Ad
Home ಉಪಯುಕ್ತ ಮಾಹಿತಿ ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿರೋ ವಿಗ್ರಹದ ಜೊತೆಗೆ ಈ ರೀತಿ ಕೆಲಸವನ್ನ ಮಾಡಬೇಡಿ ಅದೃಷ್ಟ ಮಣ್ಣುಪಾಲಾಗಿ...

ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿರೋ ವಿಗ್ರಹದ ಜೊತೆಗೆ ಈ ರೀತಿ ಕೆಲಸವನ್ನ ಮಾಡಬೇಡಿ ಅದೃಷ್ಟ ಮಣ್ಣುಪಾಲಾಗಿ ರೋಡಿಗೆ ಬರುತ್ತೀರಾ…

ನಿಮ್ಮ ಮನೆಯಲ್ಲೇನಾದರೂ ವಿಗ್ರಹಗಳನ್ನ ಇಟ್ಟಿದೀರಾ? ಹಾಗಾದರೆ ಈ ಕೂಡಲೇ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ನೀವು ವಿಗ್ರಹಕ್ಕೆ ಇದೊಂದು ಕೆಲಸ ಮಾಡಿಲ್ಲ ಎಂದಲ್ಲಿ ಖಂಡಿತವಾಗಿಯೂ ದೊಡ್ಡ ಸಮಸ್ಯೆಯೆ ನಿಮ್ಮ ಮನೆಯಲ್ಲಿ ಉಂಟಾಗಬಹುದು ಎಚ್ಚರ!

ನಮಸ್ಕಾರಗಳು ಪ್ರಿಯ ಓದುಗರೆ, ಇಲ್ಲಿದೆ ನೋಡಿ ನಿಮಗಾಗಿ ಮುಖ್ಯ ಮಾಹಿತಿ ಈ ವಿಚಾರವನ್ನು ಪ್ರತಿಯೊಬ್ಬ ಹಿಂದೂ ಸಂಪ್ರದಾಯ ಪಾಲಿಸುವವರು ತಿಳಿಯಲೇಬೇಕಾದ ಓದಲೇಬೇಕಾದಂತಹ ಮಾಹಿತಿ ಆಗಿದೆ. ಹೌದು ನಾವು ಪ್ರತಿದಿನ ದೇವರ ಪೂಜೆ ಮಾಡುತ್ತೇವೆ ದೇವರ ಪೂಜೆ ಮಾಡಿದಾಗ ಮನಸ್ಸಿಗೆ ಏನೋ ನೆಮ್ಮದಿ. ಹೌದು ಎಷ್ಟೋ ಜನರು ದೇವರನ್ನೂ ನಂಬಲ್ಲ ಅಂತಾರೆ ಆದರೆ ದೇವರ ಆರಾಧನೆ ಮಾಡುವುದರಿಂದ ಅದೆಂಥ ಅದ್ಭುತವಾದ ಭಾವನೆ ನಮ್ಮಲ್ಲಿ ಹುಟ್ಟುತ್ತದೆ ಅಂದರೆ ಅದೊಂದು ಹೇಳಲಾಗದ ಅನುಭವ ಅಂತಹ ಅನುಭವವನ್ನು ದೇವರ ಆರಾಧನೆ ಮಾಡಿದಾಗಲೆ ದೇವಸ್ಥಾನಕ್ಕೆ ಹೋದಾಗಲೇ ಪಡೆದುಕೊಳ್ಳಲು ಸಾಧ್ಯ.

ಹೌದು ಆ ಅನುಭವವನ್ನು ಸರಳವಾಗಿ ಭಕ್ತಿ ಎಂಬ ಪದದಿಂದ ಕರೆಯ ಬಹುದು. ಈ ದಿನ ನಾವು ದೇವರ ಆರಾಧನೆಗೆ ಸಂಬಂಧಿಸಿದ ವಿಚಾರದ ಬಗ್ಗೆ ಚರ್ಚಿಸಲು ಹಾಗೂ ಈ ಬಗ್ಗೆ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲು ಬಂದಿದ್ದೇವೆ ಈ ಕೆಲವು ಮಾಹಿತಿಗಳು ನಿಮಗೆ ಉಪಯುಕ್ತವಾಗಬಹುದು. ಹಲವರು ಒಂದೊಂದು ದಿವಸದಂದು ತಮ್ಮ ಮನೆಯಲ್ಲಿರುವ ದೇವರ ಕೋಣೆಯನ್ನೂ ದೇವರ ಸಾಮಗ್ರಿಗಳನ್ನು ತೊಳೆಯುತ್ತಾರೆ ಆದರೆ ಯಾವಾಗ ದೇವರ ಸಾಮಗ್ರಿಗಳನ್ನು, ದೇವರ ವಿಗ್ರಹಗಳನ್ನು ಅಥವಾ ದೇವರ ಕೋಣೆಯನ್ನು ಸ್ವಚ್ಛ ಮಾಡುವುದಕ್ಕೆ ವಿಶೇಷವಾದ ದಿನಗಳು ಯಾವುವು ಅಂದರೆ ತಿಂಗಳಿನಲ್ಲಿ ಬರುವ 2 ಏಕಾದಶಿ ಅಂದರೆ ಶುಕ್ಲ ಪಕ್ಷದ ಏಕಾದಶಿ ಮತ್ತು ಕೃಷ್ಣ ಪಕ್ಷದ ಏಕಾದಶಿ ಹುಣ್ಣಿಮೆ ಅಥವಾ ಅಮವಾಸ್ಯೆ ಅಥವಾ ಶನಿವಾರ ಅಥವಾ ಬುಧವಾರ ಈ ದಿನಗಳಂದು ದೇವರ ವಿಗ್ರಹಗಳನ್ನು ಅಥವ ದೇವರ ಸಾಮಗ್ರಿಗಳನ್ನು ಸ್ವಚ್ಛಮಾಡುವುದಕ್ಕೆ ಪ್ರಶಸ್ತ್ಯವಾದ ದಿನವಾಗಿರುತ್ತದೆ.

ಹೌದು ಸ್ನೇಹಿತರೆ ಈ ದಿನಗಳಂದು ದೇವರ ವಿಗ್ರಹ ಸ್ವಚ್ಛ ಮಾಡುವುದರಿಂದ ಬಹಳ ಒಳಿತಾಗುತ್ತದೆ ಅಂತ ಹೇಳ್ತಾರ ಈ ದಿವಸಗಳು ಬಹಳ ವಿಶೇಷವಾದ ಸಮಯದಿಂದ ಕೂಡಿದ್ದು ದೇವರ ಸಾಮಗ್ರಿಗಳನ್ನು ಸ್ವಚ್ಛ ಮಾಡಲೇ ಬೇಕು ಅಂತ ಇದ್ದಲ್ಲಿ ಈ ದಿನಗಳಂದು ಸ್ವಚ್ಛ ಮಾಡಿ.

ವಿಗ್ರಹದ ವಿಚಾರಕ್ಕೆ ಬಂದರೆ ಸುಮ್ಮನೆ ಯಾರೆಂದರೆ ಅವರು ವಿಗ್ರಹಗಳನ್ನು ತಂದು ಇಟ್ಟು ಮನೆಯಲ್ಲಿ ಪೂಜಿಸುವಂತಿಲ್ಲ ವಿಗ್ರಹವನ್ನ ಮನೆಗೆ ತರುವಾಗಲೂ ಮನೆಯ ಯಜಮಾನನ ಹೆಬ್ಬೆಟ್ಟಿನ ಗಾತ್ರಕ್ಕು ಕಡಿಮೆ ಗಾತ್ರದ ವಿಗ್ರಹವನ್ನು ಮನೆಗೆ ತಂದು ಪ್ರತಿಷ್ಠಾಪನೆ ಮಾಡಬೇಕು ಹಾಗೆ ನಿಮ್ಮ ಮನೆಯಲ್ಲೇನಾದರೂ ಪೂರ್ವಜರು ಪದ್ದತಿ ಅನುಸಾರವಾಗಿ ಅಂದಿನ ಕಾಲದಿಂದಲೂ ವಿಗ್ರಹಗಳ ಆರಾಧನೆ ಮಾಡುತ್ತಾ ಬಂದಿದ್ದರೆ ಮಾತ್ರ ಮನೆಯಲ್ಲಿ ವಿಗ್ರಹಗಳನ್ನಿಟ್ಟು ಪೂಜೆ ಮಾಡಬೇಕು.

ಮನಸ್ಸಿಗೆ ಇಷ್ಟವಾಯಿತು ಎಂದು ದೊಡ್ಡ ಗಾತ್ರದ ಅಥವಾ ಮಣ್ಣಿನ ವಿಗ್ರಹವನ್ನು ತಂದಿತು ಮನೇಲಿ ಕೂರಿಸಬಾರದು ಇದರಿಂದ ಬಹಳಷ್ಟು ಸಮಸ್ಯೆಗಳನ್ನು ನೀವು ಮುಂದೆ ಎದುರಿಸಬೇಕಾದ ಪರಿಸ್ಥಿತಿ ಕೂಡ ಬರಬಹುದು.ವಿಗ್ರಹಗಳನ್ನು ಸ್ವಚ್ಛ ಮಾಡಿದ ಬಳಿಕ, ಅಥವಾ ನೀವೇನಾದರೂ ಮನೆಯಲ್ಲಿ ದೇವರ ಫೋಟೊ ಇಟ್ಟು ಪೂಜಿಸುತ್ತಿದ್ದೀರಿ ಎಂದರೆ ದೇವರ ಫೋಟೋವನ್ನು ಸ್ವಚ್ಚವಾದ ಬಟ್ಟೆಯೊಂದರಲ್ಲಿ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಗಂಗಾಜಲ ಹಾಕಿ ಫೋಟೋವನ್ನು ಒರೆಸಬೇಕು. ದೇವರ ಫೋಟೋ ಅಥವಾ ದೇವರ ವಿಗ್ರಹಕ್ಕೆ ಬಳಿಕ ಗಂಧ ಮತ್ತು ಹೂವಿನಿಂದ ಅಲಂಕಾರ ಮಾಡಬೇಕು ಈ ವಿಧಾನದಲ್ಲಿ ದೇವರ ಫೋಟೊ ದೇವರ ವಿಗ್ರಹವನ್ನ ಸ್ವಚ್ಛ ಮಾಡಿದ ಮೇಲೆ ಅಲಂಕಾರ ಮಾಡಬೇಕು.

ಮನೆಯಲ್ಲಿ ವಿಗ್ರಹ ಇಟ್ಟಿದ್ದೀರ ಅಂದರೆ ಅದಕ್ಕೆ ಪ್ರತ್ಯೇಕವಾದ ಪೂಜೆ ನಡೆಯಬೇಕು ಪ್ರತಿದಿನ ಕನಿಷ್ಠ ಪಕ್ಷ ಬಾಳೆಹಣ್ಣನ್ನು ಆದರೂ ದೇವರಿಗೆ ನೈವೇದ್ಯವಾಗಿ ಸಮರ್ಪಿಸಬೇಕು ತಪ್ಪದೆ ತಿಳಿದಿರಿ, ಹಾಗೆ ದೇವರ ವಿಗ್ರಹವನ್ನು ನೆಲದ ಮೇಲೆ ಇರಿಸಬಾರದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆಯೇ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ, ದೇವರ ಆರಾಧನೆ ಮಾಡುತ್ತ ಬರಬೇಕು. ಈ ಕೆಲವೊಂದು ಪದ್ಧತಿಗಳನ್ನು ತಿಳಿದು ತಪ್ಪದೆ ಪಾಲಿಸಿ, ಈ ವಿಚಾರಗಳಲ್ಲಿ ನಡೆಯುವ ತಪ್ಪುಗಳನ್ನು ಸರಿಪಡಿಸಿಕೊಳ್ಳಿ.

Exit mobile version