Ad
Home ಅರೋಗ್ಯ ಅದೆಷ್ಟೋ ದೊಡ್ಡ ದೊಡ್ಡ ಕಾಯಿಲೆಗಳಿಗೆ ರಾಮ ಬಾಣ ಈ ಕಾಯಿ … ನಿಮ್ಮ ದೇಹಕ್ಕೆ ವಜ್ರಕವಚ...

ಅದೆಷ್ಟೋ ದೊಡ್ಡ ದೊಡ್ಡ ಕಾಯಿಲೆಗಳಿಗೆ ರಾಮ ಬಾಣ ಈ ಕಾಯಿ … ನಿಮ್ಮ ದೇಹಕ್ಕೆ ವಜ್ರಕವಚ ಬೇಕಾದ್ರೆ ಇದನ್ನ ವರ್ಷಕ್ಕೆ ಒಂದು ಬಾರಿಯಾದರೂ ಸೇವನೆ ಮಾಡಿ…

ಅಳಲೆಕಾಯಿಯ ಪ್ರಯೋಜನ ತಿಳಿದರೆ ಖಂಡಿತ ನೀವು ಕೂಡ ಅಚ್ಚರಿ ಪಡ್ತೀರಾ! ಹಳೆ ಕಾಲದಲ್ಲಿ ಭಾರತ ದೇಶದಲ್ಲಿ ಅಡುಗೆ ಮನೆಯಲ್ಲಿ ಇರುತ್ತಿದ್ದ ಕಡ್ಡಾಯವಾದ ವಸ್ತು ಅಂದರೆ ಅದು ಅಳಲೆಕಾಯಿ ಆಗಿರುತ್ತಿತ್ತು….ಹೌದು ಪ್ರಿಯ ಸ್ನೇಹಿತರೆ ಆರೋಗ್ಯದ ವಿಚಾರವಾಗಿ ನಾವು ಎಷ್ಟು ಕಾಳಜಿ ಮಾಡುತ್ತೇವೆ ಹಾಗೆ ಆರೋಗ್ಯ ಉತ್ತಮವಾಗಿರಬೇಕೆಂದು ನಮಗೆ ತಿಳಿಯದೇ ಇರುವ ಕೆಲವೊಂದು ವಸ್ತುಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳುವ ಪ್ರಯತ್ನವನ್ನು ಕೂಡ ನಾವು ಮಾಡುತ್ತೇವೆ.

ಈ ದಿನದ ಲೇಖನಿಯಲ್ಲಿ ಅಳಲೆಕಾಯಿ ಎಂಬ ಬಹಳ ಅದ್ಭುತವಾದ ಆರೋಗ್ಯಕರ ಪದಾರ್ಥದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿದು ಅಳಲೆಕಾಯಿಯ ಪ್ರಯೋಜನದ ಬಗ್ಗೆ ನೀವು ತಿಳಿಯಿರಿ ಹಾಗೂ ಅಗತ್ಯ ಬಿದ್ದಾಗ ಮನೆಮದ್ದು ಮಾಡುವುದಕ್ಕೆ ಅಳಲೆಕಾಯಿ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಪ್ರಿಯ ಸ್ನೇಹಿತರೆ ಅಳಲೆಕಾಯಿ ಇದೊಂದು ಬಹಳ ಹಳೆಯ ಕಾಲದಲ್ಲಿ ಬಳಸಲಾಗುತ್ತಿದ್ದಂತಹ ಔಷಧೀಯ ಪದಾರ್ಥವಾಗಿ ಇದನ್ನು ಆಯುರ್ವೇದದಲ್ಲಿಯೂ ಕೂಡ ಪ್ರಮುಖವಾಗಿ ಬಳಕೆ ಮಾಡಲಾಗುತ್ತಿತ್ತು ಅದರಲ್ಲಿಯೂ ಮನುಷ್ಯನ ದೇಹ ರಚನೆ ಆಗಿರುವಂತಹ ವಾತ ಪಿತ್ತ ಕಫದ ವಿಚಾರದಲ್ಲಿ ಯಾವುದೇ ಏರುಪೇರು ಉಂಟಾದರೂ ಅದರ ಚಿಕಿತ್ಸೆಗಾಗಿ ಈ ಅಳಲೆಕಾಯಿ ಅನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿತ್ತು.

ಗಾಯ ಆದಾಗ ಅಳಲೆಕಾಯಿಯ ರಸವನ್ನ ಹಾಕುವುದರಿಂದ ನೋವು ಮತ್ತು ಬಾವು ಬೇಗ ಕಡಿಮೆ ಆಗುತ್ತಿತ್ತು. ಅಳಲೆಕಾಯಿಯ ಕುರಿತು ಹೇಳುವುದಾದರೆ ಅಳಲೆಕಾಯಿ ಸಾಮಾನ್ಯವಾಗಿ ಈ ಮರವು ಬಯಲುಸೀಮೆ ಪ್ರದೇಶಗಳಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಕರ್ನಾಟಕದಲ್ಲಿಯೇ ಈ ಅಳಲೆಕಾಯಿ ಅನ್ನು ಅತಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಹಾಗೆ ಕರ್ನಾಟಕದಿಂದಲೇ ಭಾರತ ದೇಶದಲ್ಲಿ ಹಲವು ಪ್ರದೇಶಗಳಿಗೆ ಅಳಲೆಕಾಯಿಯನ್ನು ರವಾನೆ ಸಹ ಮಾಡಲಾಗುತ್ತಿತ್ತು ಆಯುರ್ವೇದದಲ್ಲಿ ಬಹಳ ಪ್ರಮುಖವಾಗಿ ಬಳಸುವ ಈ ಅಳಲೆಕಾಯಿ ಈ ಮೊದಲೇ ಹೇಳಿದಂತೆ ವಾತ ಪಿತ್ತ ಕಫ ಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಇದರ ಪ್ರಯೋಜನ ಮಾಡಲಾಗುತ್ತಿತ್ತು.

ಯಾವುದೇ ಕಾರಣಕ್ಕೂ ಗರ್ಭಿಣಿ ಸ್ತ್ರೀಯರು ಈ ಅಳಲೆಕಾಯಿಯ ಪ್ರಯೋಜನವನ್ನ ಮಾಡಬಾರದು, ಯಾಕೆಂದರೆ ಅಳಲೆ ಕಾಯಿಯ ಪ್ರಯೋಜನ ಮಾಡುವುದರಿಂದ ಗರ್ಭಸ್ರಾವ ಆಗುವ ಸಾಧ್ಯತೆ ಇರುತ್ತದೆ ಅಂತ ಹೇಳಲಾಗುತ್ತದೆ. ಆದ್ದರಿಂದ ಅಪಾರವಾದ ಔಷಧೀಯ ಗುಣವಿದ್ದರೂ ಅಳಲೆಕಾಯಿ ಅನ್ನು ಹೆಣ್ಣುಮಕ್ಕಳಿಗೆ ಗರ್ಭಾವಸ್ಥೆಯ ಸಮಯದಲ್ಲಿ ಕೊಡುವುದಿಲ್ಲ.

ಅಳಲೆಕಾಯಿ ಯ ಮರವು ಸಾಮಾನ್ಯ ಎತ್ತರಕ್ಕೆ ಬೆಳೆಯುವ ಮರವಾಗಿದ್ದು ಇದರಲ್ಲಿ ಬಿಡುವ ಹೂವು ಬಳಿಕ ಕಾಯಿ ಯಾಕೆ ಪರಿಣಮಿಸುತ್ತದೆ ಮತ್ತು ಕಾಯಿಯಾಗಿದ್ದಾಗ ಈ ಅಳಲೆಕಾಯಿ ಹಸಿರು ಬಣ್ಣದಲ್ಲಿರುತ್ತದೆ ಬಳಿಕ ಹಳದಿ ಬಣ್ಣಕ್ಕೆ ತಿರುಗುತ್ತದೆ.

ಅಳಲೆಕಾಯಿ ಅನ್ನೋ ಅಂದಿನ ಕಾಲದಲ್ಲಿ ಹೆಚ್ಚಾಗಿ ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಬಳಸಲಾಗುತ್ತಿತ್ತು ಹಾಗೂ ಇನ್ನೂ ಬಹಳಷ್ಟು ದೊಡ್ಡ ದೊಡ್ಡ ಅನಾರೋಗ್ಯ ಸಮಸ್ಯೆಗಳಿಗೂ ಈ ಅಳಲೆಕಾಯಿ ಬಳಕೆ ಮಾಡಲಾಗುತ್ತಿದ್ದು ಇದರ ಪ್ರಯೋಜನ ಪಡೆದು ಕೊಳ್ಳು ವುದಕ್ಕೂ ಮೊದಲು ಆಯುರ್ವೇದ ಪಂಡಿತರ ಬಳಿ ನಿಮ್ಮ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಈ ಅಳಲೆಕಾಯಿಯ ಬಳಕೆ ಮಾಡಬೇಕು ಎಂಬ ಮಾಹಿತಿಯನ್ನು ತಿಳಿದು ಬಳಿಕ ಇದರ ಪ್ರಯೋಜನ ಪಡೆದುಕೊಳ್ಳುವುದು ಬಹಳ ಉತ್ತಮವಾಗಿದೆ.

ಈ ರೀತಿಯಾಗಿ ಅಗಾಧವಾದ ಪ್ರಯೋಜನವನ್ನು ಹೊಂದಿರತಕ್ಕಂತಹ ಅಳಲೆಕಾಯಿ ಸೌಂದರ್ಯವನ್ನ ಕೂಡ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದ್ದು ಇದು ವೃದ್ಧಾಪ್ಯವನ್ನು ಮುಂದೂಡಲು ಸಹಕಾರಿಯಾಗಿದೆ ಹೌದು ಅಳಲೆಕಾಯಿಯ ಪ್ರಯೋಜನವನ್ನು ಸೌಂದರ್ಯವೃದ್ಧಿಗಾಗಿ ಕೂಡ ಬಳಸಬಹುದು ಇದರ ಸೇವನೆ ವೃದ್ಧಾಪ್ಯವನ್ನು ಮುಂದೂಡಲು ಸಹಕಾರಿಯಾಗಿದೆ ಹಾಗಾಗಿಯೇ ಅಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಸಮಯದವರೆಗೂ ಬಹಳ ಯಂಗ್ ಆಗಿಯೇ ಕಾಣಸಿಗುತ್ತಿದ್ದರು. ಹಾಗಾಗಿ ಈ ಅಳಲೆಕಾಯಿಯ ಪ್ರಯೋಜನದಿಂದ ಮೊಡವೆ ಸಮಸ್ಯೆ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಕಾರಿಯಾಗಿರುತ್ತಿತ್ತು.

Exit mobile version