Categories
ಭಕ್ತಿ ಮಾಹಿತಿ ಸಂಗ್ರಹ

ಓಂ ನಮೋ ಮಂಜುನಾಥ ಸ್ವಾಮಿ ನಮಃ: ಧರ್ಮಸ್ಥಳದ ಅನ್ನ ಪ್ರಸಾದದ ಬಗ್ಗೆ ನೀವು ತಿಳಿಯದಂತಹ ರಹಸ್ಯಗಳು ಇಲ್ಲಿವೆ ನೋಡಿ!!!

ಹೌದು ಸ್ನೇಹಿತರೆ ದಕ್ಷಿಣ ಭಾರತದಲ್ಲಿ ತುಂಬಾ ಪ್ರಖ್ಯಾತಿ ಹೊಂದಿರುವಂತಹ ದೇವಸ್ಥಾನ ಅಂದರೆ ಅದು ನಮ್ಮ ಕರ್ನಾಟಕದಲ್ಲಿ ಇರುವಂತಹ ಧರ್ಮಸ್ಥಳ ಅಂತ ಹೇಳಬಹುದು.

ಏಕೆಂದರೆ ಈ ಧರ್ಮಸ್ಥಳದಲ್ಲಿ ಪ್ರತಿನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಇಲ್ಲಿ ಬಂದಂತಹ ಜನರು ಶ್ರೀ ಮಂಜುನಾಥನನ್ನು ನೋಡಿಕೊಂಡು ಹಾಗೂ ಕೆಲವರು ಕೇಶಮುಂಡನೆ ಮಾಡಿಕೊಂಡು ಹೋaಗುತ್ತಾರೆ. ಇನ್ನೊಂದು ವಿಶೇಷತೆ ಏನಪ್ಪ ಅಂದರೆ ಈ  ದೇವಸ್ಥಾನಕ್ಕೆ ಬಂದವರು ಯಾರು ಕೂಡ ಊಟ ಮಾಡದೆ ವಾಪಸ್ ಹೋಗೋದಿಲ್ಲ.

ಧರ್ಮಸ್ಥಳದಲ್ಲಿ ಪ್ರತಿದಿನ 50ರಿಂದ 60 ಸಾವಿರ ಜನಗಳು ಬಂದು ಹೋಗುತ್ತಾರೆ, ವಿಶೇಷ ದಿನದಲ್ಲಿ ಲಕ್ಷ ದಾಟಿದರು ಅಚ್ಚರಿ ಇಲ್ಲ. ಹೀಗೆ ಬಂದಂತಹ ಜನರು ಊಟ ಮಾಡದೆ ಮನೆಗೆ ಹೋಗುವುದಿಲ್ಲ. ಇಲ್ಲಿನ ಧರ್ಮದರ್ಶಿಗಳಾದ ಅಂತಹ ವೀರೇಂದ್ರ ಹೆಗಡೆ ಅವರು ಪ್ರತಿದಿನ 50000 ಜನರಿಗೆ ಆಗುವಂತಹ ಅಡುಗೆಯನ್ನು ಮಾಡಿಸುತ್ತಾರೆ.

ಅವರಿಗಾಗಿ 8000 ಕೆಜಿ ಅಕ್ಕಿಯ ಬಳಸಿ ಅನ್ನವನ್ನು ತಯಾರಿಸುತ್ತಾರೆ ಹಾಗೂ 3500 Kg ತರಕಾರಿಗಳ ಬಳಕೆ ಮಾಡುತ್ತಾರೆ. ಎಷ್ಟು ಜನ ಧರ್ಮಸ್ಥಳಕ್ಕೆ ಹೋಗಿದ್ದಾರೆ ಬಿಟ್ಟಿದ್ದಾರೆ ಗೊತ್ತಿಲ್ಲ .

ಸ್ನೇಹಿತರೆ ಆದರೆ ನಾನು ಹೋಗಿ ಬಂದಿರುವ ಅನುಭವದ ಪ್ರಕಾರ, ಇಲ್ಲಿ ಕೊಡುವಂತಹ ಅನ್ನಪ್ರಸಾದ ಎಷ್ಟು ಚೆನ್ನಾಗಿರುತ್ತೆ ಎಂದರೆ ನಿಜವಾಗಲೂ ಈ ತರದ ಪ್ರಸಾದ ನಿಮಗೆ ಯಾವ ದೇವಸ್ಥಾನದಲ್ಲೂ ಕೂಡಾ ಇರುವುದಿಲ್ಲ.

ಇನ್ನು ಧರ್ಮಸ್ಥಳದಲ್ಲಿ ವಿಶೇಷತೆ ಏನಪ್ಪಾ ಅಂದರೆ ಅಡುಗೆ ತುಂಬಾ ದೇವಸ್ಥಾನಗಳಲ್ಲಿ ಮಾಡುತ್ತಾರೆ ಆದರೆ ಈ ಧರ್ಮಸ್ಥಳ ಸ್ವಚ್ಛತೆಗೆ ಅತಿ ಹೆಚ್ಚು ಪ್ರಧಾನತೆ ಕೊಡುತ್ತಾರೆ ಅಡುಗೆ ಮಾಡುವಾಗ ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತಾರೆ. ನಿಮಗೆ ಗೊತ್ತಿದೆಯಾ ಅಥವಾ ಗೊತ್ತಿಲ್ಲವೋ ಪೂರಿ ಅನ್ನುವ ದೇವಸ್ಥಾನವು ಕೆಲವು ಕಾರಣಾಂತರಗಳಿಂದಾಗಿ ಕೋರ್ಟಿನಲ್ಲಿ ಕೇಸು ನಡೆಯುತ್ತಾ ಇತ್ತು ಅದರಲ್ಲಿ  ನ್ಯಾಯಾಧೀಶ ಹೇಳ್ತಾರಂತೆ ಸ್ವಚ್ಛತೆಗೆ ಪ್ರಧಾನತೆ ಕೊಡುವಂತಹ ಧರ್ಮಸ್ಥಳ ವನ್ನು ನೋಡಿ ಕಲಿಯಿರಿ ಎಂದು ಹೇಳುತ್ತಾರೆ.

ಸತ್ಯ ಧರ್ಮ ನಿಷ್ಠೆಗೆ ಹೆಸರಾದ ಇರುವಂತಹ ಈ ಧರ್ಮಸ್ಥಳ ಕ್ಷೇತ್ರದಲ್ಲಿ ದೊರಕುವಂತಹ ಪ್ರಸಾದ ನಮ್ಮ ದೇಶದಲ್ಲಿ ಯಾವುದೇ ಜಾಗದಲ್ಲಿ ಕೂಡ ಬರುವುದಿಲ್ಲ. ಇದರ ರುಚಿ ಅಷ್ಟು ಅದ್ಬುತವಾಗಿ ಇರುತ್ತದೆ.  ನಾವು ಕರ್ನಾಟಕದವರು ಕನ್ನಡಿಗರು ಹೆಮ್ಮೆಯಿಂದ ಹೇಳುವಂತಹ ಸಂಗತಿ ಇದು. ನೀವೇನಾದರೂ ಇನ್ನೂ ಈ ಜಾಗಕ್ಕೆ ಭೇಟಿಯನ್ನು ಕೊಡದೇ ಇದ್ದಲ್ಲಿ ದಯವಿಟ್ಟು ಈಗಲೇ ಹೋಗಿ ಆ ಮಂಜುನಾಥನ ಕೃಪೆಗೆ ಪಾತ್ರರಾಗಿ.

ನಿಮಗೆ ಈ ಲೇಖನ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಕು ನಮಗೆ ಕಾಮೆಂಟ್ ಮಾಡಿ. ನೀವು ಪ್ರೋತ್ಸಾಹ  ಕೊಟ್ಟರೆ ನನಗೆ ಉತ್ತೇಜನ ಸಿಕ್ಕಂತೆ ಆಗುತ್ತದೆ. ನಿಮಗೂ ಏನಾದರೂ ಧರ್ಮಸ್ಥಳಕ್ಕೆ ಹೋಗಿ ಈ ರೀತಿಯಾಗಿ ಊಟವನ್ನು ಮಾಡುವಂತಹ ಸೌಲಭ್ಯ ನಿಮಗೆ ಏನಾದರೂ ಇದ್ದರೆ ದಯವಿಟ್ಟು ಯಾವುದೇ ಕಾರಣಕ್ಕೂ ಮರೆಯಬೇಡಿ ಹಾಗೂ ಅಲ್ಲಿಗೆ ಹೋಗಿ ಶ್ರೀ ಮಂಜುನಾಥನ ಪ್ರಸಾದವನ್ನು ತಿನ್ನಲು ಯಾವುದೇ ಕಾರಣಕ್ಕೂ ಮರೆಯಬೇಡಿ. ಯಾಕೆಂದರೆ ಅಲ್ಲಿ ಕೊಡುವಂತಹ ಆಹಾರದಲ್ಲಿ ಎಷ್ಟು ಭಕ್ತಿ ಅಡಗಿರುತ್ತದೆ. ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.

kannada inspiration story and Kannada Health Tips kannada inspiration story and Kannada Health Tips