Ad
Home ಉಪಯುಕ್ತ ಮಾಹಿತಿ ರುದ್ರಾಕ್ಷಿಯಿಂದ ಈ ಒಂದು ಸಣ್ಣ ಕೆಲಸ ಮಾಡಿ ಮಹಾ ಶಿವನ ಆಶಿರ್ವಾದ ನೇರವಾಗಿ ನಿಮಗೆ ಸಿಗುತ್ತದೆ…

ರುದ್ರಾಕ್ಷಿಯಿಂದ ಈ ಒಂದು ಸಣ್ಣ ಕೆಲಸ ಮಾಡಿ ಮಹಾ ಶಿವನ ಆಶಿರ್ವಾದ ನೇರವಾಗಿ ನಿಮಗೆ ಸಿಗುತ್ತದೆ…

ಶಿವನ ಮೂರನೆಯ ಕಣ್ಣಿನ ಪ್ರತೀಕವಾಗಿರುವ ರುದ್ರಾಕ್ಷಿ, ಇದರ ಬಗ್ಗೆ ನಿಮಗೆಷ್ಟು ಗೊತ್ತು ಹಾಗೂ ರುದ್ರಾಕ್ಷಿ ಎಂದರೇನು ಅದನ್ನು ಧರಿಸುವಾಗ ಏನೆಲ್ಲ ನಿಯಮಗಳನ್ನ ತಿಳಿದಿರಬೇಕಾಗುತ್ತದೆ ತಿಳಿಯೋಣ ಬನ್ನಿ ಈ ಕೆಳಗಿನ ಪುಟದಲ್ಲಿ…ಹೌದು ನಮಸ್ಕಾರ ಪ್ರಿಯ ಸ್ನೇಹಿತರೆ ರುದ್ರಾಕ್ಷಿ ಮಣಿ ಅನ್ನೂ ಎಲ್ಲಾರು ಧರಿಸಬಹುದು ಆದರೆ ಯಾರೇ ಧರಿಸಿದಾಗಲೂ ಕೆಲವೊಂದು ನಿಯಮಗಳನ್ನು ತಿಳಿದು ಅದರ ಅನುಸಾರವಾಗಿ ಈ ನಿಯಮಗಳನ್ನು ಪಾಲಿಸಬೇಕಿರುತ್ತದೆ. ಇಲ್ಲವಾದಲ್ಲಿ ರುದ್ರಾಕ್ಷಿ ಧರಿಸಿದಾಗ ನೀವು ಕೆಲವೊಂದು ತಪ್ಪುಗಳು ಮಾಡಿದ್ದಲ್ಲಿ ಖಂಡಿತವಾಗಿಯೂ ಜೀವನದಲ್ಲಿ ದಾರಿದ್ರ್ಯತನವನ್ನು ಅನುಭವಿಸಬೇಕಾಗುತ್ತದೆ.

ಹೌದು ರುದ್ರಾಕ್ಷಿ ಅಂದರೆ ಅದು ಹಿಂದೂ ಧರ್ಮದ ಒಂದು ಪಾವಿತ್ರತೆಯ ಸಂಕೇತವಾಗಿದೆ. ರುದ್ರನ ಅಕ್ಷಿ ಅಂದರೆ ಶಿವನ ಮೂರನೇ ಕಣ್ಣಿನ ಸ್ವರೂಪವೇ ಈ ರುದ್ರಾಕ್ಷಿ ಆಗಿರುತ್ತದೆ ಯಾರೇ ರುದ್ರಾಕ್ಷಿ ಮಣಿಯನ್ನು ಧರಿಸಿರುವಾಗ ಅದರ ನಿಯಮಗಳನ್ನು ಕೂಡ ತಿಳಿದಿರಬೇಕಾಗುತ್ತದೆ ಇಲ್ಲವಾದಲ್ಲಿ ಹೇಗೆಂದರೆ ಹಾಗೆ ರುದ್ರಾಕ್ಷಿ ಮಣಿಯನ್ನು ಧರಿಸಿದರೆ ಅದರ ಸಂಪೂರ್ಣ ಪ್ರಭಾವ ಆಗಲಿ ಅಥವಾ ಅದರ ಸಂಪೂರ್ಣ ಶಕ್ತಿಯ ಅನುಭವವನ್ನು ನೀವು ಎಂದಿಗೂ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲಾ.

ಹೌದು ಸ್ನೇಹಿತರೆ ಇವತ್ತಿನ ಈ ಲೇಖನಿಯಲ್ಲಿ ರುದ್ರಾಕ್ಷಿ ಎಂಬುದರ ಪೂರ್ಣ ಅರ್ಥವನ್ನು ತಿಳಿದುಕೊಳ್ಳುವುದರ ಜೊತೆಗೆ ರುದ್ರಾಕ್ಷಿಯ ನಿಜಸ್ವರೂಪವನ್ನು ಅಂದರೆ ಅದು ನಿಜವಾದ ರುದ್ರಾಕ್ಷಿಯು ಅಥವಾ ಅಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದನ್ನು ಕೂಡ ತಿಳಿಯೋಣ.ರುದ್ರಾಕ್ಷಿಯ ಅಂದರೆ ಅದು ಪಾವಿತ್ರತೆಯ ಸಂಕೇತವಾಗಿರುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ನೀಡುವ ಅದೊಂದು ವಸ್ತು, ನಮ್ಮ ದೇಹಕ್ಕೆ ಸ್ಪರ್ಶಿಸಿದಾಗ ನಮ್ಮ ಶರೀರದ ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇರಿಸಲು ಸಹಕಾರಿಯಾಗಿರುತ್ತದೆ ಹಾಗೂ ಹಲವು ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡುವುದರೊಂದಿಗೆ ರುದ್ರಾಕ್ಷಿ ನಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಯಾವುದೇ ನಕಾರಾತ್ಮಕ ಶಕ್ತಿಯು ನಮ್ಮಲ್ಲಿ ಪ್ರವೇಶ ಆಗದಿರುವ ಹಾಗೆ ನೋಡಿಕೊಳ್ಳುವುದು ಈ ರುದ್ರಾಕ್ಷಿ ಮಣಿ. ಏಕ ಮುಖಿ ರುದ್ರಾಕ್ಷಿ ಯಿಂದ ಹಿಡಿದು 18 ಮುಖವುಳ್ಳ ರುದ್ರಾಕ್ಷಿ ಮಣಿ ಕೂಡ ಉಂಟು.

ಈ ರುದ್ರಾಕ್ಷಿ ಮಣಿ ಅಲ್ಲಿ ಯಾರು ಯಾವ ರುದ್ರಾಕ್ಷಿ ಮಣಿಯನ್ನು ಬೇಕಾದರೂ ಧರಿಸಬಹುದು ಇಷ್ಟೇ ಮುಖವುಳ್ಳ ರುದ್ರಾಕ್ಷಿಯನು ಧರಿಸಬೇಕು ಎಂಬ ನಿಯಮ ಎಲ್ಲಿಯೂ ಕೂಡ ಹೇಳಿಲ್ಲ ಸ್ವತಃ ಆ ದೇವರು ಕೂಡ ಹೇಳಿಲ್ಲ ರುದ್ರಾಕ್ಷಿ ಅಂದರೆ ಅದು ಶಿವನ ಸ್ವರೂಪವಾಗಿರುತ್ತದೆ ಹೊರೆತು ಇಷ್ಟೇ ಮುಖದ ರುದ್ರಾಕ್ಷಿಯನ್ನು ಧರಿಸಬೇಕು ಎಂದು ಕಡ್ಡಾಯವಿಲ್ಲ.

ಸರಿಯಾದ ರುದ್ರಾಕ್ಷಿಯನ್ನು ಕಂಡುಹಿಡಿಯುವುದು ಹೇಗೆ ;ರುದ್ರಾಕ್ಷಿ ಮಣಿ ಯು ನಿಜವೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಅಂದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಆರ್ಟಿಫಿಷಿಯಲ್ ರುದ್ರಾಕ್ಷಿ ಮಣಿಯ ಮಾರಾಟವಾಗುತ್ತಿದೆ ಆದರೆ ಅದು ನಿಜವಾದ ರುದ್ರಾಕ್ಷಿ ಮಣಿ ಎಂದು ತಿಳಿದುಕೊಳ್ಳುವುದು ಹೇಗೆ ಅಂದರೆ ತುಂಬಾ ಸರಳವಾದ ವಿಧಾನದಿಂದ ತಿಳಿದುಕೊಳ್ಳಬಹುದು ಹೇಗೆ ಅಂದರೆ ರುದ್ರಾಕ್ಷಿ ಮಣಿಯನ್ನು ತೆಗೆದುಕೊಂಡು ಅದನ್ನು ಹಾಲಿನ ಪಾತ್ರೆಯೊಂದಕ್ಕೆ ಹಾಕಿ ಆ ಹಾಲು ಹೊಡೆಯದ ಹಾಗೆ ಇದ್ದರೆ ಅದು ಆರ್ಟಿಫಿಷಿಯಲ್ ರುದ್ರಾಕ್ಷಿ ಮಣಿ.ಮತ್ತು ಆ ಹಾಲು ಒಡೆದರೆ ಅದು ನಿಜವಾದ ರುದ್ರಾಕ್ಷಿಮಣಿ ಎಂದರ್ಥ. ಅಂತಹ ರುದ್ರಾಕ್ಷಿ ಮಣಿಯನ್ನು ಧರಿಸಿದಾಗ ಮಾತ್ರ ನಿಮಗೆ ರುದ್ರಾಕ್ಷಿ ಮನೆಯ ಸಂಪೂರ್ಣ ಶಕ್ತಿಯ ಅನುಭವ ಆಗುವುದು.

ಯಾವುದೇ ಕಾರಣಕ್ಕೂ ರುದ್ರಾಕ್ಷಿ ಮಣಿಯನ್ನು ಧರಿಸಿದ ಮೇಲೆ ಮಾಂಸಾಹಾರ ಪದಾರ್ಥಗಳನ್ನು ಸೇವಿಸಬೇಡಿ ಹೌದು ರುದ್ರಾಕ್ಷಿ ಮಣಿಯನ್ನು ಧರಿಸಿದಾಗ ಮಾಂಸ ಪದಾರ್ಥಗಳನ್ನು ಹಾಗೂ ಧೂಮಪಾನ ಮಾಡುವುದಾಗಲಿ ಮದ್ಯಪಾನ ಮಾಡುವುದಾಗಲಿ ಮಾಡಬಾರದು. ರುದ್ರಾಕ್ಷಿ ಮಣಿಯನ್ನು ಒಮ್ಮೆ ಧರಿಸಿದ ನಂತರ ಅದನ್ನು ಮತ್ತೆ ತೆಗೆದಿಟ್ಟು, ಎಲ್ಲೆಲ್ಲಿಯೋ ಯಾವುದು ಅಂದರೆ ಆ ಸ್ಥಳದಲ್ಲಿ ಇಡಬಾರದು. ರುದ್ರಾಕ್ಷಿ ಮಣಿಯ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಧನ್ಯವಾದ.

Exit mobile version