ನಮಸ್ಕಾರಗಳು ಪ್ರಿಯ ಓದುಗರೆ, ಇವತ್ತಿನ ಮಾಹಿತಯಲ್ಲಿ ಆಂಜನೇಯ ಸ್ವಾಮಿಗೆ ವಿಳ್ಳೇದೆಲೆ ಯಾಕೆ ಪ್ರಿಯಾ ಎಂಬುದರ ಕುರಿತು ನಿಮಗೆ ಮಾಹಿತಿ ತಿಳಿಸಲು ಹೊರಟ್ಟಿದೇವೆ. ಹೌದು ಆಂಜನೇಯ ಸ್ವಾಮಿಗೆ ರಾಮನೆಂದರೆ ಎಷ್ಟು ಪ್ರಿಯ ಎಂಬುದು ನಮಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಹೌದು ಹನುಮಂತ ರಾಮ ಬಂಟ, ಹನುಮಂತನು ಇವತ್ತಿಗೂ ಕಲಿಯುಗದಲ್ಲಿ ರಾಮಭಕ್ತರನ್ನು ಕಾಪಾಡಲು ಭೂಮಿ ಮೇಲೆ ನೆಲೆಸಿದ್ದಾರೆ ಎಂಬ ಕುರುಹು ಇದೆ. ಆಂಜನೇಯನಿಗೆ ವೀಳ್ಯದೆಲೆ ಎಂದರೆ ಪಂಚಪ್ರಾಣ, ಹನುಮಂತನಿಗೆ ಯಾವ ಪೂಜೆ ಮಾಡಿಸಿದರೂ ವೀಳ್ಯದೆಲೆ ಮುಂದೆ ಯಾವುದು ಶ್ರೇಷ್ಠವಲ್ಲ. ಆಂಜನೇಯ ಸ್ವಾಮಿಗೂ ಹಾಗೂ ವೀಳ್ಯದೆಲೆಗೂ ಯಾವ ರೀತಿಯ ನಂಟಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ
ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ ಎಂತಹ ಮಹತ್ವವಿದೆ ಹಾಗೂ ಹಿಂದೂ ಧರ್ಮದಲ್ಲಿ ದೇವರಿಗೆ ಮಾಲೆಯನ್ನು ಹಾಕುವುದು ಒಂದು ಸಂಪ್ರದಾಯ. ಅದರಲ್ಲಿ ಹೂವಿನ ಮಾಲೆ, ಒಡೆಯ ಮಾಲೆ ಹಾಗೂ ವೀಳ್ಯದೆಲೆ ಮಾಲೆಯನ್ನು ಹಾಕಲಾಗುತ್ತದೆ. ಸೀತಾಮಾತೆಯ ಮೋಹಕ್ಕೆ ಶರಣಾಗಿದ್ದ ಲಂಕಾಸುರ ಸೀತಾದೇವಿಯನ್ನು ಅಪಹರಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ರಾಮ ಮತ್ತು ಲಕ್ಷ್ಮಣ ಎಷ್ಟೇ ಹುಡುಕಿದರು ಸೀತಾ ಮಾತೆಯು ಎಲ್ಲೂ ಸಿಗುವುದಿಲ್ಲ.ಕೊನೆಗೆ ರಾಮನ ಬಂಟ ಹನುಮಂತ ಲಂಕೆಯನ್ನು ಹಾರಲು ನಿರ್ಧರಿಸುತ್ತಾರೆ.
ಹನುಮಂತನು ಲಂಕೆಯಲ್ಲಿ ಸೀತ ಮಾತೆಯನ್ನು ಹುಡುಕುತ್ತಿರುವಾಗ ವೀಳ್ಯದೆಲೆ ಮೇಲೆ ರಾಮನ ಹೆಸರನ್ನು ಬರೆದು ಸೀತಾಮಾತೆ ಅಳುತ್ತಿರುತ್ತಾಳೆ, ಇದನ್ನು ಕಂಡ ಹನುಮಂತ ಸೀತಾಮಾತೆಯ ಹತ್ತಿರ ಹೋಗಿ ರಾಮನಿಂದ ತಂದಿರುವ ಸಂದೇಶವನ್ನು ತಿಳಿಸುತ್ತಾರೆ. ಸಂದೇಶ ತಿಳಿಸಿದ ನಂತರ ಅಲ್ಲಿಂದ ಹೊರಡಲು ಸಿದ್ಧವಾಗಿ ಆಶೀರ್ವಾದ ಪಡೆದುಕೊಳ್ಳುತ್ತಿರುವಾಗ ಅಲ್ಲೇ ಇದ್ದ ವೀಳ್ಯದೆಲೆ ಎಲೆಯನ್ನು ಉಪಯೋಗಿಸಿ ಹಾರವನ್ನು ಮಾಡಿ ಅದನ್ನು ಹನುಮಂತನಿಗೆ ಸೀತಾಮಾತೆ ಅರ್ಪಿಸುತ್ತಾರೆ. ಇದರಿಂದ ಆಂಜನೇಯಸ್ವಾಮಿಗೆ ವೀಳ್ಯದೆಲೆ ಅರ್ಪಿಸುವುದು ಭಕ್ತಿಯ ಸಂಕೇತವಾಗಿದೆ.
ಯಾರು ಆಂಜನೇಯಸ್ವಾಮಿ ಎದುರು ಕಷ್ಟಗಳನ್ನು ಹೇಳಿಕೊಂಡು ಅಥವಾ ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ ಅವರು ವೀಳ್ಯದೆಲೆ ಮಾಲೆಯನ್ನು ಅರ್ಪಿಸುತ್ತಾರೊ ಅವರ ಕೋರಿಕೆಗಳನ್ನು ಆಂಜನೇಯಸ್ವಾಮಿಯು ಬಹಳ ಬೇಗ ಈಡೇರಿಸುತ್ತಾರೆ. ಇದರ ಕಾರಣದಿಂದಾಗಿ ಆಂಜನೇಯಸ್ವಾಮಿ ದೇವಾಲಯದಲ್ಲಿ ವೀಳ್ಯದೆಲೆ ಮಾಲೆ ನೋಡಲು ಸಿಗುತ್ತದೆ. ಮಂಗಳವಾರದ ದಿನ ಆಂಜನೇಯಸ್ವಾಮಿಗೆ ವೀಳ್ಯದೆಲೆ ಮಾಲೆ ಅರ್ಪಿಸಿದರೆ ದುಷ್ಟಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ.ವೀಳ್ಯದೆಲೆಗೆ ಅರಿಶಿನ ಕುಂಕುಮ ಹಚ್ಚಿ ಅದರ ಮೇಲೆ ಹಣತೆಯನ್ನು ಇಟ್ಟು ತುಪ್ಪದ ದೀಪವನ್ನು ಹಚ್ಚಬೇಕು. ಈ ರೀತಿಯಾಗಿ ಯಾರು ಜೋಡಿ ದೀಪವನ್ನು ಹಚ್ಚುತ್ತಾರೆ ಅಂಥವರ ಬದುಕು ಬಂಗಾರವಾಗುತ್ತದೆ ಹಾಗೂ ಲಕ್ಷ್ಮಿದೇವಿಯ ಕೃಪಾಕಟಾಕ್ಷ ಅವರ ಮೇಲೆ ಇರುತ್ತದೆ.
ಹಿಂದೂ ಧರ್ಮದಲ್ಲಿ ವೀಳ್ಯದೆಲೆಗೆ ತುಂಬಾ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಎಲ್ಲಾ ಶುಭಕಾರ್ಯಗಳಿಗೂ, ಪೂಜೆಗಳಿಗೂ ವೀಳ್ಯದೆಲೆ ಇರಲೇಬೇಕು.ವೀಳ್ಯದೆಲೆಯಲ್ಲಿ ದೇವಾನುದೇವತೆಗಳು ವಾಸವಾಗಿದ್ದಾರೆ. ವೀಳ್ಯದೆಲೆ ತುದಿಯಲ್ಲಿ ಲಕ್ಷ್ಮೀದೇವಿ ವಾಸವಾಗಿದ್ದರೆ, ಬಲಭಾಗದಲ್ಲಿ ಬ್ರಹ್ಮದೇವ, ಮಧ್ಯಭಾಗದಲ್ಲಿ ಸರಸ್ವತಿ ನೆಲೆಸಿದ್ದಾರೆ ಎಂಬ ನಂಬಿಕೆ ಸಹ ಇದೆ. ಅದೇ ರೀತಿ ಎಲೆಯ ಸಣ್ಣ ಗಂಟಿನಲ್ಲಿ ಮಹಾ ವಿಷ್ಣು ಇರುತ್ತಾರೆ ಎಂಬ ನಂಬಿಕೆ ಇದೆ. ಎಲೆಯ ಹಿಂಭಾಗ ಚಂದ್ರ ದೇವನ ವಾಸ ಸ್ಥಾನ ಇದೆ, ವೀಳ್ಯದೆಲೆಯ ಪ್ರತಿ ಮೂಲೆಯಲ್ಲೂ ಪರಮಾತ್ಮನು ವಾಸವಾಗಿರುತ್ತಾರೆ. ಈ ರೀತಿಯಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ವಿಳ್ಯದೆಲೆಗೆ ಮಹಾ ವಿಶೇಷತೆ ಮತ್ತು ವಿಶೇಷ ಸ್ಥಾನವನ್ನು ನೀಡಲಾಗಿದೆ.
ಇವತ್ತಿನ ದಿವಸಗಳಲ್ಲಿ ವೀಳ್ಯದೆಲೆ ಮಹತ್ವವು ಹಲವರಿಗೆ ತಿಳಿದಿಲ್ಲ, ಆದರೆ ವಿಳ್ಯೆದೆಲೆ ಮಹತ್ವ ಬಹಳ ಉತ್ತಮವಾಗಿದೆ ಅದರ ಕುರಿತು ತಿಳಿಯದೆ ಹಿಂದೂ ಸಂಪ್ರದಾಯವನ್ನೂ ಪಾಲಿಸಲು ಹಲವರು ಹಿಂಜರಿಯುತ್ತಾರೆ ಆದರೆ ನಮ್ಮ ಪದ್ದತಿಗೆ ನಮ್ಮ ಸಂಪ್ರದಾಯಕ್ಕೆ ವೈಜ್ಞಾನಿಕ ಹಿನ್ನೆಲೆ ಇರುವುದರಿಂದ ನಮ್ಮ ಸಂಪ್ರದಾಯವನ್ನು ಗೌರವಿಸಬೇಕು ಅದನ್ನು ಪಾಲಿಸಬೇಕು ನಮ್ಮ ಮುಂದಿನ ಪೀಳಿಗೆಯವರಿಗೆ ತಿಳಿಸಿಕೊಡಬೇಕು ಅದರ ಪ್ರಯತ್ನ ನಾವು ಈ ದಿನ ಲೇಖನಿಯಲ್ಲಿ ಮಾಡಿದ್ದೇವೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.