Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಅದೆಷ್ಟು ರೋಗಗಳಿಗೆ ಮದ್ದು ಗೊತ್ತಾ ಈ ಗಿಡ… ನಮ್ಮ ಪ್ರಕೃತಿಯಲ್ಲಿ ವಿಶೇಷ ಗುಣ ಹೊಂದಿರುವ ಗಿಡ …

ಸಾಮಾನ್ಯವಾಗಿ ಕೆಲವೊಂದನ್ನು ನಾವು ಮೂಢನಂಬಿಕೆ ಎಂದು ನಂಬುವುದಿಲ್ಲ ಆದರೆ ನಮ್ಮ ಹಿರಿಯರು ಎಲ್ಲದಕ್ಕೂ ಕೂಡ ಒಂದೊಂದು ಕಾರಣ ಇಟ್ಟುಕೊಂಡು ಮಾಡಿರುತ್ತಾರೆ.

ಅದೇ ರೀತಿಯಲ್ಲಿ ದೇವಾಲಯಗಳ ಬಳಿಯಲ್ಲಿ ಮತ್ತು ಹೊಲಗಳ ಬದಿಯಲ್ಲಿ ಸಾಮಾನ್ಯವಾಗಿ ನಾವು ಒಂದು ಮರವನ್ನು ನೋಡುತ್ತೇವೆ .

ಅದು ಬಿಲ್ವಪತ್ರೆಯ ಮರ ಆ ಮರದ ಎಲೆಯನ್ನು ದೇವರಿಗೆ ಮಾತ್ರ ಅರ್ಪಿಸುತ್ತೇವೆ ಎಂಬ ನಂಬಿಕೆ ಕೆಲವೊಬ್ಬರಿಗೆ ಆದರೆ ಅದರಲ್ಲಿ ಎಷ್ಟೆಲ್ಲಾ ಆಯುರ್ವೇದಿಕ್ ಸತ್ವಗಳಿವೆ.

ಮತ್ತು ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಎಷ್ಟೊಂದು ಒಳ್ಳೆಯ ಅಂಶಗಳಿವೆ ಎಂದು ಯಾರಿಗೂ ತಿಳಿದಿರುವುದಿಲ್ಲ ಅದರ ಬಗ್ಗೆ ಈ ದಿನ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.

ಈ ಬಿಲ್ವಪತ್ರ ಮರದ ಎಲೆಯಿಂದ ಬೇರಿನಿಂದ ತೊಗಟೆಯಿಂದ ಹೂವಿನಿಂದ ಏನೆಲ್ಲ ಉಪಯೋಗಗಳಿವೆ ಅವುಗಳನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಈ ಬಿಲ್ವಪತ್ರೆಯ ಮರವನ್ನು ಹೆಚ್ಚಾಗಿ ದೇವರಿಗೆ ಬಳಸುತ್ತೇವೆ ಒಂದು ಎಲೆ ಸಾಕು ಈಶ್ವರನನ್ನು ಒಲಿಸಿಕೊಳ್ಳಲು ಎಂಬ ಮಾತುಗಳು ಕೂಡ ಸಾಮಾನ್ಯವಾಗಿ ಕೇಳಿ ಬರುತ್ತವೆ .

ಅದರ ಜೊತೆಯಲ್ಲಿ ವ್ಯಕ್ತಿಯನ್ನು ಸಮಾಧಿ ಮಾಡುವಾಗ ಸಮಾಧಿಗೆ ವಿಭೂತಿ ಮತ್ತು ಬಿಲ್ವಪತ್ರೆಯನ್ನು ಹಾಕಿ ಮಣ್ಣು ಮಾಡಿರುವುದನ್ನು ಕಾಣಬಹುದು ಅದರ ಜೊತೆಯಲ್ಲಿ ಈ ಬಿಲ್ವಪತ್ರೆಯ ಮರಕ್ಕೆ ಈಗಲ್ ಮರ್ಮ ಲೆಸ್ ಎಂದು ಕರೆಯುತ್ತಾರೆ .ಅದರ ಜೊತೆಯಲ್ಲಿ ಸ್ಟೋನ್ ಆಪಲ್ ವುಡ್ ಆಪಲ್ ಬೆಂಗಾಲಿ ಕ್ವೀನ್ ಗೋಲ್ಡನ್ ಆಪಲ್ ಎಂದೆಲ್ಲಾ ಈ ಬಿಲ್ವಪತ್ರೆಯ ಮರಕ್ಕೆ ಕರೆಯುತ್ತಾರೆ.

ಈ ಬಿಲ್ವಪತ್ರೆಯ ಮರದಲ್ಲಿರುವ ಆಯುರ್ವೇದಿಕ್ ಅಂಶಗಳೆಂದರೆ ಈ ಬಿಲ್ವಪತ್ರೆಯ ಬೇರಿನಲ್ಲಿ ವಾತವನ್ನು ಗುಣ ಮಾಡುವಂತಹ ಒಂದು ಉತ್ತಮವಾದ ಅಂಶವಿದೆ ಬಿಲ್ವಪತ್ರೆಯ ಕಾಯಿಯನ್ನು ಹಸಿಯಾಗಿ ಸೇವಿಸುವುದರಿಂದ ಕಫ ಕಡಿಮೆಯಾಗುತ್ತದೆ ಮತ್ತು ಹಸಿವು ಹೆಚ್ಚಾಗುತ್ತದೆ ಹೊಟ್ಟೆ ನೋವು ಮತ್ತು ಭೇದಿಯ ಸಮಸ್ಯೆಗೆ ಕೂಡ ಈ ಕಾಯಿ ರಾಮಬಾಣವಾಗಿದೆ ಈ ಬಿಲ್ವ ಪತ್ರೆ ಹೂವನ್ನು ನೀರಿನಲ್ಲಿ ನೆನೆ ಇಟ್ಟು ಅದನ್ನು ಕಣ್ಣಿಗೆ ಎರಡು ಹನಿ ಹಾಕಿಕೊಳ್ಳುವುದರಿಂದ ಕಣ್ಣಿನ ನೋವು ಕಡಿಮೆಯಾಗುತ್ತದೆ ಅದರ ಜೊತೆಯಲ್ಲಿ ಹೂವಿನ ನೀರನ್ನು ಮೂಗಿಗೆ ಹಾಕಿಕೊಳ್ಳುವುದರಿಂದ ಕೆಮ್ಮಿನ ಸಮಸ್ಯೆಗಳು ಕಡಿಮೆಯಾಗುತ್ತವೆ.

ಗ್ಯಾಂಗ್ರಿನ್ ಅಂಥ ಸಮಸ್ಯೆಗಳಿಗೆ ಈ ಎಲೆಯನ್ನು ಅರೆದು ಹಚ್ಚುವುದರಿಂದ ಗ್ಯಾಂಗ್ರಿನ್ ಕೂಡ ನಿವಾರಣೆಯಾಗುತ್ತದೆ. ಸುಟ್ಟ ಗಾಯಗಳಿಗೆ ಕೂಡ ಈ ಎಲೆಯನ್ನು ಅರೆದು ಹಚ್ಚುವುದರಿಂದ ಕಡಿಮೆಯಾಗುತ್ತದೆ.ಬಿಪಿ ಅಂತ ಸಮಸ್ಯೆಗಳಿಗೆ ಈ ಮರದ ಬೇರನ್ನು ಚೂರ್ಣ ವಾಗಿ ಮಾಡಿ ತಿನ್ನುವುದರಿಂದ ಬಿಪಿ ಕಡಿಮೆಯಾಗುತ್ತದೆ ಅದರ ಜೊತೆಯಲ್ಲಿ ಆದಿವಾಸಿ ಜನಗಳು ಈ ಮರದ ತೊಗಟೆಯನ್ನು ಜ್ವರಕ್ಕೆ ಕಷಾಯವಾಗಿ ಬಳಸುತ್ತಾರೆ ಅದು ಜ್ವರವನ್ನು ನಿವಾರಣೆ ಮಾಡುವುದರಲ್ಲಿ ಉತ್ತಮವಾಗಿದೆ .

ಈ ಬಿಲ್ವಪತ್ರೆ ಬೇರು ಅಗ್ನಿಮಂಥ ಮತ್ತು ಆನೆ ಮೊಗ್ಗು ಈ ಈ ಬೇರುಗಳನ್ನು ಕಷಾಯ ಮಾಡಿ ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಬೊಜ್ಜು ಕೂಡ ಕಡಿಮೆಯಾಗುತ್ತದೆ ಅದರ ಜೊತೆಯಲ್ಲಿ ಈ ಎಲೆಯ ರಸಕ್ಕೆ ಎರಡು ಚಮಚ ಜೇನು ತುಪ್ಪವನ್ನು ಹಾಕಿಕೊಂಡು ಕುಡಿಯುವುದರಿಂದ ನಿಶ್ಶಕ್ತಿ ಕಡಿಮೆಯಾಗುತ್ತದೆ ಈ ಬಿಲ್ವಪತ್ರೆ ಎಲೆಯನ್ನು ಬಿಸಿ ಮಾಡಿ ಕಣ್ಣಿನ ಮೇಲೆ ಇಟ್ಟುಕೊಳ್ಳುವುದರಿಂದ ಕಣ್ಣು ಕೆಂಪಾಗಿದ್ದರೆ ಅದು ಕೂಡ ಕಡಿಮೆಯಾಗುತ್ತದೆ.

ಬಿಲ್ವಪತ್ರೆಯ ಎಲೆಯ ರಸವನ್ನು ಅರೆದು ಅದನ್ನು ಚರ್ಮದ ಮೇಲೆ ಹಚ್ಚಿಕೊಳ್ಳುವುದರಿಂದ ಚರ್ಮದ ಸಮಸ್ಯೆಗಳಿದ್ದರೆ ಕಡಿಮೆಯಾಗುತ್ತದೆ ಮತ್ತೊಂದು ಪ್ರಮುಖವಾದ ಸಮಸ್ಯೆ ಎಂದರೆ ತಲೆ ಹೊಟ್ಟು ಸಾಮಾನ್ಯವಾಗಿ ಇದು ಎಲ್ಲರನ್ನೂ ಕಾಡುತ್ತಿರುತ್ತದೆ ಹದಿನೈದು ದಿನ ಈ ಕಾಯಿಯ ತಿರುಳನ್ನು ಹಚ್ಚುವುದರಿಂದ ತಲೆಹೊಟ್ಟು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಈ ಎಲ್ಲಾ ಆಯುರ್ವೇದಿ ಅಂಶಗಳನ್ನು ಹೊಂದಿರುವ ಬಿಲ್ವಪತ್ರೆಯನ್ನು ನೀವು ಕೂಡ ಒಂದು ಬಾರಿ ಬಳಸುವುದು ಉತ್ತಮ .

bilvapatre Kannada health benefits

kannada inspiration story and Kannada Health Tips