Categories
ಭಕ್ತಿ ಮಾಹಿತಿ ಸಂಗ್ರಹ

ಮಾರಿಕಾಂಬ ದೇವಿಗೆ ಬೊಟ್ಟು ಇಟ್ಟರೆ ಹುಲ್ಲಿನ ಮೂಟೆ ಹೊತ್ತಿ ಉರಿಯುತ್ತದಂತೆ… ಈ ಕುತೂಹಲಕಾರಿ ವಿಚಾರವನ್ನ ಮಿಸ್ ಮಾಡ್ಕೋಬೇಡಿ…

ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ತಾಲ್ಲೂಕಿನ ಒಂದು ಪವಾಡದ ಬಗ್ಗೆ ತಿಳಿಸಲು ಬಂದಿದ್ದೇನೆ ಲಕ್ಕವಳ್ಳಿಯ ಮಾರಿ ದೇವಿಯ ಜಾತ್ರೆಯೆಂದರೆ ಎಲ್ಲರಿಗೂ ಗೊತ್ತೇ ಇರುತ್ತದೆ ಹಾಗೂ ಈ ಜಾತ್ರೆಯನ್ನು ವೀಕ್ಷಿಸಲು ಲಕ್ಷಾಂತರ ಜನರು ಬರುತ್ತಾರೆ ಹಾಗೂ ಎಲ್ಲರಿಗೂ ಈ ತಾಯಿಯ ಮಹಿಮೆ ತಿಳಿದಿದೆ .

ಇಲ್ಲಿಯ ಜಾತ್ರೆ  ಕರ್ನಾಟಕದಲ್ಲಿ ಒಂದು ಫೇಮಸ್ ಹಾಗೂ ನಾನು ಇಂದು ಈ ಜಾತ್ರೆಯ ಹಿಂದಿನ ಕಥೆಯನ್ನು ಹೇಳುತ್ತೇನೆ ಹಾಗೂ ಇದರ ಸಂಭ್ರಮಾಚರಣೆಯನ್ನು ಹೇಳುತ್ತೇನೆ .

ಸ್ನೇಹಿತರೇ .ನಮ್ಮ ಪೂರ್ವಜರ ಕಾಲದಲ್ಲಿ ಹೆಣ್ಣು ಮಕ್ಕಳು ಹದಿನೆಂಟು ವಯಸ್ಸು ದಾಟುವ ಮುನ್ನವೇ ಮದುವೆಯಾಗಬೇಕಿತ್ತು ಆದರೆ ಒಬ್ಬ ಬ್ರಾಹ್ಮಣನ ಮಗಳಿಗೆ ಹದಿನೆಂಟು ವಯಸ್ಸಾದರೂ ಮದುವೆಯಾಗಲಿಲ್ಲ ಆದ್ದರಿಂದ ಆ ಹೆಣ್ಣು ಮಗಳು ಒಂದು ಕಾಡಿಗೆ ತೆರಳುತ್ತಾಳೆ.

ಅಲ್ಲಿ ಒಬ್ಬ ತಾನು ಬ್ರಾಹ್ಮಣನು ಎಂದು ಎಲ್ಲರಿಗೂ ಹೇಳಿಕೊಳ್ಳುತ್ತಿರುತ್ತಾರೆ ಹಾಗೂ ಈತ ಚಮ್ಮಾರ ನಾಗಿ ಬ್ರಾಹ್ಮಣ ಎಂದು ಹೇಳಿಕೊಳ್ಳುತ್ತಾ ಇರುತ್ತಾನೆ ಆಗ ಮಾರಿಕಾಂಬ ಆ ಯುವಕನನ್ನು ಮದುವೆಯಾಗುತ್ತಾಳೆ.

ಕಾಲ ಕಳೆಯುತ್ತಾ ಈ ದಂಪತಿಗಳಿಗೆ ಮಕ್ಕಳು ಸಹ ಆಗುತ್ತಾರೆ. ಒಂದು ದಿನ ಮಕ್ಕಳು ಬರಿ ಕಾಳಿನಲ್ಲಿ ಪಾದರಕ್ಷೆಗಳನ್ನು ಧರಿಸದೆ ನಡೆಯುತ್ತಿದ್ದು ಆಗ ಆತನ ಮಕ್ಕಳಿಗೆ ಪಾದರಕ್ಷೆ ಮಾಡಿಕೊಡುತ್ತಾನೆ .

ಇದನ್ನು ನೋಡಿ ಮಾರಿಕಾಂಬ ಆಶ್ಚರ್ಯಚಕಿತ ಕೇಳುತ್ತಲೇ  ಹಾಗೂ ಪತಿಯ ಹುಟ್ಟಿನ ಮತ್ತು ಜಾತಿಯ ಬಗ್ಗೆ ತಿಳಿಯುತ್ತಲೇ ಆಗ ಆತನು ಚಮ್ಮಾರ ಎಂಬುದು ತಿಳಿಯುತ್ತದೆ . ಅದಕ್ಕೆ ಕೋಪಗೊಂಡ ಮಾರಿಕಾಂಬ ತನ್ನ ಪತಿ ಮತ್ತು ಮಕ್ಕಳನ್ನು ಕೊಂದು ಸೇಡನ್ನು ತೀರಿಸಿಕೊಳ್ಳುತ್ತಾಳೆ.

ನ್ಯಾಯಯುತ ದಿನದಂದು ದೃಷ್ಟಿ ಬೊಟ್ಟಿನ ಕಾರ್ಯಕ್ರಮವೂ ಇಲ್ಲಿ ನಡೆಯುತ್ತದೆ ಅಲ್ಲಿ ಮರದ ಮಾರಿಕಾಂಬ ವನ್ನು ವಿಗ್ರಹವನ್ನೇ ಕೆತ್ತಿ ಆ ವಿಗ್ರಹಕ್ಕೆ ಬೊಟ್ಟು ಇಡಲಾಗುತ್ತದೆ ಆ ನಂತರ ಎದುರಿಗಿದ್ದ ಹುಲ್ಲಿನ ಮೂಟೆ ಬೆಂಕಿಯಿಂದ ಹೊತ್ತಿ ಉರಿಯುತ್ತದೆ. ಈ ಚಮತ್ಕಾರಕ್ಕೆ ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ .

ಹಾಗೂ ಇಲ್ಲಿಯ ಹಲವು ಸಮುದಾಯಗಳಿವೆ ಮತ್ತು ಯಾದವ ಸಾಮ್ರಾಜ್ಯದ ಕೊನೆಯ ರಾಜ ಗೋವಿಂದ ಸ್ವಾಮಿ ಯಾದವ ಅವರು ಪೂಜೆಯನ್ನು ಪ್ರಾರಂಭಿಸುತ್ತಾರೆ .ಹಾಗೂ ಹಲವು ಸಮುದಾಯಗಳಿದ್ದು ಈ ಜಾತ್ರಾ ಮಹೋತ್ಸವದಂದು ಅವರಲ್ಲಿ ಅನುಮತಿಗಳನ್ನು ಪಾಲಿಸುತ್ತಾರೆ .

ಇನ್ನು ಲಕ್ಕವಳ್ಳಿಯಲ್ಲಿ ಜೈನ ಬಸದಿಗಳು ಸಹ ಇದೆ ಇಲ್ಲಿ ಸುಮಾರು ವರ್ಷಗಳಿಂದ ಪಾರ್ಶ್ವನಾಥ ತೀರ್ಥಂಕರರನ್ನು ಪೂಜೆ ಮಾಡುತ್ತಾರೆ ಇದು ಲಕ್ಕವಳ್ಳಿಯ ಸೆಂಟ್ರಲ್ ನಲ್ಲಿ ಇದೇ ಸ್ನೇಹಿತರೇ ಈ ಸ್ಥಳವು ಬೆಂಗಳೂರಿನಿಂದ 257 ಕಿಲೋಮೀಟರ್ ದೂರದಲ್ಲಿದೆ . ಇನ್ನು ಇದಕ್ಕೆ ಹತ್ತಿರವಿರುವ ರೈಲ್ವೇ ನಿಲ್ದಾಣವೆಂದರೆ ತರಿಕೆರೆಯ ಹಾಗೂ ಹತ್ತಿರದ ವಿಮಾನ ನಿಲ್ದಾಣವೂ ಮಂಗಳೂರು .ಇನ್ನು ಲಕ್ಕವಳ್ಳಿಯ ಬಗ್ಗೆ ಹೇಳಬೇಕೆಂದರೆ ಇಲ್ಲಿ ಪ್ರಸಿದ್ಧವಾದ ಅಣೆಕಟ್ಟು ಸಹ ಇದೆ .

ಇದನ್ನು ಇಂಜಿನಿಯರ್ ವಿಶ್ವೇಶ್ವರಯ್ಯ ಅವರು ನಿರ್ಮಿಸಿದ್ದು . ಈ ಅಣೆಕಟ್ಟು ಕರ್ನಾಟಕದ ಅತ್ಯಂತ ಹಳೆಯ ಹಾಗೂ ಸುಂದರವಾದ ಈ ಅಣೆಕಟ್ಟಿನ ವಿಶೇಷವೆಂದರೆ ವರ್ಷಪೂರ್ತಿ ನೀರಿನಿಂದ ತುಂಬಿರುತ್ತದೆ . ಹಾಗೂ ಇಲ್ಲಿ ಇನ್ನೂ ಹಲವಾರು ಸ್ಥಳಗಳು ನೋಡಲು ಇವೆ .ಅದು ಭದ್ರಾ ವನ್ಯಜೀವಿ ಅಭಯಾರಣ್ಯ .

marikamba temple pawada