Categories
ಭಕ್ತಿ ಮಾಹಿತಿ ಸಂಗ್ರಹ

ಈ ದೇವಸ್ಥಾನದಲ್ಲಿ ಗಣೇಶನಿಗೆ ಘಂಟೆ ಅರ್ಪಿಸಿದ್ರೆ ಸಕಲ ಕಷ್ಟ ದೂರವಾಗುತ್ತದಂತೆ! ಯಾವ ದೇವಸ್ಥಾನ ಗೊತ್ತ ….

ನಮ್ಮ ಕರ್ನಾಟಕದ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಗಣೇಶನ ದೇವಸ್ಥಾನವಿದೆ ಇಲ್ಲಿಯ ಗಣೇಶನಿಗೆ ಘಂಟೆ ಅರ್ಪಿಸಿದರೆ ಜನರ ಸಮಸ್ಯೆಗಳು ನಿವಾರಣೆ ಆಗುತ್ತದೆ ಎಂಬ ಮಾತಿದೆ.

ಹಾಗೆ ಅದಕ್ಕಾಗಿ ಈ ಗಣೇಶನನ್ನು ಗಂಟೆ ಗಣೇಶ ಎಂದು ಸಹ ಕರೆಯುತ್ತಾರೆ ಆದ್ದರಿಂದ ಭಕ್ತರು ಈ ದೇವಸ್ಥಾನಕ್ಕೆ ಘಂಟೆ ತಂದು ಅರ್ಪಿಸುತ್ತಾರೆ ಇನ್ನು ಈ ದೇವಸ್ಥಾನದ ವಿಶೇಷತೆ ಬಗ್ಗೆ ತಿಳಿದುಕೊಳ್ಳೋಣ .

ಈ ದೇವಾಲಯವು ಯಲ್ಲಾಪುರದಿಂದ 8 ಕಿಲೋಮೀಟರ್ ದೂರದಲ್ಲಿರುವ ಚಂದಗುಳಿ ಎಂಬ ಸ್ಥಳದಲ್ಲಿದೆ ಇಲ್ಲಿ ಶ್ರೀ ಸಿದ್ಧಿ ವಿನಾಯಕನು ನೆಲೆಗೊಂಡಿದ್ದಾರೆ ಆದ್ದರಿಂದ ಈ ದೇವಸ್ಥಾನವನ್ನು ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಎಂದು ಕರೆಯುತ್ತಾರೆ ಹಾಗೂ ಈ ದೇವಸ್ಥಾನವು ಭತ್ತದ ಕಣಿವೆ ಅಡಕೆ ತೋಟ ಮತ್ತು ತೆಂಗಿನ ತೋಟಗಳಿಂದ ಸುತ್ತುವರಿದಿದೆ .

ಇನ್ನು ಭಕ್ತರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ದೇವಸ್ಥಾನಕ್ಕೆ ಘಂಟೆ ತಂದು ಕಟ್ಟುತ್ತಾರೆ ಆದ್ದರಿಂದ ಈ ದೇವಸ್ಥಾನವನ್ನು ಘಂಟೆ ಗಣೇಶ ಎಂದೇ ಪ್ರಸಿದ್ಧಿ ಆಗಿದೆ . ಇನ್ನು ಶ್ರೀ ಸಿದ್ಧಿ ವಿನಾಯಕ ಜನರ ಆರೋಗ್ಯ ಸಮಸ್ಯೆಯನ್ನು ಸಂತಾನ ಸಮಸ್ಯೆಯನ್ನು ಮತ್ತು ನ್ಯಾಯಾಲಯದ ಸಮಸ್ಯೆಗಳನ್ನು ಪರಿಹರಿಸುತ್ತೇನೆ .

ಇನ್ನು ಇಲ್ಲಿ ಬೇಡಿಕೊಂಡು ಹೋದ ಜನರು ಈ ಗಣೇಶನಲ್ಲಿ ಘಂಟೆ ಕೊಡುತ್ತೇನೆ ಎಂದು ಹರಕೆ ಮಾಡಿಕೊಂಡಿರುತ್ತಾರೆ ಆದ್ದರಿಂದ ದೇವಸ್ಥಾನಗಳ ಸುತ್ತಮುತ್ತಲು ಎಲ್ಲಿ ನೋಡಿದರೂ ಘಂಟೆಗಳ ಸಾಲನ್ನು ನಾವು ಕಾಣಬಹುದು ಸ್ನೇಹಿತರೇ . ಇನ್ನು ದೇವಸ್ಥಾನದ ದ್ವಾರದಲ್ಲಿಯೇ ಸಹ ನಾವು ಸಾಲು ಸಾಲು ಘಂಟೆ ಕಾಣಬಹುದು .

ಒಟ್ಟಾರೆ ಈ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಎಲ್ಲಿ ನೋಡಿದರೂ ನಾವು ಘಂಟೆ ಕಾಣಬಹುದಾಗಿದೆ ಇನ್ನು ದೇವಸ್ಥಾನಗಳಲ್ಲಿ ಭಕ್ತರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳಿಕೊಂಡು ದೇವರಲ್ಲಿ ಪ್ರಶ್ನೆ ಕೇಳಿ ಅದಕ್ಕೆ ಉತ್ತರ ಪಡೆಯುವ ಸಂಪ್ರದಾಯವನ್ನು ನಾವು ಇಲ್ಲಿ ಕಾಣಬಹುದಾಗಿದೆ .

ಶ್ರೀ ಸಿದ್ಧಿ ವಿನಾಯಕನ ಮಹಿಮೆಯು ರಾಜ್ಯ ರಾಜ್ಯಗಳಿಗೂ ಸಹ ಗೊತ್ತಿದ್ದೇ ಆದ್ದರಿಂದ ಹೊರ ರಾಜ್ಯಗಳಿಂದಲೂ ಸಹ ವಿನಾಯಕನನ್ನು ದರ್ಶನ ಪಡೆಯಲು ಭಕ್ತಾದಿಗಳು ಬರುತ್ತಾರೆಇನ್ನು ಭಕ್ತಾದಿಗಳು ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಹರಕೆಗಳನ್ನು ಸಹ ಮಾಡಿಕೊಂಡಿರುತ್ತಾರೆ ಸಮಸ್ಯೆಗಳು ಪರಿಹಾರವಾದ ನಂತರ ಅವರು ತಪ್ಪದೇ ಬಂದು ಸೇವೆಯನ್ನು ಸಲ್ಲಿಸಬೇಕು ಎಂಬುದು ಇಲ್ಲಿಯ ವಾಡಿಕೆಯಾಗಿದೆ .

ಇನ್ನು ಜನರು ಹಲವು ಸಮಸ್ಯೆಗಳಿಗಾಗಿ ಹಲವು ಸೇವೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿಕೊಂಡಿರುತ್ತಾರೆ ಹಾಗೂ ದೇವಸ್ಥಾನದ ನಿಯಮದ ಪ್ರಕಾರ ಒಂದೊಂದು ಸಮಸ್ಯೆಗೆ ಒಂದೊಂದು ಸೇವೆಗಳನ್ನು ಸಲ್ಲಿಸಬೇಕೆಂಬ ನಿಯಮಗಳಿವೆ .ಅದೇನೆಂದರೆ ಸಂತಾನ ಭಾಗ್ಯಕ್ಕಾಗಿ ಗಣಪತಿ ಹೋಮವನ್ನು ಅಥವಾ ಬೆಳ್ಳಿಯ ತೊಟ್ಟಿಲನ್ನು ಅರ್ಪಿಸುತ್ತೇನೆ ಎಂಬುದು ಮತ್ತು ಸರಿಯಾಗಿ ಮಾತನಾಡಲು ಸಾಧ್ಯವಾಗದೆ ಇರುವವರು ಘಂಟೆ ಹರಕೆಯನ್ನು ಮಾಡಿಕೊಂಡಿರುತ್ತಾರೆ .

ಇನ್ನು ಉದ್ಯೋಗ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಗಣಪತಿ ಹವನ ಅಥವಾ ಮಾಡಿಸಬೇಕು .ಇದು ಈ ದೇವಸ್ಥಾನದ ಸೇವೆಗಳನ್ನು ಸಲ್ಲಿಸುವ ನಿಯಮಗಳು ಇನ್ನು ಈ ದೇವಸ್ಥಾನಕ್ಕೆ ಹೋಗಲು ಮಾರ್ಗವೆಂದರೆ ಕಾರವಾರ ಹೆದ್ದಾರಿಯಲ್ಲಿರುವ ಇದನ್ನು ಹುಬ್ಬಳ್ಳಿ ಕಾರವಾರದ ಕಡೆಗೆ ಹೋಗುವ ಮಾರ್ಗದಲ್ಲಿ ಹೋಗಬಹುದು .

ಮತ್ತು ಶಿರಸಿ ಹಾಗೂ ಕುಮಟಾ ಮೂಲಕ ಕೂಡ ಯಲ್ಲಾಪುರಕ್ಕೆ ಹೋಗಬಹುದು .ನೀವು ಸಹ ಉತ್ತರ ಕನ್ನಡದ ಭಾಗಕ್ಕೆ ಭೇಟಿ ನೀಡಿದಾಗ ಶ್ರೀ ವರಸಿದ್ಧಿ ವಿನಾಯಕನ ದರ್ಶನವನ್ನು ಪಡೆದು ಧನ್ಯರಾಗಿ ಸ್ನೇಹಿತರೇ ಧನ್ಯವಾದಗಳು.

kannada inspiration story and Kannada Health Tips

gante ganapathi temple chandaguli