Categories
ಭಕ್ತಿ ಮಾಹಿತಿ ಸಂಗ್ರಹ

ಚಿಟಿಕೆ ಉಪ್ಪನ್ನ ಮನೆಯ ಈ ಸ್ಥಳದಲ್ಲಿಟ್ಟರೆ ಅದೃಷ್ಟ ಬದಲಾಗಿ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು..!

ಪೂರ್ವಜರು ಏನೇ ಒಂದು ಸಂಪ್ರದಾಯ ಶಾಸ್ತ್ರಗಳನ್ನು ಮಾಡಿದ್ದರೂ ಅದಕ್ಕೆ ವೈಜ್ಞಾನಿಕವಾಗಿಯೂ ಸಹ ಕಾರಣಗಳು ಇರುತ್ತದೆ . ಮೂಢನಂಬಿಕೆ ಎನ್ನುವ ಎಷ್ಟೋ ನಂಬಿಕೆಗಳನ್ನು ವಿಜ್ಞಾನಿಗಳು ವೈಜ್ಞಾನಿಕವಾಗಿಯೂ ಸಹ ಸಾಬೀತುಪಡಿಸಿದ್ದಾರೆ ಇನ್ನು ನೀವೆಲ್ಲರೂ ತಿಳಿದಿರುವ ಹಾಗೆ ಉಪ್ಪಿಗಿಂತ ರುಚಿ ಬೇರೆ ಇಲ್ಲ ತಾಯಿಗಿಂತ ದೇವರಿಲ್ಲ ಎನ್ನುವ ಮಾತನ್ನು ನೀವೆಲ್ಲರೂ ಕೇಳಿರುತ್ತೀರಿ.

ಸ್ನೇಹಿತರೇ ಅಲ್ಲವೆ ಮತ್ತು ಉಪ್ಪು ತಿಂದವ ನೀರು ಕುಡಿಯಲೇಬೇಕು ಎಂಬ ಗಾದೆ ಮಾತನ್ನು ಸಹ ಕೇಳಿರುತ್ತೀರಿ ಈ ಮಾತು ಹಲವಾರು ಅರ್ಥಗಳನ್ನು ನೀಡುತ್ತದೆ ಇದರ ಅರ್ಥ ಏನೆಂದರೆ ಸ್ನೇಹಿತರೇ ತಪ್ಪು ಮಾಡಿದವ ಶಿಕ್ಷೆಯನ್ನು ಒಂದಲ್ಲ ಒಂದು ದಿನ ಅನುಭವಿಸಲೇಬೇಕು ಎಂಬ ಮಾತು ಅಲ್ಲವೇ ಹಾಗೆ ಉಪ್ಪಿನ ಬಗ್ಗೆ ನಾನೇಕೆ ಇಷ್ಟೊಂದು ಹೇಳುತ್ತಿದ್ದೇನೆ ಎಂದು ಯೋಚಿಸುತ್ತಿದ್ದೀರ .

ಉಪ್ಪನ್ನು ನಾವು ದಿನಬಳಕೆಗೆ ಉಪಯೋಗಿಸುತ್ತೇವೆ ಅಡುಗೆಗೆ ಉಪ್ಪಿಲ್ಲದೆ ಅಡುಗೆ ಪೂರ್ಣವೇ ಅಲ್ಲ . ಉಪ್ಪನ್ನು ಹಾಕುವುದರಿಂದ ಊಟದ ರುಚಿ ಹೆಚ್ಚುತ್ತದೆ ಹಾಗೆಯೇ ಉಪ್ಪಿನಿಂದ ಹಲವಾರು ಪ್ರಯೋಜನಗಳು ಇವೆ ಸ್ನೇಹಿತರೇ ಇಂದು ಅದರ ಬಗ್ಗೆ ತಿಳಿಯೋಣ ಬನ್ನಿ .

ಈ ಮುಂಚೆ ನಾನು ಹೇಳಿದ ಹಾಗೆ ನಾವು ಹಲವಾರು ನಂಬಿಕೆಗಳನ್ನು ಅದರ ಕಾರಣ ಗೊತ್ತಿಲ್ಲದೆ ಪಾಲಿಸುತ್ತಾ ಇರುತ್ತೇವೆ ಇನ್ನು ಚಿಟಿಕಿ ಉಪ್ಪನ್ನು ಮನೆ ಮೂಲೆಯಲ್ಲಿ ಇಡುವುದರಿಂದ ಮನೆಗೆ ದರಿದ್ರ ಬರುವುದಿಲ್ಲ ಹಾಗೂ ಮನೆಯ ಯಜಮಾನನಿಗೆ ದುಡ್ಡೇ ದುಡ್ಡು ಎಂದು ನಂಬಿಕೆ ಇದೆ ಇದಕ್ಕೆ ವೈಜ್ಞಾನಿಕ ಕಾರಣವೇನೆಂದರೆ ಚಿಟಿಕೆ ಉಪ್ಪನ್ನು ಮೂಲೆಯಲ್ಲಿ ಅಂದರೆ ಮನೆಯ ಮೂಲೆಯಲ್ಲಿ ಇಡುವುದರಿಂದ ಯಾವ ಕೀಟಾಣುಗಳು ಅಥವಾ ಹುಳ ಹುಟ್ಟಾ ಆಗಲಿ ಮನೆಯೊಳಗೆ ಬಂದು ಸೇರಿಕೊಳ್ಳುವುದಿಲ್ಲ .

ಹಾಗೂ ಚಿಟಕಿ ಉಪ್ಪನ್ನು ಮನೆ ಮೂಲೆಗಳಲ್ಲಿ ಇಡುವುದರಿಂದ ನೆಗೆಟಿವ್ ಎನರ್ಜಿ ಗಳು ಕೂಡ ಮನೆಯ ಒಳಗಡೆ ಸುಳಿಯುವುದಿಲ್ಲ ಇದರಿಂದ ಪಾಸಿಟಿವ್ ಎನರ್ಜಿ ಮನೆಯ ಒಳಗಡೆ ಹರಿದಾಡುತ್ತದೆ ಸ್ನೇಹಿತರೇ ಆ ನಂತರ ಮನೆ ಒರೆಸುವಾಗ ಅದಕ್ಕೆ ನೀರಿಗೆ ಉಪ್ಪನ್ನು ಸೇರಿಸಿ ಮನೆ ಒರೆಸುವುದರಿಂದ ನೆಲದಲ್ಲಿರುವ ಕೀಟಾಣುಗಳು ಹೋಗಿ ಆರೋಗ್ಯದಿಂದ ಇರಬಹುದು ಎಂದು ಅರ್ಥ .

ಇನ್ನು ಒಂದು ಬಾಟಲಿಯಲ್ಲಿ ಉಪ್ಪನ್ನು ಸೇರಿಸಿ ಸ್ನಾನದ ಕೋಣೆಯ ಮೂಲೆಯಲ್ಲಿ ಇಡುವುದರಿಂದಲೂ ಸಹ ಕೀಟಾಣುಗಳು ಬರುವುದಿಲ್ಲ ಎಂದು ಹೇಳುತ್ತಾರೆ ಹಾಗೂ ಬಾಟಲಿಯಲ್ಲಿ ಉಪ್ಪನ್ನು ಸೇರಿಸಿ ಮನೆಯ ಮೂಲೆಯಲ್ಲಿ ಇಡುವುದರಿಂದ ರಾಹು ರಾಹುವಿನ ಕೆಟ್ಟ ದೋಷ ಮನೆಯ ಮೇಲೆ ಬೀಳುವುದಿಲ್ಲ ಎಂದು ಸಹ ಹೇಳಲಾಗುತ್ತದೆ .

ಇನ್ನು ಮನೆಯಲ್ಲಿ ಚಿಂತೆಗಳು ಕಾಡುತ್ತಾ ಇದ್ದರೆ ಒಂದು ಬಿಳಿಯ ಬಟ್ಟೆಯ ತುಂಡನ್ನು ತೆಗೆದುಕೊಂಡು ಅದಕ್ಕೆ ಉಪ್ಪನ್ನು ಸೇರಿಸಿ ಕಟ್ಟಿ ಮನೆಯ ಮುಂದೆ ಬಾಗಿಲಿನ ಮೇಲೆ ಕಟ್ಟಬೇಕು ಇದರ ಕೆಳಗೆ ಓಡಾಡುವುದರಿಂದ ಮನೆಯ ಚಿಂತೆಗಳು ಸಹ ಹೊರಟು ಹೋಗುತ್ತದೆ . ಉಪ್ಪಿನ ಮತ್ತೊಂದು ಉಪಯೋಗ ಏನೆಂದರೆ ವಾರಕ್ಕೊಮ್ಮೆ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಚರ್ಮ ರೋಗ ದೂರವಾಗುತ್ತದೆ .

ರಾತ್ರಿ ಮಲಗುವಾಗ ನೀರಿಗೆ ಉಪ್ಪನ್ನು ಸೇರಿಸಿ ಕೈ ಕಾಲು ತೊಳೆದು ಮಲಗಿದರೆ ನಿದ್ರೆಯೂ ಚೆನ್ನಾಗಿ ಬರುತ್ತದೆ ನಿದ್ರಾಹೀನತೆಯಿಂದ ಬಳಲುತ್ತಿರುವವರು ಇದನ್ನು ಪಾಲಿಸಬಹುದು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಸ್ನೇಹಿತರೇ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಮರೆಯದೆ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದಗಳು .

kannada inspiration story and Kannada Health Tips

if you kept salt in this home place you will became ritch