Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಈ ಸ್ಥಳವನ್ನು ಒಂದು ಬಾರಿ ದರ್ಶನ ಮಾಡಿದರೆ ಸಕಲ ಪಾಪ ಹೋಗುತ್ತದೆ…

ಮನುಷ್ಯ ತಾನು ಮಾಡುವ ಕರ್ಮ ಫಲಗಳಿಂದ ಸುಖ ದುಃಖಗಳನ್ನು ಅನುಭವಿಸುತ್ತಾನೆ ಮತ್ತು ಅವನು ಮಾಡುವ ಕರ್ಮಗಳ ಆಧಾರದ ಮೇಲೆ ಅವನ ಪಾಪ ಪುಣ್ಯಗಳು ನಿರ್ಧಾರವಾಗುತ್ತದೆ . ಮತ್ತು ತನ್ನ ಪಾಪವನ್ನು ಕಳೆದುಕೊಳ್ಳಲು ಹಲವು ದೇವಸ್ಥಾನಗಳಿಗೆ ಹೋಗಿ ದೇವರನ್ನು ಬೇಡಿ ಬರುತ್ತಾನೆ .

ಇನ್ನು ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧವಾಗಿರುವ ಒಂದು ದೇವಸ್ಥಾನ ಭೈರವ ಕೋನ ಎಂಬ ದೇವಸ್ಥಾನಕ್ಕೆ ಹೋಗಿ ಇಲ್ಲಿಯ ದೇವರನ್ನು ನಮಿಸಿ ಬಂದರೆ ಪಾಪಗಳೆಲ್ಲ ನಿವಾರಣೆ ಆಗುತ್ತದೆ ಎಂಬ ನಂಬಿಕೆಯೂ ಇಲ್ಲಿದೆ .

ಇನ್ನು ದಕ್ಷಿಣ ಭಾರತದಲ್ಲಿಯೇ ಹಲವು ಪವಿತ್ರ ಕ್ಷೇತ್ರಗಳಲ್ಲಿ ಒಂದು ಮತ್ತು ಈ ದೇವಸ್ಥಾನವನ್ನು ಬಲ್ಲವರಾರು ಕಟ್ಟಿಸಿದ್ದಾರೆ ಎಂಬ ಉಲ್ಲೇಖಗಳು ಇವೆ ಈ ದೇವಸ್ಥಾನವನ್ನು ಒಂಬತ್ತನೇ ಶತಮಾನದಲ್ಲಿ ಕಟ್ಟಲಾಗಿದೆ .

ಈ ದೇವಸ್ಥಾನದ ವಿಶೇಷವೇನೆಂದರೆ ಒಂದೇ ಕಲ್ಲಿನಲ್ಲಿ ಮೂರು ಮುಖಗಳನ್ನು ಉಳ್ಳ ದುರ್ಗಾದೇವಿಯ ವಿಗ್ರಹವಿದೆ . ಈ ದೇವಾಲಯವು ಮೂರು ಬೆಟ್ಟದ ಮಧ್ಯೆ ಇರುವ ಅಡವಿ ಪ್ರಾಂತ್ಯವೇ ಈ ದೇವಸ್ಥಾನ ಇನ್ನು ಇಲ್ಲಿ ಭಾರ್ಗವಿ ಮಣಿ ಎಂಬ ಋುಷಿ ಮುನಿಯೂ ಈಶ್ವರನನ್ನು ಕುರಿತು ತಪಸ್ಸು ಮಾಡಿದ್ದರಿಂದ ಈ ಕ್ಷೇತ್ರದಲ್ಲಿ ಶಿವನೂ ಸಹ ನೆಲೆಸಿದ್ದಾರೆ ಎಂದು ಹೇಳಲಾಗಿದೆ .

ಇಲ್ಲಿ ಈಶ್ವರನನ್ನು ಬಾಗೇಶ್ವರ ಎಂದು ಪೂಜಿಸುತ್ತಾರೆ ಇಲ್ಲಿ ದುರ್ಗಾಮಾತೆಯು ಸ್ವಯಂಭವೆ ಆಗಿ ನೆಲೆಸಿದ್ದಾಳೆ ಮತ್ತು ಈಶ್ವರನು ಸಹ ಸ್ವಾಯಂಭುವ ಆಗಿ ನೆಲೆಸಿದ್ದಾರೆ ಇಲ್ಲಿ ಬಂದು ಶಶಿ ನಾಗಲಿಂಗ ಇದೆ ಈ ನಾಗ ಲಿಂಗವನ್ನು ಜನರು ದರ್ಶನ ಮಾಡುವುದರಿಂದ ಅವರ ಪಾಪಗಳೆಲ್ಲ ಕಳೆದುಹೋಗುತ್ತದೆ ಎಂಬ ನಂಬಿಕೆಯೂ ಇಲ್ಲಿ ಇದೆ .

ಕಾರ್ತಿಕ ಮಾಸದಲ್ಲಿ ಬರುವ ಚಂದ್ರನ ಕಿರಣಗಳು ದುರ್ಗಾ ಮಾತೆಯ ವಿಗ್ರಹದ ಮೇಲೆ ನೇರವಾಗಿ ಬೀಳುತ್ತದೆ ಈ ಕಿರಣಗಳು ತಾಯಿಯ ಮೇಲೆ ಚುಂಬಿಸಿದಾಗ ಆ ದೃಶ್ಯವೂ ಬಹು ಸೊಗಸಾಗಿ ಕಾಣಿಸುತ್ತದೆ .

ಇಲ್ಲಿಯ ಮತ್ತೊಂದು ವಿಶೇಷ ಏನೆಂದರೆ ಒಂದೇ ಕಲ್ಲಿನಲ್ಲಿ ಎಂಟು ಆಲಯಗಳನ್ನು ಕಟ್ಟಿದ್ದಾರೆ ಈ ಅಷ್ಟ ದೇವಸ್ಥಾನಗಳಲ್ಲಿ ಶಿವನು ತನ್ನ ಅಷ್ಟ ರೂಪದಲ್ಲಿ ದರ್ಶನ ನೀಡುತ್ತಾನೆ ಮತ್ತು ಭಕ್ತಾದಿಗಳು ಇಲ್ಲಿಗೆ ಕಾರ್ತಿಕ ಮಾಸದಲ್ಲಿ ಬರುವ ಬುಧವಾರದಂದು ಮತ್ತು ಪೌರ್ಣಿಮೆಯ ದಿನ ಇಲ್ಲಿಗೆ ಬಂದು ದೇವರ ದರ್ಶನವನ್ನು ಪಡೆದುಕೊಂಡು ಹೋಗುತ್ತಾರೆ .

ಈ ದೇವಸ್ಥಾನದ ಸ್ವಲ್ಪ ದೂರದಲ್ಲಿ ಒಂದು ಜಲಪಾತವಿದೆ ಈ ಜಲಪಾತವು ಬಹಳ ಸೊಗಸಾಗಿ ಇದ್ದು ಜನರ ಕಣ್ ಮನಸ್ಸುಗಳನ್ನು ಸೆಳೆಯುತ್ತಾ ಇದೆ ಹಾಗೂ ಈ ದೇವಸ್ಥಾನವು ನಮ್ಮ ಕರ್ನಾಟಕದ ಪಕ್ಕದ ರಾಜ್ಯದಲ್ಲಿರುವ ಆಂಧ್ರಪ್ರದೇಶದ ಪ್ರಕಾಶಂ ಎಂಬ ಜಿಲ್ಲೆಯ ವೆಂ ಗೋಲು ಎಂಬ ಪಟ್ಟಣದಿಂದ ನೂರೈವತ್ತು ಕಿಲೋಮೀಟರ್ ದೂರದಲ್ಲಿದೆ.

ಇನ್ನು ನೀವು ಸಹ ಈ ದೇವರ ದರ್ಶನವನ್ನು ಪಡೆದುಕೊಂಡು ಧನ್ಯರಾಗಿ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಶುಭ ದಿನ ಶುಭವಾಗಲಿ ಧನ್ಯವಾದಗಳು .

kannada inspiration story and Kannada Health Tips kannada inspiration story and Kannada Health Tips