Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಸೌತೆಕಾಯಿಯ ಅದ್ಭುತ ಸೀಕ್ರೆಟ್ ನಿಮಗೆ ಗೊತ್ತಾ… ಪುರುಷರು ಮಹಿಳೆಯರು ತಪ್ಪದೆ ತಿಳಿದುಕೊಳ್ಳಿ …

ಸೌತೆಕಾಯಿ ಈ ಒಂದು ತರಕಾರಿ ಹೆಸರನ್ನು ಎಲ್ಲರೂ ಕೂಡ ಕೇಳಿರುತ್ತೀರಾ ಮತ್ತು ಸೌತೆಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಕೂಡ ತಿಂದಿರುತ್ತಾರೆ ಮತ್ತು ಇದರ ರುಚಿ ಎಲ್ಲರಿಗೂ ಇಷ್ಟವಾಗುತ್ತದೆ ಇನ್ನು ಸೌತೆಕಾಯಿಯ ಲಾಭಗಳು ಎಷ್ಟಿದೆ ಅಂತ ಈಗಾಗಲೇ ಸಾಕಷ್ಟು ಮಾಹಿತಿ ಸಾಕಷ್ಟು ಜನರಿಗೆ ತಿಳಿದಿರುತ್ತದೆ.

ಹಾಗಾದರೆ ಈ ಲೇಖನದಲ್ಲಿ ನಾವು ಸೌತೆಕಾಯಿಯ ಇನ್ನೂ ಹಲವಾರು ರೀತಿಯ ಲಾಭಗಳನ್ನು ತಿಳಿದುಕೊಳ್ಳುವುದರ ಜೊತೆಗೆ  ಯಾವ ಸಮಸ್ಯೆಗೆ ಸೌತೆಕಾಯಿಯನ್ನು ಸೇವಿಸಬೇಕು ಹೇಗೆ ಸೇವಿಸಬೇಕು .

ಅನ್ನೋದನ್ನು ಈ ದಿನ ತಿಳಿಯೋಣ ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮತ್ತು ಇಂತಹ ಅನೇಕ ಆರೋಗ್ಯಕರ ಮಾಹಿತಿಗಳಿಗಾಗಿ ತಪ್ಪದೇ ನಮ್ಮ ಪೇಜನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ .

ಸೌತೆಕಾಯಿ ಪ್ರತ್ಯಾಮ್ಲೀಯ ತರಕಾರಿ ಅಂತಾನೇ ಹೇಳಬಹುದು ಮತ್ತು ಇದನ್ನು ಹೆಚ್ಚಾಗಿ ಈಜಿಪ್ಟ್ ನಲ್ಲಿ ಬೆಳೆಯಲಾಗುತ್ತಿತ್ತು ಆದರೆ ಇದೀಗ ಎಲ್ಲ ದೇಶಗಳಲ್ಲಿಯೂ ಈ ತರಕಾರಿ  ಅನ್ನು ಬೆಳೆಯಲಾಗುತ್ತದೆ ಮತ್ತು ಸೌತೆಕಾಯಿಯಿಂದ ಸಾಕಷ್ಟು ಖಾದ್ಯಗಳನ್ನು ಕೂಡ ತಯಾರು ಮಾಡುತ್ತಾರೆ ಅದರಲ್ಲಿ ಸೌತೆಕಾಯಿ ಹುಳಿ ಸೌತೆಕಾಯಿಯಿಂದ ತಯಾರು ಮಾಡುವಂತಹ ಕೋಸಂಬರಿ ಸಾಕಷ್ಟು ಜನಕ್ಕೆ ತಿಳಿದಿರುತ್ತದೆ ಮತ್ತು ಇದು ಸಾಕಷ್ಟು ಆರೋಗ್ಯವನ್ನು ಕೂಡ ತಂದುಕೊಡುತ್ತದೆ .

ಸೌತೆಕಾಯಿಯಲ್ಲಿ 64.5% ಪ್ರತ್ಯಾಮ್ಲೀಯ ಇರುತ್ತದೆ , 35.95% ಆಮ್ಲೀಯ ಅಂಶವೂ ಇರುತ್ತೆ , 96.3% ಅಷ್ಟು ಸೌತೆಕಾಯಿಯಲ್ಲಿ ನೀರಿನಂಶ ಇರುತ್ತದೆ , 0.4% ಪ್ರೋಟಿನ್,   0.1% ಕೊಲೆಸ್ಟ್ರಾಲ್ ,  0.3% ಮಿನರಲ್ಸ , 0.4%  ಫೈಬರ್ ಅಂಶವೂ ಸೌತೆಕಾಯಿಯಲ್ಲಿ ಇರುತ್ತದೆ .

10ml ಕ್ಯಾಲ್ಶಿಯಂ , 1.5ml  ಐರನ್ , 25ml  ರಂಜಕ , 7ml ವಿಟಮಿನ್ ಸಿ , 13cal   ಎನರ್ಜಿ ಇಷ್ಟೆಲ್ಲಾ ಅಂಶಗಳು ಸೌತೆಕಾಯಿಯಲ್ಲಿ ಇರುತ್ತದೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ವಿಟಮಿನ್ ಬಿ ಅಂಶವು ಕೂಡ ಸೌತೆಕಾಯಿಯಲ್ಲಿ ಇರುತ್ತದೆ ಇದನ್ನು ಸೇವನೆ ಮಾಡುವುದರಿಂದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು  ಪಡೆದುಕೊಳ್ಳುವುದರ ಜೊತೆಗೆ ಸ್ಥೂಲ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಸೌತೆಕಾಯಿಯನ್ನು ಪ್ರತಿದಿನ ಸೇವಿಸಬೇಕು ಇದರಿಂದ ಈ ಸಮಸ್ಯೆಯಿಂದ ಬೇಗನೆ ಉಪಶಮನವನ್ನು ಪಡೆದುಕೊಳ್ಳಬಹುದು .

ಸೌತೆಕಾಯಿಯಲ್ಲಿ ಸುಮಾರು 2.5 ರಷ್ಟು ಪಿಷ್ಟದಾಂಶ ಇರುತ್ತದೆ ಮತ್ತು  ಇದರಲ್ಲಿ ಎರಾಪ್ಸಿನ್ ಅನ್ನೊ ಒಂದು ಅಂಶ ಇರುವುದರಿಂದ  ದೇಹದಲ್ಲಿ ಪಚನಕ್ರಿಯೆ ಉತ್ತಮವಾಗಿ ಆಗುವುದಕ್ಕೆ ಇದು ಸಹಾಯ ಮಾಡುತ್ತದೆ . ಸೌತೆಕಾಯಿಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಇರುವಂತಹ ಅನಗತ್ಯ ಕೊಬ್ಬು ಕರಗುತ್ತದೆ ಯಾಕೆ ಅಂದರೆ ಇದರಲ್ಲಿ ಇರುವಂತಹ ನಾರಿನ ಅಂಶವು ಕೊಬ್ಬನ್ನು ಕರಗಿಸು ವುದಕ್ಕೆ ಸಹಾಯ ಮಾಡುವುದರ ಜೊತೆಗೆ ಇದನ್ನು ತಿನ್ನುವುದರಿಂದ ಬಾಯಾರಿಕೆ ಅನ್ನು ಇದು ಕಡಿಮೆ ಮಾಡುತ್ತದೆ .

ಸೌತೆಕಾಯಿಯನ್ನು ತಿನ್ನುವಾಗ ಬೇಯಿಸದೆ ಹಸಿ ತರಕಾರಿಯನ್ನೇ ತಿನ್ನುವುದರಿಂದ ಏನೂ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳುವುದರ ಜೊತೆಗೆ ಸೌತೆಕಾಯಿಯನ್ನು ತಿನ್ನುವುದರಿಂದ ಕೀಲುನೋವು ಅಂತಹ ಸಮಸ್ಯೆ ಇದ್ದರೂ ಕೂಡ ನಿವಾರಣೆಯಾಗುತ್ತದೆ .

ಹೊಟ್ಟೆ ಉರಿ ಸಮಸ್ಯೆಯಿಂದ ಬಳಲುತ್ತಿರುವವರು ಈ ಒಂದು ಸೌತೆಕಾಯಿಯನ್ನು ಅದರ ತಿರುಳಿನ ಜೊತೆಗೆ ಸೇವಿಸಬೇಕು ಈ ರೀತಿ ಸೇವನೆ ಮಾಡುವುದರಿಂದ ಹೊಟ್ಟೆ ಉರಿ ಸಮಸ್ಯೆ ಇದ್ದಲ್ಲಿ ಬೇಗನೆ ಕಡಿಮೆಯಾಗುವುದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತವರ ಹೊಟ್ಟೆಯಲ್ಲಿ ಹೆಚ್ಚು ಆಮ್ಲೀಯ ಅಂಶ ಇರುವ ಕಾರಣದಿಂದಾಗಿ ಸೌತೆ ಕಾಯಿಯನ್ನು ತಿನ್ನುವುದರಿಂದ ಇದರಲ್ಲಿ ಇರುವಂತಹ ಹೆಚ್ಚಿನ ಪ್ರತ್ಯಾಮ್ಲೀಯ ಅಂಶವೂ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ ದೇಹದಲ್ಲಿ ಇರುವಂತಹ ಆ್ಯಸಿಡ್ ಅಂಶವನ್ನು ಸಮತೋಲನದಲ್ಲಿ ಇಡುವುದಕ್ಕೆ ಇದು ಸಹಕರಿಸುತ್ತದೆ .

ಸೌಂದರ್ಯಕ್ಕೂ ಕೂಡ ಸೌತೆಕಾಯಿ ಹೆಸರಾಗಿದೆ ಮತ್ತು ಇದರಲ್ಲಿರುವ ಸಿಲಿಕಾ ಮತ್ತು ಗಂಧಕ ಎಂಬ ಅಂಶಗಳು ಕೂದಲು ಉದುರುವ ಸಮಸ್ಯೆಗೂ  ಪರಿಹಾರವನ್ನು ಕೊಡುತ್ತದೆ ಇದರ ಜೊತೆಗೆ ಸೌಂದರ್ಯವನ್ನು ಕೂಡ ವೃದ್ಧಿಸುತ್ತದೆ .