Sunday, April 11, 2021
Homeಎಲ್ಲ ನ್ಯೂಸ್ಅಪ್ಪಟ ಕನ್ನಡದ ಹುಡುಗಿ ಆಶಾ ಭಟ್ ಅವರು ರಾಬರ್ಟ್ ಸಿನಿಮಾದ ಬಗ್ಗೆ ಹಾಗೂ ಡಿ ಬಾಸ್...

ಅಪ್ಪಟ ಕನ್ನಡದ ಹುಡುಗಿ ಆಶಾ ಭಟ್ ಅವರು ರಾಬರ್ಟ್ ಸಿನಿಮಾದ ಬಗ್ಗೆ ಹಾಗೂ ಡಿ ಬಾಸ್ ಬಗ್ಗೆ ಎಷ್ಟು ಕ್ಯೂಟ್ ಆಗಿ ಮಾತನಾಡಿದ್ದಾರೆ ಗೊತ್ತ …!!!!

ರಾಬರ್ಟ್ ಚಲನಚಿತ್ರವು ಇದೀಗ ಎಲ್ಲೆಡೆ ಬ್ಲಾಕ್ ಬಸ್ಟರ್ ಮೂವಿ ಆಗಿ ಸಖತ್ ಆಗಿ ಮನರಂಜನೆ ನೀಡುತ್ತಾ ಇದೆ. ಈ ರಾಬರ್ಟ್ ಚಲನ ಚಿತ್ರವೂ ಸಕ್ಸಸ್ ಆಗೋದಕ್ಕೆ ಮೊದಲನೆಯದಾಗಿ ಈ ಚಿತ್ರದಲ್ಲಿ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯ ಮಾಡಿದ್ದಾರೆ. ಅದೇ ರೀತಿ ರಾಬರ್ಟ್ ಚಿತ್ರವು ವಿಭಿನ್ನ ಕಥೆಯನ್ನು ಹೊಂದಿದ್ದು, ಈ ಚಿತ್ರವನ್ನು ಕುಟುಂಬದವರೊಡನೆ ಕುಳಿತು ನೋಡಬಹುದಾಗಿದೆ ಹಾಗೂ ರಾಬರ್ಟ್ ಚಲನ ಚಿತ್ರದಲ್ಲಿ ಗೆಳೆತನದ ಬಂಧವನ್ನು ಕೂಡ ಸಖತ್ ಖದರ್ ತೋರಿಸಿದ್ದಾರೆ. ಇನ್ನು ಮಲೆನಾಡ ಹುಡುಗಿ ಆಶಾ ಭಟ್ ರವರು ರಾಬರ್ಟ್ ಚಲನಚಿತ್ರದಲ್ಲಿ ಬಹಳ ಸೊಗಸಾಗಿ ಅಭಿನಯವನ್ನೂ ಮಾಡಿದ್ದಾರೆ.

ಆಶಾ ಭಟ್ ಅವರಿಗೆ ರಾಬರ್ಟ್ ಚಲನಚಿತ್ರವು ಮೊದಲನೆಯ ಚಿತ್ರ ಆಗಿದ್ದು, ಇವರು ಲಕ್ಕಿ ಅಂತ ಹೇಳಬಹುದು ಯಾಕೆ ಅಂದರೆ ಮೊದಲನೇ ಚಲನಚಿತ್ರವನ್ನು ಬಾಕ್ಸಾಫೀಸ್ ಸುಲ್ತಾನ ಡಿ ಬಾಸ್ ಅವರ ಜೊತೆ ಮಾಡಿದ್ದಾರೆ. ಇನ್ನೂ ಆಶಾ ಭಟ್ ರವರು ಡಿ ಬಾಸ್ ಬಗ್ಗೆ ಈ ರೀತಿ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಡಿ ಬಾಸ್ ರವರ ಜೊತೆ ಅಭಿನಯ ಮಾಡಿ ಹೆಚ್ಚಿನದಾಗಿ ನಾನು ವಿನಯತೆಯನ್ನು ಕಲಿತೆ ಎಂದು ಆಶಾ ಭಟ್ ರವರು ಹೇಳಿಕೊಂಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ರಾಬರ್ಟ್ ಚಲನ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆದಿತ್ತು ಈ ಕಾರ್ಯಕ್ರಮದಲ್ಲಿ ರಾಬರ್ಟ್ ಚಲನಚಿತ್ರದ ತಂಡವು ಪಾಲ್ಗೊಂಡಿತ್ತು. ಕಾರ್ಯಕ್ರಮದಲ್ಲಿ ಸೂಪರ್ ಪರ್ಫಾರ್ಮೆನ್ಸ್ ಅನ್ನು ಆಶಾ ಭಟ್ ರವರು ನೀಡಿ ಹಾಗೂ ತಮ್ಮ ಸರದಿ ಬಂದಾಗ ಇಡೀ ಚಿತ್ರತಂಡಕ್ಕೆ ತಮ್ಮ ಧನ್ಯವಾದಗಳನ್ನು ತಿಳಿಸಿದ್ದಾರೆ ಹಾಗೂ ನಿರ್ದೇಶಕರಾದ ತರುಣ್ ಸರ್ ಅವರಿಗೂ ಕೂಡ ಈ ಅವಕಾಶವನ್ನು ನೀಡಿದ್ದಕ್ಕೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಕೊನೆಗೆ ಡಿ ಬಾಸ್ ರವರ ಬಗ್ಗೆ ಸಖತ್ ಕ್ಯೂಟ್ ಮಾತುಗಳನ್ನು ಆಡಿದ ಆಶಾ ಭಟ್ ರವರು ಹೀಗೆಂದು ಹೇಳಿದ್ದಾರೆ.

ನನ್ನ ಸಿನಿಮಾ ಜರ್ನಿ ಈಗ ಶುರುವಾಗಿದ್ದು ಹಾಗೆ ಪ್ರತಿಯೊಂದು ಟೇಕ್ ನಲ್ಲಿಯೂ ಕೂಡ ದರ್ಶನ್ ಸರ್ ರವರು ತಮಗೆ ಬಹಳ ಸಪೋರ್ಟಿವ್ ಆಗಿ ಇದ್ದರೂ ಇದರ ಜೊತೆಗೆ ಪ್ರತಿ ಸಲವೂ ಒಳ್ಳೆಯ ಮಾತುಗಳಿಂದ ದರ್ಶನ್ ಸರ್ ರವರು ತಮ್ಮನ್ನು ಪ್ರೇರೇಪಿಸುತ್ತಿದ್ದರು ಈ ಕಾರಣದಿಂದಾಗಿಯೇ ಎಷ್ಟು ಉತ್ತಮವಾಗಿ ಅಭಿನಯ ಮಾಡಲು ಕಾರಣವಾಗಿದೆ ಇವರ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು ಎಂದು ಆಶಾ ಭಟ್ ರವರು ದಿ ಬಾಸ್ ಕುರಿತು ಮಾತುಗಳನ್ನು ಆಡಿದ್ದಾರೆ. ಇನ್ನು ಆಶಾ ಭಟ್ ರವರ ಮೊದಲ ಚಲನಚಿತ್ರ ರಾಬರ್ಟ್ ಆಗಿದ್ದು ಇವರು ಮೂಲತಃ ಭದ್ರಾವತಿಗೆ ಸೇರಿದವರಾಗಿದ್ದಾರೆ.

ಚಿತ್ರರಂಗಕ್ಕೆ ಇದೇ ರೀತಿ ಹೊಸ ಮುಖಗಳು ಪರಿಚಯವಾಗಿ ಜನರಿಗೆ ಒಳ್ಳೆಯ ಮನರಂಜನೆ ನೀಡಲು ಹಾಗೂ ಚಿತ್ರ ರಂಗವು ಕೂಡ ಸಮಾಜಕ್ಕೆ ಒಳ್ಳೆಯ ಚಲನಚಿತ್ರಗಳನ್ನು ಒಳ್ಳೆಯ ಸಂದೇಶವನ್ನು ನೀಡುವ ಮೂಲಕ ನೀಡಲಿ ಎಂದು ಕೇಳಿಕೊಳ್ಳೋಣ ನೀವೂ ಕೂಡ ಡಿ ಬಾಸ್ ಅಭಿಮಾನಿಗಳಾಗಿದ್ದರೆ ಈಗಾಗಲೇ ರಾಬರ್ಟ್ ಚಲನಚಿತ್ರವನ್ನು ನೋಡಿದ್ದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments