Categories
ಭಕ್ತಿ ಮಾಹಿತಿ ಸಂಗ್ರಹ

ಕುಂಭಕರ್ಣ ಯಾವಾಗಲು ನಿದ್ದೆ ಮಾಡಲು ಕಾರಣಕರ್ತರು ಯಾರು ಅಂತ ನಿಮಗೇನಾದ್ರು ಗೊತ್ತಿದಿಯ…! ವಿಚಿತ್ರ ವಿಚಾರ

ಸ್ನೇಹಿತರೇ ನಮ್ಮ ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಪ್ರಾಧ್ಯಾನ್ಯತೆ ನೀಡುವ ಗ್ರಂಥಗಳಾಗಿ ರಾಮಾಯಣ ಮಹಾಭಾರತವನ್ನು ನಾವು ನೋಡುತ್ತೇವೆ ಅದರಲ್ಲಿ ರಾಮಾಯಣದಲ್ಲಿ ಒಂದು ಮುಖ್ಯವಾದ ಪಾತ್ರದಲ್ಲಿ ಕಂಡು ಬರುವ ಕುಂಭಕರ್ಣ ಈ ಕುಂಭಕರ್ಣನ ಬಗ್ಗೆ ಮತ್ತು ಅವನ ತೀವ್ರವಾದ ನಿದ್ದೆಯ ಬಗ್ಗೆ ಈ ವಿಡಿಯೋದಿಂದ ನಾವು ತಿಳಿದುಕೊಳ್ಳೋಣ ನಂತರ ಈ ವಿಡಿಯೋ ಇಷ್ಟವಾಗಿದ್ದಲ್ಲಿ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ .ಆರು ಮಾಸ ಗಳಿಗೊಮ್ಮೆ ಎಚ್ಚರಗೊಳ್ಳುವ ರಾವಣನ ಸಹೋದರ ಕುಂಭಕರ್ಣನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ರಾಮಾಯಣದ ಉತ್ತರಾಖಂಡದಲ್ಲಿ ರಾಕ್ಷಸ ಸಹೋದರರಾದ ವಿಭೀಷಣ ರಾವಣ ಕುಂಭಕರ್ಣನ ಬಗ್ಗೆ ಈ ಉತ್ತರಾಖಂಡದಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಈ ಮೂರು ಜನ ಸಹೋದರರು ಸೇರಿ ದೈವಾನುಗ್ರಹಕ್ಕೆ ಅನೇಕ ವರ್ಷಗಳ ಕಾಲ ಕಠಿಣ ತಪಸ್ಸಿಗೆ ಕೂರುತ್ತಾರೆ ತುಂಬಾ ಘನ ಘೋರವಾದ ತಪಸ್ಸನ್ನು ಮಾಡಿದ ನಂತರ ಇವರ ಮುಂದೆ ಬ್ರಹ್ಮ ದೇವರು ಪ್ರತ್ಯಕ್ಷನಾಗುತ್ತಾನೆ ಬ್ರಹ್ಮ ದೇವರು ಪ್ರತ್ಯಕ್ಷನಾಗಿ ಈ ಸಹೋದರರಿಗೆ ಏನು ವರ ಬೇಕು ಕೇಳಿಕೊಳ್ಳಿ ಎಂದು ಹೇಳುತ್ತಾನೆ ಅದರಲ್ಲಿ ಸಹೋದರರ ಹಾದಿಯಲ್ಲಿ ರಾವಣ ಮೊದಲಿಗರಾಗಿರುತ್ತಾರೆ ರಾವಣನು ಬ್ರಹ್ಮದೇವನ ಬಳಿ ಅಮರತ್ವದ ಬಗ್ಗೆ ಕೇಳುತ್ತಾನೆ ಅಮರತ್ವ ಎಂದರೆ ಅವನು ಎಂದಿಗೂ ಸಾಯಬಾರಾದು ಎಂದು ಆ ಸಂದರ್ಭದಲ್ಲಿ ಬ್ರಹ್ಮದೇವನು ತುಂಬಾ ಯೋಚಿಸಿ ಅವನಿಗೆ ಅಮರತ್ವವನ್ನು ವರವಾಗಿ ನೀಡುತ್ತಾರೆ ಪಕ್ಷಿ ಪ್ರಾಣಿ ಹಾವು ಮನುಷ್ಯನಿಂದ ಸಾವು ಬರುವುದಿಲ್ಲ ಎಂದು ಬ್ರಹ್ಮದೇವನು ರಾವಣನಿಗೆ ವರವನ್ನು ನೀಡುತ್ತಾನೆ.

ಅದಾದ ನಂತರ ವಿಭೀಷಣನ ಎರಡನೆಯವನಾಗಿ ವರವನ್ನು ಕೇಳಿಕೊಳ್ಳಲು ಬ್ರಹ್ಮದೇವನ ಬಳಿ ಬರುತ್ತಾನೆ ವಿಭೀಷಣ ನ್ಯಾಯ ನೀತಿ ಪಾಲಿಸುವುದು ನನ್ನ ಕೊನೆಯ ಉಸಿರಿರುವವರೆಗೂ ಸಾಧ್ಯವಾಗಬೇಕೆಂದು ಬ್ರಹ್ಮದೇವರ ಬಳಿ ವರವನ್ನು ಕೇಳಿಕೊಳ್ಳುತ್ತಾನೆ ಅದಕ್ಕೆ ಬ್ರಹ್ಮದೇವನು ತಥಾಸ್ತು ಎಂದು ವರವನ್ನು ನೀಡುತ್ತಾನೆ ನಂತರ ಬ್ರಹ್ಮದೇವನು ರಾಕ್ಷಸರ ಸಹೋದರರಲ್ಲಿ ಮೂರನೇಯವನಾದ ಕುಂಭಕರ್ಣನ ಬಳಿ ಹೋಗುತ್ತಿರುವಾಗ ದೇವತೆಗಳು ಅಡ್ಡಗಟ್ಟಿ ನಿಲ್ಲಿಸುತ್ತಾರೆ .

ಎಂದಿಗೂ ಕೂಡ ಕುಂಭಕರ್ಣರಿಗೆ ವರವನ್ನು ನೀಡಬಾರದು ಎಂಬುದಕ್ಕೆ ಕಾರಣ ಕುಂಭಕರ್ಣನ ಇಡೀ ಪ್ರಪಂಚವನ್ನೇ ನುಂಗುವಂತೆ ಶಕ್ತಿಯನ್ನು ಹೊಂದಿರುತ್ತಾನೆ ಆ ಕಾರಣದಿಂದ ಎಂದಿಗೂ ಅವನಿಗೆ ವರ ಕೊಡಬಾರದೆಂದು ದೇವತೆಗಳು ಅಡ್ಡಗಟ್ಟಿದರು ಅದಾದ ನಂತರ ಬ್ರಹ್ಮದೇವ ತುಂಬಾ ಯೋಚಿಸಿ ಅವನ ಮಡದಿಯಾದ ಸರಸ್ವತಿಯ ಸಹಾಯವನ್ನು ಪಡೆಯುತ್ತಾನೆ ಸರಸ್ವತಿಯ ಸಹಾಯವನ್ನು ಪಡೆದು ಸರಸ್ವತಿಗೆ ಹೇಳುತ್ತಾನೆ .

ಕುಂಭಕರ್ಣ ವರವನ್ನು ಕೇಳುವಾಗ ಅವನ ನಾಲಿಗೆ ತೊದಲ ಬೇಕು ಎಂದು ಸರಸ್ವತಿಗೆ ಆಜ್ಞೆ ಮಾಡುತ್ತಾನೆ ನಂತರ ಬ್ರಹ್ಮದೇವನು ಕುಂಭಕರ್ಣನ ಬಳಿ ಹೋಗುತ್ತಾನೆ ಕುಂಭಕರ್ಣನು ಬ್ರಹ್ಮದೇವನ ಬಳಿ ಇಂದ್ರನ ಸಿಂಹಾಸನವನ್ನು ಕೇಳಬೇಕು ಎಂದಿರುತ್ತಾರೆ ಅವನು ಇಂದ್ರನ ಸಿಂಹಾಸನವನ್ನು ವರವಾಗಿ ನೀಡು ಎನ್ನುವುದರ ಬದಲು ನಿದ್ರಾಸನ ಎಂದು ನುಡಿಯುತ್ತಾನೆ ಅದರಿಂದಾಗಿ ನಿದ್ರಾದೇವತೆ ಅವನ ಪಾಲಿಗೆ ಒಲಿದು ಬರುತ್ತಾಳೆ ಬ್ರಹ್ಮದೇವನು ಕೂಡ ಅದಕ್ಕೆ ತಥಾಸ್ತು ಎಂದು ವರವನ್ನು ನೀಡುತ್ತಾನೆ ನಂತರ ರಾವಣನು ಬಂದು ಬ್ರಹ್ಮದೇವರ ಬಳಿ ಕೇಳಿಕೊಳ್ಳುತ್ತಾನೆ ಇವನು ಯಾವಾಗಲೂ ನಿದ್ದೆಯನ್ನು ಮಾಡುತ್ತಿದ್ದರೆ ತೊಂದರೆಯಾಗುತ್ತದೆ ಎಂದು ರಾವಣನು ಬ್ರಹ್ಮದೇವನ ಬಳಿ ಕೇಳಿಕೊಂಡಿದ್ದರಿಂದ ಅವನಿಗೆ ಆರು ಮಾಸ ಗಳಿಗೊಮ್ಮೆ ಒಂದು ದಿನ ಎಚ್ಚರವಾಗುತ್ತದೆ .

ಆರು ಮಾಸ ಎಂದರೆ ಆರು ತಿಂಗಳಿಗೊಮ್ಮೆ ಒಂದು ದಿನ ಎಚ್ಚರವಾಗುತ್ತದೆ ಎಂದು ಹೇಳುತ್ತಾನೆ ಆ ಒಂದು ದಿನ ಭೂಮಿಯ ಮೇಲಿನ ಆಹಾರವನ್ನೆಲ್ಲ ತಿನ್ನುತ್ತಾನೆ ಎಂದು ಹೇಳುತ್ತಾರೆ ಅದಾದ ನಂತರ ರಾವಣ ಮತ್ತು ರಾಮನ ನಡುವೆ ಯುದ್ಧವಾಗಿ ಬೇಕಾದರೆ ಒಂಬತ್ತು ದಿನಗಳಿಗೆ ರಾವಣ ಕುಂಭಕರ್ಣರನ್ನು ಎಚ್ಚರಿಸಲು ಪ್ರಯತ್ನಿಸುತ್ತಾನೆ ಎಂದು ಯುದ್ಧಕಾಂಡದಲ್ಲಿ ಪ್ರಸ್ತಾಪವಿದೆ ಕುಂಭಕರ್ಣನಿಗೆ ರಾಮ ಶ್ರೀ ವಿಷ್ಣುವಿನ ಅವತಾರ ಎಂದು ತಿಳಿದಿರುತ್ತದೆ ಆದ್ದರಿಂದ ಅವನು ಅಣ್ಣನಿಗೆ ಸೀತೆಯನ್ನು ಅಪಹರಿಸುವುದು ಬೇಡ ಎಂದು ಕೂಡ ಬುದ್ಧಿವಾದ ಹೇಳಿರುತ್ತಾರೆ ಆದರೆ ಅಣ್ಣನಾದ ರಾವಣ ಎಂದಿಗೂ ಕುಂಭಕರ್ಣನ ಮಾತನ್ನು ಕೇಳಿರುವುದಿಲ್ಲ .

ಅಣ್ಣ ರಾವಣನಿಗೋಸ್ಕರ ಕುಂಭಕರ್ಣ ರಾಮನ ವಿರುದ್ಧ ಯುದ್ಧವನ್ನು ಮಾಡುತ್ತಾನೆ ಯುದ್ಧವನ್ನು ಮಾಡಿ ಮೋಕ್ಷವನ್ನು ಹೊಂದಿದೆ ಎಂದು ತುಳಸಿದಾಸರು ರಚಿಸಿರುವ ರಾಮಚರಿತ ಮಾನಸದಲ್ಲಿ ತಿಳಿದು ಬಂದಿದೆ ಈ ರೀತಿಯಾಗಿ ಕುಂಭಕರ್ಣ ಬ್ರಹ್ಮನಿಂದ ವರ ಪಡೆಯುವಾಗ ವ್ಯತ್ಯಾಸವಾಗಿ ಅವನು ನಿದ್ರೆಗೆ ಶರಣಾಗುತ್ತಾರೆ ಎಂದು ಪುರಾಣಗಳಲ್ಲಿ ತಿಳಿದು ಬಂದಿದೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಲೈಕ್ ಮಾಡಿ ಮತ್ತು ಕಮೆಂಟ್ ಮಾಡಿ ಶುಭ ದಿನ ಧನ್ಯವಾದಗಳು ….

Leave a Reply