Sunday, April 11, 2021
Homeಅರೋಗ್ಯನಿಮ್ಮ ನಾಲಿಗೆ ತೊದಲುತ್ತ ಇದ್ದರೆ ಮನೆಯಲ್ಲೆ ಇರುವ ಈ ಮನೆಮದ್ದು ಬಳಸಿ ನೋಡಿ ..!

ನಿಮ್ಮ ನಾಲಿಗೆ ತೊದಲುತ್ತ ಇದ್ದರೆ ಮನೆಯಲ್ಲೆ ಇರುವ ಈ ಮನೆಮದ್ದು ಬಳಸಿ ನೋಡಿ ..!

ನಮಸ್ಕಾರ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ತಿಳಿದಿರುತ್ತದೆ ಮನೆಯಲ್ಲಿ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಅಂದರೆ ಹುಟ್ಟಿದ 1ವರುಷಕ್ಕೆ ಮಾತು ತೊದಲು ಹಾಕಿ ಬರುತ್ತಾ ಇರುತ್ತದೆ ಆದರೆ ಮಾತು ಸರಿಯಾಗುತ್ತದೆ ಇನ್ನೂ ಕೆಲ ಮಕ್ಕಳಲ್ಲಿ ವಯಸ್ಸು ಹೆಚ್ಚಾಗುತ್ತಾ ಹೋದರೂ ಕೂಡ ತೊದಲುನುಡಿ ಹೋಗಿರುವುದೇ ಇಲ್ಲ ಮಾತು ಬದಲಾಗಿಯೇ ಬರುತ್ತಾ ಇರುತ್ತದೆ ಈ ರೀತಿ ಮಾತು ತೊದಲು ಇದ್ದರೆ ಅಂತಹ ಮಕ್ಕಳಿಗೆ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವ ಮುಖಾಂತರ ತೊದಲು ನುಡಿಯನ್ನು ಪರಿಹರಿಸಿಕೊಳ್ಳಬಹುದು. ಹಾಗಾದರೆ ಮನೆಯಲ್ಲಿಯೇ ಕೆಲವೊಂದು ಮನೆಮದ್ದುಗಳಿಂದ ಹೇಗೆ ಈ ತೊದಲು ನುಡಿಯನ್ನು ಪರಿಹರಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಇವತ್ತಿನ ಈ ಲೇಖನದಲ್ಲಿ.

ಮಕ್ಕಳ ವಯಸ್ಸು ಹೆಚ್ಚಾದಂತೆ ಮಕ್ಕಳ ಬೆಳವಣಿಗೆ ಕೂಡ ಹೆಚ್ಚುತ್ತದೆ ಹಾಗೆಯೇ ಈ ತೊದಲುನುಡಿ ಕೂಡ ಹೋಗಿ ಸ್ಪಷ್ಟವಾದ ಮಾತುಗಳು ಬರುತ್ತದೆ ಆದರೆ ಕೆಲ ಮಕ್ಕಳಲ್ಲಿ ನಾಲಿಗೆ ದಪ್ಪ ಇರುವ ಕಾರಣ ಮಾತು ತೊದಲಾಗಿ ಬರುತ್ತಾ ಇರುತ್ತದೆ. ಇನ್ನು ಈ ತೊದಲು ನುಡಿಗೆ ಹಳ್ಳಿಕಡೆ ಕೆಲವೊಂದಿಷ್ಟು ಮನೆಮದ್ದುಗಳನ್ನು ಮಾಡುತ್ತಾರೆ ಅದರಲ್ಲಿ ಮೊದಲನೆಯದಾಗಿ ಮಕ್ಕಳಿಗೆ ಒಂದೆಲಗದ ಎಲೆಗಳನ್ನು ಹೌದು ಬ್ರಾಹ್ಮಿ ಎಲೆಯ ಅಂತ ಕೂಡ ಕರಿತಾರೆ ತುಂಬ ಪ್ರಸಿದ್ಧವಾದ ಮನೆಮದ್ದು ಇದಾಗಿರುತ್ತದೆ. ಬ್ರಾಹ್ಮಣ ಎಲೆಗಳೊಂದಿಗೆ ತುಳಸಿ ಎಲೆಗಳನ್ನು ಮಿಶ್ರ ಮಾಡಿ ಇದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿ ಸೇವನೆ ಮಾಡುತ್ತ ಬಂದದ್ದೇ ಆದಲ್ಲಿ ಈ ತೊದಲುನುಡಿ ಸಮಸ್ಯೆ ಬೇಗ ಪರಿಹಾರ ಆಗುತ್ತದೆ.

ಬಾದಾಮಿಯೊಂದಿಗೆ ಮೆಣಸಿನಕಾಳುಗಳನ್ನು ಮಿಶ್ರ ಮಾಡಬೇಕು ನಂತರ ಇದಕ್ಕೆ ಜೇನುತುಪ್ಪವನ್ನು ಮಿಶ್ರಣ ಮಾಡಬೇಕು 5ಬಾದಾಮಿಗೆ ಅರ್ಧ ಚಮಚ ಕಾಳುಮೆಣಸನ್ನು ಹಾಕಿ ಪುಡಿಮಾಡಿಕೊಳ್ಳಬೇಕು ನಂತರ ಒಂದು ಚಮಚ ಪುಡಿಯನ್ನು ಹಾಲಿಗೆ ಮಿಶ್ರಣ ಮಾಡಿ ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಬೇಕು. ನಂತರ ಈ ಹಾಲನ್ನು ಮಕ್ಕಳಿಗೆ ಕುಡಿಯಲು ನೀಡಬೇಕು ಇದರಿಂದ ತೊದಲುವ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು.

ಎರಡನೆಯ ಪರಿಹಾರ 9ಒಣದ್ರಾಕ್ಷಿ 7ಬಾದಾಮಿಯನ್ನು ತೆಗೆದುಕೊಳ್ಳಬೇಕು ನಂತರ ಈ ಪದಾರ್ಥಗಳನ್ನು ತುಪ್ಪದಲ್ಲಿ ಹುರಿದು ಅಂದರೆ ದೇಸಿ ಹಸುವಿನ ತುಪ್ಪವನ್ನು ತೆಗೆದುಕೊಳ್ಳಬೇಕೋ ಇದರಲ್ಲಿ ಈ ಪದಾರ್ಥಗಳನ್ನು ಹುರಿದು ಮಕ್ಕಳಿಗೆ ತಿನ್ನಲು ನೀಡಬೇಕು ಪ್ರತಿ ದಿನ ಈ ರೀತಿ ಮಾಡುತ್ತ ಬರುವುದರಿಂದ ಮಕ್ಕಳ ತೊದಲು ನುಡಿ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ ಮಕ್ಕಳು ಊಟ ಮಾಡುವಾಗ ಆಹಾರದೊಂದಿಗೆ ಈ ಶುದ್ಧ ದೇಸಿ ಹಸುವಿನ ತುಪ್ಪವನ್ನು ಮಿಶ್ರ ಮಾಡಿ ಮಕ್ಕಳಿಗೆ ನೀಡಬೇಕು ಇದರಿಂದ ಕೂಡ ತೊದಲು ನುಡಿಯ ಸಮಸ್ಯೆ ಬೇಗ ಪರಿಹಾರ ಆಗುತ್ತದೆ.

ಖರ್ಜೂರವನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಸೇವನೆ ಮಾಡುವುದರಿಂದ ಕೂಡ ತೊದಲುನುಡಿ ನಿವಾರಣೆಯಾಗುತ್ತದೆ ಹಾಗೆ ಜೇನುತುಪ್ಪಕ್ಕೆ ಉಪ್ಪನ್ನು ಮಿಶ್ರ ಮಾಡಿ ನಾಲಗೆಯನ್ನು ತಿಕ್ಕಬೇಕು ಇದರಿಂದ ಕೂಡ ತೊದಲುನುಡಿ ಕಡಿಮೆ ಆಗುತ್ತದೆ. ಮತ್ತೊಂದು ಪರಿಹಾರ ಏನು ಅಂದರೆ, ಕಕ್ಕರೆ ಮರದ ಎಳೆಯ ಚೂರ್ಣ ಆಯುರ್ವೇದ ಅಂಗಡಿಯಲ್ಲಿ ದೊರೆಯುತ್ತದೆ ಅದನ್ನು ತಂದು ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಮಿಶ್ರ ಮಾಡಿ ಇದನ್ನು ಒಂದು ಲೋಟ ನೀರಿಗೆ ಹಾಕಿ ಮಕ್ಕಳಿಗೆ ಬಾಯನು ಮುಕ್ತಗೊಳಿಸುವುದಕ್ಕೆ ನೀಡಬೇಕು ಇದರಿಂದ ಕೂಡ ತೊದಲು ನುಡಿ ನಿವಾರಣೆಯಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments