ಹಾಲು ಒಂದು ಪೌಷ್ಟಿಕಭರಿತ ಆಹಾರವಾಗಿದೆ ಹಾಲನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾಗಿರುವ ಎಲ್ಲಾ ತರಹದ ಪೋಷಕಾಂಶಗಳನ್ನು ನಾವು ಪಡೆದುಕೊಳ್ಳಬಹುದು. ಆದರೆ ಹಾಲಿನ ಜೊತೆಗೆ ಈ ಒಂದು ಪದಾರ್ಥವನ್ನು ನೀವೇನಾದರೂ ಮಿಶ್ರಣಮಾಡಿ ಕುಡಿದಿದ್ದ ಆದಲ್ಲಿ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಔಷಧಿಯಂತೆ ಪರಿಣಮಿಸಿ ಈ ಹಾಲು ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ.
ಹಾಗಾದರೆ ಹಾಲಿನೊಂದಿಗೆ ಮಿಶ್ರಮಾಡಿ ಕೊಳ್ಳಬೇಕಾಗಿರುವ ಆ ಪದಾರ್ಥ ಯಾವುದೂ ಮತ್ತು ಇದರಿಂದ ನಮ್ಮ ಆರೋಗ್ಯಕ್ಕೆ ಆಗುವ ಲಾಭಗಳೇನು ಯಾವೆಲ್ಲ ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು ಹೀಗೆ ಇನ್ನಷ್ಟು ಆರೋಗ್ಯ ಮಾಹಿತಿಯನ್ನು ನಾವು ಪಡೆದುಕೊಳ್ಳೊಣ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.
ಹೌದು ವೀಕ್ಷಕರೇ ಆಯುರ್ವೇದ ಚಿಕಿತ್ಸೆಯಲ್ಲಿ ಇದನ್ನು ಗೋಲ್ಡನ್ ಮಿಲ್ಕ್ ಅಂದರೆ ಚಿನ್ನದ ಹಾಲು ಅಂತ ಕರೆಯುತ್ತಾರೆ. ಈ ಗೋಲ್ಡನ್ ಮಿಲ್ಕ್ ಅಂದರೆ ಹಾಲಿಗೆ ಚಿಟಿಕೆ ಅರಿಶಿಣವನ್ನು ಮಿಶ್ರ ಮಾಡಿದರೆ ಅದು ಇನ್ನೂ ಔಷದಿಭರಿತವಾಗಿ ಗೋಲ್ಡನ್ ಮಿಲ್ಕ್ ಆಗಿ ಬದಲಾಗುತ್ತದೆ. ಅಂದರೆ ಇದರ ಅರ್ಥ ಹೆಚ್ಚಿನ ಆರೋಗ್ಯಕರ ಮೌಲ್ಯವನ್ನು ನಮ್ಮ ದೇಹಕ್ಕೆ ಒದಗಿಸುವುತ್ತದೆ ಈ ಅರಿಶಿಣದ ಹಾಲು. ಈ ಗೋಲ್ಡನ್ ಮಿಲ್ಕ್ ಅನ್ನೂ ಕುಡಿಯುವುದರಿಂದ ಆಗುವ ಆರೋಗ್ಯಕರ ಲಾಭಗಳು ಅಪಾರವಾದದ್ದು. ಯಾವಾಗ ಅರಿಶಿಣವನ್ನು ಈ ಹಾಲಿಗೆ ಮಿಶ್ರಣ ಮಾಡುತ್ತಾರೆ, ಅದರಲ್ಲಿರುವ ಪೋಷಕಾಂಶವು, ಔಷಧೀಯ ಗುಣ ಇನ್ನೂ ಹೆಚ್ಚುತ್ತದೆ.
ಇದೀಗ ಆರೋಗ್ಯಕರ ಲಾಭಗಳ ಬಗ್ಗೆ ತಿಳಿಯುವುದಾದರೆ ಉಗುರು ಬೆಚ್ಚಗಿನ ಹಾಲಿಗೆ ಚಿಟಿಕೆ ಅಷ್ಟು ಮಾತ್ರ ಅರಿಶಿನವನ್ನು ಬೆರೆಸಿ ಯಾಕೆಂದರೆ ಈ ಅರಿಶಿಣದಲ್ಲಿ ಕುರ್ಕುಮಿನ್ ಎಂಬ ಅಂಶವಿದೆ ಇದು ನಮ್ಮ ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಮಾತ್ರ ಅವಶ್ಯಕವಾಗಿರುತ್ತದೆ ಆದಕಾರಣ ಬೆಚ್ಚಗಿನ ಹಾಲಿಗೆ ಚಿಟಿಕೆ ಅರಿಶಿಣವನ್ನು ಮಿಶ್ರಣ ಮಾಡಿ ಇದನ್ನು ರಾತ್ರಿ ಸಮಯದಲ್ಲಿ ಅಥವಾ ಬೆಳಗಿನ ಸಮಯದಲ್ಲಿ ಎಂದಾದರೂ ಕುಡಿಯಬಹುದು ಆದರೆ ಹಾಲು ಬೆಚ್ಚಗಿರುವಾಗಲೆ ಕುಡಿಯಬೇಕು. ಇಲ್ಲವಾದಲ್ಲಿ ಕಸದ ಸಮಸ್ಯೆ ಉಂಟಾಗಬಹುದು ಆದಕಾರಣ ಹಾಲನ್ನು ಬೆಚ್ಚಗೆ ಇದ್ದಾಗಲೇ ಸೇವಿಸಿ.
ಅರಿಶಿನದ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಆ್ಯಂಟಿ ಇನ್ ಫ್ಲಮೇಟರಿ ಆ್ಯಂಟಿಬ್ಯಾಕ್ಟೀರಿಯಲ್ ಅಂಶ ದೊರೆಯುತ್ತದೆ ಇದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ ಜೊತೆಗೆ ಅಸಿಡಿಟಿ ಸಮಸ್ಯೆ ಪರಿಹಾರವಾಗುತ್ತದೆ. ಇನ್ನು ಈ ಅರಿಶಿಣದ ಹಾಲು ಕುಡಿಯುವುದರಿಂದ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬಹುದು ನಮಗೆದುರಾಗುವ ಚಿಕ್ಕ ಪುಟ್ಟ ಶೀತ ಕೆಮ್ಮು ಜ್ವರ ದಂತಹ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಹಾಗೆ ಇನ್ನೂ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಈ ಗೋಲ್ಡನ್ ಮಿಲ್ಕ್ ಸೇವನೆ ಮಾಡುವುದರಿಂದ ಪಡೆದುಕೊಳ್ಳಬಹುದು ಆದರೆ ಇನ್ನೂ ಕೆಲವೊಂದು ವಿಚಾರಗಳನ್ನು ತಿಳಿಯಲೇಬೇಕು.
ಅದೇನೆಂದರೆ ಅರಿಶಿನದ ಹಾಲನ್ನು ಕುಡಿಯುವುದರಿಂದ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಉಂಟಾಗಬಹುದು ಆದಕಾರಣ ಕೆಲವೊಂದು ಅನಾರೋಗ್ಯ ಸಮಸ್ಯೆ ಉಳ್ಳ ವ್ಯಕ್ತಿಗಳು ಈ ಹಾಲನ್ನು ಕುಡಿಯಬಾರದು. ಯಾರಿಗೆ ರಕ್ತಹೀನತೆ ಸಮಸ್ಯೆ ಕಬ್ಬಿಣ ಅಂಶದ ಕೊರತೆ ಇರುತ್ತದೆ ಅಂಥವರು ಅರಿಶಿನದ ಹಾಲನ್ನು ಸೇವಿಸುವುದು ಉತ್ತಮವಲ್ಲ. ಲೋ ಬಿಪಿ ಸಮಸ್ಯೆ ಇರುವವರು ಕೂಡ ಅರಿಶಿನದ ಹಾಲನ್ನು ಹೆಚ್ಚಾಗಿ ಕುಡಿಯುವುದು ಬೇಡ ಹೀಗೆ ಈ ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಾ ಇರುವವರು ಯಾವುದೇ ಕಾರಣಕ್ಕೂ ಅರಿಶಿನದ ಹಾಲನ್ನು ಅಥವಾ ಅರಿಶಿಣವನ್ನು ಹೆಚ್ಚಾಗಿ ಸೇವಿಸುವುದು ಬೇಡ.