Categories
ಭಕ್ತಿ ಮಾಹಿತಿ ಸಂಗ್ರಹ

ಶಿವಲಿಂಗದ ಮೇಲೆ ಜಡೆಶ್ವರ ಮೂರ್ತಿ. ಎಲ್ಲಿ ನಡೀತಾ ಇದೆ ಈ ರೀತಿಯ ಒಂದು ವಿಸ್ಮಯ ಗೊತ್ತ !!!

ರಾಮದುರ್ಗದಲ್ಲಿ ಇರುವಂತಹ ಶಿವಲಿಂಗದ ಮೇಲೆ ಇದ್ದಕ್ಕಿದ್ದ ಹಾಗೆ  ಜಡೆ ಈಶ್ವರ ಮೂರ್ತಿ ಆಕಾರದ ಇದ್ದಕ್ಕಿದ್ದ ಹಾಗೆ ಶಿವಲಿಂಗದ ಮೇಲೆ ಮೂಡಿದೆ. ಇದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಈ ಅಚ್ಚರಿಯನ್ನು ನೋಡಲು ಹಲವಾರು ಜನರು ತಂಡೋಪತಂಡವಾಗಿ ಇಲ್ಲಿಗೆ ಬರುತ್ತಿದ್ದಾರೆ. ಹಾಗೆಯೇ ಈ ಅಚ್ಚರಿ ನೋಡಲು ಜನರು ನಾ ಮುಂದು ತಾ ಮುಂದು ಎಂದು ಹೇಳುತ್ತಿದ್ದಾರೆ.

ಇದು ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ, ಇದು ಇರುವುದು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ರಸ್ತೆ ಮಾರ್ಗದಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆ ಮಾಡಿದಂತಹ 78 ಅಡಿ ಶಿವನ ಬೃಹತ್ ಎತ್ತರದ ಮೂರ್ತಿಯ ಕೆಲ ಭಾಗದಲ್ಲಿ ಇರುವಂತಹ ಶಿವನ ಲಿಂಗದ ಮೇಲೆ ಈ ತರದ ಆಕೃತಿ ಕಂಡು ಬಂದಿದೆ.

ಇದನ್ನು ಕಂಡು ಹಿಡಿದವರು ಮಹಾರಾಷ್ಟ್ರದ ಮೂಲದ ಸ್ವಾಮೀಜಿಯವರು, ಈ ಆಚರಣೆ ಕಮಲದಂತಹ ಸ್ವಾಮೀಜಿ ಅಲ್ಲಿನ ಅರ್ಚಕರಿಗೆ ಇದನ್ನು ಹೇಳಿದ್ದಾರೆ. ಈ ತರದ ವಿಸ್ಮಯವನ್ನು ನೋಡಲು ಹಾಗೂ ಇದು ಶಿವನ ಚಮತ್ಕಾರ ಎಂದು ಕೆಲವು ಜನರು ನಂಬಿದ್ದಾರೆ .

ಇದಕ್ಕಾಗಿ ಸಾವಿರಾರು ಜನರು ಅಲ್ಲಿಂದ ಬಂದ ನೋಡಲು ಹವಣಿಸುತ್ತಿದ್ದಾರೆ. ಈ ತರದ ಬೆಳವಣಿಗೆ ನಡೆದ ನಂತರ ಇಲ್ಲಿನ ಶಿವಲಿಂಗಕ್ಕೆ ಹಲವಾರು ತರನಾದ ಪೂಜೆಗಳು  ಜರುಗುತ್ತಲೇ ಇವೆ.

ನೀವು ನಮ್ಮ ದೇಶದಲ್ಲಿ ಅತಿ ಎತ್ತರದ ಶಿವನ ಮೂರ್ತಿಯನ್ನು ನೀವು  ನೋಡಿರಬಹುದು, ಅದೇ ತರನಾಗಿ ಇಲ್ಲಿ ಕೂಡ ಒಂದು ಎತ್ತರವಾದ ಶಿವನ ಮೂರ್ತಿಯನ್ನು ಕಟ್ಟಿಸಿದ್ದಾರೆ, ಈ ಶಿವನ ಮೂರ್ತಿಯ ಕೆಳಗಡೆ ನೀವು ದೇವಸ್ಥಾನ ವನ್ನು ನೋಡಬಹುದು .

ಈ ದೇವಸ್ಥಾನಗಳಿಗೆ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದೂರದಿಂದ  ಈ ಪ್ರದೇಶ ನಿಜವಾಗಲೂ ಮುಡೇಶ್ವರ ಹಾಗೆ ಕಾಣುತ್ತದೆ. ನಿಮ್ಮ ಮನಸ್ಸಿಗೆ ಸ್ವಲ್ಪ ಹೊತ್ತು ಶಾಂತಿ ಬೇಕಾದರೆ ನೀವು ಎಲ್ಲಿ ಹೋಗಿ ಬರಬಹುದು.

ಗೊತ್ತಾಯ್ತಾ ಸ್ನೇಹಿತರೆ ಹೇಗೆ ಪವಾಡಗಳು ನಡೆದಿದೆ ಇಲ್ಲಿ ಎಂದು, ನೀವು ಏನಾದರೂ ಈ ತರದ ಪವಾಡವನ್ನು ನೋಡಲು ಇಷ್ಟ ಪಟ್ಟರೆ ದಯವಿಟ್ಟು ಇಲ್ಲಿ ಹೋಗಿ ನೋಡಬಹುದು  ಶಿವ ಕರುಣೆಗೆ ನೀವು ಪಾತ್ರರಾಗಬಹುದು,

ಇಲ್ಲಿ ನಡೆದಂತಹ ಪವಾಡ ನಿಜಕ್ಕೂ ಅಚ್ಚರಿ ಮೂಡಿಸಿದೆ. ಈ ಪವಾಡವನ್ನು ಯಾವುದೇ ತರ್ಕಕ್ಕೆ ಒಳಪಡಿಸದೆ ಜನರು ಇದು ಶಿವನ ಪವಾಡ ಎಂದು ನಂಬಿದ್ದಾರೆ. ಹಾಗೂ ಇದಕ್ಕಾಗಿ ಹಲವಾರು ತರನಾದ ಪೂಜೆಗಳನ್ನು ಹಾಗೂ ಪುರಸ್ಕಾರಗಳನ್ನು ಮಾಡುತ್ತಿದ್ದಾರೆ.

ಇವೆಲ್ಲವುಗಳ ನಡುವೆ ನಮ್ಮ ಮನದಲ್ಲಿ ಮೂಡುವ ಒಂದು ಪ್ರಶ್ನೆ ಹೀಗೂ ಉಂಟೆ ಎನ್ನುವ ಪ್ರಶ್ನೆಯಾಗಿದೆ . ಈ ಲೇಖನ ನಿಮಗೇನಾದರೂ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯಬೇಡಿ ಏಕೆಂದರೆ ನೀವು ಕೊಡುವಂತಹ ಅಭಿಪ್ರಾಯಗಳು ನಮಗೂ ಉತ್ತೇಜನವನ್ನು ನೀಡುತ್ತವೆ. ಇನ್ನು  ಹಲವಾರು ಒಳ್ಳೆಯ ಒಳ್ಳೆಯ ವಿಷಯಗಳನ್ನು ತೆಗೆದುಕೊಂಡು ಬರುತ್ತೇನೆ ಅಲ್ಲಿವರೆಗೂ ನನ್ನ ನಿರ್ಗಮನ ಇರಲಿ.

kannada inspiration story and Kannada Health Tips

jadeswara shiva linga hair in shiva linga