Ad
Home ಉಪಯುಕ್ತ ಮಾಹಿತಿ ಹೀರೊ ಮೋಟೋಕಾರ್ಪ್ ಬೈಕ್ ಕಂಪನಿಯಿಂದ ಹೊಸ ವರ್ಷದ ಕೊಡುಗೆ ಬರಿ 7 ಸಾವಿರ ಕಟ್ಟಿ...

ಹೀರೊ ಮೋಟೋಕಾರ್ಪ್ ಬೈಕ್ ಕಂಪನಿಯಿಂದ ಹೊಸ ವರ್ಷದ ಕೊಡುಗೆ ಬರಿ 7 ಸಾವಿರ ಕಟ್ಟಿ ಬೈಕ್ ಪಡೆಯುವ ಅವಕಾಶ… ಯಾರಿಗುಂಟು ಯಾರಿಗಿಲ್ಲ

ಹೌದು ನೀವು ಹಿಂದಿನ ಕಾಲದಲ್ಲಿ ಗಮನಿಸಿರಬಹುದು ಅಥವಾ ಸಿನೆಮಾಗಳಲ್ಲಿ ನೋಡಿರಬಹುದು ಪ್ರತಿಯೊಬ್ಬರ ಮನೆಯಲ್ಲಿಯೂ ಏನು ವಾಹನಗಳು ಇರುತ್ತ ಇರಲಿಲ್ಲ ಆಗ ಬೈಸಿಕಲ್ ಅಂದರೆ ಸೈಕಲ್ ಇದ್ದರೂ ಸಹ ಅದೇ ದೊಡ್ಡ ವಿಚಾರ ಆಗಿರುತ್ತಿತ್ತು ಆದರೆ ಇವತ್ತಿನ ದಿವಸ ಗಳನ್ನು ನೀವು ಗಮನಿಸಿದರೆ ನೋಡಿ ಎಲ್ಲರ ಮನೆಯಲ್ಲಿಯೂ ಸೈಕಲ್ ಆದರೂ ಇರುತ್ತದೆ ಅಥವಾ ದ್ವಿಚಕ್ರ ವಾಹನಗಳು ಆದರೂ ಇದ್ದೇ ಇರುತ್ತದೆ ಹೌದು ಇದೀಗ ಕಾಲ ಬದಲಾಗಿದೆ ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ವಾಹನವೊಂದು ಇರಬೇಕೆಂದು ಯೋಚನೆ ಮಾಡುತ್ತಾರೆ ಅಂತಹ ಯುಗ ಇದಾಗಿದೆ. ಇಡೀ ಪ್ರಪಂಚದಲ್ಲಿಯೇ ವಾಹನ ಮ್ಯಾನಿಫ್ಯಾಕ್ಚರ್ ಮಾಡುವುದರಲ್ಲಿ ಟಾಪ್ ಸ್ಥಾನದಲ್ಲಿರುವ ಹಿರೋ ಮೋಟೊ ಕಾರ್ಪ್ ಕಂಪೆನಿಯು ಇದೀಗ ತನ್ನ ಗ್ರಾಹಕರಿಗಾಗಿ ಸಿಹಿ ಸುದ್ದಿಯೊಂದನ್ನು ನೀಡಿದ್ದು ಗ್ರಾಹಕರನ್ನು ಸೆಳೆಯುವುದಕ್ಕೆ ಒಳ್ಳೊಳ್ಳೆಯ ಆಫರ್ ಗಳನ್ನು ನೀಡಿ ತನ್ನತ್ತ ಗ್ರಾಹಕರನ್ನು ಸೆಳೆಯುತ್ತಲೇ ಇದೆ ಇದೀಗ ಹೀರೊ ಕಂಪೆನಿ.

ಪ್ರಪಂಚಾದ್ಯಂತ ಫೇಮಸ್ ಆಗಿರುವ ಮೋಟರ್ ಸೈಕಲ್ ಮತ್ತು ಸ್ಕೂಟರ್ ತಯಾರಿಕೆ ಸಂಸ್ಥೆಯಾಗಿರುವ ಹೀರೋ ಮೋಟೋ ಕಾರ್ಪ್ ಕಂಪೆನಿಯು ತನ್ನ ಗ್ರಾಹಕರಿಗೆ ಹೊಸ ರಿಟೇಲ್ ಹಣಕಾಸು ಎಂಬ ಹೊಸದೊಂದು ಸ್ಕೀಮ್ ಅನ್ನು ಘೋಷಣೆ ಮಾಡಿದೆ ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚು ಮಾಡಲು ಕಂಪೆನಿ ಈ ರೀತಿಯ 1ಸ್ಕೀಮನ್ನು ಜಾರಿಗೆ ತಂದಿದೆ ಹೌದು ಹಲವು ರಾಷ್ಟ್ರೀಕೃತ ಬ್ಯಾಂಕುಗಳು ಖಾಸಗಿ ಬ್ಯಾಂಕುಗಳು ಮತ್ತು ನಾನ್ ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳಿಂದ ಹಣಕಾಸಿನ ಹಣಕಾಸು ನೆರವನ್ನು ಗ್ರಾಹಕರಿಗೆ ಸಿಗುವಂತೆ ಮಾಡಿದೆ ಕಂಪೆನಿ. ಪ್ರವೇಶಾವಕಾಶ ಇರುವಂತಹ ಹಣಕಾಸು ಆಯ್ಕೆಗಳು ಮತ್ತು ವೈಯಕ್ತಿಕೃತ ಯೋಜನೆಗಳ ಮೂಲಕ ಅದು ಗ್ರಾಹಕರು ಸುಲಭವಾಗಿ ಖರೀದಿಸುವಂತೆ ಮಾಡಿದೆ. ಅಡಮಾನರಹಿತ ಇ.ಎಮ್‍.ಐ ವೆಚ್ಚ ಇಲ್ಲದ ಮತ್ತು ನಗದು ಇಎಮ್‍ಐ ಮುಂತಾದ ವಿನೂತನ ಹಣಕಾಸು ಉತ್ಪನ್ನಗಳ ಮೂಲಕ ಸಂಸ್ಥೆಯು ಗ್ರಾಹಕರು, ತಮ್ಮ ನೆಚ್ಚಿನ ಹೀರೊ ಮೋಟೋಕಾರ್ಪ್ ಉತ್ಪನ್ನವನ್ನು ಮನೆಗೆ ತರಲು ಬೆಂಬಲ ನೀಡುತ್ತಿದೆ. ಹೀರೊ ಫಿನ್‍ಕಾಪರ್ನ್ ಜೊತೆಗೆ ಅದು ಕಿಸಾನ್ ಇಎಮ್‍ಐ ಹಾಗೂ ಬಲೂನ್ ಇಎಮ್‍ಐ ನಂತಹ ಉದ್ಯಮದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಯೋಜನೆ ಅನ್ನು ಪರಿಚಯ ಮಾಡುತ್ತಿದೆ ಕಂಪೆನಿ.

ಕೃಷಿ ಆದಾಯ ಆಧಾರಿತ ಗ್ರಾಹಕರು ಆಲ್ಲದೆ ತಿಂಗಳ ಆದಾಯವಿರುವ ಗ್ರಾಹಕರಿಗೂ ಸಹ ಅವರ ಅಗತ್ಯಗಳಿಗೆ ತಕ್ಕ ಪರಿಹಾರವನ್ನು ಒದಗಿಸುತ್ತದೆ. ಈ ಅಗತ್ಯಕ್ಕೆ ತಕ್ಕ ವಿನೂತನ ಹಣಕಾಸು ಕೊಡುಗೆಗಳೊಂದಿಗೆ ಹೀರೊ ಮೋಟೋಕಾರ್ಪ್ ದೇಶದಾದ್ಯಂತ ಇರುವ ತನ್ನ ಗ್ರಾಹಕರು ಅದರ ವಿಶ್ವದರ್ಜೆ ಉತ್ಪನ್ನಗಳಿಗೆ ಪ್ರವೇಶ ಪಡೆಯಲು ಅವಕಾಶ ಪಡೆದುಕೊಳ್ಳುವುದನ್ನು ಖಾತರಿಪಡಿಸುತ್ತದೆ. ಈ ರೀತಿಯ ಪ್ರಕ್ರಿಯೆಯಲ್ಲಿ ಅವರ ಜೀವನದ ಗುಣಮಟ್ಟವನ್ನು ಉನ್ನತಗೊಳಿಸುತ್ತದೆ. ಹೀರೊ ಮೋಟೋಕಾರ್ಪ್ ಎಂಬ ಕಂಪನಿ ಆಧಾರಿತ ಹಣಕಾಸು ನೆರವು ಆಧಾರಿತ ರೂಪಾಯಿಯಿಂದ ಅಂದರೆ 6999 ಆರಂಭವಾಗುತ್ತದೆ. ಕಡಿಮೆ ಡೌನ್‍ಪೇಮೆಂಟ್ 5.55% ಬಡ್ಡಿದರ, 48 ತಿಂಗಳುಗಳವರೆಗಿನ ದೀರ್ಘಾವಧಿ ಸಾಲಾವಧಿಗಳು ಮುಂತಾದ ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ. ಗ್ರಾಹಕರು ಎಸ್‍ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಗಳ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗಳನ್ನು ಬಳಸುವ ಮೂಲಕ ತಕ್ಷಣ ಹಣಕಾಸು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಹೀರೊ ಮೋಟೊ ಕಾರ್ಪ್ ಕಂಪೆನಿಯು ತಮ್ಮ ಗ್ರಾಹಕರಿಗೆ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ನೀಡುವ ಮೂಲಕ ಹೀರೋ ಮೋಟೋ ಕಾರ್ಪ್ ಕಂಪೆನಿ ಎಚ್ ಡಿಎಫ್ ಸಿ ಬ್ಯಾಂಕ್ ಇಂಡಸ್ ಇಂಡ್ ಬ್ಯಾಂಕ್ ಶ್ರೀ ರಾಮ್ ಸಿಟಿ ಯೂನಿಯನ್ ಫೈನಾನ್ಸ್ ಹೆಚ್‍ಡಿಬಿ ಫೈನಾನ್ಶಿಯಲ್ ಸರ್ವಿಸಸ್ ಐಡಿಎಫ್‍ಸಿ ಫರ್ಸ್ಟ್ ಬ್ಯಾಂಕ್ ಮತ್ತು ವ್ಹೀಲ್ಸ್ ಇಎಮ್‍ಐ ಒಳಗೊಂಡಂತೆ ಹಣಕಾಸು ನೆರವಿಗೆ ಅನೇಕ ಬ್ಯಾಂಕ್ ಗಳು ಹಾಗೂ ಎನ್‍ಬಿಎಫ್‍ಸಿಗಳೊಂದಿಗೆ ಸಹಯೋಗ ಏರ್ಪಡಿಸಿಕೊಂಡಿದೆ. ಇನ್ನೂ ಹೀರೋ ಮೋಟೋ ಕಾರ್ಪ್ ಕಂಪೆನಿಯು ನೀಡಿರುವ ಈ ವ್ಯವಸ್ಥೆಯನ್ನು ಈ ಆಫರ್ ಅನ್ನು ನೀವು ಕೂಡ ಇದರ ಸದುಪಯೋಗ ಪಡೆದುಕೊಳ್ಳಿ ಮತ್ತು ಈ ಆಫರ್ ಬಗ್ಗೆ ತಿಳಿದ ನಂತರ ನೀವು ಕೂಡ ಈ ವಿಚಾರವನ್ನು ಬೇರೆಯವರಿಗೆ ತಿಳಿಸಿಕೊಡಿ ಶುಭದಿನ ಧನ್ಯವಾದ.

Exit mobile version