Sunday, April 11, 2021
Homeಎಲ್ಲ ನ್ಯೂಸ್ನೀವು ಕಟ್ಟಿಸಿದ ಮನೆಗೆ ಗೃಹಪ್ರವೇಶ ಮಾಡದಿದ್ದರೆ ಏನಾಗುತ್ತೆ ಗೊತ್ತಾ .. ಬಾಡಿಗೆ ಮನೆಯಲ್ಲಿ ಇದ್ದವರು ನೋಡಲೆಬೇಕು.

ನೀವು ಕಟ್ಟಿಸಿದ ಮನೆಗೆ ಗೃಹಪ್ರವೇಶ ಮಾಡದಿದ್ದರೆ ಏನಾಗುತ್ತೆ ಗೊತ್ತಾ .. ಬಾಡಿಗೆ ಮನೆಯಲ್ಲಿ ಇದ್ದವರು ನೋಡಲೆಬೇಕು.

ಮನೆಯನ್ನು ಕಟ್ಟಿಸಿದ ನಂತರ ಮನೆಗೆ ಗೃಹಪ್ರವೇಶ ಮಾಡದೆ ಹೋದರೆ ಏನಾಗುತ್ತದೆ ಮತ್ತು ಈ ರೀತಿ ಗೃಹ ಪ್ರವೇಶ ಮಾಡುವುದರ ಹಿಂದೆ ಏನೋ ಕಾರಣವಿದೆ ನಮ್ಮ ಹಿರಿಯರು ಯಾಕೆ ಈ ಪದ್ಧತಿಯನ್ನು ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದರು ಅಂತ ತಿಳಿಯಬೇಕಾದರೆ ,ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಈ ಮಾಹಿತಿಯನ್ನು ತಿಳಿದು ತಪ್ಪದೇ ಒಂದು ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರ ಬಳಿಯೂ ಹಂಚಿಕೊಳ್ಳಿ. ಈ ದಿನ ತಿಳಿಸಿದಂತಹ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಹೌದು ಹೊಸ ಮನೆಯನ್ನು ಕಟ್ಟಿಸಿದ ನಂತರ ಅಥವಾ ಯಾರಾದರೂ ಬಾಡಿಗೆ ಮನೆಗೆ ಹೋಗುವ ಮುನ್ನ ಆ ಮನೆಗೆ ಇಂತಹದ್ದೇ ಆದಂತಹ ಕೆಲವೊಂದು ಪೂಜೆಯನ್ನು ಮಾಡಬೇಕು ಇನ್ನು ಕೆಲವೊಂದು ಪದ್ಧತಿಯನ್ನು ಪಾಲಿಸಬೇಕಾಗುತ್ತದೆ ,ಗೃಹಪ್ರವೇಶ ಮಾಡುವಂತಹ ಸಂದರ್ಭದಲ್ಲಿ ಮನೆಯಲ್ಲಿ ದೀಪ ಹಚ್ಚುವುದರಿಂದ ಆ ಮನೆಯಲ್ಲಿ ದೈವ ನೆಲೆಸುತ್ತದೆ ಅಂತ ಹಿರಿಯರು ನಂಬುತ್ತಿದ್ದರು ಆದ ಕಾರಣವೇ ಅನೇಕ ವರ್ಷಗಳಿಂದ ಮನೆಯನ್ನು ಕಟ್ಟಿಸಿದ ನಂತರ ಆ ಮನೆಗೆ ಗೃಹಪ್ರವೇಶವನ್ನು ಮಾಡಿಕೊಂಡೇ ಬರುತ್ತಾರೆ.ಮನೆ ಕಟ್ಟಿಸುವಂತಹ ಸಂದರ್ಭದಲ್ಲಿ ಮನೆಗೆ ದುಷ್ಟಶಕ್ತಿ ಗೆಸ್ಟ್ ಕೆಟ್ಟ ಶಕ್ತಿಯ ಕಣ್ಣುಗಳು ಬಿದ್ದಿರುತ್ತದೆ ಕೆಟ್ಟ ಶಕ್ತಿಯ ಪ್ರವೇಶವಾಗಿರುತ್ತದೆ ಆದ ಕಾರಣ ಮನೆ ಪೂರ್ತಿಯಾದ ನಂತರ ಆ ಮನೆಗೆ ಗೃಹ ಪ್ರವೇಶ ಮಾಡಬೇಕು ಗೃಹಪ್ರವೇಶ ಮಾಡುವಂತಹ ಸಂದರ್ಭದಲ್ಲಿ ದೀಪವನ್ನು ವರಿಸಬೇಕು ,

ಆ ಮನೆಯಲ್ಲಿ ಹೋಮ ಹವನವನ್ನು ಮಾಡಬೇಕು ಇದರಿಂದ ಮನೆಗೆ ಆಗಿರುವ ಕಣ್ಣು ದೃಷ್ಟಿ ಪ್ರವೇಶವಾಗಿರುವ ಕೆಟ್ಟ ಶಕ್ತಿ ಎಲ್ಲವೂ ಕೂಡಾ ದೂರವಾಗಿ ಆ ಮನೆಗೆ ಶಿಷ್ಟ ಶಕ್ತಿಯ ಪ್ರವೇಶವಾಗುತ್ತದೆ ದೈವ ನೆಲೆಸುತ್ತಾನೆ ಲಕ್ಷ್ಮಿಯ ಸಾನ್ನಿಧ್ಯವಾಗುತ್ತದೆ ಎಂಬ ನಂಬಿಕೆಯಿಂದಲೇ ಮನೆಗೆ ಗೃಹ ಪ್ರವೇಶ ಮಾಡಲೇಬೇಕು .

ಬಾಡಿಗೆ ಮನೆಗೆ ಹೋಗುವ ಮುನ್ನ ಆ ಮನೆಯಲ್ಲಿ ಹಾಲನ್ನು ಉಕ್ಕಿಸಿ ದೀಪವನ್ನು ಹಚ್ಚಿ ನಂತರವೇ ಪ್ರವೇಶ ಮಾಡಬೇಕು ಯಾಕೆ ಅಂದರೆ ನಾವು ಆ ಮನೆಗೆ ಪ್ರವೇಶ ಮಾಡುವ ಮುನ್ನ ನಮಗಿಂತ ಮೊದಲು ದೈವ ಪ್ರವೇಶವಾದರೆ ಆ ಮನೆಯಲ್ಲಿ ಒಳ್ಳೆಯ ಶಕ್ತಿ ಇರುತ್ತದೆ ಇದರಿಂದ ನಮ್ಮ ಮನೆಯಲ್ಲಿ ನೆಮ್ಮದಿ ಶಾಂತಿ ನೆಲೆಸಿರುತ್ತದೆ ಎಂಬ ಕಾರಣದಿಂದಾಗಿ ಈ ರೀತಿಯ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದಾರೆ ನಮ್ಮ ಹಿರಿಯರು.

ಗೃಹಪ್ರವೇಶವನ್ನು ಮಾಡದೇ ಇದ್ದಾಗ ಏನಾಗುತ್ತದೆ ಅನ್ನೋ ಒಂದು ವಿಚಾರ ನಿಮಗೆ ಕಾಡುತ್ತಿದ್ದರೆ ಅದಕ್ಕೂ ಕೂಡ ಕಾರಣವಿದೆ ಗೃಹಪ್ರವೇಶ ಮಾಡದೇ ಹೋದರೆ ಏನಾಗುತ್ತದೆ ಅಂದರೆ ಆ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುವುದಿಲ್ಲ ಜೊತೆಗೆ ಮನೆಯ ಸದಸ್ಯರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ, ಇಂತಹ ಪರಿಸ್ಥಿತಿ ಬರಬಾರದು ಅನ್ನುವ ಕಾರಣಕ್ಕಾಗಿ ಮನೆಗೆ ಗೃಹ ಪ್ರವೇಶ ಮಾಡಿ ಪೂಜೆ ಸಲ್ಲಿಸಿ ಮನೆಗೆ ಹೋಗುತ್ತಾರೆ.

ವೈಜ್ಞಾನಿಕವಾಗಿ ಯೋಚಿಸುವುದಾದರೆ ಆ್ಯಪ್ ಮನೆ ಕಟ್ಟುವಂತಹ ಸಂದರ್ಭದಲ್ಲಿ ಮನೆಗೆ ಕ್ರಿಮಿ ಕೀಟಗಳು ಧೂಳು ಇವೆಲ್ಲವೂ ಮನೆಯೊಳಗೆ ಪ್ರವೇಶವಾಗಿರುತ್ತದೆ ಮನೆಯನ್ನು ಗೃಹಪ್ರವೇಶ ಮಾಡುವಂತಹ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛ ಪಡಿಸಲಾಗುತ್ತದೆ .ಎನ್ನುವ ಹೋಮ ಹವನಗಳನ್ನು ಮಾಡುವಾಗ ಕಟ್ಟಿಗೆಯಿಂದ ಬರುವ ಹೊಗೆ ಮನೆಯಲ್ಲಿರುವಂತಹ ಹುಳ ಹುಪ್ಪಟೆಗಳನ್ನು ಹೊರ ಹೋಗುವಂತೆ ಮಾಡುತ್ತದೆ, ಇಲ್ಲವಾದಲ್ಲಿ ಆ ಹುಳಗಳನ್ನು ಸಾಯುವಂತೆ ಮಾಡುತ್ತದೆ. ಈ ಎಲ್ಲ ಕಾರಣಗಳಿಂದ ಮನೆಗೆ ಹೋಗುವ ಮುನ್ನ ಗೃಹಪ್ರವೇಶವನ್ನು ಮಾಡಿಯೇ ಹೋಗಬೇಕು ಎಂದು ಹೇಳಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments