ನಿಮ್ಮ ಹಿತ್ತಲಲ್ಲಿ ಸಿಗೋ ಐದು ತುಳಸಿ ಎಲೆ ಮನೆಯ ಈ ಜಾಗದಲ್ಲಿ ಇಟ್ಟರೆ ಅದೃಷ್ಟ ಶುರು..

259

5 ತುಳಸಿ ಎಲೆಯನ್ನು ಮನೆಯ ಈ ಜಾಗದಲ್ಲಿ ಇಟ್ಟು ನೋಡಿ ನಿಮ್ಮ ದಾರಿದ್ರ್ಯತನ ದೂರವಾಗಿ ಮನೆಯಲ್ಲಿ ಹೇಗೆ ಧನ ಸಂಪತ್ತು ವೃದ್ಧಿಯಾಗುತ್ತದೆ ಎಂದು, ಹೌದು ನಿಮಗೆ ಕಾಡುತ್ತಿರುವ ಸಮಸ್ಯೆಗಳು ಕೆಟ್ಟ ಕನಸು ಕೆಟ್ಟ ದೃಷ್ಟಿ ನರ ದೃಷ್ಟಿ ಇಂತಹ ಸಮಸ್ಯೆಗಳು ಕೂಡ ಪರಿಹಾರ ಆಗಬೇಕು ಅಂದರೆ ಅತಿ ಬೇಗ ಕಡಿಮೆಯಾಗಬೇಕಾದರೆ ತುಳಸಿ ಮಾತೆಯ ಅನುಗ್ರಹದಿಂದ ಅದು ಸಾಧ್ಯವಾಗುತ್ತದೆ.

ಹೌದು ಸ್ನೇಹಿತರೆ, ಮನೆಯ ಮೂಲೆಯಲ್ಲಿ ನೀವು ತುಳಸಿ ದಳವನ್ನು ಇರಿಸಿ ವಾರದ ನಂತರ ಅದನ್ನು ತೆಗೆದು ಹಾಕುವುದರಿಂದ ಎಂತಹ ಬದಲಾವಣೆ ಅನ್ನೂ ನಿಮ್ಮ ಮನೆಯಲ್ಲಿ ಕಾಣಬಹುದು ಗೊತ್ತಾ? ಮನೆಯಲ್ಲಿ ಸಮಸ್ಯೆಗಳು ಸಹಜ ಈ ಭೂಮಿ ಮೇಲೆ ಸಮಸ್ಯೆಗಳೆ ಇಲ್ಲದಿರುವ ಮನುಷ್ಯ ಇಲ್ಲವೇ ಇಲ್ಲ ನೋಡಿ, ಹಾಗಾಗಿ ಸಮಸ್ಯೆ ಇದೆ ಅಂತ ಹೆದರಿ ಕೂರಬೇಡಿ ಸಮಸ್ಯೆ ಬಂದಾಗ ಎಷ್ಟು ದಿಟ್ಟವಾಗಿರಬೇಕೆಂದರೆ ಸಮಸ್ಯೆಗಳೇ ಓಡಿ ಹೋಗಬೇಕು. ಹೌದು ನಮ್ಮನ್ನೂ ನೋಡಿ ಸಮಸ್ಯೆಗಳ ಹೆದರಿ ಓಡಬೇಕು ಹಾಗಿರಬೇಕು, ಆಗಲೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಕೊಳ್ಳದೆ, ಜೀವನದಲ್ಲಿ ಸದಾ ಸಂತಸದಿಂದ ಇರಲು ಸಾಧ್ಯ.

ಹೌದು ಸ್ನೇಹಿತರೆ ಸಮಸ್ಯೆಗಳೆಲ್ಲ ಮನುಷ್ಯರೆಲ್ಲಾ ಹಾಗೆ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ ಹಾಗಾಗಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿದಾಗ ಹೆದರುವುದೇತಕೆ ಪ್ರತಿಯೊಂದು ಕಷ್ಟಗಳಿಗೂ ಸಮಸ್ಯೆಗಳಿಗೂ ಪರಿಹಾರವಿರುತ್ತದೆ. ಆದರೆ ನಾವು ಪರಿಹಾರ ಮಾಡುವ ಸೂತ್ರವನ್ನು ತಿಳಿದಿರಬೇಕು ಸೂತ್ರ ಯಾವುದೆಂದರೆ ನಮ್ಮನ್ನೆಲ್ಲಾ ಆಡಿಸುವ ಸೂತ್ರಧಾರನೇ ಆಗಿರುತ್ತಾನೆ. ಹೌದು ಸಮಸ್ಯೆ ಕೊಡುವವನೂ ಅವನೆ ಸಮಸ್ಯೆಯನ್ನು ನಾವು ಪಡೆದುಕೊಳ್ಳಬೇಕಾಗಿರುವುದು ಕೂಡ ಅವನಿಂದಲೇ ಆಗಿರುತ್ತದೆ.

ಮನೆಯಲ್ಲಿ ಬಹಳಾನೇ ಸಮಸ್ಯೆ, ಆಗಿದೆ ಅಂದರೆ ಈ ಪರಿಹಾರವನ್ನು ಪಾಲಿಸಿ. ಏನೇ ಮಾಡಿದರೂ ಮನೆಯಲ್ಲಿ ಎದುರಾಗುತ್ತಿರುವಂತಹ ಕಷ್ಟಗಳನ್ನು, ಆಗುತ್ತಿರುವ ನಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ ವ ಹಾಗಾದರೆ ಹೀಗೆ ಮಾಡಿ ಮೊದಲಿಗೆ 5 ತುಳಸಿ ದಳಗಳನ್ನು ತೆಗೆದುಕೊಳ್ಳಿ. ಇದನ್ನು ಯಾವ ವಾರದಂದು ಮಾಡಬೇಕು ಅಂದರೆ ಬುಧವಾರ ಗುರವಾರ ಅಥವಾ ಭಾನುವಾರದ ದಿನದಂದು ಈ ಪರಿಹಾರವನ್ನು ಮಾಡಿ. 5 ತುಳಸಿ ದಳಗಳನ್ನು ನಿಮ್ಮ ಕೈನಲ್ಲಿ ಹಿಡಿದು ದೇವರ ಮುಂದೆ ಪ್ರಾರ್ಥಿಸಿಕೊಂಡು ನಿಮ್ಮ ಕಷ್ಟಗಳನ್ನು ತೀರಿಸು ಅಂತ ಸಂಕಲ್ಪ ಮಾಡಿಕೊಂಡು ,

ಅದನ್ನು ದೇವರ ಕೋಣೆಯ ಮೂಲೆಯೊಂದರಲ್ಲಿ ಇರಿಸಬೇಕು ವಾರದ ಬಳಿಕ ಅದನ್ನು ಯಾರೂ ಓಡಾಡದ ಇರುವ ಜಾಗದಲ್ಲಿ ಅಥವಾ ಯಾವುದಾದರು ಗಿಡದ ಬುಡಕ್ಕೆ ಹಾಕಬೇಕು ಈ ರೀತಿ ಪ್ರತಿವಾರ ಮಾಡಿಕೊಳ್ಳುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರ ಆಗುವವರೆಗೂ ಪಾಲಿಸುವುದರಿಂದ ತುಳಸಿ ದೇವಿಯ ಅನುಗ್ರಹದಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಮತ್ತು ಮನೆಯಲ್ಲಿ ಯಾವುದೇ ತರಹದ ಕೆಟ್ಟ ಶಕ್ತಿ ಇದ್ದರೂ ಅದು ಕೂಡ ಪರಿಹಾರ ಆಗುತ್ತದೆ ಈ ಚಿಕ್ಕ ಪರಿಹಾರದಿಂದ.

ಹಿಂದೂ ಸಂಪ್ರದಾಯವನ್ನು ಪಾಲಿಸುವ ಪ್ರತಿಯೊಬ್ಬರ ಮನೆಯ ಅಂಗಳದಲ್ಲಿ ತುಳಸಿ ಗಿಡ ಇರುತ್ತದೆ ಮತ್ತು ಅದಕ್ಕೆ ಪ್ರತಿದಿನ ಪೂಜೆಯನ್ನೂ ಸಲ್ಲಿಸಲಾಗುತ್ತದೆ. ಆದರೆ ಪೂಜೆ ಮಾಡುವಂತಹ ಗಿಡದಿಂದ ಯಾವುದೇ ಕಾರಣಕ್ಕೂ ಯಾವತ್ತಿಗೂ ತುಳಸಿ ಎಲೆಯನ್ನು ಕೀಳಬಾರದು, ಇಂತಹ ತಂತ್ರವನ್ನು ಮಾಡುವುದಕ್ಕಾಗಿ ಅಥವಾ ಆರೋಗ್ಯ ವಿಚಾರವಾಗಿ ತುಳಸಿ ದಳವನ್ನು ಬಳಸುವಾಗ ಅದನ್ನು ಪೂಜೆ ಮಾಡದಿರುವಂತಹ ತುಳಸಿ ಗಿಡದಿಂದ ಕಿತ್ತು ತಂದು ಅದರಿಂದ ಪರಿಹಾರವನ್ನು ಮಾಡಬೇಕಿರುತ್ತದೆ.

ಈ ರೀತಿ ನೀವು ಕೂಡ ಸುಲಭ ಪರಿಹಾರವನ್ನು ಪಾಲಿಸಿ ಮನೆಯೊಳಗೆ ತುಳಸೀದಳವನ್ನು ದೇವರ ಕೋಣೆಯಲ್ಲಿ ಈ ರೀತಿ ಯಾರಿಗೂ ಕಾಣದಿರುವ ಮೂಲೆಯೊಂದರಲ್ಲಿ ತಂದಿಟ್ಟು, ಅದನ್ನು ಪೂಜೆ ಮಾಡಿ ಬಳಿಕ ಅದನ್ನು ದೇವರ ಕೋಣೆಯಲ್ಲಿ ಇರಿಸಿ ಅದಕ್ಕೆ ಪ್ರತಿದಿನ ಧೂಪ ದೀಪ ಗಳನ್ನು ಧರಿಸುವುದರಿಂದ ಖಂಡಿತವಾಗಿಯೂ ತುಳಸಿ ಮಾತೆಯ ಅನುಗ್ರಹದಿಂದ ವಿಷ್ಣುದೇವನ ಆಶೀರ್ವಾದದಿಂದ ಸಮಸ್ಯೆಗಳೆಲ್ಲ ಪರಿಹಾರವಾಗುತ್ತವೆ ಮತ್ತು ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಮತ್ತೊಂದು ಪರಿಹಾರವೇನೆಂದರೆ ಕೆಟ್ಟ ಕನಸು ಬೀಳುತ್ತ ಇದೆ ನರ ದೃಷ್ಟಿಯಾಗಿದೆ ಅಂದರೆ ಮಲಗುವ ಕೋಣೆಯಲ್ಲಿ ದಿಂಬಿನ ಕೆಳಗೆ 5 ತುಳಸೀದಳ ವನ್ನು ಇಟ್ಟು ಮಲಗಿ ಇಂಥ ಸಮಸ್ಯೆಗಳು ಸಹ ಪರಿಹಾರವಾಗುತ್ತದೆ.