ನಮಸ್ಕಾರ ಇವತ್ತಿನ ಮಾಹಿತಿಯ ಒಂದು ರುಚಿಕರವಾದ ಆಲೂಗಡ್ಡೆ ಖಾರ ಮಾಡುವ ವಿಧಾನವನ್ನು ತಿಳಿಯೋಣ. ಈ ಆಲೂಗಡ್ಡೆ ಕಾರ ಮಾಡುವುದು ತುಂಬ ಸುಲಭ ಹಾಗೂ ಕಡಿಮೆ ಸಮಯದಲ್ಲಿ ಮಾಡ ಬಹುದು. ನೀವು ಒಂದು ಬಾರಿ ಮಾಡಿಟ್ಟರೆ ಸುಮಾರು ಹದಿನೈದು ದಿನಗಳ ವರೆಗೂ ಇದನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಬಹುದು. ಇದನ್ನು ಮಾಡುವ ವಿಧಾನವನ್ನು ತಿಳಿಸಿ ಕೊಡುತ್ತದೆ ಮತ್ತು ಅನ್ನದೊಂದಿಗೆ ರುಚಿಕರವಾಗಿರುತ್ತದೆ .
ಈ ಆಲೂಗೆಡ್ಡೆ ಕಾರ ಮಾಡುವ ವಿಧಾನವನ್ನು ಸರಿಯಾಗಿ ತಿಳಿದು ಕೆಲಸಕ್ಕೆ ಹೋಗುವವರಾದರೆ ಇದನ್ನು ಮಾಡಿ ಹದಿನೈದು ದಿನಗಳ ವರೆಗೂ ಶೇಖರಣೆ ಮಾಡಿ ಇಡಬಹುದು. ಅನ್ನಕ್ಕೆ ತುಪ್ಪವನ್ನು ಹಾಕಿ ಆಲೂಗಡ್ಡೆ ಖಾರದೊಂದಿಗೆ ತಿನ್ನುವುದು ತುಂಬಾ ರುಚಿ ಹಾಗೂ ಚಳಿಗಾಲದಲ್ಲಿ ಅಂತೂ ಇನ್ನೂ ರುಚಿಕರವಾಗಿ ಇರುತ್ತದೆ ಈ ಆಲೂಗೆಡ್ಡೆ ಖಾರ ನೀವು ಕೂಡ ಮಾಡಿ ತಿನ್ನಿ ಸೂಪರ್ ಆಗಿ ಇರುತ್ತದೆ.
ಮೊದಲಿಗೆ ಆಲೂಗೆಡ್ಡೆ ಖಾರ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಹೀಗಿರುತ್ತದೆ. ಆಲೂಗೆಡ್ಡೆ ಒಣಮೆಣಸಿನಕಾಯಿ ನೀವು ಗುಂಟೂರು ಮೆಣಸಿನಕಾಯಿ ಅನ್ನು ಕೂಡ ತೆಗೆದುಕೊಳ್ಳ ಬಹುದು ನಂತರ ಶೇಂಗಾ ಬೀಜ ಜೀರಿಗೆ ಧನಿಯಾ ಬೀಜ. ಇದಿಷ್ಟು ಪದಾರ್ಥಗಳು ಬೇಕಿರುತ್ತದೆ ಮೊದಲು ನೀವು ಆಲೂಗಡ್ಡೆಯನ್ನು ತೆಗೆದುಕೊಳ್ಳಿ 4ಆಲೂಗಡ್ಡೆಯನ್ನು ತೆಗೆದುಕೊಂಡು ಸಿಪ್ಪೆಯನ್ನು ತೆಗೆದು ಇದನ್ನು ಕೊಬ್ಬರಿತುರಿ ಯುವ ಹಾಗೆ ತುರಿಯಬೇಕು ಸಣ್ಣಸಣ್ಣದಾಗಿ ತುರಿದುಕೊಳ್ಳಬೇಕು ಅಂದರೆ ತೆಂಗಿನ ಕಾಯಿ ತುರಿದಾಗ ಹೇಗೆ ಇರುತ್ತದೆ ಅಷ್ಟು ಇದ್ದರೆ ಸಾಕು.
ಇದೀಗ ಆಲೂಗಡ್ಡೆಯನ್ನು ಒಮ್ಮೆಲೆ ನೀರಿನಲ್ಲಿ ಸ್ವತ್ಛಗೊಳಿಸಿಕೊಳ್ಳಿ ಮತ್ತೆ ನೀರಿನಲ್ಲಿ ಸ್ವಚ್ಛ ಇದನ್ನು ಒಂದು ಕಾಟನ್ ಬಟ್ಟೆ ಮೇಲೆ ಒಣಗಲು ಹಾಕಿ. ಕಾಟನ್ ಬಟ್ಟೆ ಮೇಲೆ ಹಾಕಿ ಹಿಂಡುವುದು ಬೇಡ ಹಾಗೇ ಒಣಗಲು ಬಿಡಬೇಕು. ನಂತರ ನೆರಳಿನಲ್ಲಿಯೆ ಇದನ್ನು ಸ್ವಲ್ಪ ಒಣಗಿಸಿದರೆ ಸಾಕು ಮುಕ್ಕಾಲು ಭಾಗದಷ್ಟು ಈ ಆಲೂಗಡ್ಡೆ ಒಣಗಿದರೆ ಸಾಕು. ಇದೀಗ ಆಲೂಗೆಡ್ಡೆ ಒಣಗಿದ ನಂತರ ಇದನ್ನು ಬದಿಯಲ್ಲಿಟ್ಟುಕೊಳ್ಳಿ.
ಮೊದಲು ನಾಲ್ಕೈದು ಗುಂಟೂರು ಮೆಣಸಿನಕಾಯಿಯನ್ನು ಹುರಿದುಕೊಳ್ಳಬೇಕು ಇದರ ಜೊತೆಗೆ ಧನಿಯಾ ಬೀಜವನ್ನು ಕೂಡ ಹುರಿದಿಟ್ಟುಕೊಳ್ಳಬೇಕು ಧನಿಯಾ ಬೀಜ ಎರಡು ಚಮಚ ಆದರೆ ಸಾಕು. ಈ ಎರಡನ್ನು ಹುರಿದು ಕೊಂಡ ನಂತರ ಕೊನೆಯಲ್ಲಿ ಜೀರಿಗೆಯನ್ನು ಹಾಕಿ ಅಂದರೆ ಜೀರಿಗೆ ನ ಹೆಚ್ಚು ಉರಿಯುವುದು ಬೇಡ ಇಲ್ಲವಾದಲ್ಲಿ ರುಚಿ ಕಡಿಮೆಯಾಗಿಬಿಡುತ್ತದೆ.
ಇದೀಗ ಶೇಂಗಾ ಬೀಜವನ್ನು ಮತ್ತು ಒಣಗಿಸಿಟ್ಟುಕೊಂಡು ಆಲೂಗಡ್ಡೆಯ ತುರಿಯನ್ನು ಡೀಪ್ ಫ್ರೈ ಮಾಡಬೇಕು ಎಣ್ಣೆಯಲ್ಲಿ ಒಮ್ಮೆ ಶೇಂಗಾ ಬೀಜವನ್ನು ಹಾಕಿ ಡೀಪ್ ಫ್ರೈ ಮಾಡಿ ನಂತರ ಆಲೂಗಡ್ಡೆಯ ತುರಿಯನ್ನು ಕೂಡ ಇದೆ ರೀತಿ ಡೀಪ್ ಫ್ರೈ ಮಾಡಬೇಕು. ಇದೀಗ ಶೇಂಗಾಬೀಜ ಹುರಿದಿಟ್ಟುಕೊಂಡ ಧನಿಯಾ ಬೀಜ ಗುಂಟೂರು ಮೆಣಸಿನಕಾಯಿ ಜೀರಿಗೆ ಪುಡಿ ಮಾಡಿಕೊಳ್ಳಬೇಕು ಇದಕ್ಕೆ ಅರ್ಧ ಬೆಳ್ಳುಳ್ಳಿ ಗಡ್ಡೆ ಗೆಣಸನ್ನು ಹಾಕಿ ಒಮ್ಮೆಲೆ ರುಬ್ಬಿಕೊಳ್ಳಬೇಕು.
ಸ್ವಲ್ಪ ನೀರನ್ನು ಹಾಕಿ ಸಾಂಬಾರಿಗೆ ಕಾರವನ್ನು ಹೇಗೆ ಮಾಡಿಕೊಳ್ತಾರೆ ಅದೇ ರೀತಿ ರುಬ್ಬಿಕೊಂಡ ನಂತರ ಇತ್ತ ಡೀಪ್ ಫ್ರೈ ಮಾಡಿದ ಆಲೂಗಡ್ಡೆಯ ತುರಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಲು ಚಮಚ ಅರಿಶಿನವನ್ನು ಹಾಕಿ ಕೈನಲ್ಲಿಯೆ ಚೆನ್ನಾಗಿ ಮಿಶ್ರ ಮಾಡಬೇಕು. ಇದೀಗ ತಯಾರಿಸಿ ಇಟ್ಟುಕೊಂಡ ಖಾರವನ್ನು ಕೂಡ ಆಲೂಗಡ್ಡೆಯೊಂದಿಗೆ ಮಿಶ್ರ ಮಾಡಿ ಚೆನ್ನಾಗಿ ಎಲ್ಲವನ್ನು ಮತ್ತೊಮ್ಮೆ ಮಿಶ್ರ ಮಾಡಿ ಇದೀಗ ಆಲೂಗೆಡ್ಡೆ ಕಾರ ತಯಾರಾಗಿದೆ ತುಂಬ ರುಚಿಯಾಗಿರುತ್ತದೆ ಮಕ್ಕಳಿಗೆ ನೀಡುವಾಗ ಅನ್ನದೊಂದಿಗೆ ತುಪ್ಪವನ್ನು ಬೆರೆಸಿ ಈ 1ಅಂಗಡಿಯ ಖಾರವನ್ನು ಹಾಕಿ ನೀಡಿ.