ಗಾರೆ ಕೆಲಸ ಮಾಡುತಿದ್ದ “ಚಿಕ್ಕಣ್ಣ ಜೀವನದ ಕಣ್ಣೀರಿನ ಕಥೆ ಕೇಳಿದ್ರೆ ಎಂತ ಕಲ್ಲು ಮನಸಿನವರಿಗಾದ್ರು ಕಣ್ಣಲ್ಲಿ ನೀರು ಬರುತ್ತೆ …

100
He used to work with stucco
He used to work with stucco "Hearing the story of the tears of a small life brings tears to the eyes of those who have a stone heart...

ತುಂಬಾ ಸುಲಭ ನಗಿಸುವುದು ತುಂಬಾ ಕಷ್ಟ ಆದರೆ ಈ ವ್ಯಕ್ತಿಯನ್ನು ನೋಡಿದರೆ ನಗದೇ ಇರುವ ಜನನೇ ಇಲ್ಲ ಈಗಾಗಲೇ ಅವರು ಯಾರು ಅನ್ನುವುದು ನಿಮಗೆ ಗೊತ್ತಾಗಿರಬೇಕು ಅಲ್ವಾ ಅವರು ಬೇರೆ ಯಾರು ಅಲ್ಲ ಒಂದು ಚಿಕ್ಕ ಹಳ್ಳಿಯಿಂದ ಚಿತ್ರರಂಗಕ್ಕೆ ಬಂದು ಚಿಕ್ಕ ಚಿಕ್ಕ ಕನಸನ್ನು ಕಾಣುತ್ತ ಇಂದು ತಮಗೆ ಸಿಕ್ಕ ಚಿಕ್ಕ ಚಿಕ್ಕ ಅವಕಾಶಗಳನ್ನೇ ಚೊಕ್ಕವಾಗಿ ಉಪಯೋಗಿಸಿಕೊಳ್ಳುತ್ತಾ ಬೆಳ್ಳಿ ಪರದೆಯ ಮೇಲೆ ಬೆಳ್ಳಿ ಚುಕ್ಕಿತರ ರಾರಾಜಿಸುತ್ತಿರುವ ಹಳ್ಳಿಯ ಸೊಗಡಿನ ಯುವ ಹಾಸ್ಯ ನಟ ನಮ್ಮ ನಿಮ್ಮೆಲ್ಲರ ಪ್ರೀತಿಯ ಶ್ರೀ ಚಿಕ್ಕಣ್ಣ ಚಿಕ್ಕಣ್ಣನವರು,

ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ಇದರ ಹಿಂದೆ ಹಲವಾರು ಕಹಿ ಘಟನೆಗಳಿವೆ ಹೂ ಮಾರುತ್ತಿದ್ದ ಬಜ್ಜಿ ಬೋಂಡಾ ಮಾಡಿಕೊಂಡು ಮಾರುತ್ತಿದ್ದ ಕಡಲೆ ಕಾಯಿಯನ್ನು ಮಾರುತ್ತಿದ್ದ ಹಾಗು ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣನವರು ಈ ಸ್ಥಾನಕ್ಕೆ ಬರಲು ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದನ್ನು ನೋಡೋಣ ಬನ್ನಿ ಈ ವಿಡಿಯೋನ ದಯವಿಟ್ಟು ಒಮ್ಮೆ ಪೂರ್ತಿಯಾಗಿ ನೋಡಿ ಚಿಕ್ಕಣ್ಣನವರು ಹುಟ್ಟಿದ್ದು ಇಪ್ಪತ್ತೆರಡು ಜೂನ್ ಸಾವಿರದ ಒಂಬೈನೂರ ಎಂಬತ್ನಾಲ್ಕರಲ್ಲಿ ಮೈಸೂರಿನ ಬಲ್ಲಹಳ್ಳಿಯಲ್ಲಿ ಇವರ ತಂದೆ ಬೈರೇಗೌಡ ತಾಯಿ ನಿಂಗಮ್ಮ ಈ ದಂಪತಿಗಳ ಆರು ಜನ ಮಕ್ಕಳಲ್ಲಿ ಐದನೆಯವರು ಚಿಕ್ಕಣ್ಣ ಕಡು ಬಡ ಕುಟುಂಬದಲ್ಲಿ ಜನಿಸಿದ,

ಇವರು ಬಾಲ್ಯದಿಂದಲೂ ಕಷ್ಟಗಳನ್ನ ಎದುರಿಸುತ್ತ ಬೆಳೆಯುತ್ತಾರೆ ತಮ್ಮ ಊರಿನಲ್ಲಿ ವಿದ್ಯಾಭ್ಯಾಸ ಮಾಡುವಾಗಲೂ ಸಹ ವಿದ್ಯಾಭ್ಯಾಸ ಮತ್ತು ಮನೆಯ ಬಡತನದಿಂದ ಗಾರೆ ಕೆಲಸವನ್ನು ರಜಾದಿನಗಳಲ್ಲಿ ಮಾಡುತ್ತಾರೆ ತಾವು SSLC ಓದುವಾಗ ತಮ್ಮ ಗೆಳೆಯರ ಜೊತೆ ಸೇರಿ ನಾಟಕ ಒಂದ ಮಾಡುತ್ತಾರೆ ಆ ನಾಟಕದಲ್ಲಿ ಚಿಕ್ಕಣ್ಣನವರು ಮೊದಲ ಬಾರಿಗೆ ಚಾರ್ಲಿ Chaplin ಪಾತ್ರವನ್ನ ಮಾಡುತ್ತಾರೆ ಚಿಕ್ಕಣ್ಣ ಶಾಲೆಯಲ್ಲಿ ಓದುವಾಗ ಮನೆಯಲ್ಲಿ ಬಡತನ ಇದ್ದುದ್ದರಿಂದ ಸರಿಯಾಗಿ ಊಟ ಸಹ ಸಿಗುತ್ತಿರಲಿಲ್ಲ ಒಮ್ಮೊಮ್ಮೆ ಇವರು news paper ಗಳನ್ನ ಅಂಗಡಿಗೆ ನೀಡಿ ಕಲ್ಲೇಪುರಿಯನ್ನ ತಿನ್ನುತ್ತಿದ್ದರು .

ಮನೆಯಲ್ಲಿದ್ದ ಬಡತನದಿಂದ SSLC ಆದ ಮೇಲೆ ಚಿಕ್ಕಣ್ಣ ವಿದ್ಯಾಭ್ಯಾಸವನ್ನು ನಿಲ್ಲಿಸಿ ಗಾರೆ ಕೆಲಸವನ್ನು ಮಾಡುತ್ತಾರೆ ಚಿಕ್ಕ ವಯಸ್ಸಿನಿಂದಲೂ ಏನಾದರೂ ಸಾಧಿಸಬೇಕು ಎಂಬ ಛಲ ಇತ್ತು ಆದರೆ ಇವರ ತಂದೆಗೆ ಇವರು ನಾಟಕ ಮಾಡುತ್ತಿರುವುದು ಸ್ವಲ್ಪಾನು ಇಷ್ಟವಾಗುತ್ತಿರಲಿಲ್ಲ ಅವರು ನೀನು ನಾಟಕ ಮಾಡಿದರೆ ನಿನ್ನ ಕಾಲು ಕಡಿತೀನಿ ಎಂದು ಹೆದರಿಸುತ್ತಿದ್ದರು ಕೆಲಸ ಮಾಡುತ್ತಲೇ ಇವರು ಮೈಸೂರು ದೃಶ್ಯ ಕಲಾವಿದೆ ನಾಟಕ ಮಂಡಳಿಯನ್ನ ಸೇರುತ್ತಾರೆ ಹಾಗೂ ಅನೇಕ ನಾಟಕಗಳಲ್ಲಿ ಅಭಿನಯಿಸುತ್ತಾರೆ ದಿನವಿಡೀ ಗಾರೆ ಕೆಲಸ ಮಾಡಿ ರಾತ್ರಿ ವೇಳೆ ನಾಟಕವನ್ನ ತರಬೇತಿ ಪಡೆದು ನಾಟಕಗಳಲ್ಲಿ ಅಭಿನಯಿಸುತ್ತಾರೆ .

ಇವರು ಬರಿ ನಾಟಕಗಳಲ್ಲಿ ಅಷ್ಟೇ ಅಲ್ಲದೆ ಸೀರಿಯಲ್ ನಲ್ಲಿ ಅಭಿನಯಿಸಿದ್ದಾರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕ್ಲಾಸ್ ಮೆಟ್ಸ್ ಅನ್ನೋ ಸೀರಿಯಲ್ ನಲ್ಲು ಕೂಡ ಅಭಿನಯಿಸಿದ್ದಾರೆ ನಾಟಕಗಳಲ್ಲಿ ಇವರ ಅಭಿನಯ ಕಂಡು Zee ಕನ್ನಡದ ಕಾಮಿಡಿ ಕಿಲಾಡಿಗಳಲ್ಲಿ ಅವಕಾಶ ಸಿಗುತ್ತದೆ ಬೆಂಗಳೂರಿಗೆ ಆಗತಾನೆ ಬಂದಿದ್ದ ಚಿಕ್ಕಣ್ಣನವರಿಗೆ ಇಲ್ಲಿ ಯಾರ ಪರಿಚಯವೂ ಇಲ್ಲದ ಕಾರಣ ಅವರು ಮೆಜೆಸ್ಟಿಕ್ನಲ್ಲಿ ರಾತ್ರಿ ವೇಳೆ ಓಡಾಡುತ್ತಾ ಟೀ ಕುಡಿಯುತ್ತಾ ಕಾಲ ಕಳೆಯುತ್ತಿದ್ದರು ನಂತರ ಬೆಳಿಗ್ಗೆ ಪಬ್ಲಿಕ್ ಶೌಚಾಲಯದಲ್ಲಿ ಮೂರು ರೂಪಾಯಿಗಳನ್ನು ಕೊಟ್ಟು ಸ್ನಾನ ಮಾಡಿ ಮತ್ತೆ ಕಾಮಿಡಿ ಕಿ ಕಾರ್ಯಕ್ರಮದಲ್ಲಿ ಅಭಿನಯಿಸುತ್ತಿದ್ದರು ಈ ಶೋನಲ್ಲಿ ಇವರು ಮತ್ತು ಕುರಿ ಪ್ರತಾಪ್ ಅವರ ಕಾಮಿಡಿಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತದೆ.

ಇದರ ನಂತರ ಇವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತದೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಅದರಿಂದ ಬಂದ ಹಣದಿಂದ ಬೆಂಗಳೂರಿನಲ್ಲಿ ಒಂದು ರೂಮನ್ನು ಮಾಡುತ್ತಾರೆ ಅಮೃತ ಮಹೋತ್ಸವ ಎಂಬ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಮಾಡಿದ ನಾಟಕವನ್ನು ನೋಡಿದ ರಾಕಿಂಗ್ ಸ್ಟಾರ್ ಯಶ್ ರವರು ಇವರ ಅಭಿನಯ ಮೆಚ್ಚಿ ಕಿರಾತಕ ಸಿನಿಮಾದಲ್ಲಿ ಅವಕಾಶ ನೀಡುವಂತೆ ನಿರ್ದೇಶಕರಿಗೆ ಹೇಳುತ್ತಾರೆ ಕಿರಾತಕ ಸಿನಿಮಾ ಒಳ್ಳೆಯ ಯಶಸ್ಸನ್ನು ಕಾಣುತ್ತದೆ ಇದಾದ ನಂತರ ಚಿಕ್ಕಣ್ಣನಿಗೆ ಅನೇಕ ಸಿನಿಮಾಗಳಲ್ಲಿ star ನಟರ ಜೊತೆ ಅಭಿನಯಿಸುವ ಅವಕಾಶ ಬರುತ್ತದೆ.

ಮಾಡಿದ ಎಲ್ಲಾ ಸಿನಿಮಾಗಳಲ್ಲೂ ತನ್ನದೇ ಆದ ವಿಶೇಷ ಅಭಿನಯ ಮತ್ತು ಪಾತ್ರಗಳಿಂದ ಇಂದು ಕರುನಾಡಿನಲ್ಲೆಲ್ಲ ಉತ್ತಮ ಹಾಸ್ಯ ನಟನಾಗಿ ಪ್ರಖ್ಯಾತಿ ಪಡೆದಿದ್ದಾರೆ ಇಲ್ಲಿಯವರೆಗೂ ಕನ್ನಡದ ಅರವತ್ತಾರು ಚಿತ್ರಗಳಲ್ಲಿ ಇವರು ಅಭಿನಯಿಸಿದ್ದಾರೆ ಇವರ ಅಭಿನಯಕ್ಕೆ ಎರಡು ಸಾವಿರದ ಹದಿಮೂರು ರಾಜಾಹುಲಿ ಮತ್ತು ಅಧ್ಯಕ್ಷ ಸಿನೆಮಾಗೆ ಎರಡು ಬಾರಿ ಸೈಮಾ ಉತ್ತಮ ಹಾಸ್ಯ ನಟ ಪ್ರಶಸ್ತಿ ಎರಡು ಸಾವಿರದ ಹದಿನೇಳರಲ್ಲಿ ಐಫಾ ಉತ್ಸವ ಉತ್ತಮ ಹಾಸ್ಯ ನಟ ಪ್ರಶಸ್ತಿ ಮತ್ತು ಎರಡು ಸಾವಿರದ ಹತ್ತೊಂಬತ್ತರಲ್ಲಿ Zee ಕನ್ನಡ ಹೆಮ್ಮೆಯ ಹಾಸ್ಯ ನಟ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ ಚಿಕ್ಕ ವಯಸ್ಸಿನಿಂದಲೂ ಚಿಕ್ಕಣ್ಣ ತಂದೆಯವರನ್ನು ದ್ವೇಷಿಸುತ್ತಲೇ ಬರುತ್ತಾರೆ ಯಾಕೆಂದರೆ ಅವರ ತಂದೆ ಇವರನ್ನು ಯಾವಾಗಲು ಹೊಡೆಯುತ್ತಾ ಚಿಕ್ಕಣ್ಣ ನಾಟಕ ಮಾಡುವುದನ್ನು ವಿರೋಧಿಸುತ್ತಾ ಇರುತ್ತಾರೆ.

ಚಿಕ್ಕಣ್ಣ ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನಕ್ಕೆ ಬಂದ ಮೇಲೆ ತಂದೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಆಸೆಯನ್ನು ಹೊತ್ತಿರುತ್ತಾರೆ ಆದರೆ ಆಕಸ್ಮಿಕವಾಗಿ ಇವರ ತಂದೆಗೆ ಒಮ್ಮೆ ಗಾಡಿಯಲ್ಲಿ ಹೋಗುವಾಗ ಅಪಘಾತವಾಗಿ ತುಂಬಾ serious ಆಗುತ್ತಾರೆ ಆಗ ಚಿಕ್ಕಣ್ಣನವರು ಒಂದು ಸಿನಿಮಾದ shooting ನಲ್ಲಿ ಇರುತ್ತಾರೆ ವಿಪರ್ಯಾಸ ಏನು ಅಂತ ಕೇಳಿದರೆ ಸಿನಿಮಾದ shootingನಲ್ಲೂ ಸಹ ತಂದೆ ಸತ್ತಿರುವ ದೃಶ್ಯವನ್ನು ಚಿತ್ರೀಕರಿಸಬೇಕಾಗಿರುತ್ತದೆ shooting ಮುಗಿದ ನಂತರ ಚಿಕ್ಕಣ್ಣ ಆಸ್ಪತ್ರೆಗೆ ಹೋಗುತ್ತಾರೆ ಒಂದು ಆಸ್ಪತ್ರೆಯಲ್ಲಿ ಆಗುವುದಿಲ್ಲ ಎಂದಾಗ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಅಲ್ಲಿನ ಡಾಕ್ಟರ್ ಗಳನ್ನ request ಮಾಡಿಕೊಳ್ಳುತ್ತಾರೆ.

ಚಿಕಿತ್ಸೆಯ ನಂತರ ಚಿಕ್ಕಣ್ಣನವರ ತಂದೆಯ ಆರೋಗ್ಯ ಸುಧಾರಿಸುತ್ತದೆ ಇದಾದ ನಂತರ ಒಂದು ವರ್ಷದ ಬಳಿಕ ಚಿಕ್ಕಣ್ಣನವರ ತಂದೆ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ ನನ್ನ ಕಷ್ಟ ಕಾಲದಲ್ಲಿ ನನ್ನ ತಂದೆನ ಚೆನ್ನಾಗಿ ನೋಡಿಕೊಳ್ಳಲು ಆಗಲಿಲ್ಲ ಈಗ ಜೀವನದಲ್ಲಿ ಚೆನ್ನಾಗಿದ್ದೀನಿ ಅನ್ನೋ ಸಮಯದಲ್ಲಿ ನನ್ನ ತಂದೆನೇ ಇಲ್ಲ ಎಂದು ಚಿಕ್ಕಣ್ಣ ಕಾರ್ಯಕ್ರಮವನ್ನ ಕಣ್ಣೀರನ್ನ ಸಹ ಹಾಕಿದ್ದರು ಯಾವುದೊ ಒಂದು ಚಿಕ್ಕ ಹಳ್ಳಿಯಿಂದ ಕಡುಬಡ ಕುಟುಂಬದಲ್ಲಿ ಹುಟ್ಟಿ ಆಹೂ ಮಾರಿ ಬಜ್ಜಿ ಬೋಂಡಾ ಮಾರಿ ಗಾರಿ ಕೆಲಸ ಮಾಡಿ ಕಡಲೆ ಕಾಯಿ ಮಾರಿ ಬಾಲ್ಯದಿಂದಲೂ ಕಷ್ಟಗಳನ್ನೇ ಎದುರಿಸುತ್ತ ತನ್ನ ಪರಿಶ್ರಮ ಮತ್ತು ಪ್ರತಿಭೆಯಿಂದ ಬೆಳೆದು ಬಂದು ಇಂದು ಎಲ್ಲರನ್ನು ನಗಿಸುತ್ತಿರುವ .

ಈ ಹಾಸ್ಯ ನಟನ ಜೀವನ ನಮ್ಮ ನಿಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಜೀವನದಲ್ಲಿ ಯಾರಾದರೂ ಏನನ್ನಾದರೂ ಸಾಧಿಸಬೇಕು ಎನ್ನುವವರಿಗೆ ಇವರು ಸಹ ಆದರ್ಶರಾಗಿದ್ದರೆ ಒಬ್ಬ ಗಾರೆ ಕೆಲಸಗಾರ ಇಂದು star ನಟರಿಗೆ ಸರಿಸಮನಾಗಿ ಅಭಿನಯಿಸುವ ಮಟ್ಟಕ್ಕೆ ಬೆಳೆಯಬೇಕು ಎಂದರೆ ಅವರು ಪಟ್ಟ ಪರಿಶ್ರಮವೇ ಇದಕ್ಕೆಲ್ಲ ಮುಖ್ಯ ಕಾರಣ ಚಿಕ್ಕಣ್ಣನವರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡಿ ಚಿಕ್ಕಣ್ಣ ಅಭಿನಯದ ಯಾವ ಚಿತ್ರ ನಿಮಗೆ ಇಷ್ಟ ಎನ್ನುವುದನ್ನು ಕೂಡ ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಇವರ ಪರಿಶ್ರಮ ನಿಮಗೂ ಇಷ್ಟ ಆಗಿದ್ದರೆ ನಮಗೆ ಒಂದು ಲೈಕ್ ಕೊಡಿ ಮತ್ತು ಎಲ್ಲರಿಗು ಈ ವಿಡಿಯೋನ ಶೇರ್ ಮಾಡಿ ಇಂತದ್ದೇ ಹೆಚ್ಚಿನ ಸ್ಫೂರ್ತಿದಾಯಕ ವಿಡಿಯೋಗಳಿಗಾಗಿ ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿ

LEAVE A REPLY

Please enter your comment!
Please enter your name here