ನಮಸ್ಕಾರ ಈ ದಿನದ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ ಮನೆಯಲ್ಲಿ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಎಲ್ಲಿ ಇಟ್ಟರೆ ಶ್ರೇಷ್ಠ ಮತ್ತು ಶಾಸ್ತ್ರಗಳು ಹೇಳುವ ಹಾಗೆ ಈ ಪೊರಕೆಯನ್ನು ಯಾವಾಗ ಹೇಗೆ ಬಳಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಇಂದಿನ ಈ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದು, ಬೇರೆಯವರಿಗೂ ಸಹ ಈ ಮಾಹಿತಿಯನ್ನು ಶೇರ್ ಮಾಡಿ, ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ತಿಳಿಸಿ.
ನಮ್ಮ ಸಂಪ್ರದಾಯದಲ್ಲಿ ಮನೆಯ ವಾಸ್ತುವಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಹಾಗೆ ಈ ವಾಸ್ತುವಿನಲ್ಲಿ ಮನೆಯಲ್ಲಿ ಬಳಸುವಂತಹ ಪೊರಕೆಗು ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಯಾಕೆ ಅಂದರೆ ಈ ಪೊರಕೆಯನ್ನು ಲಕ್ಷ್ಮಿಯ ಸ್ವರೂಪ ಅಂತ ಹೇಳ್ತಾರೆ, ಆದ ಕಾರಣವೇ ಪೊರಕೆಯನ್ನು ಅಚಾನಕ್ಕಾಗಿ ತುಳಿದರು ಅಥವಾ ಕಾಲಿಗೆ ಮುಟ್ಟಿಸಿದರೂ ಅದನ್ನು ನಮಸ್ಕರಿಸಿಕೊಳ್ಳುವುದು.
ಹಾಗಾದರೆ ಶಾಸ್ತ್ರಗಳು ಹೇಳುವ ಹಾಗೆ ಮನೆಯಲ್ಲಿ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇರಿಸಬೇಕು ಅಂತ ಹೇಳುವುದಾದರೆ, ನೀವು ಯಾವುದೇ ಕಾರಣಕ್ಕೂ ಮನೆಯಲ್ಲಿ ಪೊರಕೆ ಅನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಬೇಡಿ. ಈ ಪೊರಕೆಯನ್ನು ನೈಋತ್ಯ ದಿಕ್ಕಿನಲ್ಲಿ ಇಡುವುದರಿಂದ ಒಳ್ಳೆಯದು ಹಾಗೆ ಶಾಸ್ತ್ರದಲ್ಲಿಯೂ ಕೂಡ ಪೊರಕೆಯನ್ನು ನೈಋತ್ಯ ದಿಕ್ಕಿನಲ್ಲಿಯೇ ಇಡಬೇಕು ಎಂದು ಹೇಳಲಾಗಿದೆ.
ಮತ್ತೊಂದು ವಿಚಾರವನ್ನು ನೆನಪಿನಲ್ಲೇ ಇಡಿ ಎಂದು ತಾಲೂಕು ಮನೆಯಲ್ಲಿ ಪೊರಕೆಯನ್ನು ಇಡುವಾಗ ಅದನ್ನು ಎಲ್ಲರ ಕಣ್ಣಿಗೆ ಕಾಣುವ ಹಾಗೆ ಇಡಬೇಡಿ, ಈ ಪೊರಕೆಯನ್ನು ಹೇಗೆ ನೈರುತ್ಯ ದಿಕ್ಕಿನಲ್ಲಿಯೇ ಇಡಬೇಕು ಅದೇ ರೀತಿ ಈ ಮನೆಗೆ ಬಂದವರ ಕಣ್ಣಿಗೆ ಕಾಣದೇ ಇರುವ ಹಾಗೆ ಈ ಪೊರಕೆಯನ್ನು ಇರಿಸುವುದು ಒಳ್ಳೆಯದು.ಪೊರಕೆ ವಿಚಾರದಲ್ಲಿ ಯಾಕೆ ನಾವು ಎಚ್ಚರ ವಹಿಸಬೇಕು ಅಂದರೆ ಈ ಪೊರಕೆಯು ಕೂಡ ಮನೆಯ ವಾಸ್ತು ವಿಚಾರದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ ಆದ ಕಾರಣವೇ ಈ ಪೊರಕೆಯನ್ನು ಯಾವಾಗ ಬಳಸಬೇಕು ಯಾವಾಗ ಬಳಸಬಾರದು ಅನ್ನುವುದನ್ನು ಕೂಡ ಶುಭ ಮತ್ತು ಅಶುಭ ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಬೆಳಿಗ್ಗೆ ಎದ್ದ ಕೂಡಲೇ ಮನೆಯನ್ನು ಸ್ವಚ್ಛ ಪಡಿಸಬೇಕು ಸೂರ್ಯೋದಯಕ್ಕಿಂತ ಮುನ್ನ ಮನೆಯಲ್ಲಿ ಪೂಜೆ ಆಗಿರಬೇಕು ಅಂತ ನಮ್ಮ ಪೂರ್ವಜರು ನಂಬುತ್ತಿದ್ದರು ಹಾಗೆ ಈ ಒಂದು ಪ್ರತೀತಿಯೂ ನಮ್ಮ ಒಳಿತಿಗಾಗಿಯೇ ಆಗಿದೆ ಹಾಗೆ ಹೊರಕ್ಕೆ ಅನ್ನು ಕೂಡ ನಾವು ದಿನಕ್ಕೆ ಎರಡು ಬಾರಿ ಮಾತ್ರ ಬಳಸಬೇಕು ಅಂದರೆ ಎರಡು ಸಮಯ ಮಾತ್ರ ಬಳಸಬೇಕು .ಯಾವಾಗ ಅಂದರೆ, ಬೆಳಗ್ಗೆ ಮನೆಯನ್ನು ಸ್ವಚ್ಛ ಪಡಿಸುವುದಕ್ಕಾಗಿ ಮತ್ತು ಸಂಜೆ ಸೂರ್ಯಾಸ್ತಕ್ಕೂ ಮುನ್ನವೇ ಮನೆಯನ್ನು ಸ್ವಚ್ಛ ಪಡಿಸಬೇಕು ಸೂರ್ಯಸ್ತದ ನಂತರ ಯಾವುದೇ ಕನ್ನಡಕ್ಕೂ ಮನೆಯನ್ನು ಪೊರಕೆಯಿಂದ ಸ್ವಚ್ಛ ಪಡಿಸಬಾರದು.
ಸಂಜೆ ಸಮಯದಲ್ಲಿ ಅಂದರೆ ಸೂರ್ಯ ಮುಳುಗಿದ ನಂತರ ಮನೆಯಲ್ಲಿ ಯಾವುದೇ ಕಾರಣಕ್ಕೂ ಮನೆಯನ್ನು ಸ್ವಚ್ಛ ಪಡಿಸುವುದಕ್ಕಾಗಿ ಪೊರಕೆಯನ್ನು ಬಳಸಬೇಡಿ. ಇದಿಷ್ಟು ಇವತ್ತಿನ ಮಾಹಿತಿ ಈ ಎಲ್ಲ ಮಾಹಿತಿಯೂ ಶುಭ ಮತ್ತು ಅಶುಭ ಶಾಸ್ತ್ರದಲ್ಲಿ ಉಲ್ಲೇಖವಾಗಿದ್ದು ಈ ಸ್ವಲ್ಪ ಮಾಹಿತಿ ನಿಮಗೆ ಉಪಯುಕ್ತವಾಗಿ ಇದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಬೇರೆ ಅವರಿಗೂ ಶೇರ್ ಮಾಡಿ.ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭವಾಗಲಿ ಶುಭ ದಿನ ಧನ್ಯವಾದ.