Categories
ಭಕ್ತಿ ಮಾಹಿತಿ ಸಂಗ್ರಹ

ರಾತ್ರೋರಾತ್ರಿ ಇಲ್ಲಿ ಶಿವಲಿಂಗಕ್ಕೆ ಅಗೋಚರ ಶಕ್ತಿಯೊಂದು ಪೂಜೆ ಮಾಡುತ್ತದೆ ? ಅದೃಶ್ಯ ಶಕ್ತಿಯ ಬಗ್ಗೆ ನೀವು ತಿಳಿದುಕೊಂಡರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ !!!

ಉತ್ತರಪ್ರದೇಶದಲ್ಲಿ ಇರುವಂತಹ ಒಂದು ಶಿವನ ದೇವಸ್ಥಾನದಲ್ಲಿ ಈ ತರದ ಒಂದು ವಿಚಿತ್ರವಾದ ಘಟನೆ ನಡೆಯುತ್ತಿದೆ, ಅಲ್ ಇರುವಂತಹ ಶಿವನ ಲಿಂಗಕ್ಕೆ ಯಾವುದೋ ಒಂದು ಅದೃಶ್ಯ ಶಕ್ತಿ ಪೂಜೆ ಮಾಡುತ್ತದೆ.

ಇಲ್ಲಿವರೆಗೂ ಈ ರೀತಿ ಪೂಜೆ ಮಾಡುತ್ತಿರುವಂತಹ ಆಗೋಚರ ಶಕ್ತಿ ಯಾವುದು ಎಂದು ಇನ್ನು ಯಾರಿಗೂ ತಿಳಿದುಬಂದಿಲ್ಲ. ಹಾಗಾದರೆ ಬನ್ನಿ ಈ ರಹಸ್ಯದ ಕುರಿತು ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ.

ಈ ತರದ ವಿಸ್ಮಯಕಾರಿ ವಿಚಾರ ನಡೆದಿದ್ದಾದರೂ ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಉತ್ತರ ಪ್ರದೇಶದ ಬಾಬಾ ಕಿ ಎನ್ನುವ ಜಿಲ್ಲೆಯಲ್ಲಿ ಇರುವಂತಹ ಕುಂದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ತರದ ಒಂದು ವಿಸ್ಮಯ ಕಾರ್ಯಗಳು ನಡೆಯುತ್ತಾ ಇದೆ.

ಈ ಸ್ವಾಮಿ ದೇವಸ್ಥಾನದಲ್ಲಿ ಕುಂತಿಯು ಈ ದೇವಸ್ಥಾನಕ್ಕೆ ಬಂದು ಸ್ವಾಮಿಯ ಪೂಜೆಯನ್ನು ಮಾಡುತ್ತಾರೆ ಎಂದು ಇಲ್ಲಿನ ಜನರು ಹೇಳುತ್ತಾರೆ.

ಇದರ ಹಿಂದೆ ಒಂದು ಪೌರಾಣಿಕ ಕಥೆ ಕೂಡ ಇದೆ, ಅದರ ಮೂಲದ ಪ್ರಕಾರ ಕುಂತಿಯು ಪಾಂಡವರ ಯಶಸ್ವಿ ಗೋಸ್ಕರ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ಯನ್ನು. ಹೀಗೆ ಪೂಜೆ ಮಾಡಿದಂತಹ ಸ್ಥಳವನ್ನು ಕುಂದೇಶ್ವರ ಮಹಾ ಮಂದಿರ ಎಂದು ಕರೆಯುತ್ತಾರೆ.

ಈ ಪ್ರದೇಶದಲ್ಲಿ ಒಂದು 5000 ವರ್ಷ ಹಳೆಯದಾದ ಅಂತಹ ಒಂದು ವೃಕ್ಷ ಕೂಡ ಇದೆ ಅದರ ಹೆಸರು ಪಾರಿಜಾತ ವೃಕ್ಷ. ವೃಕ್ಷವು ಮಹಾಭಾರತದಲ್ಲಿ ಉಲ್ಲೇಖ ಕೂಡ ಆಗಿದೆ. ಪುರಾಣದ ಪ್ರಕಾರ ಅರ್ಜುನನ್ನು ಕುಂತಿಯ ಪುಷ್ಪಾರ್ಚನೆ ಗೋಸ್ಕರ ವೃಕ್ಷವನ್ನು ಇಂದ್ರಲೋಕದಿಂದ ತಂದು ಇಲ್ಲಿ ನೆಟ್ ಇದ್ದಾನೆ ಎನ್ನುವ ಪುರಾಣದಲ್ಲಿ ಇದು ಕೂಡ ಇದೆ. ಇನ್ನು ಕೆಲವರು  ದೇವರ ಮರ ಎಂದು ಕೂಡ ಕರೆಯುತ್ತಾರೆ.

ಹಾಗೂ ಈ ದೇವಸ್ಥಾನದಲ್ಲಿ ಒಂದು ಹೂವು  ಕಂಡು ಬರುತ್ತವೆ ಅವನ್ನು ನೋಡಿದರೆ ವಿಚಿತ್ರ ಎಂದು ಅನಿಸುತ್ತದೆ ಯಾಕೆಂದರೆ, ಈ ಹೂವು ಗಿಡದಲ್ಲಿ ಇರುವಾಗ ಬಿಳಿ ಬಣ್ಣವನ್ನು ಹೊಂದಿದ್ದರೆ ಗಿಡದಿಂದ ಬಿದ್ದಾಗ ಸ್ವರ್ಣ ಬಣ್ಣಕ್ಕೆ ಬದಲಾಗುತ್ತದೆ. ಈ ರೀತಿ ಈ ಗಿಡದಲ್ಲಿ ಬರುವಂತಹವು ವನ್ನು ನೀವು ಶಿವನ ಲಿಂಗದ ಮೇಲೆ ಇಟ್ಟು ಪೂಜೆ ಮಾಡಿದ್ದೇ ಆದಲ್ಲಿ ನಿಮ್ಮ ಮನಸ್ಸಿನಲ್ಲಿ ಇರುವಂತಹ ಯಾವುದೇ ಕಷ್ಟ ಪರಿಹಾರ ಗಳು ನಡೆಯುತ್ತವೆ .

ಈ ಬಾಮನ್ ಕಿ ಇಲ್ಲಿರುವಂತಹ ಕುಂತೂರು ಗ್ರಾಮ ದಲ್ಲಿ ನಡೆಯುತ್ತಿರುವಂತಹ ಈ ಚಮತ್ಕಾರ ವಿಸ್ಮಯ ಎಲ್ಲರನ್ನೂ ನಿಬ್ಬೆರಗಾಗಿ ನೋಡುವಂತೆ ಮಾಡಿದೆ. ಈ ಗರ್ಭಗುಡಿಯನ್ನು ಬಾಗಿಲು ತೆಗೆದರೆ ಯಾರು ಬಂದು ಪೂಜೆ ಮಾಡುವುದಂತೆ ಅನಿಸುತ್ತದೆ.

ಈ ರೀತಿ ಚಮತ್ಕಾರವನ್ನು ನೋಡಿದಂತಹ ಅಲ್ಲಿನ ಸ್ಥಳೀಯರು ಕುಂತಿ ಇವಾಗಲು ಕೂಡ ಈ ದೇವಸ್ಥಾನಕ್ಕೆ ಬಂದು ಶಿವಲಿಂಗಕ್ಕೆ ಪೂಜೆ ಮಾಡುತ್ತಿದ್ದಾರೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಈ ದೇವಸ್ಥಾನಕ್ಕೆ  ಬೀಗ ಹಾಕಲಾಗುತ್ತದೆ , ಹೀಗೆ ಬೀಗ ಹಾಕಿದ ನಂತರ ದೇವಸ್ಥಾನದ ತೆರೆದ ಬಳಿಕ ಒಂದು ವಿಚಿತ್ರವಾದ ಘಟನೆ ನೀವು ನೋಡಬಹುದಾಗಿದೆ. ಅದು ಯಾವುದು ಅಲ್ಲ ಯಾರೂ ಬರದೇ ಇರುವ ಹಾಗೆ ಬೀಗ ಹಾಕಿದರು ಕೂಡ ಯಾರೋ ಬಂದು ಶಿವನ ಲಿಂಗಕ್ಕೆ ಪೂಜೆ ಮಾಡಿದ ಹಾಗೆ ಗೋಚರಿಸುತ್ತದೆ.

ಈ ರೀತಿ ಪ್ರತಿದಿನ ಚಮತ್ಕಾರವನ್ನು ತೋರಿಸುವಂತಹ ಈ ಶಿವಲಿಂಗ ನಿಜವಾಗಲೂ ವಿಜ್ಞಾನಿಗಳಿಗೆ ಒಂದು ಸವಾಲಾಗಿ ಎದುರಾಗಿದೆ. ಈ ಲೇಖನ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ  ಇದನ್ನು ಶೇರ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

kundeshwara temple special

kannada inspiration story and Kannada Health Tips