ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿರುವಂತಹ ಈ ಒಂದು ಘಟನೆ ಇದನ್ನು ಕೇಳಿದರೆ ನೀವು ಕೂಡ ಶಾಕ್ ಆಗೋದು ಗ್ಯಾರಂಟಿ ನಿಮ್ಮ ಮನೆಯಲ್ಲಿ ಕೂಡ ಮಕ್ಕಳಿದ್ದಾರೆ ಈ ಮಾಹಿತಿಯನ್ನು ನೀವು ತಪ್ಪದೇ ತಿಳಿಯಲೇ ಬೇಕು ಹೌದು ಎಷ್ಟೋ ಜನ ತಂದೆ ತಾಯಿಯರು ಮಕ್ಕಳು ಎಕ್ಸಾಮ್ನಲ್ಲಿ ಫೇಲ್ ಆದರೆ ಕಡಿಮೆ ಅಂಕಗಳನ್ನು ಪಡೆದುಕೊಂಡರೆ ಬೇಸರವಾಗುತ್ತದೆ.ಮಕ್ಕಳ ಮೇಲೆ ಒತ್ತಡವನ್ನು ಹೇರುತ್ತಾರೆ ಆದರೆ ಈ ರೀತಿ ಮಾಡುವುದರಿಂದ ಮಕ್ಕಳ ಮನಸ್ಸಿನ ಮೇಲೆ ಘಾಸಿ ಉಂಟು ಮಾಡಿದ ಹಾಗೆ ಆಗುತ್ತದೆ. ಆದ ಕಾರಣ ಯಾವತ್ತಿಗೂ ಕೂಡ ನೀವು ನಿಮ್ಮ ಮಕ್ಕಳ ಮೇಲೆ ಒತ್ತಡವನ್ನು ಹೇರಬೇಡಿ ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಆ ನಂತರ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.
ಯಾವ ಪೋಷಕರಿಗೆ ಆಗಲಿ ನಮ್ಮ ಮಕ್ಕಳು ಹೆಚ್ಚು ಮಾರ್ಕ್ಸ್ ತೆಗೆಯಬೇಕು ಒಳ್ಳೆ ರಾಂಡ್ ಪಡೆದುಕೊಳ್ಳಬೇಕು ಅನ್ನೋ ಆಸೆ ಅಂತೂ ಇದ್ದೇ ಇರುತ್ತದೆ ಇನ್ನು ಮಕ್ಕಳು ಫಸ್ಟ್ ಕ್ಲಾಸ್ ನಲ್ಲಿ ಪಾಸಾದರೆ ಹೆಚ್ಚು ಅಂಕ ಪಡೆದರೆ ಪೋಷಕರಿಗಿಂತ ಖುಷಿ ಪಡುವ ವ್ಯಕ್ತಿ ಮತ್ತೆ ಇನ್ನು ಯಾರೂ ಇರೋದೇ ಇಲ್ಲ. ಆದರೆ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ನೀವು ನಡೆದಿರುವ ಘಟನೆಯನ್ನು ತಿಳಿದರೆ ನೀವು ಕೂಡ ಶಾಕ್ ಆಗೋದು ಪಕ್ಕಾನೇ ಯಾಕೆ ಅಂತೀರಾ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.
ಮಧ್ಯಪ್ರದೇಶಕ್ಕೆ ಸೇರಿದ ಸಾಗರ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆಯ ಸುರೇಂದ್ರ ಎಂಬುವವರು ತಮ್ಮ ಮಗ ಫೇಲಾಗಿದ್ದಕ್ಕೆ ಪೆಂಡಾಲ್ ಹಾಕಿಸಿ ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಿಸಿದ್ದಾರೆ, ಇವರಿಗೇನು ತಲೆ ಕೆಟ್ಟಿದೆ ಅಂತ ನೀವು ಯೋಚನೆ ಮಾಡ್ಬೇಡಿ ಅವರು ಈ ರೀತಿ ಮಾಡಿರುವುದರ ಹಿಂದೆಯೂ ಕೂಡ ಒಂದು ಒಳ್ಳೆಯ ಉದ್ದೇಶವಿದೆ, ಆ ಉದ್ದೇಶವೇನು ಅಂದರೆ ತಮ್ಮ ಮಗನಿಗೆ ಆತ ಫೇಲ್ ಆದ ಎಂದು ಬೈಯುವುದರ ಬದಲು ಆತನ ಮನಸ್ಸಿಗೆ ನೋವು ಉಂಟು ಮಾಡುವುದರ ಬದಲು ಅವನಿಗೆ ಮುಂದಿನ ಜೀವನದಲ್ಲಿ ಏನನ್ನಾದರೂ ಸಾಧಿಸಲು ತಿಳಿಸಿಕೊಡಬೇಕೆಂದು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಸುರೇಂದ್ರ ಅವರು .
ಈ ಕಾರಣದಿಂದಾಗಿ ಸುರೇಂದ್ರ ಅವರು ತಮ್ಮ ಮಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲಾದರೂ ಅವನಿಗೆ ಬೈಯದೇ ಹೊಡೆಯದೆ ಅವನನ್ನು ಜೀವನದಲ್ಲಿ ಪ್ರೋತ್ಸಾಹಿಸುವುದಕ್ಕಾಗಿ ಈ ರೀತಿ ಮಾಡಿದ್ದಾರಂತೆ ಸ್ವತಃ ಸುರೇಂದ್ರ ಅವರೇ ಈ ರೀತಿ ಹೇಳಿಕೊಂಡಿದ್ದು, ಇವರು ತಮ್ಮ ಮಗನು ಹತ್ತನೇ ತರಗತಿಯಲ್ಲಿ ಫೇಲಾದ ಎಂಬುವ ಕಾರಣಕ್ಕೆ ಬೈಯ್ಯದೆ ಹೊಡೆಯದೆ ಅವನಿಗೆ ಮುಂದಿನ ಜೀವನದಲ್ಲಿ ಏನನ್ನಾದರೂ ಸಾಧಿಸಲು ಪ್ರೋತ್ಸಾಹಿಸಬೇಕೆಂದು ಈ ರೀತಿ ಮಾಡಿದ್ದಾರಂತೆ. ಹಾಗಾದರೆ ಸುರೇಂದ್ರ ಅವರ ಈ ಒಂದು ನಿಲುವು ಸರಿಯೋ ತಪ್ಪೋ ಎಂಬುದನ್ನು ನೀವು ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ .