ತ್ರೇತಾಯುಗ ದ್ವಾಪರಯುಗ ಕಲಿಯುಗ ಮತ್ತು ಸತ್ಯಯುಗ ಈ ನಾಲ್ಕು ಯುಗಗಳ ಕುರಿತು ಶ್ರೀಕೃಷ್ಣರು ಹೇಳಿರುವುದೇನೂ ಗೊತ್ತಾ? ಈ ಕಲಿಯುಗ ಅಂತ್ಯ ಹೇಗೆ ಅನ್ನೋದನ್ನು ಕೂಡ ಶ್ರೀ ಕೃಷ್ಣ ಪರಮಾತ್ಮರು ನುಡಿದಿದ್ದಾರೆ. ಹೌದು ದ್ವಾಪರಯುಗ ತ್ರೇತಾಯುಗದಲ್ಲಿ ಶ್ರೀ ವಿಷ್ಣು ಪರಮಾತ್ಮನು ಅವತಾರಗಳ ಅಲ್ಲಿ ಧರ್ಮ ಪ್ರತಿಷ್ಠಾಪನೆ ಮಾಡಿರುವ ವಿಷಯ ನಾವು ತಿಳಿದುಕೊಳ್ಳಬಹುದು ಹಾಗೆ ಈ ಕಲಿಯುಗದ ಅಂತ್ಯ ಯಾವಾಗ ಈ ಕಲಿಯುಗದ ಕುರಿತು ಶ್ರೀಕೃಷ್ಣರು ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ. ಹೌದು ನಮ್ಮ ಹಿಂದೂ ಧರ್ಮದಲ್ಲಿ ಹೇಳಲಾಗಿದೆ ನಾಲ್ಕು ಯುಗಗಳ ಕುರಿತು.
ಹೌದು ಪ್ರಸ್ತುತ ನಾವು ಇರುವುದು ಕಲಿಯುಗದಲ್ಲಿ ಶ್ರೀ ಕೃಷ್ಣ ಪರಮಾತ್ಮರು ಮುಂಚೆಯೇ ಹೇಳಿದ್ದಾರೆ ತಾನು ತನ್ನ ಅವತಾರ ಮುಗಿಸಿದ ಮೇಲೆ ತಕ್ಷಣ ಭೂಲೋಕದಲ್ಲಿ ಕಲಿಯುಗದಪ್ರಾರಂಭ ಆಗುತ್ತದೆ ಅಂತ. ಇನ್ನೂ ಕಲಿಯುಗದ ಕುರಿತು ಶ್ರೀ ಕೃಷ್ಣ ಪರಮಾತ್ಮರು ಪಾಂಡವರಿಗೆ ವಿವರಿಸುತ್ತಾರೆ ಈ ಕಲಿಯುಗವು ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರ್ಷಗಳು ಇರುತ್ತದೆ. ಸದ್ಯ ಕಲಿಯುಗ ಪ್ರಾರಂಭ ಆಗಿ ಕೇವಲ 5 ಸಾವಿರ ವರ್ಷಗಳು ಮಾತ್ರ ಆಗಿದೆ. ಹಾಗಾದರೆ ಕಲಿಯುಗ ಅಂತ್ಯ ಆಗಲು ಇನ್ನೂ 4ಲಕ್ಷದ 27ಸಾವಿರ ವರುಷಗಳು ಬೇಕಾಗಿರುತ್ತದೆ ಬಳಿಕ ಸತ್ಯಯುಗ ಪ್ರಾರಂಭವಾಗುತ್ತದೆ. ಸತ್ಯ ಯುಗದ ಕಾಲ ಕಲಿಯುಗಕ್ಕೆ ನಾಲ್ಕು ಪಟ್ಟು ಜಾಸ್ತಿ ಇರುತ್ತದೆ ಅಂದರೆ 32 ಸಾವಿರ ವರ್ಷ ಈ ಯುಗವನ್ನು ಬಂಗಾರದ ಯುಗ ಎಂದು ಪುರಾಣಗಳಲ್ಲಿ ವರ್ಣಿಸಲಾಗಿದೆ, ಈ ಯುಗದಲ್ಲಿ ಮನುಷ್ಯನ ಆಯಸ್ಸು ಸುಮಾರು 500 ವರ್ಷಗಳು.
ಸತ್ಯಯುಗದಲ್ಲಿ ಮನುಷ್ಯ ವರ್ಷಗಟ್ಟಲೆ ತಪಸ್ಸು ಮಾಡಿ ದೇವರನ್ನು ಒಲಿಸಿಕೊಳ್ಳುತ್ತಾನೆ, ತಪಸ್ಸು ಮಾಡಿದ ವ್ಯಕ್ತಿ ನೇರವಾಗಿ ದೇವರ ಹತ್ತಿರ ಮಾತನಾಡುತ್ತಾನೆ ಹಾಗೂ ಸತ್ಯಯುಗದಲ್ಲಿ ಎಲ್ಲರೂ ಒಳ್ಳೆಯವರೇ ಇರುತ್ತಾರೆ ಕೆಟ್ಟವರು ಕೆಟ್ಟದ್ದು ಅನ್ನುವ ಮಾತೇ ಇಲ್ಲ. ಸತ್ಯಯುಗದಲ್ಲಿ ಮಂದಿ ಸತ್ಯವನ್ನು ಮಾತ್ರ ಮಾತನಾಡುತ್ತಾರೆ ಇಲ್ಲಿ ಆಯುಧಗಳು ಇರುವುದಿಲ್ಲ ದ್ವೇಷ ಸ್ವಾರ್ಥಕ್ಕೆ ಜಾಗವು ಇರುವುದಿಲ್ಲ ಎಂದು ಹೇಳುವ ಕೃಷ್ಣ ಪರಮಾತ್ಮರು ಹೊಟ್ಟೆ ತುಂಬಿಸಿಕೊಳ್ಳಲು ಹಣ್ಣುಹಂಪಲನ್ನು ದವಸ ಧಾನ್ಯಗಳನ್ನು ಸೇರಿಸುತ್ತಾರೆ ವ್ಯವಸಾಯ ಮಾಡಿಕೊಳ್ಳದೆ ಇವೆಲ್ಲ ತಾನಾಗಿಯೇ ಬೆಳೆಯುತ್ತದೆ ಎಂದು ಹೇಳಿದ್ದಾರೆ. ಮಾತು ಮುಂದುವರೆಸಿದ ಶ್ರೀ ಕೃಷ್ಣ ಪರಮಾತ್ಮರು ಸತಿ ಯುಗದಲ್ಲೇ ಈ ರೀತಿ ಚಳಿಗಾಲ ಬೇಸಿಗೆಕಾಲ ಮಳೆಗಾಲ ಇರುವುದಿಲ್ಲ ಕೇವಲ ಇರುವುದು ಮಳೆಗಾಲ ಮಾತ್ರ ಅದೂ ಕೂಡ ಮನುಷ್ಯನಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಇರುತ್ತದೆ ಇಲ್ಲಿ ಕಳ್ಳತನ ಮೋಸಕ್ಕೆ ಜಾಗವಿರುವುದಿಲ್ಲ. ಸತ್ಯಯುಗದಲ್ಲಿ ಮನುಷ್ಯನಿಗೆ ರೋಗರುಜಿನಗಳ ಅರಿವು ಇರುವುದಿಲ್ಲ ಭೂಮಿ ಯಲ್ಲಿ ಬೆಳೆಯುವುದು ಅಮೃತಾ ಆಹಾರ ಅವರು ಉಸಿರಾಡುವ ಗಾಳಿ ಯಾವುದೇ ರೀತಿಯ ಕಲ್ಮಶವನ್ನ ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ.
ಕುಡಿಯುವ ನೀರು ಅಮೃತದ ನೀರು ಒತ್ತಡಗಳು ಇರುವುದಿಲ್ಲ ಇಲ್ಲಿನ ಜನರಿಗೆ ಪ್ರತಿ ನಿತ್ಯ ಯೌವನವಾಗಿ ಇರುತ್ತಾರೆ. ಸತ್ಯಯುಗದಲ್ಲಿ ಇಂದಿನ ತರಹ ಜಾತಿ ಧರ್ಮಗಳಿಗೆ ಜಾಗವಿರುವುದಿಲ್ಲ ಅಲ್ಲಿ ಇರುವುದು ಒಂದೇ ಧರ್ಮ ಅದು ಸನಾತನ ಧರ್ಮ ಆಗಿರುತ್ತದೆ ಮಂದಿ ಆ ಮತವನ್ನೇ ಅನುಸರಿಸಬೇಕಿರುತ್ತದೆ ಸತ್ಯ ಯುಗ ಕೃತಯುಗ ಎಂದು ಕರೆಸಿಕೊಳ್ಳುತ್ತದೆ. ಎಲೆ ಕೃತ ಅಂದರೆ ಪರಿಪೂರ್ಣ ಎಂಬುದರ ಅರ್ಥ ಆಗಿರುತ್ತದೆ ಸತ್ಯಯುಗದಲ್ಲಿ ಈ ಜನರು ಕೊಟ್ಟ ಮಾತನ್ನು ತಪ್ಪುವುದಿಲ್ಲ ಶ್ರೀಮಂತ ಬಡವ ಎಂಬ ಮೇಲು ಕೀಳು ಕೂಡ ಇರುವುದಿಲ್ಲ ಬೇದ ಭಾವ ಬಡವ ಬಲ್ಲಿದ ಎಂಬ ಪದಕ್ಕೆ ಜಾಗವೇ ಇರುವುದಿಲ್ಲ. ಈ ರೀತಿಯಾಗಿರುತ್ತದೆ ಸತ್ಯಯುಗ ಹೌದು ಕಲಿಯುಗದ ಅಂತ್ಯ ಬಹಳ ಘೋರವಾಗಿರುತ್ತದೆ ಎಂದು ಹೇಳಿದ ಪರಮಾತ್ಮರು ಸತ್ಯಯುಗವು ಸಜ್ಜನರಿಂದ ಕೂಡಿರುತ್ತದೆ ಎಂದು ತಮ್ಮ ಮಾತುಗಳಲ್ಲಿ ವಿವರಿಸಿದ್ದಾರೆ ಈ ಕಲಿಯುಗದಲ್ಲಿ ಒಳ್ಳೆಯದನ್ನೇ ಮಾಡಿ ನಿಮಗೆ ಒಳ್ಳೆಯದೇ ಆಗುತ್ತದೆ ಪರಮಾತ್ಮನ ಮಾತೂ ಇದಾಗಿದೆ.