Categories
ಅರೋಗ್ಯ ಆರೋಗ್ಯ ಮಾಹಿತಿ

ಈ ಸೊಪ್ಪನ್ನ ಬಳಸಿದ್ದೆ ಆದಲ್ಲಿ ನಿಮ್ಮ ಮುಖ ಪಳ ಪಳ ಅಂತ ಹೊಳೆಯುತ್ತದೆ … ಹಾಗಾದ್ರೆ ಮುಖದ ಕಾಂತಿಯನ್ನ ಹೆಚ್ಚಿಸುವ ಆ ಸಂಜೀವಿನಿ ಯಾವುದು ಗೊತ್ತ …

ಕೊತ್ತಂಬರಿ ಸೊಪ್ಪನ್ನು ಅಡುಗೆಯಲ್ಲಿ ಬಳಸುತ್ತಾರೆ ಹಾಗೆಯೇ ಈ ಕೊತ್ತಂಬರಿ ಸೊಪ್ಪನ್ನು ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ನಾನಾ ತರಹದ ಪ್ರಯೋಜನಗಳು ದೊರೆಯುತ್ತದೆ , ಆದರೆ ಈ ಕೊತ್ತಂಬರಿ ಸೊಪ್ಪು ಸೌಂದರ್ಯವನ್ನು ಕೂಡ ವೃದ್ಧಿಸುತ್ತದೆ ಎಂಬ ವಿಚಾರ ನೀವು ತಿಳಿದಿದ್ದೀರಿ !
ಹೌದು ಕೊತ್ತಂಬರಿ ಸೊಪ್ಪನ್ನು ಬಳಸಿ ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ , ಈ ವಿಚಾರ ಸುಳ್ಳಲ್ಲ ನಿಜ ನಾವು ಈ ಮಾಹಿತಿಯಲ್ಲಿ ತಿಳಿಸುತ್ತೇವೆ ಕೊತ್ತಂಬರಿ ಸೊಪ್ಪನ್ನು ಹೇಗೆಲ್ಲ ಬಳಸಿದರೆ ಸೌಂದರ್ಯ ವೃದ್ಧಿಯಾಗುತ್ತದೆ ಎಂದು .

ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ತಿಳಿದು ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ನಿಮ್ಮ ಫ್ರೆಂಡ್ಸ್ ಗಳಿಗೂ ಕೂಡ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇನ್ನೂ ಇಂತಹ ಅನೇಕ ವಿಚಾರಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ .

ಮುಖಕ್ಕೆ ಕೇವಲ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಂಗಳನ್ನು ಹಚ್ಚಿದರೆ ಮಾತ್ರ ಸೌಂದರ್ಯ ವೃದ್ಧಿಯಾಗುತ್ತದೆ ಎಂಬುದು ತಪ್ಪು ಕಲ್ಪನೆ , ಆದರೆ ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಬಳಸಿ ಮುಖಕ್ಕೆ ಹಚ್ಚಿಕೊಂಡು ಮುಖವನ್ನು ಹಾರೈಕೆ ಮಾಡುವುದರಿಂದ ಸೌಂದರ್ಯ ವೃದ್ಧಿಯಾಗುತ್ತದೆ ಜೊತೆಗೆ ವಯಸ್ಸಾದ ಕಾಲದಲ್ಲಿಯೂ ಸುಕ್ಕು ಗಟ್ಟುವ ಸಮಸ್ಯೆ ಬರುವುದಿಲ್ಲ .

ಈ ರೀತಿಯ ಆಕೆಯೇ ನಾವು ನೈಸರ್ಗಿಕವಾಗಿ ದೊರೆಯುವಂತಹ ಕೊತ್ತಂಬರಿ ಸೊಪ್ಪನ್ನು ಬಳಸಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದಾಗಿದೆ ಜೊತೆಗೆ ಮುಖದ ಕಾಂತಿ ಕೂಡ ಹೆಚ್ಚುತ್ತದೆ .

ಕೊತ್ತಂಬರಿ ಸೊಪ್ಪಿನಲ್ಲಿ ಸಾಕಷ್ಟು ನೈಸರ್ಗಿಕ ಗುಣ ಇರುವ ಕಾರಣದಿಂದಾಗಿ ಇದನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಅರಿಶಿಣವನ್ನು ಬೆರೆಸಿ ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಮುಖದಲ್ಲಿರುವ ಕಲೆಗಳು ಮಾಯವಾಗುತ್ತವೆ .

ಈ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಅನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟನ್ನು ಬೆರೆಸಿ ಸ್ವಲ್ಪ ಮಜ್ಜಿಗೆಯನ್ನು ಹಾಕಿ ಫೇಸ್ ಪ್ಯಾಕ್ ರೀತಿ ಮಾಡಿಕೊಂಡು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ .

ಹೀಗೆ ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ ಅದರಿಂದ ರಸವನ್ನು ತೆಗೆದು ರಸವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳುವುದರಿಂದ ಕೂಡ ಮುಖವೂ ಕಾಂತಿಯುತವಾಗುತ್ತದೆ ಜೊತೆಗೆ ಮುಖದಲ್ಲಿರುವ ಕಪ್ಪು ಕಲೆಗಳು ಮಾಯವಾಗುತ್ತವೆ .

ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಜೇನುತುಪ್ಪವನ್ನು ಬೆರೆಸಿ ಅದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಹಾಕಿ ಪೇಸ್ಟ್ ರೀತಿ ಮಾಡಿಕೊಂಡು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಕೂಡ ಮುಖದಲ್ಲಿರುವ ಕಲೆಗಳು ಮಾಯವಾಗುವುದರ ಜೊತೆಗೆ ಮುಖ ಕಾಂತಿಗೊಳ್ಳುತ್ತದೆ .

ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಆಲೋವೆರ ಜೆಲ್ಲನ್ನು ಬೆರೆಸಿ ಅದನ್ನು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ತ್ವಚೆಯು ಮೃದುವಾಗುವುದರ ಜೊತೆಗೆ ಕಲೆಗಳು ಮಾಯವಾಗುತ್ತವೆ .

ಈ ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ ಅದರ ರಸವನ್ನು ತೆಗೆದು ಕೈ ಕಾಲುಗಳಿಗೆ ಮಸಾಜ್ ಮಾಡುವುದರಿಂದ ಕೂಡ ಕೈ ಕಾಲುಗಳಲ್ಲಿ ಆಗಿರುವಂತಹ ಟ್ಯಾನ್ ದೂರವಾಗಿ ಕೈಕಾಲುಗಳು ಕಾಂತಿಯುತವಾಗುತ್ತದೆ .

ಈ ರೀತಿಯಾಗಿ ಕೊತ್ತಂಬರಿ ಸೊಪ್ಪನ್ನು ಕೇವಲ ಆಹಾರದಲ್ಲಿ ಬಳಸಿ ಆರೋಗ್ಯವನ್ನು ವೃದ್ಧಿಸಿ ಕೊಳ್ಳುವುದರ ಜೊತೆಗೆ ಕೊತ್ತಂಬರಿ ಸೊಪ್ಪನ್ನು ಬಳಸಿ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು ಹಾಗಾದರೆ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಗೆಳೆಯರೊಂದಿಗೆ ಕೂಡ ಮಾಹಿತಿಯನ್ನು ಶೇರ್ ಮಾಡಿ .

ಮುಖಕ್ಕೆ ಕೆಮಿಕಲ್ಸ್ನಿಂದ ಮಾಡಿರುವಂಥ ಕ್ರೀಮ್ಗಳನ್ನು ಬಳಸುವುದರ ಬದಲು ನೈಸರ್ಗಿಕವಾಗಿ ದೊರೆಯುವಂತಹ ಪದಾರ್ಥಗಳನ್ನು ಬಳಸಿ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಲೇಪಿಸಿಕೊಂಡು ಮುಖದ ಸೌಂದರ್ಯವನ್ನು ವೃದ್ಧಿಸಿಕೊಳ್ಳಿ ದನ್ಯವಾದ .

Leave a Reply