Sunday, April 11, 2021
Homeಅರೋಗ್ಯಇದು ಯಾವ ಬೀಜ ಗೊತ್ತ ..! ಇದನ್ನ ಸೇವನೆ ಮಾಡುವುದರಿಂದ ನಮ್ಮ ನಿಮ್ಮ ಅರೋಗ್ಯ ತುಂಬಾ...

ಇದು ಯಾವ ಬೀಜ ಗೊತ್ತ ..! ಇದನ್ನ ಸೇವನೆ ಮಾಡುವುದರಿಂದ ನಮ್ಮ ನಿಮ್ಮ ಅರೋಗ್ಯ ತುಂಬಾ ಚೆನ್ನಾಗಿ ಇರುತ್ತೆ ..!

ನಮಸ್ಕಾರ ಮಕಾನ ಬೀಜಗಳು ಹೌದು ಇದರ ಬಗ್ಗೆ ಈಗಾಗಲೇ ಸಾಕಷ್ಟು ಮಂದಿಗೆ ಪರಿಚಯವಿದೆ ಮತ್ತು ಸಾಕಷ್ಟು ಮಂದಿ ಇದರ ಪ್ರಯೋಜನ ಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ಇದರ ಒಂದು ಉಪಯುಕ್ತವಾದ ಪೋಷಕಾಂಶ ಏನು ಅಂದರೆ ಇದರಲ್ಲಿ ದೇಹಕ್ಕೆ ಬೇಕಾಗಿರುವ ಉತ್ತಮ ಗುಣಮಟ್ಟದ ಕೊಬ್ಬಿನ ಅಂಶಗಳು ಇವೆ. ಆದರೆ ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕ್ಯಾಲೋರಿ ಕೂಡ ಹೆಚ್ಚುವುದಿಲ್ಲಾ. ಇದೆ ಕಮಲದ ಬೀಜಗಳಲ್ಲಿ ಇರುವ ಉತ್ತಮವಾದ ಅಂಶಗಳು ಆಗಿರುತ್ತದೆ.

ಇನ್ನೂ ಹೇಳಬೇಕೆಂದರೆ ಈ ಮಕಾನಾ ಬೀಜಗಳನ್ನು ಸಕ್ಕರೆ ಕಾಯಿಲೆಯಿಂದ ಬಳಲುತ್ತಾ ಇರುವವರ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲುತ್ತಾ ಇರುವವರು, ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ಕಮಲದ ಬೀಜಗಳನ್ನು ಎಣ್ಣೆಯಲ್ಲಿ ಹುರಿಯಬಾರದು. ಎಣ್ಣೆಯನ್ನು ಬಳಸಿ ಇದರಿಂದ ಏನನ್ನು ತಯಾರಿಸಬಾರದು ಹಾಲಿನ ಜೊತೆ ಇದನ್ನು ಸೇವಿಸಬಹುದು.

ಇದೀಗ ಮಕನ ಬೀಜಗಳ ಬಗ್ಗೆ ಹೇಳಬೇಕೆಂದರೆ ಕ್ಯಾಲ್ಸಿಯಂ ಪೊಟ್ಯಾಶಿಯಂ ಮೆಗ್ನೀಶಿಯಂ ಮ್ಯಾಂಗನೀಸ್ ಐರನ್ ಎಲ್ಲವೂ ಕೂಡ ಇದೆ ಆದರೆ ಈ ಮಕನ ಬೀಜಗಳಲ್ಲಿ ಸೋಡಿಯಂ ಖನಿಜಾಂಶ ಇಲ್ಲ ಇದರಿಂದಲೇ ನಾವು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಯಾರೋ ರಕ್ತದ ಒತ್ತಡ ಹೃದಯ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಅಂಥವರು ಪ್ರಯೋಜನವನ್ನು ಪಡೆದುಕೊಳ್ಳಿ ಯಾಕೆಂದರೆ ಇದರಲ್ಲಿ ಮೊದಲೇ ಸೋಡಿಯಂ ಅಂಶ ಇರುವುದಿಲ್ಲ ಆದ್ದರಿಂದ ರಕ್ತದ ಒತ್ತಡ ತೆಯನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗಿರುತ್ತದೆ ಈ ಮಕಾನ ಬೀಜಗಳು.

ಸಕ್ಕರೆ ಕಾಯಿಲೆಯಿಂದ ಬಳಲುತ್ತಾ ಇರುವವರು ಕೆನೆ ತೆಗೆದ ಹಾಲಿಗೆ ಈ ಮಕಾನ ಬೀಜಗಳನ್ನು ಹಾಕಿ ಅದನ್ನು ಕುದಿಸಿ, ನಂತರ ಆ ಹಾಲನ್ನು ಸೇವನೆ ಮಾಡಬೇಕು. ಇದರಿಂದ ಒಳ್ಳೆಯ ಔಷಧೀಯ ರೀತಿ ಮಧುಮೇಹಿಗಳಿಗೆ ಈ ಕಮಲದ ಬೀಜಗಳು ಉತ್ತಮ ಆರೋಗ್ಯವನ್ನು ನೀಡುತ್ತದೆ ಮತ್ತು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಲು ಇದು ಸಹಕರಿಸುತ್ತದೆ ಅಷ್ಟೆಲ್ಲ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲುತ್ತಿರುವವರು ಅಥವಾ ಹೃದ್ರೋಗ ಸಮಸ್ಯೆಗಳು ಎದುರಾಗ ಬಾರದು ಅಂದರೆ ಕಮಲದ ಬೀಜಗಳ ಪ್ರಯೋಜನವನ್ನು ಪಡೆದುಕೊಳ್ಳಿ ಯಾಕೆ ಅಂದರೆ ಇದರಲ್ಲಿ ದೇಹಕ್ಕೆ ಹಾನಿಯುಂಟು ಮಾಡುವ ಕೊಬ್ಬಿನ ಅಂಶ ಇಲ್ಲ ಮತ್ತು ದೇಶದಲ್ಲಿರುವ ಎಲ್ ಡಿಎಲ್ ಕೊಬ್ಬಿನ ಅಂಶವನ್ನು ಕಡಿಮೆ ಮಾಡಿ ರಕ್ತದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

ಇನ್ನು ಮಕಾನ ಬೀಜಗಳನ್ನು ನಾವು ಸೇವನೆ ಮಾಡುವುದರಿಂದ ಹೆಚ್ಚಿನ ಕಾಲ ಹಸಿವಾಗುವುದಿಲ್ಲ ಇದರ ತೂಕವನ್ನು ಇಳಿಸಿಕೊಳ್ಳಬಹುದು. ಯಾರೆಲ್ಲ ಉಪವಾಸ ಮಾಡುತ್ತಾರೆ ಅಂಥವರು ಬೆಳಗಿನ ಸಮಯದಲ್ಲಿ ಎಂಟರಿಂದ ಹತ್ತು ಮಕಾನ ಬೀಜಗಳನ್ನು ಸೇವನೆ ಮಾಡಿದರೆ, ಆ ದಿನವೆಲ್ಲ ಸುಸ್ತು ಆಯಾಸವಿಲ್ಲದೆ ಇರಬಹುದು. ಈ ರೀತಿಯಾಗಿ ಕಮಲದ ಬೀಜಗಳಿಂದ ಕೂಡ ನಾವು ದೇಹಕ್ಕೆ ಉತ್ತಮವಾದ ಪೋಷಕಾಂಶಗಳನ್ನು ನೀಡುವ ಮುಖಾಂತರ ಉತ್ತಮವಾದ ಆರೋಗ್ಯವನ್ನು ಪಡೆದುಕೊಳ್ಳಬಹುದು. ಈ ಮಕಾನ ಬೀಜಗಳು ಎಲ್ಲಾ ಒಣಹಣ್ಣುಗಳು ದೊರೆಯುವ ಅಂಗಡಿಗಳಲ್ಲಿ ಸಿಗುತ್ತದೆ. ಇನ್ನು ಆನ್ ಲೈನ್ ಮುಖಾಂತರವೂ ನೀವು ತರಿಸಿಕೊಳ್ಳಬಹುದು ಇದನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಆರೋಗ್ಯದಿಂದಿರಿ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments