Categories
ಅರೋಗ್ಯ ಆರೋಗ್ಯ ಮಾಹಿತಿ

ಮೂವತ್ತು ವರ್ಷಗಳಿಂದ ಕೇವಲ ಎರಡು ರೂಪಾಯಿಗಳಿಗೆ ಚಿಕಿತ್ಸೆಯನ್ನು ನೀಡಿರುವಂತಹ ವೀರ ರಾಘವನ್ ಬಗ್ಗೆ 2 ನಿಮಿಷ ನಿಮ್ಮ ಹತ್ತಿರ ಸಮಯವಿದ್ದರೆ ತಿಳಿದುಕೊಳ್ಳಿ !!!

ನಮ್ಮ ಸಮಾಜದಲ್ಲಿ ಎಲ್ಲರೂ ಕೂಡ ಕೆಟ್ಟವರು ಇರುವುದಿಲ್ಲ, ನಮ್ಮ ಸಮಾಜದಲ್ಲಿ ತುಂಬಾ ಒಳ್ಳೆಯ ವ್ಯಕ್ತಿಗಳು ಕೂಡ ನಮ್ಮ ಎದುರುಗಡೆ ಆಗಾಗ ಕಾಣಿಸುತ್ತಾ ಇರುತ್ತಾರೆ . ಆದರೆ ನಾವು  ಅವರನ್ನು ಅಷ್ಟು ಬೇಗ ಗಮನಿಸುವುದಿಲ್ಲ. ಕೆಲವೊಂದು ವ್ಯಕ್ತಿಗಳು ತಾವು ಮಾಡುವಂತಹ ಒಳ್ಳೆಯ ಕೆಲಸವನ್ನು ಕೂಡ ಯಾರಿಗೂ ಕೂಡ ಹೇಳಿಕೊಳ್ಳುವುದಿಲ್ಲ ಆದರೆ ಅವರು ಮಾಡುವಂತಹ ಕೆಲಸ  ಸಮಾಜಕ್ಕೆ ಹಾಗೂ ನಮ್ಮ ದೇಶಕ್ಕೆ ತುಂಬಾ ಒಳ್ಳೆಯ ಆಗುವಂತಹ ಒಂದು ವಿಚಾರ ಆಗಿರುತ್ತದೆ.

ಇದಕ್ಕೆ ಉದಾಹರಣೆ ಏನಪ್ಪಾ ಅಂದರೆ ಸಾಲುಮರದ ತಿಮ್ಮಕ್ಕ ನೀವು ನೋಡಿರಬಹುದು. ತಾನು ಹತ್ತಾರು ಕಿಲೋಮೀಟರ್ ಗೆ ಮರವನ್ನು ಬೆಳೆಸಿ ಸಾಕಿ ಪೋಷಿಸಿ ಇವತ್ತು ಆ ಸ್ಥಳಕ್ಕೆ ನೀವೇನಾದರೂ ಹೋದರೆ ನೀವು ಒಂದಿಷ್ಟು ಹೊತ್ತು ರೋಡಿನಲ್ಲಿ ನಿದ್ದೆ ಮಾಡಬಹುದು ಆದರೆ ಅಲ್ಲಿ ಅಮ್ಮ ಹಾಕಿರುವಂತಹ ಮರಗಳು ಇಂದು ಹೆಮ್ಮರವಾಗಿ ಬೆಳೆದುಕೊಂಡಿದೆ.

ಅದೆಲ್ಲ ಬಿಡಿ ಇವತ್ತು ನಾವು ನಿಮಗೆ ಮೂವತ್ತು ವರ್ಷಗಳಿಂದ ಕೇವಲ ಎರಡು ರೂಪಾಯಿ ಗಳನ್ನು ತೆಗೆದುಕೊಂಡು ಚಿಕಿತ್ಸೆಯನ್ನು ಕೊಡುವಂತಹ ಒಬ್ಬ ಡಾಕ್ಟರ್ ಬಗ್ಗೆ ಹೇಳಲು ಹೊರಟಿದ್ದೇವೆ ಇನ್ನೇಕೆ ತಡ ಸಂಪೂರ್ಣವಾಗಿ ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ನಿಮಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ಇವತ್ತಿನ ನಮ್ಮ ಪ್ರಸ್ತುತ ಜನ ಜೀವನದಲ್ಲಿ, ನಮಗೆ ಏನಾದರೂ ಆಗಲಿ ನಾವು ಡಾಕ್ಟರ್ ಹತ್ತಿರ ಹೋಗುತ್ತೇವೆ. ಅವರು ನಿಮಗೆ ಇಂಗ್ಲಿಷ್ ಮೆಡಿಸನ್ ನ ಕೊಡುತ್ತಾರೆ ಆದರೆ ಅವುಗಳ ಬಳಕೆ ಮಾಡುವುದರಿಂದ ನಿಮಗೆ ಏನು ಬೇಕಾದರೂ ಆಗಬಹುದು ಹಾಗೂ ಅವುಗಳ ಬೆಲೆಯೂ ಕೂಡ ತುಂಬಾ ಹೆಚ್ಚಾಗಿರುತ್ತದೆ.

ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ನಾಟಿ ವೈದ್ಯವನ್ನು ಕೂಡ ಕೆಲವೊಂದು ಜನರು ಬಳಸುತ್ತಾರೆ ಯಾಕೆಂದರೆ ಅದರ ಬೆಲೆ ತುಂಬಾ ಕಡಿಮೆಯಾಗಿರುತ್ತದೆ. ಆದರೆ ತಮಿಳುನಾಡಿನಲ್ಲಿ ಇರುವಂತಹ  ಬಡವರಿಗೆ ವೈದ್ಯರ ಚಿಕಿತ್ಸೆ ಕೈಗೆ ಲಭಿಸುವಂತಾಗಿದೆ. ಅದಕ್ಕೆ ಕಾರಣ ಅಲ್ಲಿ ಇರುವಂತಹ ಡಾಕ್ಟರ್ ವೀರ ರಾಘವನ್. ಇವರು ಆ ಗ್ರಾಮದಲ್ಲಿ ಇರುವಂತಹ ಜನರಿಗೆ ಕೇವಲ ಎರಡು ರೂಪಾಯಿ ಹಣವನ್ನು ತೆಗೆದುಕೊಂಡು ಒಳ್ಳೆಯ ಚಿಕಿತ್ಸೆಯನ್ನು ಅಲ್ಲಿನ ಗ್ರಾಮಸ್ಥರಿಗೆ ನೀಡುತ್ತಾ ಬಂದಿದ್ದಾರೆ.

ಈ ಡಾಕ್ಟರ್ ವೀರ ರಾಘವ ತಾನು ಹುಟ್ಟಿದ್ದು ಈ ಗ್ರಾಮದಲ್ಲಿ ಇವರು ಹುಟ್ಟಿನಿಂದಲೇ ತುಂಬಾ ಬುದ್ಧಿವಂತ ಹಾಗೂ ಇದಾದ ನಂತರ ಅವರು ಮೆಡಿಕಲ್ ಓದುತ್ತಾರೆ ಹೀಗೆ ಮೆಡಿಕಲ್ ಹೋಗುತ್ತಿರುವ ಸಂದರ್ಭದಲ್ಲಿ ಹಲವಾರು ಸ್ನೇಹಿತರು ಹಲವಾರು ವಿದೇಶಗಳಿಗೆ ಹೋಗಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇವರು ತಮ್ಮ ಗ್ರಾಮದಲ್ಲಿ ಇರುವಂತಹ ವ್ಯಕ್ತಿಗಳಿಗೆ ಸಹಾಯ ಮಾಡಬೇಕು ಎಂದು, ಕಳೆದ 30 ವರ್ಷಗಳಿಂದ ಇದೇ ಗ್ರಾಮದಲ್ಲಿ ಜನರಿಗೆ ಕೇವಲ ಎರಡು ರೂಪಾಯಿಗೆ ಚಿಕಿತ್ಸೆಯನ್ನು ನೀಡುತ್ತಾ ಬಂದಿದ್ದಾರೆ.

2018ನೇ ಇಸವಿಯಲ್ಲಿ ಚೆನ್ನೈಯಲ್ಲಿ ಭೀಕರ ಬರಗಾಲ ಬಂದಿದ್ದು ನಿಮಗೆ ನಮಗೆ ಗೊತ್ತಿರುವಂತಹ ವಿಚಾರ, ಈ ಸಮಯದಲ್ಲಿ ಹಲವಾರು ಸಾವು-ನೋವುಗಳು ಸಂಭವಿಸುತ್ತಿವೆ ಇದನ್ನು ನೋಡಿದರೆ ನನ್ನಂತಹ ಈ ವೀರ ರಾಘವ ನಾನು ಇಲ್ಲೇ ಇದ್ದು ಇವರ ಸೇವೆಯನ್ನು ಮಾಡಬೇಕು ಎಂದು,

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ನಿರ್ಧಾರ ಮಾಡುತ್ತಾರೆ ಇದರಿಂದಾಗಿಯೇ 1994 ಸ್ಥಾಪನೆ ಮಾಡಿದಂತಹ ಆಸ್ಪತ್ರೆ , ಇವತ್ತಿನವರೆಗೂ ಬಡವರಿಗೆ ಸಹಾಯ ಮಾಡುತ್ತಲೇ ಬಂದಿದೆ ,ಅದಲ್ಲದೆ ಈ ವೀರ ರಾಘವ ಮಾಡುತ್ತಿರುವಂತಹ ಮೆಚ್ಚುಗೆಯ ಕೆಲಸವನ್ನು ನೋಡಿ ಈ ಹಲವಾರು ವಿದೇಶಗಳಿಂದ ಹಣ ಸಂದಾಯ ಆಗುತ್ತಾ ಇದೆ ಇವರಿಗೆ ಬರುವ ಹಣವನ್ನು ಬಡವರ ಆರೋಗ್ಯಕ್ಕಾಗಿ ಖರ್ಚು ಮಾಡುತ್ತಾ ಇದ್ದಾರೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಲೈಕ್ ಮಾಡದೇ ವಾಪಸ್ ಹೋಗುವುದನ್ನು ಮರೆಯಬೇಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Leave a Reply