Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

4 ದಿನಗಳಲ್ಲಿ ಪಿಂಪಲ್ಸ್ ಮುಖದಿಂದ ಹೋಗಬೇಕಾ ..! ಮನೆಯಲ್ಲೇ ಮಾಡಿದ ಈ ಫೇಸ್ ವಾಶ್ ಅನ್ನು ಬಳಸಿ ನೋಡಿ ..!

ನಿಮ್ಮ ತ್ವಚೆಗೆ ಯಾವ ಒಂದು ಫೇಸ್ ವಾಶ್ ಆಗಲಿ ಅಥವಾ ಸೋಪುಗಳು ಆಗಲಿ ಒಪ್ಪುತ್ತಿಲ್ಲ ಅನ್ನುವುದಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ. ನೀವು ಬಳಸುವ ಫೇಸ್ ವಾಶ್ ಅಥವ ಸೊಪ್ಪುಗಳಿಗಿಂತ ಉತ್ತಮವಾದ ನೈಸರ್ಗಿಕವಾದ ಕಾಂತಿಯನ್ನು ನಿಮ್ಮ ತ್ವಚೆಗೆ ನೀಡುವ ಈ ಒಂದು ಪರಿಹಾರ, ಈ ಒಂದು ಮನೆ ಮದ್ದು ನಿಮಗೆ ಉಪಯುಕ್ತವಾದ ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುತ್ತದೆ. ಹಾಗಾದರೆ ನಿಮಗೂ ಕೂಡ ಈ ಮಾಹಿತಿ ಉಪಯುಕ್ತ ಆಗುತ್ತದೆ ಅಂದರೆ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ. ನೀವು ಕೂಡ ತಿಳಿದು ಬೇರೆಯವರಿಗು ಕೂಡ ಈ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಮೊದಲಿಗೆ ಕೆಲವರ ತ್ವಚೆಯ ಪ್ರಕೃತಿ ಹೇಗಿರುತ್ತದೆ ಅಂದರೆ ಯಾವ ಸೋಪು ಯಾವ ಫೇಸ್ ವಾಶ್ ಆಗಲಿ ಅವರಿಗೆ ಹೊಂದುತ್ತಾ ಇರುವುದಿಲ್ಲ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ತರಹದ ಫೇಸ್ ವಾಶ್ ಗಳನ್ನು ಬಳಕೆ ಮಾಡಿ ಸೋತಿದ್ದೀರಾ ಅಂದರೆ, ಈ ಒಂದು ವಿಧಾನವನ್ನು ನೀವು ಬಳಸಿ. ಈ ಪರಿಹಾರದಿಂದ ನಿಮ್ಮ ತ್ವಚೆಯ ಮೇಲೆ ಇರುವ ಕಪ್ಪು ಕಲೆ ಮೊಡವೆ ಕಲೆ ಮೊಡವೆಗಳು ಎಲ್ಲ ಪರಿಹಾರ ಆಗುತ್ತದೆ. ಅತ್ಯಂತ ಬೇಗನೆ ಮತ್ತು ಪರಿಣಾಮಕಾರಿಯಾದ ಫಲಿತಾಂಶ ದೊಂದಿಗೆ.

ಹಾಗಾದರೆ ಈ ನೈಸರ್ಗಿಕವಾದ ಫೇಸ್ ವಾಶ್ ಹೇಗೆ ಮಾಡೋದು ಈ ಪುಡಿಯನ್ನ ಮಾಡಿಕೊಳ್ಳುವ ವಿಧಾನವು ಹೇಗೆ ಮತ್ತು ಬಳಸುವ ರೀತಿ ಹೇಗೆ ಅನ್ನೋದನ್ನ ಹೇಳುವುದಾದರೆ ಮೊದಲಿಗೆ ಇದಕ್ಕಾಗಿ ಬೇಕಾಗಿರುವುದು ಮುಲ್ತಾನಿ ಮಿಟ್ಟಿ ಮತ್ತು ಕಡಲೆ ಹಿಟ್ಟು ಹಾಗೆ ಕಹಿ ಬೇವಿನ ಸೊಪ್ಪಿನ ಪುಡಿ. ಇದು ನಿಮಗೆ ಗ್ರಂಥಿಕೆಯ ಅಂಗಡಿಯಲ್ಲಿ ಅಥವಾ ನೀವೇ ಮನೆಯಲ್ಲಿ ಮಾಡಿಕೊಂಡು ಶೇಖರಣೆ ಮಾಡಿ ಇಟ್ಟುಕೊಳ್ಳಬಹುದು.

ಈ ಪದಾರ್ಥಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೀವು ವಾರದವರೆಗೂ ಅಥವಾ ತಿಂಗಳಿನವರೆಗೂ ಬೇಕಾದರೆ ಶೇಖರಣೆ ಮಾಡಿಟ್ಟುಕೊಳ್ಳಬಹುದು. ಇದೀಗ ಮಿಶ್ರಣ ಮಾಡಿಕೊಂಡ ಪುಡಿಯನ್ನು ಒಂದು ಚಮಚ ತೆಗೆದುಕೊಂಡು, ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು ಇದೀಗ ನಿಮ್ಮ ಮುಖದ ಮೇಲೆ ಲೇಪನ ಮಾಡಿಕೊಳ್ಳಿ ಹಾಗೆ ಪ್ಯಾಕ್ ರೀತಿ ಅದನ್ನು ಒಣಗಲು ಬಿಡಿ ನಂತರ ಅದನ್ನು ನೀರನ್ನು ಬಳಸಿ ನಿಧಾನವಾಗಿ ತೆಗೆಯುತ್ತ ಬನ್ನಿ.

ಫೇಸ್ ವಾಶ್ ಅನ್ನು ಬಳಸಿದಾಗ ಹೇಗೆ ಮುಖವನ್ನು ಸ್ವಚ್ಛ ಅದೇ ರೀತಿಯಲ್ಲಿ ನೀವು ಈ ಪ್ಯಾಕ್ ಒಣಗಿದ ಮೇಲೆ ಇದನ್ನು ಸ್ವಚ್ಛ ಮಾಡಿಕೊಳ್ಳಿ. ಇದರಲ್ಲಿ ಬಳಸಿರುವ ಮುಲ್ತಾನಿ ಮಿಟ್ಟಿ ತ್ವಚೆಯನ್ನು ಹೊಳಪು ಮಾಡುತ್ತದೆ ಮತ್ತು ತ್ವಚೆಯಲ್ಲಿರುವ ಬೇಡದೆ ಇರುವ ಎಣ್ಣೆಯ ಅಂಶವನ್ನು ತೆಗೆದು ಹಾಕುತ್ತದೆ. ಕಡಲೆಹಿಟ್ಟು ಕೂಡಾ ಮುಖಕ್ಕೆ ನೈಸರ್ಗಿಕವಾದ ಹೊಳಪನ್ನು ನೀಡಿ ದೂಳು ಪ್ರದೂಷಣೆಯನ್ನು ತ್ವಚೆ ಇಂದ ತೆಗೆದುಹಾಕುತ್ತದೆ ನಂತರ ಇದಕ್ಕೆ ಬೇಕಾಗಿರುವುದು ಕಹಿ ಬೇವಿನ ಸೊಪ್ಪನ್ನು ಎಲ್ಲಾ ಚರ್ಮಕ್ಕೆ ಸಂಬಂಧಪಟ್ಟ ವ್ಯಾದಿ ಗಳನ್ನು ಪರಿಹಾರ ಮಾಡಲು ಸಹಕರಿಸುತ್ತದೆ. ಇದೀಗ ನೀವು ಮನೆಯಲ್ಲಿಯೆ ಸುಲಭವಾಗಿ ನಿಮ್ಮ ತ್ವಚೆಯನ್ನು ಕಾಂತಿಗೊಳಿಸಿಕೊಳ್ಳಬಹುದು ಈ ಫೇಸ್ ಪ್ಯಾಕ್ ಪುಡಿಯಿಂದ.

ಇವತ್ತಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ 1ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡುವುದನ್ನು ಮರೆಯದಿರಿ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.