Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

300ಕ್ಕಿಂತ ಹೆಚ್ಚು ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಯನ್ನು ಕೊಟ್ಟು , ಬಡವರ ಪಾಲಿಗೆ ಇವರೊಬ್ಬರು ಆಧುನಿಕ ದೇವರಾಗಿದ್ದಾರೆ ಇವರ ಬಗ್ಗೆ ಎರಡು ನಿಮಿಷ ಟೈಮ್ ಇದ್ರೆ ಓದಿ ….

ಈವಾಗಿನ ಕಾಲದಲ್ಲಿ ಡಾಕ್ಟರ ಓದಿದನಂತರ ನಾವು ಹೇಗೆ ಓದುವುದಕ್ಕೆ ದುಡ್ಡು ಹಾಕಿದ್ದೆವು ಅದರ ಹತ್ತಿರ ಪಟ್ಟು ಹಣವನ್ನು ಮಾಡಬೇಕು ಅನ್ನುವಂತಹ ದೃಷ್ಟಿಯಿಂದ ಹಲವಾರು ಡಾಕ್ಟರುಗಳು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸವನ್ನು ಮಾಡಲು ತುಂಬಾ ಇಷ್ಟಪಡುತ್ತಾರೆ .

ಹಾಗೂ ಗೌರ್ಮೆಂಟ್ ಸಂಸ್ಥೆಗಳಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಕೆಲವೊಂದು ಡಾಕ್ಟರ ಗಳಿಗೆ ದೇವರು ಕೆಲವೊಂದು ಒಳ್ಳೆಯ ಬುದ್ದಿಯನ್ನು ಕೊಟ್ಟು ಈ ರೀತಿಯಾಗಿ ಜನರಿಗೆ ಸೇವೆ ಮಾಡುವಂತಹ ಶಕ್ತಿಯನ್ನು ಕೊಟ್ಟಿರುತ್ತಾನೆ ಹಾಗೂ ಆಸಕ್ತಿಯನ್ನು ಕೂಡ ಕೊಟ್ಟಿರುತ್ತಾನೆ.

ಹಾಗಾದರೆ ಇವತ್ತು ನಾವು ನಿಮಗೆ ಒಬ್ಬ ಆಧುನಿಕ ಡಾಕ್ಟರ್ ಬಗ್ಗೆ ಹೇಳಲು ಹೊರಟಿದ್ದೇವೆ ಇವರು 300ಕ್ಕಿಂತ ಹೆಚ್ಚು ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಯನ್ನು ಕೊಟ್ಟು ಅವರ ಪಾಲಿಗೆ ದೇವರಾಗಿ ಹೊರಹೊಮ್ಮಿದ್ದಾರೆ.

ಪ್ರತಿಯೊಬ್ಬರಿಗೂ ಹಣಮಾಡುವ ಹಾಗೂ ಜೀವನದಲ್ಲಿ ತುಂಬಾ ಚೆನ್ನಾಗಿ ಐಷಾರಾಮಿ ಜೀವನವನ್ನು ಮಾಡಬೇಕು ಎನ್ನುವಂತಹ ಇಚ್ಛೆಯಿಂದ ಕಷ್ಟಪಡುತ್ತಾರೆ ಹಾಗೂ ಡಾಕ್ಟರ್ಗಳು ಆಗುತ್ತಾರೆ, ಆದರೆ ರೀತಿಯಾದಂತಹ ಡಾಕ್ಟರಗಳ ಸಾಲಿಗೆ ಸೇರಿದಂತಹ ಡಾಕ್ಟರ್ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇವರ ಹೆಸರು ಡಾಕ್ಟರ್ ಮನೋಜ್ ಅಂತ, ಡಾಕ್ಟರ್ ಮನೋಜ್ ಅವರು ತನ್ನ ತಂದೆ ಸ್ಥಾಪಿಸಿದ ಅಂತಹ ಒಂದು ಫೌಂಡೇಶನ್ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ಇವರ ತಂದೆ ಇಪ್ಪತ್ತು ವರ್ಷಗಳ ಹಿಂದೆ ಮರಿಯನ್ ಕಾರ್ಡಿಯಾಕ್ ಸೆಂಟರ್ ಹಾಗೂ ಸಂಶೋಧನಾ ಫೌಂಡೇಶನ್ ಎನ್ನುವಂತಹ ಸಂಸ್ಥೆಯನ್ನು ಹುಟ್ಟುಹಾಕಿದರು. ಹೀಗೆ ತಮ್ಮ ಡಾಕ್ಟರ್ ಪದವಿಯನ್ನು ಮುಗಿಸಿ ದಂತಹ ಡಾಕ್ಟರ್ ಮನೋಜ್ ಅವರು 2005ನೇ ಇಸವಿಯಲ್ಲಿ ಈ ಸಂಸ್ಥೆಯನ್ನು ಸೇರುತ್ತಾರೆ.

ಹೀಗೆ ಒಳ್ಳೆಯ ಹೃದಯ ಹೊಂದಿರುವಂತಹ ಡಾಕ್ಟರ್ ಮನೋಜ್ ಅವರು ಹಲವಾರು ಹೃದಯ ಚಿಕಿತ್ಸೆಗೆ ಮಾಡಿ ಹಲವಾರು ಬಡರೋಗಿಗಳಿಗೆ ದೇವರಾಗಿದ್ದಾರೆ. ಏಕೆಂದರೆ ತಾವು ಮಾಡುವಂತಹ ಹೃದಯ ಚಿಕಿತ್ಸೆಗೆ ಯಾವುದೇ ರೀತಿಯಾದಂತಹ ಹಣವನ್ನು ತೆಗೆದುಕೊಳ್ಳದೆ ಬಡವರಿಗೆ ಇರುವಂತಹ ಕಷ್ಟಗಳನ್ನು ದೂರ ಮಾಡುವಂತಹ ದೇವರ ರೂಪದಲ್ಲಿ ಇರುವಂತಹ ಡಾಕ್ಟರಾಗಿ ಇವರು ಹೊರಹೊಮ್ಮಿದ್ದಾರೆ.

ಇವರ ಹತ್ತಿರ ಯಾರಾದರೂ ರೋಗಿಗಳು ಬಂದು ನಮ್ಮ ಹತ್ತಿರ ಹಣ ಇಲ್ಲ ಅಂದರೆ ಅವರನ್ನು ಗುಣವನ್ನು ಮಾಡಿ ಕಳಿಸಿ ಬಿಡುತ್ತಾರೆ ಹೊರತು ಯಾವುದೇ ಕಾರಣಕ್ಕೂ ಹಣ ಇಲ್ಲ ಅಂತ ಹೇಳಿ ಅವರಿಗೆ ಚಿಕಿತ್ಸೆ ಕೊಡದೆ ಮನೆಗೆ ಕಳಿಸುವುದಿಲ್ಲ.

ಅಷ್ಟೇ ಅಲ್ಲದೆ ಡಾಕ್ಟರ್ ಮನೋಜ್ ಅವರು ಹಲವಾರು ದಾನಿಗಳಿಂದ ಹಣವನ್ನು ಸಂಗ್ರಹಿಸಿ ಮುನ್ನೂರ ಐವತ್ತಕ್ಕೂ ಹೆಚ್ಚಿನ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ . ಸರಕಾರದಿಂದ ಬರುವಂತಹ ಹಲವಾರು ಯೋಜನೆಗಳನ್ನು ಬಳಕೆ ಮಾಡಿಕೊಂಡು ಅದರಿಂದ ಬಡವರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ.

ನಮ್ಮ ಪ್ರಪಂಚದಲ್ಲಿ ಯಾವಾಗಲೂ ಪ್ರತಿಯೊಬ್ಬರಿಗೂ ಸ್ವಾರ್ಥ ಎನ್ನುವುದು ಇದ್ದೇ ಇರುತ್ತದೆ ಕೆಲವರಿಗೆ ಸಿಕ್ಕಾಪಟ್ಟೆ ಇರುತ್ತದೆ ಕೆಲವರಿಗೆ ಸ್ವಲ್ಪ ಮಾತ್ರವಿರುತ್ತದೆ ಆದರೆ ಯಾವುದೇ ಸ್ವಾರ್ಥವಿಲ್ಲದೆ ತಮ್ಮ ಜೀವನವನ್ನೇ ಸಮಾಜಸೇವೆಗಾಗಿ ಮುಡಿಪಾಗಿ ಇರುವಂತಹ ಜನರಲ್ಲಿ ಇವರು ಕೂಡ ಒಬ್ಬರು ಅಂತ ನಾವು ಹೇಳಬಹುದು. ಇವರಿಗೆ ದೇವರು ಆಯುಷ್ಯ ಆರೋಗ್ಯವನ್ನು ಕೊಟ್ಟು ಇನ್ನೂ ಹಲವಾರು ವರ್ಷ ಇದೇ ರೀತಿಯಾಗಿ ಸಮಾಜಸೇವೆಯನ್ನು ಮಾಡಲಿ ಎನ್ನುವುದು ನಮ್ಮ ಒಂದು ಆಶಯವಾಗಿದೆ.

ನೀವು ಕೂಡ ಇವರ ಬಗ್ಗೆ ಕೆಲವೊಂದು ಒಳ್ಳೆಯ ಮಾಹಿತಿಯನ್ನು ಅಥವಾ ಒಳ್ಳೆಯ ಅಭಿಪ್ರಾಯವನ್ನು ಹೇಳಬೇಕಾದರೆ ಕಮೆಂಟ್ ಮಾಡುವುದರ ಮುಖಾಂತರ ನಮಗೆ ಇಳಿಸಿಕೊಳ್ಳಬಹುದು ಹಾಗೂ ಈ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಿ ಹಾಗೂ ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ.