ಆಯುರ್ವೇದದಲ್ಲಿ ಅಧಿಕವಾಗಿ ಬಳಕೆ ಮಾಡುವಂತಹ ಈ ಗಿಡವನ್ನು ಹೊಟ್ಟೆ ನೋವು ನಿವಾರಣೆಗೆ ಬಳಕೆ ಮಾಡ್ತಾರೆ ಹಾಗಾದರೆ ಈ ಗಿಡಮೂಲಿಕೆಯ ಬಗ್ಗೆ ನೀವು ಸಹ ತಿಳಿಬೇಕೆಂದಲ್ಲಿ ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ.ನಮಸ್ಕಾರಗಳು ಓದುಗರೆ ಹೆಣ್ಣುಮಕ್ಕಳಿಗೆ ಹೊಟ್ಟೆನೋವು ಸಮಸ್ಯೆ ಇರುವುದು ಪ್ರತಿ ತಿಂಗಳು ಕಾಡುವ ಬಾಧೆ ಆಗಿದೆ, ಹೊಟ್ಟೆ ನೋವು ಸಮಸ್ಯೆ ಎಂಬುದು ಬಹುತೇಕ ಎಲ್ಲ ಹೆಣ್ಣುಮಕ್ಕಳಿಗೂ ಕಾಡುವ ತಿಂಗಳು ಸಮಸ್ಯೆಯಾಗಿದೆ. ಹಾಗಾಗಿ ಅಂತಹ ಹೊಟ್ಟೆ ನೋವು ನಿವಾರಣೆಗೆ ಈ ಸೊಪ್ಪು ಪ್ರಯೋಜನಕಾರಿಯಾಗಿದೆ .
ಬಹಳಷ್ಟು ಮಂದಿ ಈ ಹೊಟ್ಟೆನೋವಿಗೆ ಇತ್ತೀಚಿನ ದಿನಗಳಲ್ಲಿ ಮಾತ್ರ ತೆಗೆದುಕೊಳ್ಳುತ್ತಾ ತಮ್ಮ ಹೊಟ್ಟೆ ನೋವಿಗೆ ಪರಿಹಾರ ಕಂಡುಕೊಳ್ಳುತ್ತಾರೆ ಹೊಟ್ಟೆನೋವನ್ನು ಕಡಿಮೆ ಮಾಡಿಕೊಳ್ಳುತ್ತಾರೆ ಆದರೆ ನಿಮಗಿದು ಗೊತ್ತಿರಲಿ, ನೀವು ಹೊಟ್ಟೆನೋವಿಗೆ ಅದರಲ್ಲೂ ತಿಂಗಳಿನ ಸಮಸ್ಯೆ ಎದುರಾದಾಗ ಆಗ ಉಂಟಾಗುವ ಹೊಟ್ಟೆ ನೋವಿಗೆ ಮಾತ್ರೆ ತೆಗೆದುಕೊಂಡರೆ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.
ಆದ್ದರಿಂದ ಮಾತ್ರೆ ತೆಗೆದುಕೊಳ್ಳುವ ಬದಲು ಈ ಹೊಟ್ಟೆನೋವು ಬಾಧೆಗೆ ಸುಲಭವಾಗಿ ಆಡುಸೋಗೆ ಸೊಪ್ಪಿನಿಂದ ಕಷಾಯ ಮಾಡಿ ಸೇವಿಸಿ ನೋವನ್ನು ಬೇಗ ನಿವಾರಣೆ ಮಾಡಿಕೊಳ್ಳಿ ನೋವಿನಿಂದ ಮುಕ್ತಿಗಾಗಿ ಆಡು ಸೋಗೆ ಸೊಪ್ಪು ಹೆಚ್ಚು ಪರಿಣಾಮಕಾರಿಯಾಗಿದೆ ಪ್ರಭಾವಶಾಲಿಯಾಗಿ ಹೊಟ್ಟೆ ನೋವನ್ನು ನಿವಾರಿಸುತ್ತೆ.
ಹಾಗಾಗಿ ಈ ಆಡುಸೋಗೆ ಸೊಪ್ಪನ್ನು ನೀವು ಬಳಕೆ ಮಾಡುವುದರಿಂದ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಹಾರ್ಮೋನ್ ಇಂಬ್ಯಾಲೆನ್ಸ್ ತೊಂದರೆ ನಿವಾರಣೆಯಾಗುತ್ತದೆ.ಹೌದು ಇಂದು ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದರಿಂದ ಏನೆಲ್ಲ ತೊಂದರೆಗಳನ್ನು ಹೆಣ್ಣುಮಕ್ಕಳು ಎದುರಿಸುತ್ತಿದ್ದಾರೆಂಬುದನ್ನು ನೋಡುತ್ತಿದ್ದೀರಾ ಇದಕ್ಕಾಗಿ ಹೆಚ್ಚು ಹೆಚ್ಚು ಖರ್ಚು ಮಾಡಿ ಆಸ್ಪತ್ರೆಗಳಿಗೆ ಅಲೆದಾಡುತ್ತಾರೆ. ಆದರೆ ಯಾವುದೇ ವಿಧದ ಪರಿಹಾರಗಳು ಮಾತ್ರ ದೊರೆಯುವುದಿಲ್ಲ ಸಮಯ ವ್ಯರ್ಥ ಆರೋಗ್ಯ ಕೆಡುತ್ತೆ ಹೊರತು ಮತ್ತು ಯಾವ ಉಪಯೋಗವೂ ಆಗುವುದಿಲ್ಲ.
ಇವತ್ತಿನ ಈ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವುದು ಏನಪ್ಪಾ ಅಂದರೆ ಆಡುಸೋಗೆ ಸೊಪ್ಪಿನ ಪ್ರಯೋಜನಗಳನ್ನು ನಾವು ಮಾತನಾಡಲು ಹೊರಟಿದ್ದೇವೆ. ಈ ಆಡು ಸೋಗೆ ಸೊಪ್ಪು ಹಳ್ಳಿಗಳಲ್ಲಿ ಹೇರಳವಾಗಿ ದೊರೆಯುತ್ತೆ, ಈ ಸೊಪ್ಪನ್ನು ಹಳ್ಳಿ ಕಡೆ ಮಂದಿ ಬಹಳಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಲು ಗಿಡಮೂಲಿಕೆ ಆಗಿ ಬಳಕೆ ಮಾಡುತ್ತಾರೆ.
ಈ ಆಡುಸೋಗೆ ಸೊಪ್ಪನ್ನು ಕಷಾಯದ ರೂಪದಲ್ಲಿ ಅಥವಾ ಈ ಆಡುಸೋಗೆ ಸಸ್ಯದ ಎಲೆಗಳನ್ನು ಸಂಗ್ರಹ ಮಾಡಿ ಅದನ್ನು ಒಣಗಿಸಿ ಪುಡಿಮಾಡಿ ಹೆಚ್ಚು ದಿನಗಳ ಕಾಲ ಶೇಖರಣೆ ಮಾಡಿ ಇಟ್ಟುಕೊಂಡು, ಅದನ್ನು ಪ್ರತಿದಿನ ನೀರಿಗೆ ಮಿಶ್ರಮಾಡಿ ಕುಡಿಯುತ್ತ ಬಂದರು ಕೂಡ ನಮ್ಮ ದೇಹದಲ್ಲಿ ಕಾಡುತ್ತಿರುವಂತಹ ಹಲವು ವಿಧದ ಸಮಸ್ಯೆಗಳಿಗೆ ಇದು ಪರಿಹಾರ ಕೊಡುತ್ತದೆ.ಈಗ ನಾವು ಹೇಳಲು ಹೊರಟಿರುವುದು ಹೊಟ್ಟೆನೋವು ಬಾಧೆಗೆ ಹೆಣ್ಣುಮಕ್ಕಳು ಆಡುಸೋಗೆ ಸೊಪ್ಪನ್ನು ಹೇಗೆ ಸೇವಿಸಬೇಕು ಅಂತ ಪೀರಿಯಡ್ಸ್ ಕಾಡುತ್ತಿರುವಾಗ ಈ ಎಲೆಯ ಕಷಾಯವನ್ನು ಸೇವಿಸುವುದು ಬೇಡ.
ಆದರೆ ನಾರ್ಮಲ್ ದಿನಗಳಲ್ಲಿ ಈ ಎಲೆಗಳಿಂದ ಕಷಾಯ ಮಾಡಿ ಕುಡಿಯಿರಿ ಅಥವಾ ಈ ಎಲೆಗಳನ್ನು ಜಜ್ಜಿ ಇದರಿಂದ ರಸ ಬೇರ್ಪಡಿಸಿ ಅದನ್ನು ನೀರಿಗೆ ಮಿಶ್ರಣ ಮಾಡಿ ಕುಡಿಯುತ್ತಾ ಬನ್ನಿ ಇದು ರುಚಿಯಲ್ಲಿ ಒಗರು ಇರುತ್ತದೆ, ಆದ್ದರಿಂದ ನೀವು ಇದರ ರಸವನ್ನು ಬೇರ್ಪಡಿಸಿದಾಗ ಇದರ ಜೊತೆಗೆ ಕಲ್ಲು ಸಕ್ಕರೆ ಮಿಶ್ರಣ ಮಾಡಿ.ಆ ರಸವನ್ನು ನೀವು ಸೇವಿಸಬಹುದು. ಹೀಗೆ ಮಾಡುವುದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಮುಖ್ಯವಾಗಿ ಪರಿಹಾರ ಆಗುತ್ತದೆ ಹಾಗೂ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು ಶಮನ ಗೊಳ್ಳುತ್ತದೆ.