Categories
ಭಕ್ತಿ ಮಾಹಿತಿ ಸಂಗ್ರಹ

ರಾಘವೇಂದ್ರ ಸ್ತೋತ್ರವನ್ನು ನಿತ್ಯ ಪಠಿಸಿ ನಿಮ್ಮ ಕಷ್ಟಗಳು ತೊಲಗಿ ಅದೃಷ್ಟ ಹಿಂಬಾಲಿಸುತ್ತದೆ …

ನಮ್ಮ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳು ಇದ್ದಾರೆ ಹಾಗೂ ಆ ಎಲ್ಲ ದೇವರುಗಳು ಸಹ ಯಾವಾಗಾದರೂ ಏನನ್ನಾದರೂ ಒಂದು ಪವಾಡ ಮಾಡುತ್ತಲೇ ಇರುತ್ತದೆ .ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಂತ್ರಾಲಯದ ಗುರೂಜಿ ಶ್ರೀ ರಾಘವೇಂದ್ರ ಗುರುಗಳು ಯಾರಿಗೆ ತಾನೇ ತಿಳಿದಿಲ್ಲ .

ಇವರು ಪ್ರಸ್ತುತ ಯುಗದಲ್ಲಿ ಬೇಡಿ ಬಂದ ಭಕ್ತಾದಿಗಳಿಗೆ ಕೇಳಿದ ವರವನ್ನು ಕಲ್ಪಿಸಿಕೊಡುವ ಗುರುಗಳು ಶ್ರೀ ರಾಘವೇಂದ್ರ ಸ್ವಾಮಿಗಳು . ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಕಲ್ಪವೃಕ್ಷ ಚಿಂತಾಮಣಿ ಹಾಗೂ ಈ ಯೋಗದ ಪ್ರಹ್ಲಾದ ಎಂದು ಕರೆಯುತ್ತಾರೆ ನೀವೆಲ್ಲರೂ ಹಿರಣ್ಯಕಶಿಪುವಿನ ಕತೆ ಕೇಳಿರುತ್ತೀರಿ .

ಇನ್ನು ದೇವರಿಗೆ ಹೆದರದೆ ಸಕಲವೂ ನಂದೇ ಎಂದು ಮೆರೆಯುತ್ತಿದ್ದ ಹಿರಣ್ಯಕಶಪುವಿಗೆ ಬುದ್ಧಿ ಕಲಿಸಿದ ಪ್ರಹ್ಲಾದನ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ ಹಾಗೂ ಕಲಿಯುಗದಲ್ಲಿಯೂ ಸಹ ಗಲ್ಲಿಗಲ್ಲಿಗಳಲ್ಲಿ ಅಂತಹ ಹಿರಣ್ಯ ಕಪುಗೇದರ ಅವರು ಎಲ್ಲರಿಗೂ ಬುದ್ಧಿ ಕಲಿಸುತ್ತ ಇರುವ ಪ್ರಹ್ಲಾದರು ಅವರೇ ಶ್ರೀ ರಾಘವೇಂದ್ರ ಸ್ವಾಮಿಗಳು .

ಎಷ್ಟೋ ಅಧರ್ಮಿಗಳಿಗೆ ತನ್ನ ಮಹಿಮೆಯನ್ನು ತೋರಿ ಅವರನ್ನು ಬದಲಾಗುವಂತೆ ಮಾಡಿರುವ ರಾಘವೇಂದ್ರ ಸ್ವಾಮಿಗಳ ಮಹಿಮೆ ಅಗಾಧವಾದದ್ದು ಹಾಗೂ ಶ್ರೀ ರಾಘವೇಂದ್ರ ಗುರುಗಳು ಸಕಲರಿಗೂ ಉದ್ಧಾರ ಮಾಡಲೆಂದೇ ಹುಟ್ಟಿ ಬಂದಿರುವವರು ಹಾಗೂ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಅರಿತುಕೊಂಡರೆ ನಿಜಕ್ಕೂ ಅತೇಂದ್ರಿಯ ಶಕ್ತಿ ಒಂದು ಇದೆ ಎಂದು ನಿಮಗೆ ಅರಿವಾಗುತ್ತದೆ ಸ್ನೇಹಿತರೇ .

ಬಿಚ್ಚಾಲೆ ಅಪ್ಪಣ್ಣಾಚಾರ್ಯರು ಸಹ ಶ್ರೀ ರಾಘವೇಂದ್ರ ಸ್ವಾಮಿಗಳ ಸಮಕಾಲೀನರು . ರಾಘವೇಂದ್ರ ಗುರುಗಳು ಮಂತ್ರಾಲಯದಲ್ಲಿ ಯೋಗ ನಿದ್ರೆಗೆ ಜಾರಿದ್ದನ್ನು ಕೇಳಿ ಬಿಚ್ಚಾಲೆ ಯಿಂದ ಅಪ್ಪಣ್ಣಾಚಾರ್ಯರು ರಾಘವೇಂದ್ರ ಸ್ವಾಮಿಗಳನ್ನು ನೋಡಲೆಂದು ಬರುತ್ತಿರುವಾಗ ತುಂಗಭದ್ರಾ ನದಿಯೂ ತುಂಬಿ ಜೋರಾಗಿ ನೀರು ಹರಿಯುತ್ತಿತ್ತು ಆಗ ಅಪ್ಪಣ್ಣಾಚಾರ್ಯರು ಶ್ರೀ ಗುರುಗಳನ್ನು ನೆನೆದು ಅವರ ಮಂತ್ರವನ್ನು ಜಪಿಸಿದರು .

ನಂತರ ಅವರು ಮಂತ್ರಾಲಯಕ್ಕೆ ಧಾವಿಸಿದರು ಆಗಲೇ ಗುರುರಾಘವೇಂದ್ರ ಗಳ ಮೇಲೆ ಕಲ್ಲನ್ನು ಜೋಡಿಸುವ ಸಂದರ್ಭದಲ್ಲಿ ಅಪ್ಪಣ್ಣಾಚಾರ್ಯರು ಶ್ರೀ ಗುರುಗಳ ದರ್ಶನವನ್ನು ಪಡೆದು ಧನ್ಯರಾದರು .ಆಗಿನಿಂದ ಈ ಮಂತ್ರವು ಯಾರೇ ಕಷ್ಟದಲ್ಲಿದ್ದರೂ ಗುರುಗಳ ಮಂತ್ರವನ್ನು ಹೇಳಿದರೆ ಅವರಿಗೆ ದಾರಿಯನ್ನು ಶ್ರೀಗುರು ರಾಘವೇಂದ್ರರು ತೋರುತ್ತಾರೆ .

ಆ ಮಂತ್ರವೂ ಯಾವುದೆಂದರೆ ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥ ಯಚ್ಚ ಭಜನಾ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ . ಈ ರಾಯರ ಮಂತ್ರವನ್ನು ದಿನಕ್ಕೆ ನೂರಾ ಎಂಟು ಬಾರಿ ಜಪಿಸುವುದರಿಂದ ನಿಮಗೆ ಅದ್ಯಾವ ಕಷ್ಟ ಇದ್ದರೂ ಸಹ ರಾಯರು ನಿಮ್ಮನ್ನು ಕೈಹಿಡಿದು ಕಾಪಾಡುತ್ತಾರೆ ಆದ್ದರಿಂದ ಸ್ನೇಹಿತರೇ ನೀವು ಸಹ ಈ ಮಂತ್ರವನ್ನು ಜಪಿಸಿ ರಾಯರ ಕೃಪೆಗೆ ಪಾತ್ರರಾಗಿ ಸ್ನೇಹಿತರೇ .

ಮಂತ್ರಾಲಯದಲ್ಲಿ ಬೇಡಿ ಬಂದ ಭಕ್ತರಿಗೆ ತನ್ನ ಮಹಿಮೆಯನ್ನು ತೋರಿ ಕಾಪಾಡುತ್ತಿರುವ ಶ್ರೀ ಗುರು ರಾಘವೇಂದ್ರ ರಾಯರ ಮಹಿಮೆ ನಿಜಕ್ಕೂ ಅಗಾಧವಾದದ್ದು ನೀವು ಸಹ ಶ್ರೀ ಗುರು ರಾಯರ ಮಹಿಮೆಯನ್ನು ತಿಳಿದು ರಾಯರ ಕೃಪೆಗೆ ಪಾತ್ರರಾಗಿರಿ ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಧನ್ಯವಾದಗಳು .

kannada inspiration story and Kannada Health Tips

if you keep on saying raghavendra swamy mantra life struggle will clear