ಅಶ್ವಿನಿಯವ್ರನ್ನ ಕದ್ದುಮುಚ್ಚಿ ಪ್ರೀತಿಸಿ, ಮದ್ವೆಯಾಗಿ ಪುನೀತ್ – Puneeth Rajkumar and Ashwini cute love story

108
Puneeth Rajkumar and Ashwini cute love story - Puneeth Rajkumar and Ashwini cute love story
Puneeth Rajkumar and Ashwini cute love story - Puneeth Rajkumar and Ashwini cute love story

ಬಂಧುಗಳೇ ನಮಸ್ಕಾರ ನಟ ಪುನೀತ್ ರಾಜಕುಮಾರ್ ಅವರನ್ನ ಕಳೆದುಕೊಂಡಿದ್ದೇವೆ ಇದೆ ಸಂದರ್ಭದಲ್ಲಿ ಅವರಿಗೆ ಸಂಬಂಧಪಟ್ಟಂತಹ ಒಂದಷ್ಟು ಸುದ್ದಿಗಳ ಬಗ್ಗೆ ಎಲ್ಲರೂ ಕೂಡ ಕಣ್ಣಾಡುತ್ತಿದ್ದಾರೆ ಇವತ್ತು ಅಂತದ್ದೇ ಒಂದು ಸುದ್ದಿಯನ್ನು ಅಥವಾ ಸ್ಟೋರಿಯನ್ನು ನಾನು ನಿಮ್ಮ ಮುಂದೆ ಇಡುತ್ತೇನೆ ಅದು ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ಅವರ ಲವ್ ಸ್ಟೋರಿಗೆ ಸಂಬಂಧಪಟ್ಟ ಹಾಗೆ ಸದ್ಯ ನಾವೆಲ್ಲರೂ ಕೂಡ ಒಂದಷ್ಟು ದಿನಗಳ ಕಾಲ ಚರ್ಚೆ ಮಾಡುತ್ತೀವಿ ಪುನೀತ್ ರಾಜಕುಮಾರ್ ಅವರ ಅಗಲಿಕೆಗೆ ಸಂಬಂಧಪಟ್ಟ ಹಾಗೆ ನಮಗೂ ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ ,

ಹಾಗೆ ಶಿವಣ್ಣ ಆಗಿರಬಹುದು ರಾಘಣ್ಣ ಆಗಿರಬಹುದು ಅಥವಾ ಇತರೆ ಬಂಧುಗಳು ಆಗಿರಬಹುದು ಅವರಿಗೂ ಕೂಡ ಸಧ್ಯಕ್ಕೆ ಮರೆಯುವುದಕ್ಕೆ ಸಾಧ್ಯವಿಲ್ಲ ಆದರೆ ಇದು ನೇರ ನೇರವಾದ ತೀವ್ರವಾದಂತಹ ಪರಿಣಾಮ ಬೀರುವುದು ಅವರ ಪತ್ನಿ ಆಗಿರುವಂತಹ ಅಶ್ವಿನಿ ಅವರಿಗೆ ತನ್ನ ಜೀವನದಲ್ಲಿ ಎಲ್ಲವೂ ಕೂಡ ಆಗಿದ್ದಂತಹ ಗಂಡನನ್ನೇ ಕಳೆದುಕೊಂಡು ಬಿಟ್ಟಿದ್ದಾರೆ ಮತ್ತೊಂದು ಕಡೆಯಿಂದ ಅವರ ಮಕ್ಕಳಿಗೂ ಕೂಡ ಇದು ನೇರ ನೇರವಾದಂತ ಪರಿಣಾಮ ಬೀರುತ್ತೆ ಇನ್ನು ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರಿಗೆ ಎಲ್ಲ ರೀತಿಯಲ್ಲೂ ಕೂಡ ಬೆನ್ನೆಲುಬಾಗಿ ನಿಂತಿದ್ದರು ಇತ್ತೀಚಿಗೆ PRK production ಮೂಲಕ ಅವರು ನಿರ್ಮಾಪಕಿಯಾಗಿಯೂ ಕೂಡ ಗುರುತಿಸಿಕೊಂಡಿದ್ದರು .

ಆದರೆ ಯಾವುದೇ TV channelsಗಳಲ್ಲೂ ಕೂಡ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ ಸ್ವತಃ ಅವರೇ ಹೇಳುತ್ತಾ ಇದ್ದರು ನನಗೆ ಎಲ್ಲೂ ಕೂಡ ಕಾಣಿಸಿಕೊಳ್ಳುವುದು ಇಷ್ಟ ಇಲ್ಲ ಅಂತ ಕೆಲವೇ ಕೆಲವು ಒಮ್ಮೆ ಯಾವುದೋ ಒಂದು TV ಚಾನೆಲನಲ್ಲಿ birthdayಗೆ ಮಾತ್ರ wish ಮಾಡಿದರು ಬಿಟ್ರೆ weekend with ರಮೇಶ್ ಕಾರ್ಯಕ್ರಮದಲ್ಲಿ ಫೋನ್ ಹೋಗಿ ಬಂದಿದ್ದರು ಬಿಟ್ಟರೆ ಬೇರೆ ಎಲ್ಲೂ ಕೂಡ ಅಶ್ವಿನಿ ಅವರು ಕಾಣಿಸಿಕೊಂಡಿಲ್ಲ ಒಂದು ರೀತಿಯಲ್ಲಿ ಪರದೆ ಹಿಂದೆಯೇ ಎಲ್ಲ ಕೆಲಸವನ್ನು ಕೂಡ ಮಾಡುತ್ತಿದ್ದರು ಪುನೀತ್ ರಾಜಕುಮಾರ್ ಅವರಿಗೆ ಎಲ್ಲ ರೀತಿಯಲ್ಲೂ ಕೂಡ ಬೆನ್ನೆಲುಬಾಗಿ ನಿಂತುಕೊಳ್ಳುತ್ತಿದ್ದರು ಹಾಗಾದರೆ ಅಶ್ವಿನಿ ಮತ್ತು ಪುನೀತ್ ರಾಜಕುಮಾರ್ ಅವರ ಪರಿಚಯ ಆಗಿದ್ದು ಹೇಗೆ ಇವರ ಲವ್ ಸ್ಟೋರಿ ಯಾವ ರೀತಿಯಾಗಿ ಡೆವೆಲಪ್ ಆಯಿತು ಮದುವೆ ಆಗಿದ್ದು ಯಾವ ರೀತಿಯಾಗಿ ಅದಕ್ಕೆ ಸಂಬಂಧಪಟ್ಟಂತಹ ಒಂದಿಷ್ಟು interesting ಡೀಟೇಲ್ಸನ್ನ ನಾನು ನಿಮ್ಮ ಮುಂದೆ ಇಡುತ್ತ ಹೋಗುತ್ತೇನೆ .

ಅಶ್ವಿನಿ ಅವರು ಚಿಕ್ಕಮಂಗಳೂರು ಜಿಲ್ಲೆಯವರು ಮಲೆನಾಡಿನವರು ಚಿಕ್ಕಮಂಗಳೂರು ಜಿಲ್ಲೆಯ ಬಾಗಮನೆ ಅಂತ ಹೇಳಿ ಮಲ್ಲಂದೂರು ಅಂತ ಇದೆ ಮಲ್ಲಂದೂರು ಸಮೀಪದ ಭಾಗ ಮನೆಯವರು ಆ ಭಾಗದವರು ಯಾರಾದರೂ ಇದ್ದರೆ ಕಾಮೆಂಟ್ ಮಾಡಿ ತಿಳಿಸಿ ಖುಷಿಯಾಗುತ್ತೆ ನೋಡುವುದಕ್ಕೆ ಆ ಭಾಗದವರು ಒಬ್ಬರು ಈ ಸ್ಟೋರಿಯನ್ನು ನೋಡುತ್ತಿದ್ದಾರೆ ಅಂತ ಹೇಳಿ ಮತ್ತೊಮ್ಮೆ ಹೇಳುತ್ತೇನೆ ಚಿಕ್ಕಮಂಗಳೂರು ಜಿಲ್ಲೆಯ ಮಲ್ಲಂದೂರು ಸಮೀಪದ ಭಾಗಮನೆ ಎನ್ನುವವರು ಅಶ್ವಿನಿ ಅವರ ತಂದೆ ರೇವಂತ್ ಅಂತ ಹೇಳಿ ಅವರು ಕೂಡ ಸ್ವಲ್ಪ ಮಟ್ಟಿಗೆ ಆ ಭಾಗದಲ್ಲಿ ಪ್ರಸಿದ್ದಿಯನ್ನು ಕೂಡ ಪಡೆದುಕೊಂಡಿದ್ದರು ಇನ್ನು ಹೇಗೆ ಅಶ್ವಿನಿ ಮತ್ತು ಪುನೀತ್ ರಾಜಕುಮಾರ್ ಅವರಿಗೆ ಪರಿಚಯವಾಯಿತು ಅದನ್ನು ಹೊರತು ಹೋಗೋಣ ಪುನೀತ್ ರಾಜಕುಮಾರ್ ಆಗಿನ್ನು ಸಿನಿಮಾ ಇಂಡಸ್ಟ್ರಿಗೆ ಬಂದಿರಲಿಲ್ಲ ಏನೇನು ಆಗಿರಲಿಲ್ಲ ,

ಪುನೀತ್ ರಾಜಕುಮಾರ್ ಆಗ ಕೇವಲ ಒಂದಷ್ಟು ಬಿಸಿನೆಸ್ ಗಳನ್ನ ಮಾಡ್ತಾ ಇದ್ದರು ಎಜುಕೇಶನ್ ಮುಗಿಸಿ ಬಿಸಿನೆಸ್ ಅನ್ನ ಮಾಡ್ತಾ ಇದ್ದರು ಎಜುಕೇಶನ್ ಅಂದ್ರೆ ನಿಮಗೆ ಗೊತ್ತು ಅವರು ಮನೆ ಪಾಠವನ್ನ ತೆಗೆದುಕೊಂಡಂತವರು ಅದಾದ ನಂತರ ಬೇರೆ ಬೇರೆ ಒಂದಷ್ಟು ಬಿಸಿನೆಸ್ ಗಳನ್ನ ಅವರು ಮಾಡ್ತಾ ಇದ್ದರು ಸ್ವತಃ ಪುನೀತ್ ರಾಜಕುಮಾರ್ ಅವರೇ ಹೇಳಿದ್ದಾರೆ ನನಗೆ ಸಿನಿಮಾ ಇಂಡಸ್ಟ್ರಿಗೆ ಬರುವಂತ ಆಸಕ್ತಿ ಇರಲಿಲ್ಲ ಬಾಲನಟನಾದ ನಂತರ ಅಂದ್ರೆ ಹದಿಮೂರನೇ ವರ್ಷಕ್ಕೆ ಕೊನೆಯ ಸಿನಿಮಾ ಅವರದು ಪರಶುರಾಮ ಸಿನಿಮಾ ಅದಾದ ನಂತರ ನಾನು ಮತ್ತೊಮ್ಮೆ ನಟ ಆಗಬೇಕು ಅಂತ ಅಂದುಕೊಂಡಿರಲಿಲ್ಲ ನಾನು ಬೇರೆ ಬೇರೆ ಒಂದಷ್ಟು businessಗಳನ್ನ ಮಾಡಬೇಕು ಅಥವಾ ಸಿನಿಮಾ ಅಂತದ್ದೇನಾದ್ರೂ ಮಾಡಬೇಕು ಅಂತನಾನು ಅಂದುಕೊಳ್ತಾಯಿದ್ದೆ ಆ ನಂತರ ಯಾವುದೊ ಒಂದು ಸಂದರ್ಭದಲ್ಲಿ ನಾನು ಅಪ್ಪು ಸಿನಿಮಾ ಮೂಲಕ ಹೀರೋ ಆದೆ ಅಂತಹೇಳ್ತಾರೆ ಆಗ ಪುನೀತ್ ರಾಜಕುಮಾರ್ ಏನೇನು ಕೂಡ ಆಗಿರ್ಲಿಲ್ಲ but ಅವರ ತಾಯಿ ನಿರ್ಮಾಪಕಿಯಾದಂತ ಕಾರಣಕ್ಕಾಗಿ ಅವರ ತಾಯಿ ಯಾವ ಯಾವ ಸಿನಿಮಾಗಳನ್ನ ನಿರ್ಮಾಣ ಮಾಡ್ತಾರೆ.

ಅದರಲ್ಲೂ ಕೂಡ ವಿಶೇಷವಾಗಿ ಶಿವಣ್ಣನವರಿಗೆ ಆಗಿರಬಹುದು ಅಥವಾ ರಾಘಣ್ಣನಿಗೆ ಯಾವ ಯಾವ ಸಿನಿಮಾಗಳು ನಿರ್ಮಾಣ ಮಾಡ್ತಾರೆ ಆ ಸಿನಿಮಾದ ಶೂಟಿಂಗ್ ಸೆಟ್ ಅನ್ನ ನೋಡಿಕೊಂಡು ಬರೋದಕ್ಕೆ ಪುನೀತ್ ರಾಜಕುಮಾರ್ ಅವರು ಹೋಗ್ತಾಯಿದ್ರು ತುಂಬಾ ಅವರೇ ಕಾಳಜಿ ವಹಿಸಿ ಮುತುವರ್ಜಿ ವಹಿಸಿ ಯಾವ ರೀತಿಯಾಗಿರಬೇಕು ಶೂಟಿಂಗ್ ಸೆಟ್ ಏನು ಎತ್ತ ಅಂತ ಹೇಳಿ ಅದೆಲ್ಲವನ್ನು ಕೂಡ ನೋಡ್ತಾಯಿದ್ದರು ಇದೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಪುನೀತ್ ರಾಜಕುಮಾರ್ ಅವರ friend ಒಬ್ಬರು ಅಶ್ವಿನಿ ಅವರನ್ನ ಪರಿಚಯ ಮಾಡಿ ಕೊಡ್ತಾರೆ ಅಂದ್ರೆ ಅಶ್ವಿನಿ ಮತ್ತೆ ಪುನೀತ್ ರಾಜಕುಮಾರ್ ಅವರ common friend ಇವರಿಗೆ ಪರಿಚಯವನ್ನ ಮಾಡಿಸಿ ಕೊಡ್ತಾರೆ ಪರಿಚಯ ಆಗ್ತಿದ್ದ ಹಾಗೆ ಸಹಜವಾಗಿ ಸ್ನೇಹ ಶುರುವಾಗುತ್ತೆ ಹೆಚ್ಚು ಕಡಿಮೆ ಸಾವಿರದ ಒಂಬೈನೂರ ತೊಂಬತ್ತಾರರ ಸಂದರ್ಭದಲ್ಲಿ ಇಬ್ಬರು ಕೂಡ ಸಾಕಷ್ಟು ಕಡೆಗಳಲ್ಲಿ ಒಟ್ಟೊಟ್ಟಿಗೆ ಓಡಾಡ್ತಾ ಇರ್ತಾರೆ ಖುಷಿ ಖುಷಿಯಾಗಿ ಕಾಲವನ್ನ ಕಳೆಯುತ್ತಿರುತ್ತಾರೆ.

ಸಹಜವಾಗಿ ಆ ಸ್ನೇಹ ಪ್ರೀತಿಗೆ ತಿರುಗುತ್ತೆ ಆ ಪ್ರೀತಿಗೆ ತಿರುಗಿದ ನಂತರ ಇಬ್ಬರು ಕೂಡ ನಿರಂತರವಾಗಿ ಫೋನನಲ್ಲಿ ಅಂತವೆಲ್ಲವೂ ಕೂಡ ನಡೀತಾನೇ ಇರುತ್ತೆ ಆದ್ರೆ ಪುನೀತ್ ರಾಜಕುಮಾರ್ ಅವರಿಗೆ ಒಂದು ಆತಂಕ ಇರುತ್ತೆ ಮನೇಲಿ ಹೇಗಪ್ಪಾ ಹೇಳೋದು ಅಂತ ಹೇಳಿ ಯಾಕಂದ್ರೆ ಅದು ಸಾಮಾನ್ಯವಾದಂತ ಕುಟುಂಬ ಅಲ್ಲ ದೊಡ್ಡ ಮನೆ ಸ್ವಲ್ಪ ಎಡವಟ್ಟಾದ್ರೂ ಕೂಡ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತೆ ಈ ಲವ್ ಸ್ಟೋರಿ ಹಾಗೆ ಹೀಗೆ ಅಂದ್ರೆ ದೊಡ್ಡ ಮನೆ ಹುಡುಗ ಲವ್ ಅಲ್ಲಿ ಬಿದ್ದಿದ್ದನಂತೆ ಹಾಗೆ ಹೀಗೆ ಅಂತ ಹೇಳಿ ಬೇರೆ ಕಡೆಗೂ ಕೂಡ ಸುದ್ದಿಯಾಗುತ್ತೆ ಜೊತೆಗೆ ಲವ್ ಅಂದಾಗ ಒಂದು ಸಹಜವಾಗಿ ಒಂದು ಆತಂಕ ಇದ್ದೆ ಇರುತ್ತೆ ಯಾರಿಗಾದರು,

ಕೂಡ ಮನೇಲಿ ಹೇಳೋದಕ್ಕೆ ಇವರಿಬ್ಬರು ಸಿಕ್ಕಾಪಟ್ಟೆ ಓಡಾಡೋದನ್ನ ಶಿವಣ್ಣ ಸೂಕ್ಷ್ಮವಾಗಿ ಗಮನಿಸ್ತಾಯಿದ್ದರಂತೆ ಯಾಕಂದ್ರೆ ಅಶ್ವಿನಿ ಅವರು ಶಿವಣ್ಣ ಅವರ ಸಿನಿಮಾದ ಶೂಟಿಂಗ್ ಸೆಟ್ ಗು ಕೂಡ ಆಗಾಗ ಬರ್ತಾ ಇದ್ದರಂತೆ ತುಂಬಾ ಗಮನಿಸ್ತಾ ಇದ್ದರಂತೆ ಜೊತೆಗೆ ಮನೆಯಲ್ಲೂ ಕೂಡ ಯಾವಾಗಲು ಫೋನ್ ನಲ್ಲೆ ಮಾತನಾಡುತ್ತಿರುತ್ತಿದ್ದರಂತೆ ಪುನೀತ್ ಹೀಗಾಗಿ ಪಾರ್ವತಮ್ಮ ರಾಜಕುಮಾರ್ ಅವರು ಕೂಡ ಹೇಳಿದರಂತೆ ಯಾಕೋ ಪದೇ ಪದೇ ಗುಸು ಗುಸು ಗುಸು ಅಂತ ಫೋನಿನಲ್ಲಿ ಮಾತಾಡುತ್ತಿರುತ್ತಾನೆ ಏನೋ ನಡೀತಾ ಇರಬಹುದು ಒಂದು ಕಣ್ಣಿಟ್ಟಿರು ಅಂತ ಹೇಳಿ ಶಿವಣ್ಣನಿಗೆ ಹೇಳಿರುತ್ತಾರೆ ಅಂತೇ ಶಿವಣ್ಣನಿಗೆ ಗೊತ್ತಾಗುತ್ತೆ ಸ್ವಲ್ಪ ದಿನ ನೋಡಿ ಆದ ಮೇಲೆ ಓ ಅಪ್ಪು ಲವ್ ಅಲ್ಲಿ ಬಿದ್ದಿದ್ದಾನೆ ಒಂದು ಹುಡುಗಿನ ಪ್ರೀತಿಸುತ್ತಿದ್ದಾನೆ ಎನ್ನುವಂತಹ ವಿಚಾರ ಗೊತ್ತಾಗುತ್ತೆ ಆಗ ಶಿವಣ್ಣ ಏನು ಮಾಡುತ್ತಾರೆ ಈ ವಿಚಾರವನ್ನು ತಂದು ಪಾರ್ವತಮ್ಮ ರಾಜಕುಮಾರ್ ಅವರಿಗೆ ಹೇಳುತ್ತಾರಂತೆ .

ಈಗ ಅಪ್ಪು ಒಂದು ಹುಡುಗಿನ ಪ್ರೀತಿ ನಮ್ಮ ಏನು ಗೊತ್ತಿಲ್ಲ ನನಗೆ ಮುಂದೆ ಮದುವೆ ಆಗೋಕೆ ಏನಾದರು ಪ್ಲಾನ್ ಮಾಡಿಕೊಂಡು ಇರಬಹುದು ಅಂತ ಶಿವಣ್ಣ ಹೇಳ್ತಾರಂತೆ ಶಿವಣ್ಣ ಪಾರ್ವತಮ್ಮ ರಾಜಕುಮಾರ್ ಅವರ ಹತ್ತಿರ ಹೇಳುತ್ತಿದ್ದ ಹಾಗೆ ಪಾರ್ವತಮ್ಮ ರಾಜಕುಮಾರ್ ಹೇಳ್ತಾರಂತೆ ಇದು ನನಗೆಲ್ಲ ಗೊತ್ತಾಗಲ್ಲಪ್ಪ ನಿಮ್ಮ ತಂದೆಗೆ ಹೇಳಿ ಅಪ್ಪನಿಗೆ ಹೇಳಿ ಎನ್ನುವಂತ ಮಾತನ್ನು ಕೂಡ ಹೇಳ್ತಾರಂತೆ ಆ ನಂತರ ಶಿವಣ್ಣ ಏನು ಮಾಡ್ತಾರೆ ಹೋಗಿ ಅಣ್ಣ ಅವರ ಹತ್ತಿರ ರಾಜಕುಮಾರ್ ಹತ್ತಿರ ಹೇಳ್ತಾರಂತೆ ಹೇಗೆ ಪ್ರೀತಿಸುತ್ತಿದ್ದನಪ್ಪ ಒಂದು ಹುಡುಗಿನ ಅಂತ ಹೇಳಿ ಒಟ್ಟಾರೆಯಾಗಿ ಮೊದಲು ಮನೆಯಲ್ಲಿ ಈ ಸುದ್ದಿಯನ್ನು ಬ್ರೇಕ್ ಮಾಡಿದ್ದೆ ಶಿವಣ್ಣ ರಾಜಕುಮಾರ್ ಅವರ ಹತ್ತಿರ ಹೇಳಿದಾಗ ರಾಜಕುಮಾರ್ ಅವರು ಹೇಳುತ್ತಾರೆ ಅಂತೇ ಪರಸ್ಪರ ಇಬ್ಬರು ಇಷ್ಟ ಪಟ್ಟಿದ್ದಾರೆ ಯಾಕೆ ಮದುವೆಯಾಗಬಾರದು ಅವರವರ ಇಷ್ಟ ಅವರು ಬಹಳ ಚೆನ್ನಾಗಿ ಆಯಿತು ಇಷ್ಟಪಟ್ಟಿದ್ದರೆ ಮದುವೆಯಾಗಲಿ ನೋಡೋಣ ನಾನೇ ಒಂದು ಟೈಮ್ ನೋಡಿ ಅವನ ಹತ್ತಿರ ಮಾತನಾಡುತ್ತೇನೆ ಅನ್ನುವಂತಹ ಮಾತನ್ನು ರಾಜಕುಮಾರ್ ಅವರು ಹೇಳುತ್ತಾರಂತೆ.

ನಿನಗೆ ಹೇಗಪ್ಪಾ ಇದು ಗೊತ್ತಾಯಿತು ಅಂತ ಒಂದಷ್ಟು ಜನ ಕಮೆಂಟ್ ಮಾಡಬಹುದು ಸ್ವತಃ ಪುನೀತ್ ರಾಜಕುಮಾರ್ ಅವರು ವೀಕೆಂಡ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ ಜೊತೆಗೆ ಇದಕ್ಕೆ ಸಂಬಂಧಪಟ್ಟಂತೆ ಒಂದಷ್ಟು ಆರ್ಟಿಕಲ್ಸ್ ಗಳಲ್ಲೂ ಕೂಡ ಇದಾವೆ ಇದೆಲ್ಲವನ್ನು ಕೂಡ ಎತ್ತಿ ತೆಗೆದು ಈ ಸ್ಟೋರಿ ಅನ್ನು ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ ಓಕೆ ಮುಂದುವರೆಸುತ್ತೇನೆ ಏನಾಯಿತು ಅಂತ ಹೇಳಿ ಇಷ್ಟೆಲ್ಲ ಆದ ನಂತರ ಪುನೀತ್ ರಾಜಕುಮಾರ್ ಅವರಿಗೆ ಗೊತ್ತಿರಲಿಲ್ಲ ಮನೆಯಲ್ಲಿ ಈ ವಿಚಾರ ಗೊತ್ತಿದೆ ಏನು ಎತ್ತ ಅಂತ ಅವರಿಗೆ ಗೊತ್ತಿರಲಿಲ್ಲ ಆದರೆ ಪುನೀತ್ ರಾಜಕುಮಾರ್ ಅವರಿಗೆ ಅಣ್ಣ ಅವರ ಹತ್ತಿರ ಹೆಚ್ಚಿನ ಆತಂಕ ಇರಲಿಲ್ಲ ಕಾರಣ ಅವರಿಗೆ ರಾಜಕುಮಾರ್ ಅವರ ಜೊತೆಗೆ ಬಹಳ ಗಟ್ಟಿಯಾದ ಒಂದು bonding ಇತ್ತು ಯಾಕಂದ್ರೆ ಬಾಲ್ಯದಿಂದಲೂ ಕೂಡ ಅತಿ ಹೆಚ್ಚು ಅಣ್ಣಾವ್ರ ಜೊತೆಗೆ ಇರ್ತಾ ಇದ್ದಿದ್ದು ಅಷ್ಟು ಮಕ್ಕಳಲ್ಲಿ ಪುನೀತ್ ರಾಜಕುಮಾರ್ ಅವರು ಒಟ್ಟೊಟ್ಟಿಗೆ ತುಂಬಾ ಸಿನಿಮಾಗಳನ್ನು ಕೂಡ ಮಾಡಿಬಿಟ್ಟಿದ್ದರು.

ಒಂದು ಒಳ್ಳೆ bonding ಇತ್ತು ಅವರಿಗೆ ಹೆಚ್ಚು ಆತಂಕ ಇರಲಿಲ್ಲ ಅಣ್ಣ ಅವರ ಹತ್ತಿರ ಹೇಳುವುದಕ್ಕೆ but ಅವರಿಗೆ ಆತಂಕ ಇದ್ದಿದ್ದು ಅಮ್ಮನ ಹತ್ತಿರ ಹೇಳುವುದಕ್ಕೆ ಅಮ್ಮ ತುಂಬಾ strict ಆಗಿ ಅವರನ್ನು ಬೆಳೆಸಿದರು ಹೀಗಾಗಿ ಅಮ್ಮನ ಹತ್ತಿರ ಹೇಳಿದಾಗ ಅಮ್ಮ ಹೇಗೆ receive ಮಾಡುತ್ತಾರೋ ಮದುವೆಗೆ ಒಪ್ಪಿಗೆಯನ್ನು ಕೊಡುತ್ತಾರೋ ಇಲ್ಲವೋ ಎನ್ನುವ ಆತಂಕ ಪುನೀತ್ ರಾಜಕುಮಾರ್ ಅವರಿಗೆ ಇತ್ತು ಹೀಗೆ ಆಗಬೇಕಾದರೆ ಮನೆಯಲ್ಲಿ ಒಂದಲ್ಲ ಎಷ್ಟು ದಿನ ಅಂತ ಮುಂದೂಡೋದಕ್ಕೆ ಸಾಧ್ಯವಾಗುತ್ತೆ ದೊಡ್ಡ ಮನೆ ಬೇರೆ ಈಗ ಒಂದು ದಿನ ಅಶ್ವಿನಿ ಅವರು ಫೋನ್ ಮಾಡಿದಾಗ ಆ ಫೋನನ್ನ ತಗೊಂಡು ಹೋಗಿ ಸೀದಾ ರಾಜಕುಮಾರ್ ಅವರ ಕೈಗೆ ಕೊಟ್ಟು ಬಿಡ್ತಾರಂತೆ ಆ ನಾನು ಈ ಹುಡುಗಿನ ಇಷ್ಟ ಪಡ್ತಿದೀನಪ್ಪ ನಿಮಗೆ wish ಮಾಡಬೇಕಂತೆ ಅಂತ ಹೇಳಿ ದಿಢೀರ್ ಫೋನ್ ಕೊಟ್ಟುಬಿಡ್ತಾರಂತೆ ರಾಜಕುಮಾರ್ ಅವರಿಗೆ ಮೊದಲೇ ಗೊತ್ತಿದ್ದ ಕಾರಣಕ್ಕಾಗಿ ಹೆಚ್ಚು ಗಲಿಬಿಲಿ ಆಗಲಿಲ್ಲ ಅಥವಾ ಹೆಚ್ಚು ಸಂಕೋಚವು ಕೂಡ ಆಗಲಿಲ್ಲ ,

ಆ ತಕ್ಷಣ ಫೋನ್ ತಗೋಳ್ತಾರೆ ಅಶ್ವಿನಿ ಅವರ ಜೊತೆಗೆ ರಾಜಕುಮಾರ್ ಅವರು ಕೂಡ ಬಹಳ ಪ್ರೀತಿಯಿಂದಾನೆ ಮಾತನಾಡ್ತಾರೆ ಗೊತ್ತು ರಾಜಕುಮಾರ್ ಅವರು ಎಷ್ಟು ಪ್ರೀತಿಯಿಂದ ಮಾತಾಡ್ತಾರೆ ಮಾತಾಡಿರ್ತಾರೆ ಅಂತ ಹೇಳಿ ನೀವು ಕೂಡ ಊಹೆ ಮಾಡಿಕೊಳ್ಳಬಹುದು ಈ ಸಂದರ್ಭದಲ್ಲಿ ಆಗ ಪುನೀತ್ ರಾಜಕುಮಾರ್ ಅವರಿಗೆ ಒಂದು ನಿರಾಳರಾದ ಹಾಗೆ ಸ್ವಲ್ಪ ಮಟ್ಟಿಗೆ relief ಆದಂಗೆ ಆಗಿಬಿಡುತ್ತೆ ಅಂತೂ ಇಂತೂ ನಾನು ಅಪ್ಪಾಜಿ ಹತ್ತಿರ ಹೇಳಿಬಿಟ್ಟನಲ್ಲ ಅಂತ ಹೇಳಿ ಆಯಿತು ಈ phone ಎಲ್ಲ ಮಾತಾಡಿ ಆದ ಮೇಲೆ ರಾಜಕುಮಾರ್ ಅವರು ಪಾರ್ವತಮ್ಮ ರಾಜಕುಮಾರ್ ಅವರ ಹತ್ತಿರ ಹೇಳುತ್ತಾರಂತೆ ಈಗ ಅಪ್ಪು ಒಂದು ಹುಡುಗಿನ ಪ್ರೀತಿಸುತ್ತ ಇದ್ದಾನೆ ಬಹಳ ಇಷ್ಟ ಪಡುತ್ತಿದ್ದಾನೆ ಅಶ್ವಿನಿ ಅಂತ ಹುಡುಗಿ ಚಿಕ್ಕಮಂಗಳೂರು ಭಾಗದವಳು ಅಂತ ಹೇಳಿ ಆಗ ಪಾರ್ವತಮ್ಮ ರಾಜಕುಮಾರ್ ಅವರು ಕೂಡ ಒಪ್ಪಿಗೆಯನ್ನು ಕೊಡುತ್ತಾರೆ .

ಆಯಿತು ನೀವು ಇಷ್ಟ ಪಟ್ಟಿದ್ದೀರಾ ಅಂದರೆ ಮದುವೆಯಾಗಿ ಇದಕ್ಕೆ ನಂದು ಯಾವುದೇ ರೀತಿಯಲ್ಲೂ ಅಡ್ಡಿ ಇಲ್ಲ ಅಂತ ಹೇಳಿ but ನೀವು ಗಮನಿಸಬೇಕಾದ ಇನ್ನೊಂದು ವಿಚಾರ ಏನಪ್ಪಾ ಅಂದರೆ ಆ ಅಣ್ಣಾವ್ರು ಎಲ್ಲರಿಗೂ ಕೂಡ ಮನೆಯಲ್ಲಿ ಶಿವಣ್ಣಂಗೆ ಆ ರಾಘಣ್ಣಂಗೆ ಅದೇ ರೀತಿಯಾಗಿ ಪುನೀತ್ ಅವ್ರಿಗೆ ನೀವ್ ಮದುವೆ ಆದ್ಮೇಲೆ ಸಿನಿಮಾ ಇಂಡಸ್ಟ್ರಿಗೆ entry ಕೊಡ್ಬೇಕು ಅನ್ನುವಂತ ಷರತ್ತನ್ನ ವಿಧಿಸಿದ್ರು ಯಾವ ಕಾರಣಕ್ಕಾಗಿ ಷರತ್ತನ್ನ ವಿಧಿಸಿದ್ರುನು ಗೊತ್ತಿಲ್ಲ ಜೀವನದಲ್ಲಿ ಒಂದು ಶಿಸ್ತು ಬರುತ್ತೆ ಅಂತ ಏನೋ ಗೊತ್ತಿಲ್ಲ ಶಿವರಾಜಕುಮಾರ್ ಅವ್ರು ಕೂಡ ಗೀತಾ ಶಿವರಾಜಕುಮಾರ್ ಅವ್ರನ್ನ ಮದುವೆಯಾದ ನಂತರ ಅವ್ರು ಆನಂದ್ ಸಿನೆಮಾಗೆ entry ಕೊಡ್ತಾರೆ ರಾಘಣ್ಣ ಕೂಡ ಮದುವೆಯಾದ ನಂತರವೇ ಮಂಗಳ ಅವರನ್ನ ಮದುವೆಯಾದ ನಂತರವೇ ಅವ್ರು ಕೂಡ ಸಿನಿಮಾ ಇಂಡಸ್ಟ್ರಿಗೆ entry ಕೊಡ್ತಾರೆ ಅದೇ ರೀತಿಯಾಗಿ ಪುನೀತ್ ರಾಜಕುಮಾರ್ ಅವ್ರು ಅಶ್ವಿನಿ ಅವ್ರನ್ನ ಮದುವೆಯಾದ ನಂತರವೇ ಎರಡು ಸಾವಿರದ ಎರಡರಲ್ಲಿ ಸಿನಿಮಾಗೆ ಎಂಟ್ರಿ ಕೊಡ್ತಾರೆ ಅಪ್ಪು ಸಿನಿಮಾದ ಮೂಲಕ ಹೀಗೆ ಈ ಮನೇಲಿ ಎಲ್ಲರು ಕೂಡ ಒಪ್ಪಿಗೆ ಕೊಟ್ಟ ನಂತರ ಡಿಸೆಂಬರ್ ಒಂದನೇ ತಾರೀಕು ಆ ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ಆಗ ಪುನೀತ್ ರಾಜಕುಮಾರ್ ಅವರ ವಯಸ್ಸು ಬರಿ ಇಪ್ಪತ್ತನಾಲ್ಕು ವರ್ಷ ಮಾತ್ರ ಇನ್ನೇನು ಕಾಲೇಜು ಮುಗಿಸಿಕೊಂಡು ಹೊರಗಡೆ ಬಂದಿರ್ತಾರಲ್ಲ,

ಅಂತ ಹುಡುಗರ age ಅವರಿಗೆ ಅಶ್ವಿನಿ ಅವರು ಪರಿಚಯ ಆದಾಗ ಇಪ್ಪತ್ತೊಂದು ವರ್ಷ ಹೆಚ್ಚು ಕಡಿಮೆ ಮೂರೂ ವರ್ಷ ಇಬ್ಬರು ಕೂಡ ಒಟ್ಟೊಟ್ಟಿಗೆ ಓಡಾಡಿದ್ದಾರೆ ಇಪ್ಪತ್ತನಾಲ್ಕರಲ್ಲಿ ಮದುವೆ ಆಗ್ತಾರೆ ಇವರ ಮನೆಯಲ್ಲಿ ಒಪ್ಪಿಗೆಯನ್ನ ಕೊಟ್ಟಿರ್ತಾರೆ ಇನ್ನ ಅಶ್ವಿನಿ ಅವರ ಮನೇಲಿ ಯಾವುದೇ ರೀತಿಯಲ್ಲೂ ಸಮಸ್ಯೆ ಆಗೋದಿಲ್ಲ ಅಣ್ಣಾವ್ರ ಸೊಸೆಯಾಗಿ ಹೋಗ್ತಾಳೆ ಅಂದ್ರೆ ಯಾರು ತಾನೇ ಒಪ್ಪಿಕೊಳ್ಳುವುದಿಲ್ಲ ಸಹಜವಾಗಿ ಎಲ್ಲರು ಕೂಡ ಒಪ್ಪಿಗೆಯನ್ನ ಕೊಡ್ತಾರೆ ಅದೇ ರೀತಿಯಾಗಿ ಇಬ್ಬರು ಕೂಡ ಮದುವೆ ಆಗ್ತಾರೆ ಮದುವೆಯಾಗಿ ಒಂದು ಮೂರೂ ವರ್ಷ ಆದ ನಂತರ ಪುನೀತ್ ರಾಜಕುಮಾರ್ ಅವರು ಎರಡು ಸಾವಿರದ ಎರಡರಲ್ಲಿ ಅಪ್ಪು ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಮತ್ತೊಮ್ಮೆ ಗ್ರಾಂಡ್ ಆಗಿ ಎಂಟ್ರಿ ಕೊಡ್ತಾರೆ .

ಒಂದು ರೀತಿಯಲ್ಲಿ come back ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಆ ನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ ಜೊತೆಗೆ ಅಶ್ವಿನಿ ಅವರು ಕೂಡ ಎಲ್ಲ ಸಂದರ್ಭದಲ್ಲೂ ಬೆನ್ನೆಲುಬಾಗಿ ನಿಂತುಕೊಳ್ಳುತ್ತಾರೆ ಎಲ್ಲ ರೀತಿಯಲ್ಲೂ ಕೂಡ ಅವರು ಸಹಾಯವನ್ನು ಮಾಡಿಸಿ ಹೋಗುತ್ತಾರೆ but ಎಲ್ಲೂ ಕೂಡ ಶಿವನಿ ಅವರು ಮುನ್ನೆಲೆಗೆ ಬರುತ್ತಿರಲಿಲ್ಲ ಹೆಚ್ಚಾಗಿ TV ಗಳ ಮುಂದೆ ಬೇರೆ ಬೇರೆ ಅಲ್ಲಿ ಎಲ್ಲೂ ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ ಆ ನಂತರ ಏನು ಮಾಡುತ್ತಾರೆ ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರ ಜೊತೆಗೆ ಹೀಗೆ ಇರುವ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಬಹಳ ಆಸೆ ಇರುತ್ತೆ ನಾನು ಬರಿ ಸಿನಿಮಾ ಮಾತ್ರ ಅಲ್ಲ ಅದರ ಹೊರತಾಗಿ ಏನಾದರೂ ಮಾಡಬೇಕು ಆ production ಅಂತದ್ದು ಏನಾದರೂ ಮಾಡಬೇಕು ಅಂತ ಹೇಳಿ ಆ ನಂತರ PRK ಹುಟ್ಟು ಹಾಕುತ್ತಾರೆ ಆ PRK production ಕಂಪನಿಯನ್ನು ಹುಟ್ಟು ಹಾಕುತ್ತಾರೆ ಆ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ಮಾಡಿಕೊಡುತ್ತಿರುತ್ತಾರೆ .

ಆಗ ಅದರ ಸ್ಕ್ರಿಪ್ಟ್ ಕೇಳುವುದು ಆಗಿರಬಹುದು ಅಥವಾ ನಿರ್ಮಾಪಕಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡವರೇ ಅಶ್ವಿನಿ ಅವರು ಆ ನಂತರ ತುಂಬಾ ಸಿನಿಮಾಗಳು ಬಂತು ಇತ್ತೀಚಿಗಷ್ಟೇ french ಬಿರಿಯಾನಿ ಮುಂಚೆ ಮಾಯಾ ಬಜಾರ್ ಕಾವಲುದಾರಿ ಹೀಗೆ ಸಾಕಷ್ಟು ಸಿನಿಮಾಗಳು ಬರುತ್ತೆ ಜನರಿಗೆ ಹೆಚ್ಚೆಚ್ಚು reach ಆಗುವಂತ ಸಿನಿಮಾಗಳನ್ನ PRK ಮೂಲಕ ಮಾಡ್ತಾ ಹೋಗ್ತಾರೆ ಅಶ್ವಿನಿ ಅವರು ಇಷ್ಟರ ಮಟ್ಟಿಗೆ ಪುನೀತ್ ರಾಜಕುಮಾರ್ ಅವರಿಗೆ ಬೆನ್ನೆಲುಬಾಗಿ ನಿಂತುಕೊಂಡಿದ್ದರು ಎಲ್ಲ ರೀತಿಯಲ್ಲೂ ಕೂಡ ಸಪೋರ್ಟ್ ಮಾಡ್ತಾ ಇದ್ದರು ಇದೀಗ ಪ್ರೀತಿಸಿ ಮನೆಯಲ್ಲಿ ಒಪ್ಪಿಸಿ ಮದುವೆ ಆದಂತ ಗಂಡನನ್ನ ಕಳೆದುಕೊಂಡು ಬಿಟ್ಟಿದ್ದಾರೆ ಅವರ ಪರಿಸ್ಥಿತಿ ಹೇಗಿರಬೇಡ ನಮಗೆ ಯಾರಿಗೂ ಕೂಡ ಊಹೆ ಮಾಡಿಕೊಳ್ಳೋಕೆ ಆಗೋದಿಲ್ಲ ಅವರ ನೋವು ಹೇಗಿರುತ್ತೆ ಏನು ಎತ್ತ ಅಂತ ಹೇಳಿ ಸತ್ತ ತಕ್ಷಣಕ್ಕೆ ಅವರಿಗೆ ಅಷ್ಟು effect ಆಗೋದಿಲ್ಲ ಈಗ ದುಃಖ ಆಗುತ್ತೆ.

ಅಳು ಬರುತ್ತೆ ಎಲ್ಲವೂ ಹೌದು ಬಟ್ ಹೋಗ್ತಾ ಹೋಗ್ತಾ ಹೆಚ್ಚೆಚ್ಚು ಮಿಸ್ ಮಾಡಿಕೊಳ್ಳುತ್ತೇವೆ ಅಂತ ಅನಿಸುವುದಕ್ಕೆ ಶುರುವಾಗುತ್ತೆ ಕಾರಣ ಪುನೀತ್ ರಾಜಕುಮಾರ್ ಅವರು ಸಿನಿಮಾಕ್ಕೆ ಎಷ್ಟು ಟೈಮ್ ಅನ್ನು ಕೊಡುತ್ತಿದ್ದರು ಸಿನಿಮಾ ಕಡೆ ಹೆಚ್ಚು ಗಮನವನ್ನು ಕೊಡುತ್ತಿದ್ದರಲ್ಲ ಅಷ್ಟೇ ಗಮನವನ್ನು ತಮ್ಮ ಫ್ಯಾಮಿಲಿ ಕಡೆಗೂ ಕೂಡ ಕೊಡುತ್ತಿದ್ದರು ಆಗಾಗ ಫ್ಯಾಮಿಲಿ ಟ್ರಿಪ್ ಹೋಗುತ್ತಿದ್ದರು ಎಲ್ಲರೂ ಕೂಡ ಎಂಜಾಯ್ ಮಾಡುತಿದ್ದರು ಖುಷಿ ಖುಷಿಯಾಗಿ ಇದ್ದರು ಮಕ್ಕಳನ್ನು ಕೂಡ ಸಂಸ್ಕಾರಯುತವಾಗಿ ಉತ್ತಮ ನಡೆತ ಹೊಂದಿರುವ ರೀತಿಯಲ್ಲಿಯೇ ಅವರ ಮಕ್ಕಳನ್ನು ಕೂಡ ಬೆಳೆಸುತ್ತಿದ್ದರು ಅಷ್ಟು ಫ್ಯಾಮಿಲಿಗೆ ಟೈಮ್ ಕೊಡುತ್ತಿದ್ದಂತಹ ಮನುಷ್ಯ ಈಗ ಆ ಕುಟುಂಬದಲ್ಲಿ ಇಲ್ಲ ಅಂದಾಗ ಆ ದುಃಖವನ್ನ ನಾವು ಯಾರು ಕೂಡ ವಿವರಿಸೋದಕ್ಕೂ ಸಾಧ್ಯ ಆಗೋದಿಲ್ಲ ಬಂಧುಗಳೇ

LEAVE A REPLY

Please enter your comment!
Please enter your name here