Sanjay Kumar
3 Min Read

ಹಾಯ್ ಬೆಂಗಳೂರು ಪತ್ರಿಕೆ ಇದರ ಜೊತೆಯಲ್ಲಿ ಕ್ರೈಂ ಡೈರಿ ಎಂದೂ ಮರೆಯಲಾಗದ ಹಾಡು ಎಂಬ ಕಾರ್ಯಕ್ರಮಗಳ ಜನಕರಾಗಿರುವ ಇವರು ಇವತ್ತು ನಮ್ಮ ಜೊತೆ ಇಲ್ಲ ಎಂಬುದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಅಂತ ಹೇಳಿದರೆ ತಪ್ಪಾಗುವುದಿಲ್ಲ ಹೌದು ಈಗಾಗಲೇ ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ತಿಳಿದೇ ಇದೆ. ಹೌದು ಹಾಯ್ ಬೆಂಗಳೂರು ಪತ್ರಿಕೆ ಹೆಸರು ಕೇಳುತ್ತಿದ್ದ ಹಾಗೆ ನಮಗೆ ಇದರ ಸಂಪಾದಕರಾಗಿರುವ ರವಿ ಬೆಳೆಗೆರೆ ಅವರು ನೆನಪಾಗುತ್ತಾರೆ ಇವರು ಪತ್ರಕರ್ತ ಮಾತ್ರ ಅಲ್ಲ ತಮ್ಮ ವೃತ್ತಿಜೀವನವನ್ನು ಮೊದಲು ಶುರು ಮಾಡಿದ್ದು,

ಇತಿಹಾಸ ಉಪನ್ಯಾಸಕರಾಗಿ ಹೌದು ಬಾಲ್ಯದಲ್ಲಿ ಬಹಳ ಕಷ್ಟದಿಂದ ಬೆಳೆದು ಬಂದ ಇವರು ಮೊದಮೊದಲು 120ರೂಪಾಯಿಗೆ ಕೆಲಸವನ್ನ ಮಾಡಿದ್ದಾರೆ ನೀವು ನಂಬಲು ಅಸಾಧ್ಯ ಐವತ್ತು ಕೋಟಿ ಕೋಟಿ ಆಸ್ತಿಯ ಒಡೆಯನಾಗಿರುವ ರವಿ ಬೆಳಗೆರೆ ಅವರು ಅಂದು ಬಹಳ ಕಷ್ಟವನ್ನು ಎದುರಿಸಿ ಮುಂದೆ ಬಂದ ವ್ಯಕ್ತಿ ಆಗಿದ್ದಾರೆ. ನಮ್ಮ ನೆಚ್ಚಿನ ಪತ್ರಕರ್ತರಾಗಿರುವ ರವಿ ಬೆಳೆಗೆರೆ ಅವರು ಪತ್ರಿಕೋದ್ಯಮದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ಹಾಯ್ ಬೆಂಗಳೂರು ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ್ದ ರವಿಬೆಳಗೆರೆ, ಪತ್ರಿಕೆಗಳ ವಿತರಕರಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲಾ ಖ್ಯಾತ ಪತ್ರಕರ್ತ ರವಿಬೆಳಗೆರೆ ಅವರು ಹಾಲಿನ ಭೂತ್ ಗಳಲ್ಲಿ ಸಹ ಕೆಲಸ ಮಾಡಿದ್ದಾರೆ. ಮತ್ತೊಂದು ವಿಚಾರವೇನೆಂದರೆ ರವಿ ಬೆಳಗೆರೆ ಅವರು ಖ್ಯಾತ ಪತ್ರಕರ್ತ ಮಾತ್ರ ಅಲ್ಲ ಇವರು ಸಾಹಿತಿ ಕೂಡ ಹೌದು ಇವರ ಹುಟ್ಟೂರು ಸತ್ಯನಾರಾಯಣ ಪೇಟೆ.

1995 ರಲ್ಲಿ ಬೆಂಗಳೂರಿಗೆ ಬಂದು ಹಲವು ಸ್ನೇಹಿತರ ಸಹಾಯದಿಂದ ` ಹಾಯ್ ಬೆಂಗಳೂರು’ ಎಂಬ ಪತ್ರಿಕೆ ಅನ್ನೂ ಆರಂಭಿಸಿದರು ರವಿ ಬೆಳಗೆರೆ ಅವರು ನಂತರ ಇವರ ಬದುಕಿನ ಧಾಟಿ ಎ ಬದಲಾಯಿತು ಹೌದು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಹಲವಾರು ಮುಖಗಳನ್ನು ತೆರೆದಿಟ್ಟ ರವಿ ಬೆಳಗೆರೆ ಅವರು ತಮ್ಮ ಪತ್ರಿಕೆಯ ಮೂಲಕ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಹಾಗೂ ಈ ಪತ್ರಿಕೆ ಕೆಲವೇ ದಿನಗಳಲ್ಲಿ ಬಹಳಷ್ಟು ಜನಪ್ರಿಯವಾಗುತ್ತದೆ ಹಾಗೂ ಹಲವು ಓದುಗರ ಬಳಗವನ್ನು ಸೃಷ್ಟಿಸಿಕೊಂಡಿತ್ತು ಹಾಯ್ ಬೆಂಗಳೂರು. ರವಿ ಬೆಳಗೆರೆ ಅವರು ದೇವರನ್ನು ಹುಡುಕಿಕೊಂಡು ಹಿಮಾಲಯಕ್ಕೆ ೂ ಸಹ ಹೋಗಿದ್ದೂ ಉಂಟು.

ತಮ್ಮ ಬಾಲ್ಯದಲ್ಲಿ ಬಹಳ ಕಷ್ಟಗಳನ್ನ ಕಂಡ ರವಿ ಬೆಳಗೆರೆ ಅವರು ಬೇರೆ ಮಕ್ಕಳಿಗೆ ಕಷ್ಟವಾಗಬಾರದೆಂದು ಓದಬೇಕೆಂದು ಬೆಂಗಳೂರಿನಲ್ಲಿ ಪ್ರಾರ್ಥನಾ ಎಂಬ ಶಾಲೆಯನ್ನು ಸ್ಥಾಪಿಸಿದರು ನಂತರ ಹಲವು ಮಕ್ಕಳ ಬದುಕಿಗೆ ದಾರಿದೀಪವಾಗುತ್ತಾರೆ. ಯುವ ಮನಸ್ಸುಗಳಿಗಾಗಿ ಓ ಮನಸೇ ಪತ್ರಿಕೆ ಆರಂಭಿಸಿದರು ಬಳಿಕ ಈ ಟಿವಿಯಲ್ಲಿ ಎಂಬ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಡೈರಿ ಎಂಬ ಶೋ ಇವರಿಗೆ ಬಹಳ ಹೆಸರು ತಂದು ಕೊಟ್ಟಿತು ಮತ್ತು ಸುಮಾರು 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ರವಿ ಬೆಳಗೆರೆ ಅವರಿಗೆ ಸಪರೇಟ್ ಫ್ಯಾನ್ ಬೇಸ್ ಕೂಡ ಇದ್ದಾರೆ. ರವಿ ಬೆಳೆಗೆರೆ ಅವರು ಕಿರುತೆರೆಯಲ್ಲಿ ಹಾಗೂ ಕೆಲವೊಂದು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಇವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಂಟೆಸ್ಟೆಂಟ್ ಆಗಿ ಸಹ ಬಂದಿದ್ದರು.

ಇಷ್ಟೆಲ್ಲಾ ಯಶಸ್ಸು ಕಂಡಿರುವ ರವಿ ಬೆಳೆಗೆರೆ ಅವರ ಸಾಂಸಾರಿಕ ಜೀವನ ಕುರಿತು ಹೇಳುವುದಾದರೆ ಇವರಿಗೆ ಇಬ್ಬರು ಹೆಂಡತಿಯರು ಹೌದು ಈ ವಿಚಾರ ಮೊದಮೊದಲು ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ ರವಿ ಬೆಳೆಗೆರೆ ಅವರ ಆಪ್ತರಿಗೆ ಮಾತ್ರ ಈ ಮಾಹಿತಿ ತಿಳಿದಿತ್ತು ಆದರೆ ಒಮ್ಮೆ ಸಂದರ್ಶನವೊಂದರಲ್ಲಿ ತಾವೇ ಖುದ್ದಾಗಿ ಹೇಳಿಕೊಂಡಿದ್ದರೂ ತಮಗೆ 2ಮದುವೆ ಆಗಿದೆ ಎಂದು ನಂತರ ತಮ್ಮ ಮೊದಲ ಪತ್ನಿಗೆ ಮಕ್ಕಳಿಗೆ ಕ್ಷಮೆಯನ್ನೂ ಯಾಚಿಸಿದ್ದರು ರವಿ ಬೆಳಗೆರೆ ಅವರು. ಮೊದಲ ಪತ್ನಿ ಲಲಿತಾ ಬೆಳಗೆರೆ ಹಾಗೂ ಎರಡನೇ ಪತ್ನಿ ಯಶೋಮತಿ ಬೆಳಗೆರೆ. ತಮ್ಮ ಎರಡನೇ ಪತ್ನಿ ಬಗ್ಗೆ ಹೇಳಿಕೊಂಡ ರವಿ ಬೆಳಗೆರೆಯವರು ತಮ್ಮ ದಾಂಪತ್ಯ ಜೀವನಕ್ಕೆ ಹುಟ್ಟಿದ ಮಗ ಹಿಮವಂತನಿಗೆ ನಾನು ಅಪ್ಪ. ಶಾಲಾ ದಾಖಲಾತಿ ಸೇರಿದಂತೆ ಎಲ್ಲ ಕಡೆ ನಾನೇ ಅಪ್ಪ ಎಂದು ನಮೂದಿಸಿರುವುದಾಗಿ ಹೇಳಿಕೊಂಡಿದ್ದರು. ರವಿ ಬೆಳೆಗೆರೆ ಅವರು ತಾನು ದಿನಕ್ಕೆ 1ಲಕ್ಷ ರೂಪಾಯಿ ದುಡಿಯುವುದಾಗಿ ಹೇಳಿಕೊಂಡಿದ್ದು, ಇವರ ಒಟ್ಟು ಆಸ್ತಿ 150ಕೋಟಿ.

ಒಟ್ಟಿನಲ್ಲಿ ತನ್ನ ಬದುಕಿನ ಸತ್ಯವನ್ನು ದಿನಕ್ಕೆ ಒಂದು ಲಕ್ಷ ರೂಪಾಯಿ ಎಲ್ಲರ ಎದುರಲ್ಲಿಯೂ ಬಹಿರಂಗಪಡಿಸಿದ ರವಿ ಬೆಳಗೆರೆ ಅವರ ರಾಜ್ ಲೀಲಾ ವಿನೋದ ಪುಸ್ತಕದ ಮೊದಲ ಪುಟದಲ್ಲಿ ತಮ್ಮ ಬದುಕಿನ ಸತ್ಯವಾದ ಎರಡನೆಯ ಪತ್ನಿ ಹಾಗೂ ಮಗನ ಕುರಿತಾಗಿ ತಿಳಿಸಿದ್ದರು. ಇವರ ಮೊದಲ ಪತ್ನಿಯ ಮಗಳಾಗಿರುವ ಭಾವನಾ ಅವರು ಕನ್ನಡ ಚಿತ್ರನಟ ಆಗಿರುವ ಶ್ರೀನಗರ ಕಿಟ್ಟಿ ಅವರನ್ನು ಮದುವೆಯಾಗಿದ್ದು ರವಿ ಬೆಳಗೆರೆ ಅವರು 2020ನವೆಂಬರ್ 13ರ ಬೆಳಗ್ಗಿನ ಸಮಯದಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ರವಿ ಬೆಳೆಗೆರೆ ಅವರ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.