ನಮಸ್ಕಾರ ಬನ್ನಿ ಸಕ್ಕರೆ ಕಾಯಿಲೆಗೆ ಮನೆಮದ್ದು ತಿಳಿದುಕೊಳ್ಳೋಣ ಸ್ನೇಹಿತರೇ ಯಾಕೆಂದರೆ ಸಕ್ಕರೆ ಕಾಯಿಲೆ ಎಂಬುದು ಇವತ್ತಿನ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಕೇಳಿಬರುತ್ತಿರುವ ಕಂಡು ಬರುತ್ತಿರುವಂಥ ಆರೋಗ್ಯ ತೊಂದರೆ ಆಗಿದೆ.ಹಾಗಾಗಿ ಈ ಲೇಖನಿಯಲ್ಲಿ ಸಕ್ಕರೆ ಕಾಯಿಲೆಗೆ ಮಾಡಿಕೊಳ್ಳಬಹುದಾದ ಸರಳ ಪರಿಹಾರದ ಕುರಿತು ತೆಗೆದುಕೊಳ್ಳೋಣ ಮತ್ತು ಈ ಮನೆಮದ್ದನ್ನು ಪಾಲಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು ಹಾಗಾಗಿ ಸಕ್ಕರೆ ಕಾಯಿಲೆ ಇರುವ ವ್ಯಕ್ತಿ ಯಾವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು ಮತ್ತು ಅದರಿಂದಾಗುವ ಆರೋಗ್ಯಕರ ಲಾಭಗಳೇನು ಅನ್ನುವುದನ್ನು ಕೂಡ ತಿಳಿದುಕೊಳ್ಳೋಣ.
ಹೌದು ಈ ಲೇಖನದಲ್ಲಿ ನಾವು ಸಕ್ಕರೆ ಕಾಯಿಲೆ ಕುರಿತು ಮಾತನಾಡುತ್ತಿರುವುದರಿಂದ ಈ ಸಕ್ಕರೆ ಕಾಯಿಲೆ ಎಂಬುದನ್ನ ನಾವು ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ಕೂಡ ಮೊದಲನೆಯದಾಗಿ ಹೇಳಲೇಬೇಕು ಯಾಕೆಂದರೆ ಸಕ್ಕರೆ ಕಾಯಿಲೆ ಇದು ರಕ್ತಕ್ಕೆ ಸಂಬಂಧಪಟ್ಟ ತೊಂದರೆಯಾಗಿದೆ. ಹಾಗಾಗಿ ಇದನ್ನು ನಾವು ಪರಿಹಾರ ಮಾಡಿಕೊಳ್ಳಬೇಕೆಂದರೆ ರಕ್ತಶುದ್ಧಿ ಮಾಡುವಂತಹ ಆಹಾರಪದಾರ್ಥಗಳನ್ನು ಸೇವಿಸಬೇಕು ಮೊದಲನೆಯದಾಗಿ ಸಕ್ಕರೆ ಕಾಯಿಲೆ ಇರುವವರು ಅದೆಷ್ಟು ಬೆಚ್ಚಗಿನ ನೀರನ್ನು ಪ್ರತಿದಿನ ಕುಡಿಯಿರಿ.
ಸಕ್ಕರೆ ಕಾಯಿಲೆ ಒಮ್ಮೆ ಕಾಣಿಸಿಕೊಂಡರೆ ಇದರ ಜೊತೆಗೆ ಮತ್ತಷ್ಟು ಅನಾರೋಗ್ಯ ಸಮಸ್ಯೆಗಳು ಫ್ರೀ ಫ್ರೀ ಫ್ರೀ ಎಂಬಂತೆ ಬಹಳಷ್ಟು ಅನಾರೋಗ್ಯ ತೊಂದರೆಗಳು ಇದರೊಟ್ಟಿಗೆ ಬರುತ್ತದೆ ಅದರಲ್ಲಿಯೂ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆ ಇವೆಲ್ಲವೂ ಹೆಚ್ಚುತ್ತದೆ ಸಕ್ಕರೆ ಕಾಯಿಲೆ ಬಂದಾಗ ಮತ್ತು ಅದನ್ನು ನಿರ್ಲಕ್ಷ್ಯ ಮಾಡಿದಾಗ
ಹಾಗಾದರೆ ಸಕ್ಕರೆ ಕಾಯಿಲೆ ಬಂದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರಳವಾಗಿ ಹೇಳಬೇಕೆಂದರೆ ಸಕ್ಕರೆ ಕಾಯಿಲೆ ಬಂದಿದೆ ಅನ್ನುತ್ತಿದ್ದ ಹಾಗೆ ಮೊದಲು ನೀವು ಕಾರ್ಬೊಹೈಡ್ರೇಟ್ ಅಂಶ ಇರುವಂತಹ ಆಹಾರ ಪದಾರ್ಥಗಳನ್ನು ಕಡಿಮೆ ಮಾಡಿ ಮತ್ತು ಆಹಾರ ಪದ್ಧತಿಯಲ್ಲಿ ಮೊದಲು ಬದಲಾವಣೆಯನ್ನ ಮಾಡಿಕೊಳ್ಳಿ ಸಮಯಕ್ಕೆ ಸರಿಯಾಗಿ ಊಟ ಸೇವಿಸಿ ಹಾಗೂ ಕಾಫಿ ಟೀ ಸೇವನೆ ಕಡಿಮೆ ಮಾಡಿ ಸಕ್ಕರೆ ಉಪ್ಪು ಬೆಲ್ಲ ಇವುಗಳ ಸೇವನೆ ಯನ್ನು ಕೂಡ ಆದಷ್ಟು ಕಡಿಮೆ ಮಾಡಿ ಮತ್ತು ಹೆಚ್ಚು ವಾಕ್ ವ್ಯಾಯಾಮ ಇವುಗಳನ್ನೂ ನಿವಾರಿಸುವುದನ್ನು ರೂಢಿಸಿಕೊಳ್ಳಿ.
ಈಗ ಮನೆಮದ್ದಿಗೆ ಬರುವುದಾದರೆ ಪಾತ್ರೆಯೊಂದಕ್ಕೆ ಇದಕ್ಕೆ 2 ಗ್ಲಾಸ್ ನೀರನ್ನು ಹಾಕಿದರೆ ಈ ನೀರು ಕುದಿಯುವಾಗ ಇದಕ್ಕೆ ವಿಳ್ಳೆದೆಲೆಯನ್ನು ಕತ್ತರಿಸಿ ಹಾಕಿ ಮತ್ತು ಕರಿಬೇವು ಜೊತೆಗೆ ಬೇವಿನ ಎಲೆಗಳನ್ನು ಸಣ್ಣಗೆ ಕತ್ತರಿಸಿ ನೀರಿಗೆ ಹಾಕಿ ಈ ನೀರು ಅರ್ಧದಷ್ಟು ಕುದಿಯಬೇಕು ಆ ಪ್ರಮಾಣದಲ್ಲಿ ನೀರನ್ನು ಕುದಿಸಿ ಕೊಂಡು, ನಂತರ ಈ ನೀರನ್ನ ಶೋಧಿಸಿಕೊಂಡು ಕುಡಿಯಿರಿ.
ಈಗ ಈ ಡ್ರಿಂಕ್ ನ ಪ್ರಯೋಜನದ ಕುರಿತು ಹೇಳುವುದಾದರೆ ವಿಳ್ಳೇದೆಲೆ ರಕ್ತಶುದ್ಧಿ ಮಾಡುತ್ತವೆ ಮತ್ತು ಕರಿಬೇವು ಹಾಗೆ ಬೇವಿನ ಎಲೆಗಳು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಜೊತೆಗೆ ರಕ್ತವನ್ನು ಶುದ್ಧಿ ಮಾಡಲು ಸಹಕಾರಿಯಾಗಿರುತ್ತದೆ.
ಹಾಗಾಗಿ ಈ ಡ್ರಿಂಕ್ ಅನ್ನು ದಿನಬಿಟ್ಟು ದಿನ ಕುಡಿಯಿರಿ ಹಾಗೂ ತಿಂಗಳಿಗೊಮ್ಮೆ ಸಕ್ಕರೆ ಕಾಯಿಲೆಯಿರುವವರು ಬ್ಲಡ್ ಟೆಸ್ಟ್ ಮಾಡಿಸಿ ನೋಡಿ, ಖಂಡಿತವಾಗಿಯೂ ಈ ವಿಧಾನವನ್ನು ಪಾಲಿಸುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು ಮತ್ತೊಂದು ಮಾಹಿತಿ ಸಕ್ಕರೆ ಕಾಯಿಲೆ ಇರುವವರು ಹೆಚ್ಚು ಫೈಬರ್ ಅಂಶ ಇರುವಂತಹ ತರಕಾರಿ ಹಣ್ಣುಗಳನ್ನು ತಿನ್ನುವುದು ತುಂಬಾ ಒಳ್ಳೆಯದು ಜೊತೆಗೆ ವಿಟಮಿನ್ ಸಿ ಜೀವಸತ್ವ ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ಇನ್ನಷ್ಟು ಆರೋಗ್ಯ ಉತ್ತಮವಾಗಿರಲಿದೆ.