ಅರ್ಧ ಚಿತ್ರನ್ನ ತಿನ್ನಲು 5 ರೂಪಾಯಿ ಕಾಸಿಲ್ಲದೆ ಕಷ್ಟ ಪಡುತ್ತಿದ್ದ ಹುಡುಗ ಗೋಲ್ಡನ್ ಸ್ಟಾರ್ ಆದ ರೋಚಕ ಕಥೆ

312
Kannada actress Ganesh real story
Kannada actress Ganesh real story

ಜೀವನದಲ್ಲಿ ಪಡಬಾರದ ಕಷ್ಟ ಪಟ್ಟು ಕನ್ನಡ ಸಿನಿಮಾ ರಂಗದಲ್ಲಿ ಟಾಪ್ ಹೀರೋ ಆಗಿ ಬೆಳೆದು ಒಂದೇ ಒಂದು ಸಿನಿಮಾದ ಮೂಲಕ ಸ್ಯಾಂಡಲವುಡ್ ಕಡೆ ಇಡೀ ಭಾರತೀಯ ಚಿತ್ರರಂಗ ಒಮ್ಮೆ ತಿರುಗಿ ನೋಡುವಂತೆ ಮಾಡಿದ ನಾಯಕ ನಟ golden star ಗಣೇಶ್ ಅದು ಎರಡು ಸಾವಿರದ ಆರನೇ ಇಸವಿ ಕನ್ನಡ ಸಿನಿಮಾ ರಂಗಕ್ಕೆ ಮಂಕು ಬಡಿದಂತಾಗಿತ್ತು ಎಲ್ಲೋ ಒಂದೆರಡು ಸಿನಿಮಾಗಳು success ಕಂಡಿದ್ದು ಬಿಟ್ಟರೆ ಇನ್ನು ಯಾವ ಸಿನಿಮಾಗಳು ಹೊಸ trend ಅನ್ನು ಸೃಷ್ಟಿ ಮಾಡಿರಲಿಲ್ಲ ಅದೇ ಸಮಯದಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಒಂದು freshness ಹಾಗೂ ಲವಲವಿಕೆ ತಂದುಕೊಟ್ಟ ಸಿನಿಮಾ ಏನು ಅದು ಮುಂಗಾರು ಮಳೆ ಇಪ್ಪತ್ತೊಂಬತ್ತು December ಎರಡು ಸಾವಿರದ ಆರರಲ್ಲಿ ಈ ಚಿತ್ರ release ಆಯಿತು release ಆದ ಕೆಲವು ದಿನಗಳು theater ಗಳು ಖಾಲಿ ಹೊಡೆಯುತ್ತಿದ್ದವು ನಂತರ ನಿಧಾನವಾಗಿ ಕಾವು ಪಡೆದುಕೊಂಡು ಮುಂಗಾರು ಮಳೆ ಚಿತ್ರ ಯಾರು ಕಾಣದೆ ರೀತಿಯಲ್ಲಿ ಸ್ಯಾಂಡಲವುಡನಲ್ಲಿ ಒಂದು ವಿಭಿನ್ನ ಪ್ರಯತ್ನಕ್ಕೆ ನಾಂದಿ ಹಾಡಿತ್ತು.

ಮುಂಗಾರು ಮಳೆ ಚಿತ್ರ ಆ ಸಿನಿಮಾದ ತಾಂತ್ರಿಕ ವರ್ಗ ಹಾಗೂ ನಟ ಗಣೇಶ್ ಹಾಗೂ ನಟಿ ಪೂಜಾ ಗಾಂಧಿ ಅವರಿಗೆ ಸಿನಿಮಾ ರಂಗದಲ್ಲಿ ಭದ್ರವಾಗಿ ನೆಲೆಯೂರಲು ಒಂದು ದೊಡ್ಡ ವೇದಿಕೆ ಕಲ್ಪಿಸಿ ಕೊಟ್ಟಿತ್ತು ಈ ಸಿನಿಮಾದಿಂದ ನಟ ಗಣೇಶ್ ರಾತ್ರೋ ರಾತ್ರಿ ದೊಡ್ಡ ಸ್ಟಾರ್ ಆಗಿ ಬೆಳೆದರು ಆದರೆ ಇವರ ಈ ದೊಡ್ಡ ಯಶಸ್ಸಿನ ಹಿಂದೆ ಬೆಟ್ಟದಷ್ಟು ಕಷ್ಟವಿದೆ ಎಂಬುವುದರಲ್ಲಿ ಎರಡು ಮಾತಿಲ್ಲ ಗಣೇಶ್ ಅವರು ಜುಲೈ ಎರಡು ಸಾವಿರದ ಒಂಬೈನೂರ ಎಪ್ಪತ್ತೆಂಟರಲ್ಲಿ ಬೆಂಗಳೂರಿನ ಅಡಕಮರನಹಳ್ಳಿಯಲ್ಲಿ ಕಿಶನ್ ಮತ್ತು ಸುಲೋಚನಾ ದಂಪತಿಯ ಮಗನಾಗಿ ಜನಿಸಿದರು ಇವರಿಗೆ ಮಹೇಶ್ ಮತ್ತು ಉಮೇಶ್ ಎನ್ನುವ ಇಬ್ಬರು ಸಹೋದರರು ಇದ್ದಾರೆ ಇವರದು ತುಂಬಾ ಬಡ ಕುಟುಂಬವಾಗಿತ್ತು ಸಣ್ಣ ವಯಸ್ಸಿನಿಂದಲೂ ಗಣೇಶ್ ಅವರಿಗೆ ಸಿನಿಮಾ ಎಂದರೆ ಪಂಚಪ್ರಾಣ ಸಿನಿಮಾದಲ್ಲಿ ತಾನು ಕೂಡ ನಟಿಸಬೇಕು ಎನ್ನುವ ಆಸೆ ತುಂಬಾನೇ ಇತ್ತು ಓದಿನಲ್ಲಿ ಅಷ್ಟೇ ಆಸಕ್ತಿ ಇಲ್ಲದೆ ಇದ್ದರು ಕೂಡ ಗಣೇಶ್ ಅವರು electronics ನಲ್ಲಿ diploma ಪದವಿಯನ್ನು ತೆಗೆದುಕೊಳ್ಳುತ್ತಾರೆ.

ಗಣೇಶ್ ಅವರು PUC ಮಾಡುತ್ತಿದ್ದಾಗ ಕಾಲೇಜಿನ ಕಾರ್ಯಕ್ರಮಗಳಲ್ಲಿ ಏಕ ಪಾತ್ರ ಅಭಿನಯ ಹಾಗೂ ನಾಟಕಗಳನ್ನು ಮಾಡುತ್ತಾ ತಮ್ಮ ಅಭಿನಯದ ಮೇಲಿರುವ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ ತಮ್ಮ ಸ್ನೇಹಿತರ ಜೊತೆ ಮದುವೆ ಸಮಾರಂಭಗಳಲ್ಲಿ ಆರ್ಕೆಸ್ಟ್ರಾಗಳಲ್ಲಿ ಡಾನ್ಸ್ ಅನ್ನೋ ಪ್ರದರ್ಶನ ಮಾಡುತ್ತಿರುತ್ತಾರೆ ಅಭಿನಯದ ಅವಕಾಶಕ್ಕಾಗಿ ಗಣೇಶ ಅವರು ತುಂಬಾ ಕಷ್ಟಪಡುತ್ತಿದ್ದರು ಒಂದು ದಿನ ಅಡಕಮಾರನಹಳ್ಳಿಯಲ್ಲಿ ಜಾತ್ರೆಯ ಸಮಯದಲ್ಲಿ ವೀರ ಮಾರೆಗೋ ಎನ್ನುವವರ ಜೊತೆ ನಾಟಕವನ್ನು ಮಾಡುತ್ತಾರೆ ಗಣೇಶ್ ಅವರು ಗಣೇಶ್ ಅವರು ಮಾಡಿದಂತಹ ಅಭಿನಯಕ್ಕೆ ಮನಸೋತ ವೀರ ಮಾರೇಗೌಡರು ಗಣೇಶ್ ಅವರಿಗೆ ಚಿರಪರಿಚಿತರಾಗುತ್ತಾರೆ ಆ ಸಮಯದಲ್ಲಿ film industryಗೆ ಸೇರಿಕೊಳ್ಳುವುದಕ್ಕೆ ಏನು ಮಾಡಬೇಕು ಯಾರನ್ನು ಸಂಪರ್ಕಿಸಬೇಕು ಎಂದೇ ಗೊತ್ತಿಲ್ಲದ ಗಣೇಶ್ ಅವರು ಒಂದು ದಿನ ಆದರ್ಶ film institute ಗೆ ಒಂದು ಸಿನಿಮಾದಲ್ಲಿ ನಟಿಸಲು ತರಬೇತಿಯನ್ನು ಪಡೆದುಕೊಳ್ಳಬೇಕು ಎಂದು ಹೇಳುತ್ತಾರೆ ಅಲ್ಲಿ ತರಬೇತಿಯನ್ನು ಪಡೆದುಕೊಳ್ಳೋಕೆ ನಾಲ್ಕು ಸಾವಿರದ ಐನೂರು ರೂಪಾಯಿ fees ಅನ್ನು ನೀಡಬೇಕು ಎಂದು ಹೇಳಿದಾಗ ಅಷ್ಟೊಂದು ಹಣವಿಲ್ಲದೆ ಗಣೇಶವು ಸರ್ instalment ನಲ್ಲಿ fees ಅನ್ನು ಕಟ್ಟಬಹುದಾ ಅಂತ ಕೇಳುತ್ತಾರೆ .

ಅದಕ್ಕೆ ಅವರು ಆಗುವುದಿಲ್ಲ ಎಂದು ಹೇಳಿ ಗಣೇಶ್ ಅವರನ್ನು ಅಲ್ಲಿಂದ ವಾಪಾಸ್ ಕಳುಹಿಸುತ್ತಾರೆ ಇದರಿಂದ ಗಣೇಶ್ ಅವರಿಗೆ ತುಂಬಾ ಬೇಜಾರಾಗುತ್ತದೆ ನಂತರ ವೀರ ಮಾರೇಗೌಡರ ಬಳಿ ಹೋದ ಗಣೇಶ್ ಅವರು ಅಣ್ಣ ನಾನು ಸಿನಿಮಾದಲ್ಲಿ ನಟಿಸಬೇಕು ಅದಕ್ಕಾಗಿ ನಾನು ಏನು ಮಾಡಬೇಕು ಅನ್ನೋದೇ ಗೊತ್ತಾಗುತ್ತಿಲ್ಲ ನನ್ನನ್ನು ಎಲ್ಲಾದರೂ ಸೇರಿಸಿ ಅಂತ ಕೇಳಿಕೊಂಡಾಗ ನಾಟಕಗಳಲ್ಲಿ ಗಣೇಶ್ ಅವರ ಅಭಿನಯವನ್ನು ನೋಡಿದಂತಹ ವೀರ ಮಾರಿಗೌಡರು ತಮಗೆ ಗೊತ್ತಿರುವವರ ಸಹಾಯದಿಂದ ಆದರ್ಶ film institute ಗೆ ಸೇರಿಸುತ್ತಾರೆ ಅಭಿನಯದ ಬಗ್ಗೆ ತರಬೇತಿಯನ್ನು ಪಡೆದುಕೊಂಡಂತಹ ಗಣೇಶ್ ಅವರು ನಂತರ ತಮ್ಮ ತರಬೇತಿ ಕೇಂದ್ರದಲ್ಲಿ ಗುರುವಾಗಿದ್ದಂತಹ ಹಿರಿಯ ನಿರ್ದೇಶಕ ಭಗವಾನ್ ಅವರ ಸೀರಿಯಲ್ ನಲ್ಲಿ ಮೊದಲ ಬಾರಿಗೆ ನಟಿಸುತ್ತಾರೆ ಸೀರಿಯಲ್ ಗಳಲ್ಲಿ ನಟಿಸಲು ಅವಕಾಶಕ್ಕಾಗಿ ಅಲೆಯುತ್ತಿದ್ದ ಸಮಯದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಗಣೇಶ್ ಅವರು ಐದು ರೂಪಾಯಿ ಸಿಕ್ಕರೆ ಸಾಕು ಎಂದು ಅರ್ಥ ಚಿತ್ರನ್ನ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು ಇನ್ನು ಆ ಸಮಯದಲ್ಲಿ ಗಣೇಶ್ ಅವರ ಸ್ನೇಹಿತ ನಟ ರವಿಶಂಕರ್ ಗೌಡ ಅವರು ಹಣ ಸಹಾಯ ಮಾಡುತಿದ್ದರು ಅಷ್ಟೋತ್ತಿಗಾಗಲೇ ರವಿಶಂಕರ್ ಗೌಡ ಅವರು ಗಾ ಗುರುತಿಸಿಕೊಂಡಿದ್ದರು ಅನೇಕ ಶೋಗಳಲ್ಲಿ ಹಾಗು ಆರ್ಕೆಸ್ಟ್ರಾಗಳಲ್ಲಿ ಭಾಗವಹಿಸುತ್ತಿದ್ದರು ತಕ್ಕ ಮೆಟ್ಟಿನ ಸಂಪಾದನೆ ರವಿಶಂಕರ್ ಗೌಡ ಅವರಿಗಿತ್ತು .

ಹಣ ಬಂದ ಕೂಡಲೇ ರವಿಶಂಕರ್ ಅವರು ಗಣೇಶ್ ಅವರಿಗೆ ಊಟ ಹಾಗೂ ಖರ್ಚಿಗೆ ಹಣ ನೀಡುತ್ತಿದ್ದರು ಹೀಗೆ ಅತ್ತಿಗೆ ಎನ್ನುವ ಸೀರಿಯಲ್ನ ಮೂಲಕ ಕಿರುತೆರೆಗೆ entry ಕೊಡುತ್ತಾರೆ ನಂತರ ಯದ್ವಾ ತದ್ವಾ ಸಮಾಗಮ ವಠಾರ ಪಾಪ್ ಪಾಂಡು ಈಶ್ವರ ಎನ್ನುವ ಸೀರಿಯಲ್ ಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಬಣ್ಣ ಹಚ್ಚಿದಂತಹ ಗಣೇಶ್ ಅವರಿಗೆ ಉದಯ್ ಟಿವಿಯ ಕಾಮಿಡಿ ಟೈಮ್ ಶೋನಲ್ಲಿ ಅವಕಾಶ ಸಿಗುತ್ತದೆ ಆದರೆ ಗಣೇಶ್ ಅವರಿಗೆ ಕಾಮಿಡಿ ಕೆಲಸ ಮಾಡುವುದಕ್ಕೆ ಇಷ್ಟ ಇರುವುದಿಲ್ಲ ಆದರೂ ಸಹ ಗಣೇಶ್ ಅವರು ಕಾಮಿಡಿ ಟೈಮ್ ಶೋ ಆಡಿಷನ್ ನಲ್ಲಿ ಭಾಗವಹಿಸಿ ಆಯ್ಕೆ ಆಗುತ್ತಾರೆ ಈ ಶೋ ಮಾಡುವುದಕ್ಕೆ ಗಣೇಶ್ ಅವರಿಗೆ ಒಂದು ಎಪಿಸೋಡ್ ಗೆ ಸಾವಿರದ ಐನೂರು ಐವತ್ತು ರೂಪಾಯಿಗಳನ್ನು ನೀಡಲಾಗುತ್ತದೆ ಹೀಗೆ ಕಾಮಿಡಿ ಟೈಮ್ ಶೋ ಆರಂಭಿಸಿದ ಗಣೇಶ್ ಅವರ ಕಾಮಿಡಿ ಶೋ ತುಂಬಾ ಫೇಮಸ್ ಆಗುತ್ತದೆ ಒಂದು ಸಾವಿರ ಎಪಿಸೋಡ್ ಗಳನ್ನು ಪೂರೈಸುತ್ತದೆ ಗಣೇಶ್ ಅವರು ಈ ಶೋ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾಗಿ ಫುಲ್ ಫೇಮಸ್ ಆಗುತ್ತಾರೆ ಗಣೇಶ್ ಅವರು ಕಾಮಿಡಿ ಟೈಮ್ ಶೋ ಮಾಡುತ್ತಿದ್ದ ಸಮಯದಲ್ಲಿ ಬಿ ಸುರೇಶ್ ಅವರ ಜೊತೆ ಅಸಿಸ್ಟೆಂಟ್ ಡೈರೆ ಆಗಿ ಕೆಲಸ ಮಾಡುತ್ತಾರೆ ಆಗ ಆರೂರು ಜಗ್ಗಿ ಅವರ ಮಾತಿನಿಂದ B ಸುರೇಶ್ ಅವರ ನಿರ್ದೇಶನದ ತಪೋರಿ ಸಿನಿಮಾದಲ್ಲಿ ಖಳನಾಯಕನ ಚಿಕ್ಕ ಪಾತ್ರದಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೆ.

ನಂತರ ಹೀಗೆ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಗಣೇಶ್ ಅವರು ಅನೇಕ ಸಿನಿಮಾಗಳಲ್ಲಿ ನಾಯಕ ನಟರ ಸ್ನೇಹಿತರ ಪಾತ್ರಗಳಲ್ಲಿ ನಟಿಸುತ್ತಾರೆ ಹೀಗೆ ತುಂಟ ಅಮೃತಧಾರೆ game ಅಬ್ಬಬ್ಬಾ ಎಂತಹ ಹುಡುಗ ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಹೀಗೆ ಕಾಮಿಡಿ ಟೈಮ್ ಶೋ ಮೂಲಕ famous ಆದಂತಹ ಗಣೇಶ್ ಅವರು ಮಂಗಳೂರಿನಲ್ಲಿ ಕಾರ್ಯಕ್ರಮವನ್ನ ಹೋಗಿರುತ್ತಾರೆ ಆ ಕಾರ್ಯಕ್ರಮಕ್ಕೆ ನಿರ್ಮಾಪಕರಾದ ಜಗದೀಶ್ ಅವರು ಕೂಡ ಬಂದಿರುತ್ತಾರೆ ಹೀಗೆ ಇಬ್ಬರ ಮಧ್ಯೆ ಪರಿಚಯವಾಗಿ ನಂತರ ಜಗದೀಶ್ ಅವರು ಗಣೇಶ್ ಅವರಿಗೆ ನೀವು ಹೀರೋ ಆಗಿ ಸಿನಿಮಾ ಮಾಡ್ರಿ ಎಂದು ಹೇಳುತ್ತಾರೆ ಅವರ ಮಾತಿನಿಂದ ಶಾಕ್ ಆದ ಗಣೇಶ್ ಅವರು ಸರ್ ಮಾಡಬೇಕು ಆದರೆ ನನ್ನನ್ನು ಹಾಕಿಕೊಂಡು ಯಾರು ಸಿನಿಮಾ ಮಾಡುತ್ತಾರೆ ಅಂತ ಹೇಳುತ್ತಾರೆ ಆಗ ಜಗದೀಶ್ ಅವರು ಎಷ್ಟು ಆಗುತ್ತೆ ಖರ್ಚು ಎಂದಾಗ ಗಣೇಶ್ ಅವರು ಎರಡು ಕೋಟಿ ಎಂದಾಗ ಓಕೆ ಮಾಡೋಣ ಎಂದು ಒಪ್ಪಿಕೊಳ್ಳುತ್ತಾರೆ ಜಗದೀಶ್ ಅವರು ನಂತರ ಶ್ರೀಧರ್ ಎನ್ನುವ ನಿರ್ದೇಶಕರ ಸಹಾಯದಿಂದ ಸ್ಕ್ರಿಪ್ಟ್ ರೆಡಿ ಆಗುತ್ತೆ ಆ ಸಮಯದಲ್ಲಿ ಕಾಮಿಡಿ ಟೀಮ್ ಗಣೇಶ್ ಅವರನ್ನು ಹಾಕೊಂಡು ಸಿನಿಮಾ ಮಾಡ್ತಾ ಇರೋದಕ್ಕೆ ತುಂಬಾ ಜನರು ಅವನನ್ನು ಹಾಕಿಕೊಂಡು ಸಿನಿಮಾ ಮಾಡುತ್ತೀರಾ ಎಂದು ತುಂಬಾ ಅವಮಾನ ಮಾಡುತ್ತಾರೆ ಆದರೂ ಕೂಡ ಯಾರ ಮಾತಿಗೂ ನಿರ್ದೇಶಕರು ಹಾಗೂ ನಿರ್ಮಾಪಕರು ತಲೆ ಕೆಡಿಸಿಕೊಳ್ಳುವುದಿಲ್ಲ .

ಹೀಗೆ ಚೆಲ್ಲಾಟ ಏನು ಸಿನಿಮಾದ ಮುಹೂರ್ತವನ್ನು ಮುಗಿಸುತ್ತಾರೆ ಆದರೆ ನಂತರ ಗಣೇಶ್ ಅವರಿಗೆ ಮತ್ತೊಂದು ಸಂಕಷ್ಟ ಉಂಟಾಗಿರುತ್ತದೆ ಅದೇನೆಂದರೆ ಸಿನಿಮಾಗೆ ಹೀರೋಯಿನ್ನ ಕೊರತೆ ಹೌದು ಸಿನಿಮಾದ ಕಥೆಯನ್ನು ಕೇಳಿ ಇಷ್ಟಪಟ್ಟಂತಹ ತುಂಬಾ ಜನ ಹೀರೋಯಿನ್ನ ಹೀರೋ ಯಾರು ಅಂತ ಹಿಂದೆ ಸರಿಯುತ್ತಾರೆ ಆದರೆ ಕೊನೆ ಮುಂಬೈನಲ್ಲಿದ್ದ ಕನ್ನಡದ ಹುಡುಗಿ ರೇಖಾ ಅವರು ಸಿನಿಮಾದ ಕಥೆ ಕೇಳಿ ಚೆಲ್ಲಾಟ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಕೊಳ್ಳುತ್ತಾರೆ ಹೀಗೆ ನಾಯಕ ನಟರಾಗಿ ಮೊದಲ ಬಾರಿಗೆ ಅಭಿನಯಿಸಿದ ಗಣೇಶ್ ಅವರ ಸಿನಿಮಾ ನೂರು ದಿನಗಳ ಕಾಲ ಭರ್ಜರಿ ಪ್ರದರ್ಶನವನ್ನು ಕಂಡು ದಾಖಲೆ ಬರೆಯುತ್ತದೆ ಇದಾದ ನಂತರ ಮತ್ತೆ ಕಾಮಿಡಿ ಟೈಮನಲ್ಲಿ busy ಆದ ಗಣೇಶ್ ಅವರು ತಮ್ಮ ಸ್ನೇಹಿತ ಪ್ರೀತಮ್ ಗುಬ್ಬಿ ಅವರ ಮನೆಗೆ ಹೋಗುತ್ತಾರೆ ಆಗ ಪ್ರೀತಮ್ ಅವರು ಮುಂಗಾರು ಮಳೆ ಸಿನಿಮಾದ ಕಥೆಯನ್ನು ಗಣೇಶ್ ಅವರಿಗೆ ಹೇಳಿ ಗಣೇಶ್ ಕಥೆ ಚೆನ್ನಾಗಿದೆಯಾ ನಾನು ಯೋಗರಾಜ್ ಭಟ್ರು ಮುಂಗಾರು ಮಳೆ ಸಿನಿಮಾ ಮಾಡುತ್ತಿದ್ದೇವೆ.

ಅಂತ ಹೇಳುತ್ತಾರೆ ಗಣೇಶ್ ಅವರು ಈ ಸಿನೆಮಾಗೆ ಹೀರೋ ಯಾರು ಅಂತ ಕೇಳಿದಾಗ heroine confirm ಆಗಿಲ್ಲ ಅನ್ನೋದು ಗಣೇಶ್ ಅವರಿಗೆ ಗೊತ್ತಾಗುತ್ತೆ ಆಗ ಗಣೇಶ್ ಅವರು ತಕ್ಷಣವೇ ಯೋಗರಾಜ್ ಭಟ್ ಅವರಿಗೆ call ಮಾಡಿ ನಾನು ಈ ಸಿನಿಮಾಗೆ ಹೀರೋ ಆಗಿ act ಮಾಡುತ್ತೇನೆ ಅಂತ ಹೇಳುತ್ತಾರೆ ಇದಕ್ಕೆ ಯೋಗರಾಜ್ ಭಟ್ಟರು ಕೂಡ okay ಅಂತ ಹೇಳುತ್ತಾರೆ ಗಣೇಶ್ ಹಾಗೂ ಯೋಗರಾಜ್ ಭಟ್ ಅವರು ಮೊದಲಿನಿಂದಲೂ ತುಂಬಾ ಒಳ್ಳೆಯ ಸ್ನೇಹಿತರಾಗಿರುತ್ತಾರೆ ಇದರಿಂದಲೇ ಮುಂಗಾರು ಮಳೆ ಸಿನಿಮಾಗೆ ಹೀರೋ ಆಗಿ ಗಣೇಶ್ ಅವರು ಆಯ್ಕೆಯಾಗುತ್ತಾರೆ ನಂತರ ಮುಂಗಾರು ಮಳೆ ಸಿನಿಮಾ ಮಾಡೋಕೆ ಯಾವೊಬ್ಬ ನಿರ್ಮಾಪಕರು ಕೂಡ ಮುಂದೆ ಬರುವುದಿಲ್ಲ ಇದಕ್ಕೆ ಕಾರಣ ಕಾಮಿಡಿ ಟೈಮ್ ಗಣೇಶ್ ಹೀರೋ ಎಂದು ಕೊನೆಗೆ ಗಣೇಶ್ ಅವರು ವೀರ ಮಾರೆಗೌಡರ ಸಹಾಯದಿಂದ ಮುಂಗಾರು ಮಳೆ ಸಿನಿಮಾಗೆ ನಿರ್ಮಾಪಕರನ್ನು ಒಪ್ಪಿಸುತ್ತಾರೆ ನಂತರ ಸಿನಿಮಾ ಶೂಟಿಂಗ್ ಪ್ರಾರಂಭ ಮಾಡೋಕೆ ಹೀರೋಯಿನ್ನನ್ನು ಹುಡುಕಲಾಗುತ್ತದೆ ಆದರೆ ಗಣೇಶ್ ಅವರ ಜೊತೆ ನಟಿಸೋಕೆ ಕನ್ನಡದ ಯಾವ ಹೀರೋಯಿನ್ಗಳು ಕೂಡ ಮುಂದೆ ಬರುವುದಿಲ್ಲ ಇದರಿಂದ ಯೋಗರಾಜ್ ಭಟ್ ಅವರು ಉತ್ತರ ಭಾರತದಿಂದ ಪೂಜಾ ಗಾಂಧಿ ಎಂಬ ನಟಿಯನ್ನು ಮುಂಗಾರು ಮಳೆ ಸಿನಿಮಾಗೆ ನಾಯಕಿಯಾಗಿ ಪಾತ್ರ ಮಾಡಲು ಕರೆತರುತ್ತಾರೆ.

ಕೊನೆಗು ಮುಂಗಾರು ಮಳೆ ಸಿನಿಮಾದ shooting ಪೂರ್ಣಗೊಂಡು ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತದೆ ಸಿನಿಮಾ ಒಂದು ವರ್ಷಗಳ ಕಾಲ ಯಶಸ್ವಿ ಪ್ರದರ್ಶನ ಕಂಡು ಭಾರತೀಯ ಚಿತ್ರರಂಗದಲ್ಲಿಯೇ ಒಂದು ಅದ್ಭುತವಾದ ದಾಖಲೆ ನಿರ್ಮಿಸುತ್ತದೆ ಈ ಸಿನಿಮಾದಿಂದ ಗಣೇಶ್ ಅವರು golden star ಗಣೇಶ್ ಆದರೂ ನಂತರ ಎರಡು ಸಾವಿರದ ಏಳರಲ್ಲಿ ಹುಡುಗಾಟ ಸಿನಿಮಾ ಮಾಡಿದರು ಮತ್ತೆ ಅದೇ ವರ್ಷ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ ಗಣೇಶ್ ಅವರಿಗೆ ಈ ಚಿತ್ರವೂ ಕೂಡ ತುಂಬಾ ಯಶಸ್ಸನ್ನು ತಂದು ಕೊಟ್ಟಿತ್ತು ಹೀಗೆ ಗಣೇಶ್ ಅವರಿಗೆ ಸಿನಿಮಾ ರಂಗದಲ್ಲಿ ತುಂಬಾ ಬೇಡಿಕೆ ಆಯಿತು ಕೃಷ್ಣ ಗಾಳಿಪಟ ಅರಮನೆ ಬೊಂಬಾಟ್ ಸಂಗಮ ಸರ್ಕಸ್ ಉಲ್ಲಾಸ ಉತ್ಸಾಹ ಮಳೆಯಲ್ಲಿ ಜೊತೆಯಲ್ಲಿ ಹೀಗೆ ಗಣೇಶ ಅವರು ನಾಯಕ ನಟ ನಟರಾಗಿ ನಟಿಸಿದ್ದಾರೆ ಗಣೇಶ್ ಹಾಗೂ ಶಿಲ್ಪಿ ಅವರು ತುಂಬಾ ಅನ್ಯೋನ್ಯವಾಗಿದ್ದು ,

ಇವರಿಗೆ ಚಾರಿತ್ರ್ಯ ಹಾಗು ವಿಹಾನ್ ಎನ್ನುವ ಮಕ್ಕಳಿದ್ದಾರೆ ಗಣೇಶ್ ಹಾಗೂ ಶಿಲ್ಪಿ ಗಣೇಶ್ ಅವರು ಸಾಮಾಜಿಕ ಕಾರ್ಯಗಳ ಮೂಲಕ ಅನೇಕ ಜನರ ಬದುಕಿಗೆ ದಾರಿ ದೀಪವಾಗಿದ್ದಾರೆ ಅನೇಕ ಮಠಗಳಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಹಾಗೂ ಅನಾಥ ಮಕ್ಕಳಿಗೆ ಅನ್ನದಾನ ವಿದ್ಯಾದಾನ ಮಾಡುವುದರ ಮೂಲಕ ಗಣೇಶ್ ಅವರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಆದರೆ ತಾವು ಮಾಡುವ ಇಂತಹ ಒಳ್ಳೆಯ ಕೆಲಸಗಳನ್ನು ಗಣೇಶ್ ಅವರು ಎಲ್ಲೂ ಕೂಡ ಬಹಿರಂಗಪಡಿಸುವುದಿಲ್ಲ ಇದು ಗಣೇಶ್ ಅವರ ಉತ್ತಮ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಸ್ನೇಹಿತರೆ ಇದಾಗಿತ್ತು ನಟ golden star ಗಣೇಶ್ ಅವರ ಸಾಧನೆಯ ಹೆಜ್ಜೆ ಗುರುತುಗಳ ಕಿರು ಪರಿಚಯ ವೀಡಿಯೋ ಇಷ್ಟವಾಗಿದ್ದರೆ ಲೈಕ್ ಮಾಡಿ ಹಾಗೆ ಶೇರ್ ಮಾಡಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ಸ್ ಅಲ್ಲಿ ತಿಳಿಸಿ ಧನ್ಯವಾದಗಳು

WhatsApp Channel Join Now
Telegram Channel Join Now