ಕೊನೆಯ ಬಾರಿ ಅಪ್ಪು ಜೊತೆ ಫೋನ್ ನಲ್ಲಿ ಪತ್ನಿ ಅಶ್ವಿನಿ ಏನೆಲ್ಲಾ ಮಾತಾಡಿದ್ದರು ಗೊತ್ತಾ…ಹೊರಬಿತ್ತು ಸತ್ಯ

111

ಕೊನೆಯದಾಗಿ ಅಪ್ಪು ಸರ್ ಮತ್ತು ಅಶ್ವಿನಿ ಮೇಡಂ ಫೋನ್ ನಲ್ಲಿ ಮಾತನಾಡಿದ್ದು ಏನು ಗೊತ್ತಾ? ಗೊತ್ತಾದ್ರೆ ನಿಜಕ್ಕೂ ನೀವು ಕೂಡ ಇಂತಹ ದಂಪತಿಗಳನ್ನ ಯಾಕೆ ದೂರ ಮಾಡ್ದೆ ದೇವರೇ ಅಂತೀರ…ಹೌದು ಅಪ್ಪು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆ ಆದರು ಸುಮಾರು ಇಪ್ಪತ್ತೆರಡು ವರುಷಗಳ ಕಾಲ ಸಾಂಸಾರಿಕ ಜೀವನ ನಡೆಸಿದ ಈ ದಂಪತಿಗಳು ಎಷ್ಟು ಅನ್ಯೋನ್ಯವಾಗಿ ಇದ್ದರು ,

ಅಂದರೆ ಮನೆಯ ಜವಬ್ದಾರಿ ಪೂರ್ತಿ ಅಶ್ವಿನಿ ಅವರು ವಹಿಸಿಕೊಂಡು, ಮನೆ ಮಕ್ಕಳು ಎರಡನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು ಮತ್ತು ದೊಡ್ಮನೆ ಕಿರಿ ಸೊಸೆ ಆಗಿದ್ದರೂ ದೊಡ್ಮನೆಯ ಶಾಸ್ತ್ರ ಸಂಪ್ರದಾಯ ಎಲ್ಲವನ್ನೂ ಸರಿಯಾಗಿ ಅರಿತು ಚೆನ್ನಾಗಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದರು. ದೊಡ್ಡ ಮನೆಗೆ ಯಾರೇ ಬಂದರೂ ಅದು ದೊಡ್ಡವರೇ ಆಗಲಿ ಚಿಕ್ಕವರಾಗಿರಲಿ ಅವರಿಗೆ ಅತಿಥಿ ಸತ್ಕಾರವನ್ನು ಮಾಡದೆ ಕಳಿಸುತ್ತಿರಲಿಲ್ಲ ಅಶ್ವಿನಿ ಮೇಡಂ.

ಹೀಗೆ ದಂಪತಿಗಳ ವಿಚಾರಕ್ಕೆ ಬಂದರೆ ನೋಡಿದವರು ಈ ದಂಪತಿಗಳ ಹಾಗೆ ಎಲ್ಲರೂ ಸಹ ಇರಬೇಕು ಅಂತ ಅಂದುಕೊಳ್ಳುತ್ತಿದ್ದರು ಹೌದು ನಮ್ಮ ದೊಡ್ಮನೆ ಗೆ ಹೋಗಿ ಬಂದರೆ ದೊಡ್ಮನೆಯ ಸೊಸೆ ಅಶ್ವಿನಿ ಬಹಳ ಚೆನ್ನಾಗಿ ಅತಿಥಿ ಸತ್ಕಾರ ಮಾಡಿದರು ಅಂತಾನೇ ಎಲ್ಲರೂ ಕೂಡ ಮಾತನಾಡಿಕೊಂಡು ಮನೆಯಿಂದ ಹೊರಬರುತ್ತಿದ್ದರಂತೆ. ಹೀಗಿರುವಾಗ ಅಂತಹ ಒಳ್ಳೆಯ ಮನಸ್ಸಿರುವ ಅಶ್ವಿನಿ ಅವರಿಗೆ ದೇವರು ಇಷ್ಟು ಕಷ್ಟ ಕೊಡಬಾರದಿತ್ತು ಅನಿಸುತ್ತೆ ಅಲ್ವಾ.

ಗೆಳೆಯರೇ ದಂಪತಿಗಳು ಅಂದಮೇಲೆ ಅವರ ನಡುವೆ ಸಾವಿರಾರು ವಿಚಾರಗಳು ಚರ್ಚೆಯಾಗುತ್ತಲೇ ಇರುತ್ತದೆ ಹಾಗೆ ನಟ ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಯಾವಾಗಲೂ ಮಾತನಾಡುವಾಗ ಯಾವ ವಿಚಾರದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರಂತೆ ಗೊತ್ತಾ ಹೌದು ಈ ದಂಪತಿಗಳು ಹೊಸ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ ಮಾಡಿಕೊಡಬೇಕೆಂಬ ಕಾರಣಕ್ಕೆ ಸಿನಿಮಾ ರಂಗಕ್ಕೆ ಹೊಸ ಹೊಸ ಪ್ರತಿಭೆಗಳನ್ನು ಪರಿಚಯ ಮಾಡಬೇಕು ಅನ್ನುವ ಕಾರಣಕ್ಕೆ ಪಿಆರ್ ಕೆ ಪ್ರೊಡಕ್ಷನ್ಸ್ ಅನ್ನೂ ನಿರ್ಮಾಣ ಮಾಡಿದ್ದರು ಹಾಗೂ ಅದರ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿಯವರೆ ತೆಗೆದುಕೊಂಡಿದ್ದರು.

ತಮ್ಮ ಪಿಆರ್ ಕೆ ಪ್ರೊಡಕ್ಷನ್ಸ್ ಮೂಲಕ ಈಗಾಗಲೇ ಬಹಳಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಒಳ್ಳೆಯ ಹೆಸರು ಪಡೆದುಕೊಳ್ಳಲು ಸಹಕಾರಿಯಾಗಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರು ಯಾವಾಗಲೂ ಫೋನ್ ನಲ್ಲಿ ಮಾತನಾಡುವಾಗ ಸಿನಿಮಾ ಬಗ್ಗೆಯೇ ಮಾತನಾಡುತ್ತಿದ್ದರಂತೆ. ಹೌದು ಅಪ್ಪು ತಮ್ಮ ಮಡದಿಗೆ ಕಾಲ್ ಮಾಡಿದಾಗ ಅವರ ಸಿನಿಮ ಕುರಿತು ಹೆಚ್ಚಾಗಿ ಮಾತನಾಡುತ್ತಿದ್ದರಂತೆ ಮತ್ತು ಆ ದಿನದ ಮೀಟಿಂಗ್ ಶೆಡ್ಯೂಲ್ ಮತ್ತು ಪೇಮೆಂಟ್ ಇವುಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದ ಈ ದಂಪತಿಗಳು ಯಾವುದೇ ವಿಚಾರಗಳನ್ನಾಗಲಿ ವಿಚಾರಗಳಲ್ಲಾಗಲಿ ಸೀಕ್ರೆಟ್ ಮೆಂಟೇನ್ ಮಾಡುತ್ತಿರಲಿಲ್ಲ.

ಮನೆಯ ಬಗ್ಗೆ ಯಾಕೆ ಈ ದಂಪತಿಗಳು ಚರ್ಚೆ ಮಾಡುತ್ತಿರಲಿಲ್ಲ ಅಂದರೆ ಪುನೀತ್ ರಾಜ್ ಕುಮಾರ್ ಅವರಿಗೆ ಅಶ್ವಿನಿ ಅವರ ಮೇಲೆ ಪೂರ್ಣ ನಂಬಿಕೆ ಇತ್ತು ಹಾಗಾಗಿ ಮನೆಯ ವಿಚಾರ ಬಗ್ಗೆ ಎಲ್ಲವೂ ಸರಿ ಇದ್ದ ಕಾರಣ, ಪುನೀತ್ ರಾಜ್ ಕುಮಾರ್ ಅವರು ಮತ್ತು ಅವರ ಮಡದಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ಪಿಆರ್ ಕೆ ಪ್ರೊಡಕ್ಷನ್ಸ್ ಬಗ್ಗೆ ಮತ್ತು ಮೀಟಿಂಗ್ ಬಗ್ಗೆ ಶೆಡ್ಯೂಲ್ ಗಳ ಬಗ್ಗೆ ಪೇಮೆಂಟ್ ಬಗ್ಗೆ ಸಿನೆಮಾದ ಹಾಡು ಲಿರಿಕ್ಸ್ ಎಲ್ಲದರ ಬಗ್ಗೆ ಹೆಚ್ಚಾಗಿ ಚರ್ಚೆ ನಡೆಸುತ್ತಿದ್ದರು ಹಾಗೆ ಪುನೀತ್ ಅವರು ಕೂಡ ಅಶ್ವಿನಿ ಅವರ ಜೊತೆ ಕೊನೆಯದಾಗಿ ಮಾತನಾಡಿದಾಗಲೂ ಸಿನೆಮಾ ಕುರಿತು ಮಾತನಾಡಿದರು. ನಿಜಕ್ಕೂ ಈ ಅಪರೂಪದ ಜೋಡಿಗೆ ನಮ್ಮದೊಂದು ಸಲಾಂ ಎಲ್ಲಾ ದಂಪತಿಗಳು ಇಂತಹ ದಂಪತಿಗಳನ್ನು ಆದರ್ಶವಾಗಿಟ್ಟುಕೊಂಡರೆ ಎಲ್ಲಾ ಸಂಸಾರವು ಸಂತಸದಿಂದಲೇ ಕೂಡಿರುತ್ತೆ ಏನಂತಿರ ಫ್ರೆಂಡ್ಸ್.

LEAVE A REPLY

Please enter your comment!
Please enter your name here