ, ಇನ್ನೇನು ಮನೆ ಒಂದೆರಡು ಕಿಲೋಮೀಟರ್ ಇದೆ ಅನ್ನುವಾಗ ಸ್ಕೂಟಿ ಕೆಟ್ಟು ಹೋಗುತ್ತದೆ.
ಆಗ ಆಕೆ ಹತ್ತಿರದಲ್ಲಿ ಎಲ್ಲಿಯೂ ಪಂಕ್ಚರ್ ಶಾಪ್ ಇಲ್ಲ ಎಂದು ತಾನೇ ಸ್ಕೂಟಿಯನ್ನು ದಬ್ಬಿಕೊಂಡು ಹೋಗ್ತಾಳೆ. ಒಂದು ಕಿಲೋಮೀಟರ್ ಸ್ಕೂಟಿಯನ್ನು ದಬ್ಬಿಕೊಂಡು ಹೋದ ನಂತರ, ಆಕೆಗೆ ಅಲ್ಲಿ ಒಬ್ಬ ವ್ಯಕ್ತಿ ಕಾಣಿಸಿಕೊಳ್ತಾರೆ. ಆತ ಮುಸ್ಲಿಂ ವ್ಯಕ್ತಿ ಸ್ವಲ್ಪ ದಪ್ಪದಾಗಿ ಗಡ್ಡವನ್ನು ಬಿಟ್ಟುಕೊಂಡು ನಿಂತಿರುತ್ತಾನೆ. ಆ ಹುಡುಗಿಯನ್ನು ಕಂಡು ನಿನಗೇನಾದರೂ ಸಹಾಯ ಬೇಕಾ ನನ್ನಿಂದ ಅಂತ ಕೇಳ್ತಾನೆ. ಆಗ ಆ ಹುಡುಗಿ ನನಗೆ ಯಾವ ಸಹಾಯ ಬೇಡ ನಿಮ್ಮ ಕೆಲಸ ಮಾಡಿಕೊಂಡು ನೀವು ಹೋಗಿ ಅಂತ ಹೇಳ್ತಾಳೆ.
ಆದರೂ ಆ ವ್ಯಕ್ತಿ ಸುಮ್ಮನಾಗಲಿಲ್ಲ ಆ ಹುಡುಗಿಯಿಂದ ಸ್ಕೂಟಿಯನ್ನು ತಾನು ತೆಗೆದುಕೊಂಡು ನಿನ್ನ ಮನೆಯವರೆಗೂ ನಾನೇ ನಿನಗೆ ಸಹಾಯ ಮಾಡ್ತೇನೆ ಅಂತ ಸ್ಕೂಟಿಯನ್ನು ದಬ್ಬಿಕೊಂಡು ಹೋಗ್ತಾರೆ. ಆಗ ಆ ಹುಡುಗಿಯ ಅಮ್ಮ ಮನೆಯ ಬಳಿಯೇ ಕಾಯುತ್ತಾ ಮಗಳನ್ನು ಕಾಯ್ತಾ ಇರ್ತಾರೆ. ಮಗಳನ್ನು ಕಂಡ ಅಮ್ಮ ಮುಖದಲ್ಲಿ ಮಂದಹಾಸ ಬೀರುತ್ತಾ ಮಗಳ ಬಳಿ ಬರುತ್ತಾರೆ.
ಮಗಳಿಗೆ ಸಹಾಯ ಮಾಡಿದಂತಹ ವ್ಯಕ್ತಿಗೆ ಕೈ ಮುಗಿದು ಧನ್ಯವಾದವನ್ನು ಹೇಳುತ್ತಾರೆ ಹಾಗೆ ಮಗಳ ಬಳಿ ಎಲ್ಲ ವಿಚಾರವನ್ನು ಹೇಳಿಕೊಳ್ತಾಳೆ ಅಮ್ಮ. ಮಾರನೆ ದಿವಸ ಆ ಹುಡುಗಿ ತನ್ನ ಫೇಸ್ಬುಕ್ ಖಾತೆಯಲ್ಲಿ ನಿನ್ನೆ ರಾತ್ರಿ ನಡೆದ ಘಟನೆಯನ್ನು ಪೋಸ್ಟ್ ಮಾಡಿರುತ್ತಾಳೆ ಸಹಾಯ ಮಾಡುವ ಒಂದು ವಿಚಾರಕ್ಕೂ ಜಾತಿಯ ಬಣ್ಣವನ್ನು ಹಚ್ಚಬೇಡಿ ಅಂತ. ಹೌದು ಸಹಾಯ ಮಾಡುವ ಒಂದು ಮನೋಭಾವನೆ ಇದ್ದರೆ ಸಾಕು, ಅದಕ್ಕೆ ಯಾವುದೇ ಧರ್ಮದ ಅಗತ್ಯ ಇಲ್ಲ ಏನಂತೀರಾ ಫ್ರೆಂಡ್ಸ್.