Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

0 to5 ವರೆಗಿನ ಚಿಕ್ಕ ಮಕ್ಕಳ ಕೆಮ್ಮು ಕಫ ಶೀತಕೆ ಇಲ್ಲಿದೆ ಮನೆ ಮದ್ದು ಬಳಸುವ ಉಪಾಯ ..!

ನಮಸ್ಕಾರ ಪ್ರಿಯ ವೀಕ್ಷಕರೆ ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸುವ ಈ ಮಾಹಿತಿ ಏನು ಅಂದರೆ ಚಿಕ್ಕ ಮಕ್ಕಳಿಗೆ ಹಾಲುಣಿಸುವ ಕಾರಣ ಅಥವಾ ಈ ಒಂದು ವರುಷದಿಂದ ಐದು ವರ್ಷದ ವರೆಗಿನ ಮಕ್ಕಳಿಗೆ ಕಫದ ಬಾಧೆ ತುಂಬ ಕಾಡುತ್ತಾ ಇರುತ್ತದೆ, ಆ ಕಫದ ಬಾಧೆ ಅನ್ನು ನಿವಾರಣೆ ಮಾಡುವುದಕ್ಕೆ ಒಂದು ಸುಲಭವಾದ ಸರಳವಾದ ಮನೆ ಮದ್ದಿನ ವಿಧಾನವನ್ನು ತಿಳಿಸಿಕೊಡುತ್ತೇವೆ. ಇದನ್ನು ನೀವು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಯಾವುದೇ ತರಹದ ಅಡ್ಡ ಪರಿಣಾಮ ಆಗುವುದಿಲ್ಲ.

ಯಾಕೆಂದರೆ ಪೋಷಕರಿಗೆ ಸಾಮಾನ್ಯವಾಗಿ ಯಾವ ಮನೆ ಮದ್ದನ್ನು ಪಾಲಿಸುವುದಕ್ಕೆ ಭಯ ಆಗುತ್ತದೆ ಆದಕಾರಣ ನಾವು ತಿಳಿಸುವುದೇನೆಂದರೆ ಇಲ್ಲಿ ನಾವು ಬಳಸಿರುವುದು ನೈಸರ್ಗಿಕವಾದ ಪದಾರ್ಥಗಳನ್ನು. ಸಾಮಾನ್ಯವಾಗಿ ಮಕ್ಕಳಿಗೆ ಅಡುಗೆಯಲ್ಲಿ ನೀಡುವ ಪದಾರ್ಥ ಹಾಗೂ ನೈಸರ್ಗಿಕವಾದ ಕೆಲವೊಂದು ಪದಾರ್ಥಗಳನ್ನು ಬಳಸಿ ಮಾಡುವ ಈ ಮನೆ ಮದ್ದಿನಿಂದ ಮಕ್ಕಳ ಆರೋಗ್ಯದ ಮೇಲೆ ಯಾವ ಅಡ್ಡ ಪರಿಣಾಮಗಳು ಆಗುವುದಿಲ್ಲ.

ಇನ್ನೂ ಈ ಮನೆ ಮದ್ದಿನ ಬಗ್ಗೆ ಹೇಳುವುದಾದರೆ ಪೂರ್ವಜರು ತಮ್ಮ ಮನೆಯಲ್ಲಿ ಮಕ್ಕಳನ್ನು ಬೆಳೆಸುವಾಗ ಅವರಿಗೆ ಶೀತ ಕೆಮ್ಮು ಗಂಟಲು ನೋವಿಗೆ ಗಂಟಲಿನಲ್ಲಿ ಕಟ್ಟಿರುವ ಕಫದ ಬಾಧೆಗೆ ಈ ಪರಿಹಾರವನ್ನು ಪಾಲಿಸುತ್ತಿದ್ದರು, ಈ ಪದಾರ್ಥಗಳನ್ನು ಬಳಸುತ್ತಿದ್ದರು. ಹಾಗಾದರೆ ಈ ಮನೆ ಮದ್ದಿಗಾಗಿ ಬೇಕಾಗಿರುವ ಪದಾರ್ಥಗಳು ಹೀಗಿರುತ್ತದೆ ವಿಳ್ಳೇದೆಲೆ ದೊಡ್ಡಪತ್ರೆ ಎಲೆ ಒಂದು ಚಿಕ್ಕ ಎಸಳು ಬೆಳ್ಳುಳ್ಳಿ ಒಂದು ಮೆಣಸಿನ ಕಾಳು ಹಾಗೆ ಸ್ವಲ್ಪ ಉಪ್ಪು.

ಈ ಪದಾರ್ಥಗಳನ್ನು ಬಳಸಿ ಮನೆ ಮದ್ದನ್ನು ಮಾಡುತ್ತಿದ್ದರು ಇದೀಗ ಈ ಮನೆ ಮದ್ದನ್ನು ಮಾಡುವ ವಿಧಾನವನ್ನು ತಿಳಿಯೋಣ. ಮೊದಲಿಗೆ ಒಂದು ಚಿಕ್ಕ ವಿಳ್ಳೆದೆಲೆಯನ್ನು ತೆಗೆದುಕೊಳ್ಳಿ. ನಂತರ ದೊಡ್ಡಪತ್ರೆಯ ಎಲೆಯನ್ನು ವೀಳ್ಯದೆಲೆಯ ಮೇಲೆ ಇಟ್ಟು ಇದೀಗ ಬೆಳ್ಳುಳ್ಳಿ ಮತ್ತು ಮೆಣಸನ್ನು ಸ್ವಲ್ಪ ಜಜ್ಜಿ ತೆಗೆದುಕೊಳ್ಳಿ ಇದಕ್ಕೆ ಚಿಟಕಿ ಉಪ್ಪನ್ನು ಹಾಕಿ ಈ ವಿಳ್ಳೆದೆಲೆಯನ್ನು ಮಡಚಬೇಕು. ನಂತರ ಇದನ್ನು ಸ್ಟೌನ ಮೇಲೆ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಎಷ್ಟು ಅಂದರೆ ಅದನ್ನು ಹಿಂಡಿದಾಗ ಆ ವೀಳ್ಯದೆಲೆಯಿಂದ ರಸ ಇಳಿಯ ಬೇಕು ಅಷ್ಟು ಪ್ರಮಾಣದಲ್ಲಿ ಬಿಸಿ ಮಾಡಿಕೊಂಡ ನಂತರ ಒಂದು ಲೋಟಕ್ಕೆ ಈ ರಸವನ್ನು ತೆಗೆದುಕೊಳ್ಳಿ. ಇದೀಗ ಮಕ್ಕಳಿಗೆ ಈ ರಸವನ್ನು ನೀಡಬೇಕು.

ಇದರಿಂದ ಎದೇಲಿ ಕಟ್ಟಿರುವ ಕಫ ಕರಗುತ್ತದೆ ಮತ್ತು ಚಿಕ್ಕ ಮಕ್ಕಳಿಗೆ ಅಂದರೆ ಒಂದು ವರ್ಷದ ಮಗುವಿಗೆ ಈ ಮನೆಮದ್ದನ್ನು ಎರಡು ಹನಿ ಮಾತ್ರ ನೀಡಿ, ದಿನಕ್ಕೆ 2ಬಾರಿಯಷ್ಟು ಸಾಕು. ಇನ್ನೂ ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಅರ್ಧ ಚಮಚದಷ್ಟು ಈ ರಸವನ್ನು ನೀಡಿ ಇದರಿಂದ ಬೇಗ ಕಫ ಕರಗುತ್ತದೆ. ಕೆಮ್ಮು ಮತ್ತು ಶೀತ ಕೂಡ ಬೇಗ ಪರಿಹಾರ ಆಗುತ್ತದೆ. ಇದೊಂದು ಸುಲಭ ಪರಿಹಾರ ಆಗಿರುತ್ತದೆ ನಿಮಗೂ ಕೂಡ ಈ ಪರಿಹಾರ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಕ್ಕಳಿದ್ದವರಿಗೆ ಈ ಮನೆ ಮದ್ದಿನ ಬಗ್ಗೆ ತಿಳಿಸಿಕೊಡಿ. ಇವತ್ತಿನ ಮಾಹಿತಿ ಉಪಯುಕ್ತವಾಗಿದೆ ಅಂದಲ್ಲಿ ಮಾಹಿತಿಗೆ ಒಂದು ಲೈಕ್ ಮಾಡಿ ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಆರೋಗ್ಯದಿಂದಿರಿ ಧನ್ಯವಾದ.