Ad
Home Kannada Cinema News ಕನ್ನಡದಲ್ಲಿ ಬ್ಯಾನ್, ಇತ್ತ ತೆಲುಗಿನ 7 ಸಿನಿಮಾಗಳಿಂದ ರಶ್ಮಿಕಾ ಮಂದಣ್ಣ ಔಟ್!

ಕನ್ನಡದಲ್ಲಿ ಬ್ಯಾನ್, ಇತ್ತ ತೆಲುಗಿನ 7 ಸಿನಿಮಾಗಳಿಂದ ರಶ್ಮಿಕಾ ಮಂದಣ್ಣ ಔಟ್!

Banned in Kannada Rashmika Mandanna out of 7 Telugu movies! rashmika mandanna ban update

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಈ ವಿಡಿಯೋವನ್ನ ಮಾಡ್ತಿರುವಂತ ಉದ್ದೇಶ ಒಂದಷ್ಟು ಜನರಿಗೆ ಪಾಠ ಆಗಲಿ ಎನ್ನುವ ಕಾರಣಕ್ಕಾಗಿ ಮನುಷ್ಯ ಅಹಂಕಾರವನ್ನ ಹೊಂದಿದ್ರೆ ಆ ಅಹಂಕಾರ ಯಾವತ್ತೂ ಕೂಡ ಆತನನ್ನ ಉದ್ದಾರ ಆಗೋದಕ್ಕೆ ಬಿಡೋದಿಲ್ಲ ಆತನನ್ನ ಮುಳುಗಿಸಿ ಬಿಡುತ್ತೆ ಆತನನ್ನ ಹಂತ ಹಂತವಾಗಿ ತಿನ್ನೋದಕ್ಕೆ ಶುರುಮಾಡಿಬಿಡುತ್ತೆ ಅಂತಿಮವಾಗಿ ಆತನನ್ನ ಸರ್ವನಾಶ ಮಾಡಿಯೇ ಬಿಡುತ್ತೆ ಮನುಷ್ಯ ಆದವನಿಗೆ ಕೃತಜ್ಞತೆ ಅನ್ನೋದು ಇರಲೇಬೇಕು ಹತ್ತಿದ ಏಣಿಯನ್ನ ಯಾವತ್ತೂ ಕೂಡ ಮರಿಬಾರದು ಮೊದಲು ತುತ್ತು ಇಕ್ಕಿದವರನ್ನ ಯಾವತ್ತೂ ಕೂಡ ಮರೆಯುವಂತ ಕೆಲಸವನ್ನ ಮಾಡಬಾರದು ಹತ್ತಿದ ಏಣಿಯನ್ನ ಗೌರವಿಸಬೇಕು ತುತ್ತು ಅವರನ್ನು ಸದಾ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಕೆಲಸವನ್ನು ಮಾಡಬೇಕು ಅದೆಲ್ಲವನ್ನು ಕೂಡ ಮರೆತಿವಿ ಅಂದ್ರೆ ಈಗ ನಮಗೆ ಏನು ಸಮಸ್ಯೆ ಆಗಲಿಲ್ಲ ಅಂದರು ಕೂಡ ಅಥವಾ ತಾತ್ಕಾಲಿಕವಾಗಿ ನಾವು ಜಯದ ಮೇಲೆ ಜಯವನ್ನ ಸಾಧಿಸುತ್ತಿದ್ದಿವಿ ,

ಅಂದರು ಕೂಡ long time ಮುಂದೊಂದು ದಿನ ನಮ್ಮ ಬದುಕಿಗೆ ಅದು ಹೊಡೆತವನ್ನು ಕೊಡುತ್ತೆ ನಮ್ಮ ಬದುಕನ್ನ ಕಂಪ್ಲೀಟ ಆಗಿ ಸರ್ವನಾಶ ಮಾಡಿಯೇ ಬಿಡುತ್ತೆ ಈ ಕಾರಣಕ್ಕಾಗಿ ಹಿರಿಯರು ಈ ಎಲ್ಲ ಮಾತುಗಳನ್ನು ಕೂಡ ಹೇಳಿಕೊಂಡು ಬಂದಿರೋದು ಬಂಧುಗಳೇ ಇಷ್ಟೆಲ್ಲ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ನಟಿ ರಶ್ಮಿಕಾ ಮಂದಣ್ಣ ಜನ ಪ್ರಶ್ನೆ ಮಾಡಬಹುದು ಯಾಕೆ ಪದೇ ಪದೇ ಆ ನಟಿಯ ಬಗ್ಗೆ ವಿಡಿಯೋವನ್ನ ಮಾಡ್ತಾ ಇದ್ರಿ ಟಾರ್ಗೆಟ್ ಅನ್ನೋದು ಇಲ್ಲ ಅಥವಾ ಇನ್ನೊಂದು ಯಾವುದು ಇಲ್ಲ ರಶ್ಮಿಕಾ ಮಂದಣ್ಣ ಇವತ್ತು ಭಾರತದಾದ್ಯಂತ ಮಿಂಚುತ್ತಿರುವ ವಿಚಾರ ನಮಗೂ ಕೂಡ ಖುಷಿ ಇದೆ ಕನ್ನಡದ ನಟಿ ಎನ್ನುವ ಕಾರಣಕ್ಕಾಗಿ ಆದರೆ ನಾವು ಅವರ ಬಗ್ಗೆ ಗೌರವ ಇಟ್ಟುಕೊಂಡಷ್ಟು ಅಥವಾ ನಾವು ರಶ್ಮಿಕಾ ಮಂದಣ್ಣ ಬಗ್ಗೆ ಹೆಮ್ಮೆ ಇಟ್ಟುಕೊಂಡಷ್ಟು ಆ ನಟಿಗೆ ನಾನು ಕನ್ನಡತಿ ನಾನು ಕರ್ನಾಟಕ ಮೂಲದಿಂದ ಬಂದಂತವಳು ನನಗೆ ಬದುಕನ್ನ ಕೊಟ್ಟಿದ್ದು ಅನ್ನವನ್ನ ಹಾಕಿದ್ದು ಎಲ್ಲವೂ ಕೂಡ ಕನ್ನಡ ಅನ್ನೋದು ಯಾವುದು ಕೂಡ ನೆನಪಿನಲ್ಲಿ,

ಇಲ್ಲವಲ್ಲ ಸ್ವಲ್ಪವೇ ಸ್ವಲ್ಪ ಕೃತಜ್ಞತೆ ಇಲ್ಲವಲ್ಲ ಅನ್ನುವುದು ನಮ್ಮೆಲ್ಲರಿಗೂ ಕೂಡ ಬೇಸರದ ಸಂಗತಿ ಈ ಕಾರಣಕ್ಕಾಗಿ ಆ ನಟಿಯ ಬದುಕಿನಲ್ಲಿ ಏನೇನು ಆಗುತ್ತಿದೆ ಅದೆಲ್ಲವನ್ನು ಕೂಡ ನಾನು ನಿಮ್ಮ ಮುಂದೆ ಇಡಲೇಬೇಕು ಇಲ್ಲಿಯವರೆಗೆ ಕನ್ನಡಿಗರು ಒಂದು ಹಂತಕ್ಕೆ ಎಲ್ಲವನ್ನು ಕೂಡ ಸಹಿಸಿಕೊಂಡಿದ್ದರು ಆದರೆ ಯಾವಾಗ ಆ ನಟಿ ಪ್ರೊಡಕ್ಷನ್ ಹೆಸರನ್ನು ಹೇಳುವುದಕ್ಕೆ ಅಂದರೆ ತನಗೆ ಬದುಕನ್ನು ಕೊಟ್ಟಂತಹ ಪ್ರೊಡಕ್ಷನ್ ಹೆಸರನ್ನು ಹೇಳುವುದಕ್ಕೆ ಹಿಂದೇಟನ್ನು ಹಾಕಿದ್ದರು ವಿಚಿತ್ರವಾಗಿ ಸನ್ನಿಯನ್ನು ಮಾಡಿದರು ಆಗ ಇಡೀ ಕನ್ನಡಿಗರು ತಿರುಗಿ ಬಿದ್ದಿದ್ದಾರೆ ಯಾಕೆಂದರೆ ಪರವಾ studio ಅಂದ್ರೆ ರಕ್ಷಿತ್ ಶೆಟ್ಟಿ ಅಥವಾ ರಿಷಿತ್ ಶೆಟ್ಟಿ ಅವತ್ತೇನಾದ್ರು ರಶ್ಮಿಕಾ ಮಂದಣ್ಣಗೆ ಅವಕಾಶವನ್ನ ಕೊಡದೆ ಹೋಗಿದ್ರೆ ಇವತ್ತು ಆ ರಶ್ಮಿಕಾ ಮಂದಣ್ಣ ಎಲ್ಲೋ ಒಂದು ಕಡೆ ಇರ್ತಾ ಇದ್ರು ಹೊರತಾಗಿ ಈ ಪರಿಯಾಗಿ ಪ್ರಖ್ಯಾತಿಯನ್ನ ಅಥವಾ ರಶ್ಮಿಕಾ ಮಂದಣ್ಣ ಅಂತ ನಾವೆಲ್ಲರೂ ಕೂಡ ಚರ್ಚೆಯನ್ನ ಮಾಡ್ತಿದಿವಲ್ಲ ಇದು ಯಾವುದು ಕೂಡ ಇರ್ತಾಯಿರ್ಲಿಲ್ಲ ಅವತ್ತು ಅವ್ರು ಆ ನಟಿಗೊಂದು,

ಅವಕಾಶವನ್ನ ಮಾಡಿ ಕೊಟ್ರು ಅದರ ಪ್ರತಿಫಲ ಎನ್ನುವಂತೆ ಇವತ್ತು ರಶ್ಮಿಕಾ ಮಂದಣ್ಣ ಇಡೀ ಜಗತ್ತಿನಾದ್ಯಂತ ಪ್ರಸಿದ್ದಿಯನ್ನ ಪಡೆದಿದ್ದಾರೆ ಅದಕ್ಕೆ ಸ್ವಲ್ಪವಾದರೂ ಕೃತಜ್ಞತೆ ಇರ್ಬೇಕು ತಾನೇ ಆದ್ರೆ ಆ ನಟಿಗೆ ಅದು ಯಾವ್ದುಕ್ಕು ಇಲ್ಲ ಕೇವಲ ಸಣ್ಣ ಮಾಡಿದ್ದು ಮಾತ್ರ ಅಲ್ಲ ಆ ವಿಡಿಯೋವನ್ನ ಪೂರ್ತಿ ಕೇಳಿಸಿಕೊಂಡರೆ ನಿಮಗೆ ಬಹಳ ಸ್ಪಷ್ಟವಾಗಿ ಗೊತ್ತಾಗಿರುತ್ತೆ ಆ ನಟಿ ಹೇಳುತ್ತಾ ಹೋಗುತ್ತಾರೆ ನಾನು ನಿಮ್ಮ ಸಿನಿಮಾದಲ್ಲಿ ನಟನೆ ಮಾಡೋದಿಲ್ಲ ಅಂತ ಹೇಳಿದೆ ಆದರೆ ಅವರು ಹಿಂದೆ ಬಿದ್ದು ದುಂಬಾಲು ಬಿದ್ದು ನನ್ನ ಹತ್ತಿರ ನಟನೆಯನ್ನ ಮಾಡಿಸಿದರು ಅಂತ ಏನ್ರೀ ಬಂದಿತ್ತು ರಕ್ಷಿತ್ ಶೆಟ್ಟಿ ಮತ್ತೆ ರಿಷಬ್ ಶೆಟ್ಟಿಯವರಿಗೆ ಇಂತಹ ನೂರು ನಟಿಯರು ಸಿಗುತ್ತಿದ್ದರು ಅವರಿಗೆ ಆದರೆ ಯಾವುದೋ ಒಂದು ಫ್ರೆಶ್ ಫೇಸ್ ಅನ್ನು introduce ಮಾಡೋಣ ಫ್ರೆಂಚ್ ಫೇಸ್ ಮೂಲಕ ಜನರ ಮುಂದೆ ಹೋಗೋಣ ಅಂತ ಹೇಳಿ ಅವರು ರಶ್ಮಿಕಾ ಮಂದಣ್ಣ ಗೆ ಅವಕಾಶವನ್ನು ಮಾಡಿ ಕೊಟ್ಟರೆ ಇವತ್ತು ಆ ರಶ್ಮಿಕಾ ಮಂದಣ್ಣ ಶೈಲಿ ನನಗೆ ಇಷ್ಟ ಇರಲಿಲ್ಲ ಅವರೇ ಒತ್ತಾಯ ಮಾಡಿ ನನ್ನ ಹತ್ರ ನಟನೆಯನ್ನ ಮಾಡಿಸಿಬಿಟ್ರು ಅಂತ ಇದು ವಯಸ್ಸಿನ ಕಾರಣಕ್ಕಾಗಿ ಪ್ರಬುದ್ಧತೆ ಇಲ್ಲವೋ ಅಥವಾ ಉದ್ದೇಶಪೂರ್ವಕವಾಗಿ ಕನ್ನಡಿಗರನ್ನ ಕೆರಳಿಸಲೇಬೇಕು ಎನ್ನುವ ಕಾರಣಕ್ಕಾಗಿ ,

ಇಂತಹ ಮಾತುಗಳನ್ನ ಆಡ್ತಾರೋ ಗೊತ್ತಿಲ್ಲ ಇನ್ನು ಕನ್ನಡಕ್ಕಂತೂ ನಾನಾ ಸಂದರ್ಭದಲ್ಲಿ ಅವಮಾನವನ್ನ ಮಾಡಿ ಬಿಟ್ಟಿದ್ದಾರೆ ಅದನ್ನ ಇಲ್ಲಿವರೆಗೆ ಎಲ್ಲರು ಕೂಡ ಸಹಿಸಿಕೊಂಡೆ ಬಂದರು ಬಹಳ ಬೇಸರದ ಸಂಗತಿ ನಾನು ಪ್ರತಿ ವಿಡಿಯೋದಲ್ಲಿ ಕೂಡ ಹೇಳ್ತಿನಿ ಮೂಲತಃ ಕನ್ನಡದವರು ಅವರು ಬೆಂಗಳೂರಿನಲ್ಲಿ ಬೆಳೆದಿದ್ದು ಮೊದಲ ಸಿನಿಮಾ ಕಿರಿಕ್ ಪಾರ್ಟಿ ಅನಂತರವು ಕೂಡ back to back ಕನ್ನಡ ಸಿನಿಮಾಗಳನ್ನು ಮಾಡಿದ್ದಾರೆ ಈಗಲೂ ಕೂಡ ಕನ್ನಡವನ್ನ ಮಾತನಾಡೋದಿಕ್ಕೆ ಬರೋದಿಲ್ಲ ಅಥವಾ ಬಂದ್ರು ಕೂಡ ಬರದೇ ಇರೋ ರೀತಿನಲ್ಲಿ ನಾಟಕ ಆಡ್ತಿದ್ದಾರೋ ಗೊತ್ತಿಲ್ಲ ಆದ್ರೆ ತಮಿಳು ಬಹಳಷ್ಟು ಚೆನ್ನಾಗಿ ಕಲಿತುಕೊಂಡು ಬಿಟ್ಟಿದ್ದಾರೆ ತೆಲುಗು ಬಹಳಷ್ಟು ಚೆನ್ನಾಗಿ ಮಾತಾಡ್ತಾರೆ ಇತ್ತೀಚಿಗೆ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಆದರೆ ಹಿಂದಿಯನ್ನು ಕೂಡ ಬಹಳ ಸ್ಪಷ್ಟವಾಗಿ ಮಾತನಾಡ್ತಾರೆ ಆದರೆ ಕನ್ನಡ ಅಂದ್ರೆ ಯಾಕೆ ತಾಯಿ ಈ ಪರಿಯದಂತ ಅಸಡ್ಡೆ ಕನ್ನಡಿಗರು ಯಾವುದನ್ನ ಪ್ರಶ್ನೆ ಮಾಡೋದಿಲ್ಲ ಎಲ್ಲವನ್ನು ಕೂಡ ಸಹಿಸಿಕೊಳ್ತಾರೆ ವಿಶಾಲ ಹೃದಯದವರು ಎನ್ನುವ ಕಾರಣಕ್ಕಾಗಿಯೋ ಅಥವಾ ಕನ್ನಡ ಸಿನಿಮಾ ಇಂಡಸ್ಟ್ರಿ ಅಂದ್ರೆ ಆಪರಿಯದಂತ ಅಸಡ್ಡೆ ಆಪರಿಯಾದಂತ ನಿರ್ಲಕ್ಷವೋ ಗೊತ್ತಿಲ್ಲ ಹೀಗೆ ಕನ್ನಡವನ್ನ ಕಡೆಗಣಿಸಿ ಬೇರೆ ಭಾಷೆಗೆ ಹೋದಂತವರು,

ಈಗ ಮತ್ತೆ ಕನ್ನಡಕ್ಕೆ ಬರ್ತಾಯಿರೋದನ್ನ ನಾವು ಸಾಕಷ್ಟು ಸಂದರ್ಭದಲ್ಲಿ ಗಮನಿಸಿದ್ದೇವೆ ಆದರೆ ರಶ್ಮಿಕಾ ಮಂದನಿಗೆ ಆ ಅವಕಾಶವೂ ಇಲ್ಲ ಬಿಡಿ ಯಾಕಂದ್ರೆ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ಈಗಾಗಲೇ ಅಘೋಷಿತವಾಗಿ ಬ್ಯಾನ್ ಆಗಿದ್ದಾರೆ ಬ್ಯಾನ್ ಮಾಡ್ತೀವಿ ಅಂತ ಘೋಷಣೆ ಮಾಡೋದಕ್ಕೆ ಯಾರಿಗೂ ಸಾಧ್ಯ ಆಗೋದಿಲ್ಲ ಆದರೆ ನಿರ್ಮಾಪಕರು ನಿರ್ದೇಶಕರು ಈಗಾಗಲೇ ನಿರ್ಧಾರವನ್ನ ತೆಗೆದು ಕೊಂಡಿದ್ದಾರೆ ಆ ನಟಿಗೆ ಅವಕಾಶವನ್ನ ಮಾಡಿಕೊಡಬಾರದು ಅಂತ ಇವೆಲ್ಲವೂ ಕೂಡ ನಿಮಗೆ ಗೊತ್ತಿರುವಂತ ವಿಚಾರ ಒಂದು ಚಿನ್ನಾಭರಣ ಮಳಿಗೆಯವರ ಅಥವಾ ಚಿನ್ನಾಭರಣ ಕಂಪನಿಯವರು ತಮ್ಮ ಬ್ರಾಂಡ್ ambassador ಸ್ಥಾನದಿಂದಲೂ ಕೂಡ ರಶ್ಮಿಕಾ ಮಂದನ್ ರವರನ್ನ ಕೈ ಬಿಟ್ಟಿದ್ದಾರೆ ಇನ್ನು ರಶ್ಮಿಕಾ ಮಂದಣ್ಣ ಸಾಲು ಸಾಲು ಸೋಲುಗಳನ್ನು ಕಾಡ್ತಾ ಇದ್ದಾರೆ ಅವೆಲ್ಲವೂ ಕೂಡ ನಿಮಗೆ ಗೊತ್ತಿರುವಂತ ವಿಚಾರ ಹೊಸ ವಿಚಾರ ಏನಪ್ಪಾ ಅಂದ್ರೆ ತೆಲುಗಿನ ಏಳು ಸಿನಿಮಾಗಳಿಂದ ರಶ್ಮಿಕಾ ಮಂದನ kick out ಆಗಿದ್ದಾರೆ ಇದು ಹೊಸ ಸುದ್ದಿ ಇದಕ್ಕೆ ಕಾರಣ ಇಷ್ಟೇ ಈಗಾಗಲೇ ಕರ್ನಾಟಕದಲ್ಲಿ ಒಂದು ದೊಡ್ಡ ಮಟ್ಟಿಗೆ ಕ್ಯಾಂಪೇನ್ ಶುರುವಾಗಿದೆ ಅದೇನಪ್ಪ ಅಂದ್ರೆ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾಗಳಿಂದ ಬ್ಯಾನ್ ಆಗೋದು ಮಾತ್ರ ಅಲ್ಲ ರಶ್ಮಿಕಾ ಮಂದಣ್ಣ,

ಅಭಿನಯದ ಯಾವುದೇ ಸಿನಿಮಾಗಳು ಕೂಡ ಕರ್ನಾಟಕದಲ್ಲಿ ರಿಲೀಸ್ ಆಗಬಾರದು ಅಂತ ಇದು ಚಿತ್ರ ತಂಡದವರ ತಲೆ ಬಿಸಿ ಕಾರಣವಾಗಿದೆ ಯಾಕಂದ್ರೆ ಕರ್ನಾಟಕ ಅನ್ನೋದು ಈಗ ಸಾಮಾನ್ಯ ಮಾರುಕಟ್ಟೆಯಾಗಿ ಉಳಿದುಕೊಂಡಿಲ್ಲ ನಾವು ಬಾರ್ಡರ್ ನಲ್ಲಿ ಹೋಗುವುದಾದರೆ ಒಂದಷ್ಟು ಕಡೆಗಳಲ್ಲಿ ತೆಲುಗು ಒಂದಷ್ಟು ಕಡೆಗಳಲ್ಲಿ ತಮಿಳು ಇನ್ನೊಂದಷ್ಟು ಕಡೆಗಳಲ್ಲಿ ಮಲಯಾಳಂ ಮಧ್ಯದಲ್ಲಿ ಒಂದು ಸ್ವಲ್ಪ ಕನ್ನಡ ಎನ್ನುವ ರೀತಿಯಲ್ಲಿ ಕರ್ನಾಟಕದಲ್ಲಿ ಉಳಿದುಕೊಂಡಿದೆ ಅಂದರೆ ಬೇರೆ ಬೇರೆ ಭಾಷೆಗಳಿಗೆ ನಮ್ಮ ಕನ್ನಡದಲ್ಲ ಬಹಳ ಅದ್ಭುತವಾದಂತಹ ಮಾರ್ಕೆಟ್ ಒಮ್ಮೊಮ್ಮೆ ತಮಿಳು, ತೆಲುಗು, ನೆಲದಲ್ಲೂ ಅಷ್ಟು ಕಲೆಕ್ಷನ್ ಮಾಡುವುದಿಲ್ಲ ಬಟ್ ಕರ್ನಾಟಕದಲ್ಲಿ ಅದ್ಭುತವಾದಂತಹ ಕಲೆಕ್ಷನ್ ಬೇರೆ ಬೇರೆ ಸಿನಿಮಾಗಳು ಮಾಡುತ್ತವೆ ಈ ಕಾರಣಕ್ಕಾಗಿ ಕರ್ನಾಟಕ ಮಾರ್ಕೆಟ್ ಮಾರ್ಕೆಟ್ ಅನ್ನು ಯಾರು ಕೂಡ miss ಮಾಡಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ ಈಗಾಗಲೇ ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು ಸಿನಿಮಾ ರಿಲೀಸಗೆ ರೆಡಿ ಆಗಿದೆ ಪುಷ್ಪ two ಕೂಡ ರಿಲೀಸಗೆ ರೆಡಿ ಆಗಿದೆ ಆದರೆ ಈಗಾಗಲೇ ನಮ್ಮಲ್ಲಿ ಕ್ಯಾಂಪೇನ್ ಶುರುವಾಗಿದೆ ಆ ಎರಡು ಸಿನೆಮಾಗೂ ಕೂಡ ನಾವು ಅವಕಾಶವನ್ನು ಮಾಡಿಕೊಡುವುದಿಲ್ಲ ಅಂತ ಈ ಕಾರಣಕ್ಕಾಗಿ ಇದೀಗ ತೆಲುಗು ಸಿನಿಮಾ ಇಂಡಸ್ಟ್ರಿಯವರಿಗೆ ಭಯ ಶುರುವಾಗಿಬಿಟ್ಟಿದೆ ರಶ್ಮಿಕಾ ಮಂದಣ್ಣ ಅವರನ್ನು ನಾವು ಹಾಕಿಕೊಂಡು ಬಿಟ್ಟರೆ ಕನ್ನಡ ನೆಲದಲ್ಲಿ ನಮಗೆ ರಿಲೀಸ್ ಮಾಡುವುದಕ್ಕೆ ಅವಕಾಶವನ್ನು ಮಾಡಿಕೊಡುವುದಿಲ್ಲ,

ಅಥವಾ ಬೇರೆ ಬೇರೆ ರೀತಿಯಲ್ಲಿ ಒಂದಷ್ಟು ಪ್ರತಿಭಟನೆ ಅಂತಹದ್ದು ಶುರುವಾಗಬಹುದು ಇದು ಸಿನಿಮಾಗೆ ಬಹಳ ದೊಡ್ಡ ಮಟ್ಟಿಗೆ ಇಂಪ್ಯಾಕ್ಟ್ ಆಗುತ್ತೆ ಸಿನಿಮಾಗೆ ಬೇರೆ ರೀತಿಯಲ್ಲೂ ಪೆಟ್ಟು ಕೊಡುತ್ತೆ ಎನ್ನುವ ಕಾರಣಕ್ಕಾಗಿ ರಶ್ಮಿಕಾ ಮಂದನ್ ಅವರನ್ನು ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ಎದುರಾಗಿದೆ ಈಗಾಗಲೇ ರಶ್ಮಿಕಾ ಮಂದಣ್ಣ back to back ಏಳು ತೆಲುಗು ಸಿನಿಮಾಗಳಿಗೆ sign ಅನ್ನು ಮಾಡಿದ್ದರಂತೆ ಅದು ಕೂಡ ಸ್ಟಾರ್ ನಟರ ಜೊತೆಗೆ ಕಾಣಿಸಿಕೊಳ್ಳುವುದಕ್ಕೆ ಸಹಿಯನ್ನ ಮಾಡಿದರು ಆದರೆ ಆ ಎಲ್ಲ ಸಿನಿಮಾಗಳಿಂದಲೂ ಕೂಡ ರಶ್ಮಿಕಾ ಮಂದಣ್ಣ ಅವರನ್ನು release ಮಾಡಲಾಗಿದೆ ಅದರ ಬದಲಾಗಿ ಬೇರೆ ಬೇರೆಯವರಿಗೆ ಇದೀಗ ಅವಕಾಶವನ್ನು ಮಾಡಿಕೊಡುತ್ತಿದ್ದಾರೆ ನಾನು ಆರಂಭದಲ್ಲಿ ಏನು ಹೇಳಿದೆ ಹೇಳಿ ಅಹಂಕಾರ ಅನ್ನುವುದು ಮನುಷ್ಯನನ್ನು ಹಂತ ಹಂತವಾಗಿ ಸರ್ವನಾಶ ಮಾಡುತ್ತ ಬರುತ್ತೆ ಅಂತ ಹೇಳಿ ಇದೆಲ್ಲವು ಕೂಡ ರಶ್ಮಿಕಾ ಮಂದಣಕ್ಕೆ ಶುರುವಾದ ಹಾಗೆ ಕಾಣಿಸ್ತಾ ಇದೆ ಒಂದು ರೀತಿಯಲ್ಲಿ ರಶ್ಮಿಕಾ ಮಂದಣ್ಣ ಅದಪತನ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ನೋಡೋಣ ಕ್ಷಮೆ ಕೇಳಬಹುದಾ ಏನು ಎತ್ತ ಅಂತ ಹೇಳಿ ಅಂತ ಪರಿಸ್ಥಿತಿ ಬರಬಹುದು ಅನ್ಸುತ್ತೆ ನನಗೆ ಹೀಗೆ ಮುಂದುವರಿತಾ ಹೋದ್ರೆ ರಶ್ಮಿಕಾ ಮಂದಣ್ಣ ಮುಂದೊಂದು ದಿನ ಕನ್ನಡಿಗರ ಕ್ಷಮೆ ಕೇಳಬೇಕಾಗುತ್ತೆ.

ಕ್ಷಮೆ ಕೇಳಲು ಬಹುದು ಇದು ಒಂದು ವಿಚಾರವಾದರೆ ಮತ್ತೊಂದು ಕಡೆಯಿಂದ ರಶ್ಮಿಕಾ ಮಂದಣ್ಣ ಪ್ರಪ್ರಥಮ ಬಾರಿಗೆ item dance ಒಂದಕ್ಕೆ okay ಅಂದಿದ್ದಾರೆ ಇದಕ್ಕೂ ನಾನಾ ರೀತಿಯಾದಂತ ಚರ್ಚೆಗಳು ನಡೀತಾಯಿದೆ ರಶ್ಮಿಕಾ ಮಂದನ್ ಅವಕಾಶ ಇಲ್ಲದಂತೆ ಕಾರಣಕ್ಕಾಗಿ item dance ಮಾಡೋದಕ್ಕೆ ಒಪ್ಪಿಗೆಯನ್ನ ಸೂಚಿಸಿದ್ರ ಅಂತ ಹೇಳಿ ಯಾಕಂದ್ರೆ ಬಾಲಿವುಡ್ ನಲ್ಲಿ ಒಂದೆರಡು ಸಿನಿಮಾ ಮಾಡಿದ್ರು ಗುಡ್ ಬೈ ಅನ್ನುವಂತ ಸಿನಿಮಾ ಮಿಷನ್ ಮಜನು ಎನ್ನುವಂತ ಸಿನಿಮಾ ಮಿಷನ್ ಮಜುನು ಡೈರೆಕ್ಟ್ ಆಗಿ OTT ಗೆ ರಿಲೀಸ್ ಆಗ್ತಾ ಇದೆ ಥಿಯೇಟರಗೆ ಬರ್ತಾಯಿಲ್ಲ ಗುಡ್ ಬೈ ಸಿನಿಮಾ ನೆಲ ಕಚ್ಚಿತು ಹಾಗೆ ತೆಲುಗಿನಲ್ಲಿ ಇತ್ತೀಚಿಗೆ ಮಾಡಿದಂತ ಸಿನಿಮಾಗಳು ಯಾವುದೇ ದೊಡ್ಡ ಮಟ್ಟಕ್ಕೆ ಸದ್ದು ಮಾಡಿಲ್ಲ ಪುಷ್ಪ ಒಂದು ಬಿಟ್ರೆ ಬೇರೆ ಯಾವುದು ಅಂತ ದೊಡ್ಡ ಮಟ್ಟಕ್ಕೆ ಸದ್ದು ಮಾಡಿಲ್ಲ ಇನ್ನು ಕೈಯಲ್ಲಿ ಬೇರೆ ಯಾವುದೇ ಸಿನಿಮಾಗಳು ಕೂಡ ಇದ್ದಹಾಗೆ ಕಾಣಿಸ್ತಾ ಇಲ್ಲ ಏಳು ಸಿನಿಮಾಗಳಿಂದ ಹೊರಗಡೆ ಬರುವಂತ ಪರಿಸ್ಥಿತಿ ಎದುರಾಗಿದೆ ಈ ಕಾರಣಕ್ಕಾಗಿ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳೋಣ ಅಂತ ಐಟ ಒಪ್ಪಿಗೆಯನ್ನ ಸೂಚಿಸಿರಬಹುದು ಈ ಹಿಂದೆ ಸಮಂತಾ ಕೂಡ ಹಾಗೆ ಮಾಡಿದ್ರಲ್ಲ ಪುಷ್ಪ ಸಿನಿಮಾದಲ್ಲಿ ಅದೇ ದಾರಿಯಲ್ಲಿ ರಶ್ಮಿಕಾ ಮಂದಣ್ಣ ಇರಬಹುದು ಆದರೆ ಬಹಳ interesting ವಿಚಾರ ಅಂದ್ರೆ ಇಲ್ಲಿಯವರೆಗೆ.

ಯಾವುದೇ ನಟಿಯು ಕೂಡ ತೆಗೆದುಕೊಳ್ಳದಷ್ಟು ಸಂಭಾವನೆಯನ್ನ ರಶ್ಮಿಕಾ ಮಂದಣ್ಣ ತೆಗೆದುಕೊಳ್ಳುತ್ತಿದ್ದಾರೆ ಈಗಾಗಲೇ ತೆಲುಗು ತಮಿಳಿನ ಸಾಕಷ್ಟು ಸ್ಟಾರ್ ನಟಿಯರು item dance ನಲ್ಲಿ ಕಾಣಿಸಿಕೊಂಡಿದ್ದರು ಆದರೆ ಅಬ್ಬಬ್ಬಾ ಅಂದರೆ ಮೂರು ಕೋಟಿವರೆಗೆ ಬಂದಿದ್ದರಂತೆ ಆದರೆ ರಶ್ಮಿಕಾ ಮಂದನ್ ಇದೀಗ ನಾಲ್ಕು ನಿಮಿಷದ ಡಾನ್ಸ್ ಗೆ ಬರೋಬ್ಬರಿ ಐದು ಕೋಟಿಯಷ್ಟು ಹಣವನ್ನು ಡಿಮ್ಯಾಂಡ್ ಮಾಡಿದ್ದಾರೆ ಮಹೇಶ್ ಬಾಬು ಆ ಸಿನಿಮಾದ ಹೀರೋ ತ್ರಿವಿಕ್ರಮ್ ಆ ಸಿನಿಮಾದ ಡೈರೆಕ್ಟರ್ ಅವರಿಬ್ಬರೂ ಕಾಂಬಿನೇಶನ್ ಅಲ್ಲಿ ಬರುತ್ತಿರುವಂತ ಸಿನಿಮಾ ಅದಕ್ಕೆ ರಶ್ಮಿಕಾ ಮಂದಣ್ಣ item dance ಒಂದು ಇರಲಿ ಅಂತ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಆ item danceಗೆ ಐದು ಕೋಟಿಯಷ್ಟು ಹಣವನ್ನು ಡಿಮ್ಯಾಂಡ್ ಮಾಡಿದ್ದಾರೆ ಈ ಕಾರಣಕ್ಕಾಗಿ ಇದು ರಶ್ಮಿಕಾ ಮಂದಣ್ಣರನ್ನ ಹಾಕಿಕೊಳ್ಳಬೇಕಾ ಬೇಡವಾ ಎನ್ನುವಂತ ಒಂದಷ್ಟು ಚರ್ಚೆಗಳಲ್ಲೂ ಕೂಡ ಆಗುತ್ತಿದೆಯಂತೆ ನೋಡೋಣ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದು ಅವರಿಗೆ ಬಿಟ್ಟಿರುವಂತ ವಿಚಾರ ಒಟ್ಟಾರೆಯಾಗಿ ರಶ್ಮಿಕಾ ಮಂದಣ್ಣಗೆ ಒಂದೊಂದೇ ಅವಕಾಶ ಕೈ ತಪ್ಪಿ ಹೋಗ್ತಾ ಇದ್ದಾವೆ ನಿಧಾನಕ್ಕೆ ಅವರ ಅಹಂಕಾರವೂ ಕೂಡ ಇಳಿಯುವಂತ ಪರಿಸ್ಥಿತಿ ಎದುರಾಗಬಹುದು.

ಯಾಕಂದ್ರೆ ಶಮಿಕಾ ಮಂದಣ್ಣ ಅವರಿಂದ ಯಾರು ಕೂಡ ಇದನ್ನ ನಿರೀಕ್ಷೆ ಮಾಡಿರಲಿಲ್ಲ ಕಿರಿಕ್ ಪಾರ್ಟಿ ಬಂದಾಗ ಬಹಳ ದೊಡ್ಡ ಅಭಿಮಾನಿ ಬಳಗ ಅವರಿಗೆ ಹುಟ್ಟಿಕೊಳ್ತು national crush ಅಂತ ಕರೆಸಿಕೊಂಡರು ಕರ್ನಾಟಕದಲ್ಲಿ ಅವರಿಗೆ ಆದಂತ ಒಂದು ಅಭಿಮಾನಿ ಬಳಗವು ಕೂಡ ಇತ್ತು back to back ಕನ್ನಡದ ಸಿನಿಮಾಗಳು ಕೂಡ ಸಿಕ್ಕಿದ್ವು ಸ್ಟಾರ್ ನಟರ ಜೊತೆಗೆ ಅಭಿನಯಿಸಿದ್ರು ಆ ನಂತರ ತೆಲುಗಿಗೆ ಹೋದನಂತರ ಚಲೋ ಸಿನಿಮಾಗೆ ಹೋದನಂತರ ಕಂಪ್ಲೀಟ ಆಗಿ ಬದಲಾಗಿ ಬಿಟ್ಟರು ಕೇವಲ ಕನ್ನಡದಲ್ಲಿ ಮಾತ್ರ ಅಹಂಕಾರ ತೋರಿಸಿದ್ದಲ್ಲ ಇತ್ತೀಚಿಗೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡ ಒಬ್ಬೊಬ್ಬರಾಗಿ ಮಾತನಾಡುವುದಕ್ಕೆ ಶುರು ಮಾಡಿಕೊಂಡಿದ್ದಾರೆ ಈ ಚಲೋ ಸಿನಿಮಾ ಅವರಿಗೆ ತೆಲುಗಿನಲ್ಲಿ ಮೊದಲು ಅವಕಾಶವನ್ನು ಮಾಡಿಕೊಟ್ಟಂತಹ ಸಿನಿಮಾ ಆದರೆ ಇತ್ತೀಚಿಗೆ ಯಾವುದೇ ವೇದಿಕೆ ಹೋದರು ಕೂಡ ಸಿನಿಮಾ ವಿಚಾರವನ್ನು ಸರಿಯಾದ ರೀತಿಯಲ್ಲಿ ಪ್ರಸ್ತಾಪ ಮಾಡುವುದಿಲ್ಲವಂತೆ ಆ ಸಿನಿಮಾದ ಹೀರೋ ಹೆಸರನ್ನು ಹೇಳುವುದಕ್ಕೆ ಹಿಂದೇಟನ್ನು ಹಾಕುತ್ತಾರೆ ಅಂತೇ ಆ ಸಿನಿಮಾ ಆಗಿದ್ದೆ ನನ್ನಿಂದ ಎನ್ನುವಂತಹ.

ಮನ ಸ್ಥಿತಿ ರಶ್ಮಿಕಾ ಮಂದಣ್ಣ ಅವರಿಗೆ ಬಂದು ಬಿಟ್ಟಿದೆ ಯಾಕೆ ಇಂತಹ ವರ್ತನೆ ಅನ್ನುವುದು ಮಾತ್ರ ಅರ್ಥ ಆಗುತ್ತಿಲ್ಲ ನೋಡೋಣ ಮುಂದೆ ಏನೆಲ್ಲಾ ಬೆಳವಣಿಗೆಗಳು ಆಗುತ್ತಾ ಹೋಗುತ್ತೆ ಅಂತ ಹೇಳಿ ಒಟ್ಟಾರೆಯಾಗಿ ನಾನು ಮತ್ತೊಮ್ಮೆ ಸ್ಪಷ್ಟನೆಯನ್ನ ಕೊಡ್ತೀನಿ ರಶ್ಮಿಕಾ ಮಂದಣ್ಣ ನನ್ನ ಟಾರ್ಗೆಟ್ ಅಲ್ಲ ಅಥವಾ ರಶ್ಮಿಕಾ ಮಂದಣ್ಣ ಅಷ್ಟರಮಟ್ಟಿಗೆ famous ಆಗಿದ್ದಾರಲ್ಲ ಅದು ನಮಗೆ ಖುಷಿ ಕೊಡ್ತಾ ಇಲ್ಲ ಅಥವಾ ಇನ್ನೊಂದು ಏನೋ ಅಂತ ಅಲ್ಲ ಅದು ನಮಗೆ ಖುಷಿನೂ ಕೂಡ ಕೊಡ್ತಾ ಇದೆ ಆದರೆ ಕನ್ನಡದ ಬಗ್ಗೆ ಒಂದು ಒಂದು ಎರಡು ಒಳ್ಳೆ ಮಾತಾಡಲಿ ಯಾವುದೋ ದೊಡ್ಡ ದೊಡ್ಡ ವೇದಿಕೆಗಳಲ್ಲಿ ನಾವೆಲ್ಲರೂ ಕೂಡ ಖುಷಿ ಪಟ್ಟು ಬಿಡುತ್ತೀವಿ ತುಂಬಾ ಜನ ಈಗಾಗಲೇ ಕರ್ನಾಟಕದಿಂದ ಹೋದವರು ಬೇರೆ ಬೇರೆ ಕಡೆಗಳಲ್ಲಿ ಕನ್ನಡವನ್ನ ಹಾಡಿ ಹೊಗಳುವಂತ ಕೆಲಸವನ್ನ ಮಾಡ್ತಾರೆ ಅಂತವರನ್ನ ನಾವೆಲ್ಲರೂ ಕೂಡ ತಲೆ ಮೇಲೆ ಹೊತ್ತು ಕೂರುಸ್ತೀವಿ ಯಾಕಂದ್ರೆ ನಾನು ಮತ್ತೆ ಹೇಳ್ತಿನಿ ಕನ್ನಡ ಅನ್ನೋದು ಬರಿ ಭಾಷೆಯಲ್ಲ ಕನ್ನಡ ಅನ್ನೋದು ಬದುಕು ಕನ್ನಡ ಅನ್ನೋದು ಬರಿ ನುಡಿಯಲ್ಲ.

ಕನ್ನಡ ಅನ್ನೋದು ನಮ್ಮೆಲ್ಲರಿಗೂ ಕೂಡ ಅನ್ನ ಕೊಟ್ಟಂತ ಭಾಷೆ ಅದನ್ನ ಯಾವತ್ತೂ ಕೂಡ ಕಡೆಗಣಿಸಬಾರದು ಯಾರು ಕಡೆಗಣಿಸುತ್ತಾರೋ ಅವರ ವಿರುದ್ಧ ಸೈಲೆಂಟ್ ಆಗಿ ಕೂಡ ಕುಳಿತುಕೊಳ್ಳಬಾರದು ಅನ್ನೋದು ನನ್ನ ಅಭಿಪ್ರಾಯ ಬಂಧುಗಳೇ ನಿಮಗೆ ಏನು ಅನ್ನಿಸುತ್ತೆ ಈ ವಿಡಿಯೋಗೆ ಸಂಬಂಧಪಟ್ಟ ಹಾಗೆ ಕಾಮೆಂಟ್ ಮಾಡಿ ತಿಳಿಸಿ ಜೊತೆಗೆ ತುಂಬಾ ಜನ ಪ್ರಶ್ನೆಯನ್ನ ಮಾಡುತ್ತಿದ್ದೀರಿ ಕಾಮೆಂಟ್ ಅನ್ನ ಹಾಕುತ್ತಿದ್ದೀರಿ ವಿಡಿಯೋ end ಸರಿ ಆಗ್ತಾಯಿಲ್ಲ ಅಂತ ಹೇಳಿ ಅದು ಯಾಕೆ ಅಂತ ನನಗು ಕೂಡ ಗೊತ್ತಾಗ್ತಾಯಿಲ್ಲ ಒಂದಷ್ಟು ಟೆಕ್ನಿಕಲ್ ಸಮಸ್ಯೆ ಇದ್ದಹಾಗೆ ಕಾಣಿಸ್ತಾ ಇದೆ ನಾನು ನಿಮ್ಮೆಲ್ಲರ ಕಾಮೆಂಟ್ಸ್ ನೋಡಿ ಕೊನೆಯದಾಗಿ ನೋಡೋಕೆ ಶುರು ಮಾಡಿ ಕೊಂಡೆ ನಾನು ಕೊನೆಯದಾಗಿ neat ಆಗಿ end ಮಾಡ್ತಾಯಿದ್ದೀನಿ ಎಲ್ಲರಿಗು ಕೊಡದ ಅಭಿಪ್ರಾಯ ತಿಳಿಸಿ ಅಂತ ಹೇಳ್ತಾಯಿದೀನಿ ಆದ್ರೆ ಯಾಕೋ end part ಕಂಪ್ಲೀಟ ಆಗಿ cut ಆಗ್ತಾ ಇದೆ ನಾನು ಈ ವಿಡಿಯೋದಲ್ಲಿ ಹೇಳಿದ್ದು cut ಆಗ್ತಿದಿಯೋ ಇಲ್ವೋ ಗೊತ್ತಿಲ್ಲ ನೋಡೋಣ ಟೆಕ್ನಿಕಲ್ ಸಮಸ್ಯೆನಾ ಆದಷ್ಟು ಬೇಗ ಸರಿಪಡಿಸುವಂತ ಕೆಲಸವನ್ನ ಕೂಡ ಮಾಡ್ತೀನಿ ಒಟ್ಟಾರೆಯಾಗಿ

Exit mobile version