Sunday, April 11, 2021
Homeಅರೋಗ್ಯಅತಿ ಕಡಿಮೆ ನೀರು ಕುಡಿದರೆ ಏನಾಗುತ್ತೆ ಗೊತ್ತಾ ಗಂಡಸರು ಮತ್ತು ಮಹಿಳೆಯರು ತಪ್ಪದೆ ನೋಡಿ...

ಅತಿ ಕಡಿಮೆ ನೀರು ಕುಡಿದರೆ ಏನಾಗುತ್ತೆ ಗೊತ್ತಾ ಗಂಡಸರು ಮತ್ತು ಮಹಿಳೆಯರು ತಪ್ಪದೆ ನೋಡಿ …!

ವೀಕ್ಷಕರೇ ನಾವು ಇಷ್ಟು ದಿನ ನೀರನ್ನು ಎಷ್ಟು ಪ್ರಮಾಣದಲ್ಲಿ ಕುಡಿದರೆ ಒಳ್ಳೆಯದು ನೀರು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ದೊರೆಯುತ್ತದೆ ಅಂತ ಸಾಕಷ್ಟು ಮಾಹಿತಿಗಳಲ್ಲಿ ತಿಳಿದುಕೊಂಡಿದ್ದೇವೆ ಹಾಗೆ ಇಂದಿನ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯದೇ ಇದ್ದರೆ ಏನಾಗುತ್ತದೆ .

ಇದು ಆರೋಗ್ಯದ ಮೇಲೆ ಹೇಗೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಹಾಗೆ ನೀವು ಕೂಡ ಈ ಮಾಹಿತಿಯನ್ನು ತಪ್ಪದೇ ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಯಾಕೆ ಅಂದರೆ ಉತ್ತಮ ಆರೋಗ್ಯಕ್ಕಾಗಿ ನೀರು ತುಂಬಾನೇ ಅವಶ್ಯಕವಾದುದು ಆದ ಕಾರಣ ನೀರನ್ನೇ ಸರಿಯಾದ ಪ್ರಮಾಣದಲ್ಲಿ ಕುಡಿಯದೆ ಇದ್ದರೆ ಏನಾಗಬಹುದು ಎಂಬುದನ್ನು ನೀವು ಕೂಡ ತಿಳಿಯಿರಿ.

ಮೊದಲನೆಯದಾಗಿ ನಮ್ಮ ದೇಹಕ್ಕೆ ಸರಿಯಾಗಿ ಬೇಕಾಗಿರುವಷ್ಟು ಪ್ರಮಾಣದ ನೀರು ದೊರೆಯದೇ ಇದ್ದಾಗ ಅನೇಕ ಸಮಸ್ಯೆಗಳು ಉಂಟಾಗುತ್ತದೆ ಆರೋಗ್ಯ ಹದಗೆಡುತ್ತಾ ಬರುತ್ತದೆ, ಕೇವಲ ನೀರು ಅಷ್ಟೇ ಅಲ್ವಾ ಅಂತ ನೀವು ಅಂದುಕೊಳ್ಳುವುದಾದರೆ ನೀವು ಯಾವುದೇ ಪೋಷಕಾಂಶ ಉಳ್ಳ ಆಹಾರವನ್ನು ಸೇವಿಸಿದರೂ ನೀರು ಕುಡಿಯದೇ ಇದ್ದರೆ ನಿಮ್ಮ ದೇಹಕ್ಕೆ ಆ ಪೋಷಕಾಂಶಗಳು ಸರಿಯಾಗಿ ದೊರೆಯುವುದೇ ಇಲ್ಲ ಆದ ಕಾರಣ ನೀವು ಪೋಷಕಾಂಶವುಳ್ಳ ಆಹಾರ ಸೇವಿಸಿದರೂ ಅದನ್ನು ದೇಹ ಹೀರಿ ಕೊಳ್ಳಬೇಕಾದರೆ ನೀರಿನ ಅವಶ್ಯಕತೆ ಇದ್ದೇ ಇದೆ.

ನಮ್ಮ ದೇಹದಲ್ಲಿ ಚಿಕ್ಕ ಸೆಲ್ ಕೂಡಾ ಅಂದರೆ ಒಂದು ಜೀವ ಕಣ ಕೂಡ ತನ್ನ ಕೆಲಸವನ್ನು ನಿರ್ವಹಿಸಬೇಕಾದರೆ ತಾನು ಆ್ಯಕ್ಟಿವ್ ಆಗಿ ಇರಬೇಕು ಅನ್ನುವುದಾದರೆ ಅದಕ್ಕೆ ನೀರಿನ ಅವಶ್ಯಕತೆ ಇದ್ದೇ ಇರುತ್ತದೆ ಆದ ಕಾರಣ ನಾವು ನಮ್ಮ ದೇಹದಲ್ಲಿರುವ ಕಣ ಕಣಗಳಿಗೂ ಬೇಕಾಗಿರುವಷ್ಟು ನೀರನ್ನು ಪ್ರತಿದಿನ ಸೇವಿಸಲೇಬೇಕು ಇಲ್ಲವಾದಲ್ಲಿ ಈ ಕಣಗಳು ಕೆಲಸ ಮಾಡದೆ ಅಂಗಾಂಗಗಳಲ್ಲಿ ವೈಫಲ್ಯತೆಯನ್ನು ಕಾಣಬಹುದಾಗಿದೆ.

ಇನ್ನು ರಕ್ತ ಕಣಗಳಿಗಿಂತ ನೀರು ಅವಶ್ಯಕವಾದುದು ಯಾಕೆ ಅಂದರೆ ರಕ್ತ ಕಣಗಳಿಗೆ ಸರಿಯಾದ ಪ್ರಮಾಣದ ನೀರು ಸಿಗದೇ ಇದ್ದಾಗ ಅದು ತನ್ನ ಗಾತ್ರವನ್ನು ಕಡಿಮೆ ಮಾಡಿಕೊಳ್ಳುತ್ತದೆ ಹಾಗೆ ರಕ್ತ ಸಂಚಲನ ಕೂಡಾ ನಿಧಾನವಾಗಿ ಆಗುವ ಕಾರಣ ದೇಹದಲ್ಲಿ ಸೂಕ್ಷ್ಮ ಅಂಗ ಅನ್ನಿಸಿಕೊಳ್ಳುವ ಹೃದಯದ ಮೇಲೆ ಒತ್ತಡವೂ ಕಡಿಮೆಯಾಗುತ್ತಾ ಬಂದು ಇದು ಅನಾರೋಗ್ಯಕ್ಕೆ ದಾರಿಯಾಗಬಹುದು.

ನೀರನ್ನು ಕಡಿಮೆ ಕುಡಿಯುವುದರಿಂದ ಆಗುವ ಮತ್ತೊಂದು ಅಡ್ಡ ಪರಿಣಾಮವೆಂದರೆ ಅದು ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಎಚ್ಸಿಎಲ್ ಆಮ್ಲವನ್ನು ನಿಯಂತ್ರಣ ಮಾಡದೆ ಹೊಟ್ಟೆಯ ಒಳಭಾಗವನ್ನು ಮತ್ತು ಕರುಳನ್ನು ಸುಡುವ ಕಾರಣ ಗ್ಯಾಸ್ಟಿಕ್ ಸಮಸ್ಯೆ ಮಲಬದ್ಧತೆ ಅಜೀರ್ಣತೆ ಈ ಎಲ್ಲ ಸಮಸ್ಯೆಗಳು ಉಂಟಾಗುತ್ತದೆ.ನೀರನ್ನು ಕಡಿಮೆ ಕುಡಿಯುವುದರಿಂದ ಸಾಮಾನ್ಯವಾಗಿ ತಿಳಿದಿರುತ್ತದೆ ಮೂತ್ರಪಿಂಡದ ಕೆಲಸಗಳು ಕೂಡ ಸರಿಯಾಗಿ ಕೆಲಸ ನಿರ್ವಹಿಸದೇ ಮೂತ್ರಪಿಂಡಗಳ ಮೇಲೆ ಅಡ್ಡ ಪರಿಣಾಮಗಳು ಬೀರಬಹುದು ಎಂದು.

ಹೀಗೆ ನೀರನ್ನು ಕಡಿಮೆ ಕುಡಿಯುವುದರಿಂದ ಮಿದುಳಿನ ಚಟುವಟಿಕೆಯು ಕೂಡ ಕಡಿಮೆಯಾಗುತ್ತಾ ಬರುತ್ತದೆ ಅಂತ ಕೆಲವರು ಅಂದುಕೊಂಡಿರುತ್ತಾರೆ ನಾವು ಶೀತಲ ಪ್ರದೇಶದಲ್ಲಿ ಇದ್ದೇವೆ ನಮಗೆ ನೀರಿನ ಅವಶ್ಯಕತೆ ಹೆಚ್ಚು ಇರುವುದಿಲ್ಲ ಎಂದು ಆದರೆ ಶೀತಲ ಪ್ರದೇಶದಲ್ಲಿ ಇದ್ದರೂ ಕೂಡ ದೇಹಕ್ಕೆ ಎಷ್ಟು ನೀರಿನ ಅಗತ್ಯ ಇರುತ್ತದೆಯೋ ಅಷ್ಟು ನೀರಿನ ಪೂರೈಕೆ ಮಾಡಲೇಬೇಕು ಆಗಲೇ ಆರೋಗ್ಯ ಚೆನ್ನಾಗಿರುವುದು ನಮ್ಮ ದೇಹದಲ್ಲಿ ಚಟುವಟಿಕೆಗಳು ಕ್ರಮಬದ್ಧವಾಗಿ ನಡೆಯುವುದು.

ಆದ್ದರಿಂದ ಪ್ರತಿದಿನ ಎರಡೂವರೆಯಿಂದ ನಾಲ್ಕೂವರೆ ಲೀಟರ್ ನಷ್ಟು ನೀರನ್ನು ಸೇವಿಸಿ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಿ, ನಾವು ಅನುಭವಿಸುವ ಅನೇಕ ಸಮಸ್ಯೆಗಳಲ್ಲಿ ನೀರಿನಿಂದ ಬರುವ ಸಮಸ್ಯೆಗಳು ಹೆಚ್ಚಾಗಿದ್ದು ಈ ನೀರನ್ನು ಸರಿಯಾದ ಕ್ರಮದಲ್ಲಿ ಸೇವಿಸಿ ಹಾಗೆ ಶುದ್ಧ ನೀರನ್ನು ಸೇವಿಸುತ್ತಾ ಬನ್ನಿ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments