Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಈ ಆಹಾರಗಳನ್ನ ಸೇವಿಸಬೇಕು..!!

ಸಧ್ಯದ ಪರಿಸ್ಥಿಯಲ್ಲಿ ಜನರು ಸೇವಿಸುತ್ತಿರುವ ಆಹಾರದ ಮೇಲೆ ಇತ್ತೀಚಿಗಿನ ಅಧ್ಯನದ ಒಂದರ ಪ್ರಕಾರ ಜನರು ಸೇವಿಸುತ್ತಿರುವ ಆಹಾರದಲ್ಲಿ ಸರಾಸರಿ 9.5-10.5ಗ್ರಾಂನಷ್ಟು ಉಪ್ಪನ್ನು ಪ್ರತಿನಿತ್ಯ ಸೇವಿಸುತ್ತಿದ್ದಾರೆ,

ಈ ರೀತಿಯ ಅಹಾರ ಸೇವನೆ ಪದ್ಧತಿಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ, ನಿಮಗೆ ನೆನಪಿರಲಿ ನೀವು ಯಾವುದೇ ಆಹಾರ ಸೇವಿಸಿದರು ಅದು ನೇರವಾಗಿ ನಿಮ್ಮ ರಕ್ತದ ಮೇಲೆ ಪರಿಣಾಮ ಬೀರುತ್ತದೆ.

ಹಾಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ನಾವು ತಿಳಿಸುವ ಈ ಆಹಾರವು ನಿಮಗೆ ಬಹಳ ಉಪಕಾರಿಯಾಗಲಿದೆ.

ಪೊಟ್ಯಾಶಿಯಂ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ಸೊಡಿಯೋ ಅಂಶವು ದೇಹದ ಮೇಲೆ ಕಟ್ಟಾ ಪರಿಣಾಮ ಬೀರುವದನ್ನು ತಡೆಯುತ್ತದೆ, ಆದ್ದರಿಂದ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಬಾಳೆಹಣ್ಣನ್ನು ಪ್ರತಿ ನಿತ್ಯ ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ನಿವಾರಣೆ ಹೊಂದಲು ಸಹಕಾರಿ.

ವಾರದಲ್ಲಿ ಐದು ಬಾರಿ ಯೋಗಾರ್ಟ್ ಸೇವಿಸುವುದರಿಂದ ಅಧಿಕ ರಕ್ತದೊತ್ತಡದ ಸಂಭವವನ್ನು 20% ಕಡಿಮೆ ಮಾಡಬಹುದು, ಯೋಗಾರ್ಟ್​ ರುಚಿಯಾಗಿಯೂ ಇರುವುದರಿಂದ ಸ್ನ್ಯಾಕ್ಸ್​, ಹಣ್ಣುಗಳ ಜೊತೆ ಸೇವಿಸಬಹುದು.

ದೇಹದಲ್ಲಿ ನೈಟ್ರಿಕ್​ ಆ್ಯಸಿಡ್​ ಅಂಶ ಹೆಚ್ಚಿಸಲು ಬೆಳ್ಳುಳ್ಳಿ ಸಹಾಯಕಾರಿ, ಇದರಿಂದ ಅಪಧಮನಿಗಳು ಹಿಗ್ಗುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ಮೇಲೆ ತಿಳಿಸದ ಹಾಗೆ ಪೊಟ್ಯಾಶಿಯಂ ಜಾಸ್ತಿ ಇರುವ ಮೊತ್ತೊಂದು ಆಹಾರ ಕ್ಯಾರೆಟ್, ಈ ತರಕಾರಿಯ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಹಾಗೂ ಹೃದಯದ ಆರೋಗ್ಯವನ್ನೂ ಕಾಪಾಡಬಹುದು.

ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್​ ಇ, ಫೋಲಿಕ್​ ಆ್ಯಸಿಡ್​, ಪ್ರೋಟೀನ್ ಹಾಗೆ ಫೈಬರ್​ ಅಂಶವಿದೆ ಇವು ಹೃದಯದ ಆರೋಗ್ಯಕ್ಕೆ ಉತ್ತಮ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಆದರೆ ಸೂರ್ಯಕಾಂತಿ ಬೀಜವನ್ನು ಉಪ್ಪು ಸೇರಿಸದೇ ಸೇವಿಸಿ.

blood pressure food control remedy

kannada inspiration story and Kannada Health Tips