Categories
ಮಾಹಿತಿ ಸಂಗ್ರಹ

ಕರ್ನಾಟಕದಲ್ಲಿ ಸ್ವಾತಂತ್ರ್ಯಕ್ಕೂ ಮುನ್ನ ಎಷ್ಟು ಸಾವಿರ ಕಿಲೋಮೀಟರ್ ರೈಲು ಮಾರ್ಗವಿತ್ತು ಅನ್ನೋದು ಗೊತ್ತ …

ಸ್ನೇಹಿತರೇ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ನಾಡು ನುಡಿ ಸಂಸ್ಕೃತಿಯ ಬಗ್ಗೆ ಅತಿ ಹೆಚ್ಚು ಹೆಮ್ಮೆ ಇರುತ್ತದೆ ಅದೇ ರೀತಿಯಲ್ಲಿ ನಮ್ಮ ಕನ್ನಡ ನಾಡು ಯಾವುದಕ್ಕೂ ಕೂಡ ಕಡಿಮೆ ಇಲ್ಲ ಎಂಬುದಕ್ಕೆ ಒಂದು ಉತ್ತಮ ನಿದರ್ಶನವನ್ನು ನಾನು ಈ ದಿನ ನಿಮ್ಮ ಮುಂದಿಡುತ್ತಿದ್ದೇನೆ.

ಅದೇ ರೈಲ್ವೆ ಸಾಮಾನ್ಯವಾಗಿ ರೈಲ್ವೆ ಮಾರ್ಗ ಆರಂಭವಾಗಿದ್ದು ಸ್ವಾತಂತ್ರ್ಯ ನಂತರ ಎಂಬ ಕಲ್ಪನೆ ಕೆಲವೊಬ್ಬರಿಗೆ ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ ಸ್ವಾತಂತ್ರ್ಯ ಬರುವುದಕ್ಕೂ ಮುಂಚೆ ರೈಲ್ವೆ ಮಾರ್ಗಗಳು ಯಾವುವು ,

ಯಾವ ಕಾಲದಲ್ಲಿ ರೈಲ್ವೆ ಬಂತು ಯಾವ ಪರಿಸ್ಥಿತಿಯಲ್ಲಿ ಬಂತು ಅದಕ್ಕೆ ಯಾವ ಸ್ಥಿತಿ ಬಂದಿತು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ದಿನ ನಿಮಗೆ ನೀಡುತ್ತೇವೆ .

ಸಾವಿರದ ಎಂಟುನೂರಾ ಎಪ್ಪತ್ತು ಏಳು ಎಪ್ಪತ್ತೆಂಟು ರಲ್ಲಿ ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಬರಗಾಲ ಆರಂಭವಾಗುತ್ತದೆ ಆರಂಭವಾದಂತ ಸಂದರ್ಭದಲ್ಲಿ ಜನರಿಗೆ ಉದ್ಯೋಗ ವಿರುವುದಿಲ್ಲ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಮೈಸೂರು ಸರ್ಕಾರವು ಯುರೋಪಿನ್ ಸಂಸ್ಥೆ ಜೊತೆಗೆ ಸೇರಿ ಎಂಎಸ್ಆರ್ ಎಂಬ ಒಂದು ರೈಲ್ವೆ ವಲಯವನ್ನು ಆರಂಭಿಸುತ್ತದೆ.

ಅಂದರೆ ಮೈಸೂರು ಸ್ಟೇಟ್ ರೈಲ್ವೆ ಎಂಬ ವಲಯವನ್ನು ಆರಂಭಿಸುತ್ತದೆ ಮೊದಲನೆಯದಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಎಂಬತ್ತಾರು ಮೈಲಿ ದೂರದ ರೈಲ್ವೆ ಮಾರ್ಗವನ್ನು ಆರಂಭಿಸಲಾಗುತ್ತದೆ ಅದಾದ ನಂತರ ಸಾವಿರದ ಇನ್ನೂರ ಎಂಬತ್ತು ನಾಲ್ಕು ರಿಂದ ಮತ್ತೊಂದು ರೈಲ್ವೆ ಮಾರ್ಗವನ್ನು ಆರಂಭಿಸಿದರೆ ಅದು ತೊಂಬತ್ತು ನಾಲ್ಕು ಮೈಲಿ ಬೆಂಗಳೂರು ಗುಬ್ಬಿ ಮಾರ್ಗವಾಗಿರುತ್ತದೆ ಅದು ಸಾಮಾನ್ಯವಾಗಿ ನಮ್ಮ ಜನರಿಂದಲೇ ತಯಾರಿಸಿದಂತಹ ರೈಲ್ವೆ ಮಾರ್ಗವಾಗಿದೆ .

ಅದಾದ ನಂತರ ನಮ್ಮ ಸರ್ಕಾರ ಅಂದರೆ ಮೈಸೂರು ಸರಕಾರ ಬ್ರೀಟಿಷ ಸರ್ಕಾರಕ್ಕೆ ಬರ ಸಾಲವನ್ನು ಕೊಡಬೇಕಾಗುತ್ತದೆ ಅದು ಎಂಬತ್ತು ಲಕ್ಷ ಬರ ಸಾಲವನ್ನು ಕೊಡಬೇಕಾದ್ದರಿಂದ ಮೈಸೂರು ಸರ್ಕಾರವು ರೈಲ್ವೆ ಮಾರ್ಗವನ್ನು ಮಾರಾಟ ಮಾಡಲು ನಿರ್ಧರಿಸುತ್ತದೆ ಅದು ಬ್ರಿಟಿಷ್ ಸರಕಾರದ ಸದರನ್ ಮಾರಾಟ ರೈಲ್ವೆ ಕಂಪನಿಗೆ ತನ್ನ ನೂರಾ ನಲವತ್ತು ಮೈಲಿ ದೂರದ ರೈಲ್ವೆ ಹಳಿಯನ್ನು ಮಾರಾಟ ಮಾಡುತ್ತದೆ .

ಅದಾದ ನಂತರ ಸಾವಿರದ ಎಂಟನೂರು ತೊಂಬತ್ತು ಎರಡ ರಿಂದ ಸಾವಿರದ ಎಂಟನೂರು ತೊಂಬತ್ತೊಂಬತ್ತು ರವರೆಗೆ ಬೆಂಗಳೂರು ಬೀರೂರು ಶಿವಮೊಗ್ಗ ಹಿಂದೂಪುರ ಈ ಮಾರ್ಗಗಳ ಒಟ್ಟಾಗಿ ತೊಂಬತ್ತಾ ಒಂಬತ್ತು ಮೈಲಿ ರೈಲ್ವೆ ಹಳಿಯನ್ನು ನಿರ್ಮಾಣ ಮಾಡುತ್ತದೆ .

ಅದಾದ ಮೇಲೆ ಸಾವಿರದ ಒಂಬೈನೂರ ಹನ್ನೆರಡ ರಿಂದ ಸಾವಿರದ ಒಂಬೈನೂರ ಹದಿನೆಂಟರ ಆರು ವರ್ಷಗಳ ಅವಧಿಯಲ್ಲಿ ಅದು ಮೈಸೂರು ಅರಸೀಕೆರೆ ತರೀಕೆರೆ ಚಿಕ್ಕಬಳ್ಳಾಪುರ ಈ ಮಾರ್ಗಗಳನ್ನು ಹೊಂದಿ ಕೊಳ್ಳುವಂತ ಇನ್ನೂರ ಮೂವತ್ತಾ ಒಂದು ಮೈಲಿ ರೈಲ್ವೆ ಹಳಿಯನ್ನು ಆರಂಭಿಸಿ ರೈಲ್ವೆ ಚಾಲನೆಯನ್ನು ಮಾಡುತ್ತದೆ .

ಸ್ನೇಹಿತರೆ ನೀವು ಈ ವಿಷಯವನ್ನು ಕೇಳಿ ಇರುವುದಿಲ್ಲ ಆದರೆ ಜೂನ್ ಮೂವತ್ತು ಸಾವಿರದ ಒಂಬೈನೂರ ನಲವತ್ತು ರ ಹೊತ್ತಿಗೆ ಮೈಸೂರು ಸಂಸ್ಥಾನ ಅಂದರೆ ಮೈಸೂರು ಸರ್ಕಾರದ ಅಡಿಯಲ್ಲಿ ಕರ್ನಾಟಕದಲ್ಲಿ ಒಟ್ಟು ಸಾವಿರದ ಇನ್ನೊರು ಕಿಲೋಮೀಟರ್ ರೈಲ್ವೆ ಹಳಿ ಇರುವುದನ್ನು ನಾವು ಗಮನಿಸಬಹುದಾಗಿತ್ತು.

ಇಷ್ಟೆಲ್ಲಾ ರೈಲ್ವೆ ಹಳಿಗಳು ಮತ್ತು ಸಾವಿರದ ಇನ್ನೂರು ಕಿಲೋಮೀಟರ್ ರೈಲ್ವೆ ಮಾರ್ಗ ಸ್ವಾತಂತ್ರ್ಯ ಪೂರ್ವದಲ್ಲೇ ಇದ್ದರೂ ಕೂಡ ಸ್ವಾತಂತ್ರ್ಯ ನಂತರ ನಮ್ಮ ರಾಜ್ಯದಲ್ಲಿ ಇರುವುದು ಮೂರು ಸಾವಿರದ ನೂರು ಕಿಲೋಮೀಟರ್ ಅಷ್ಟೆ ಇದರಿಂದಲೇ ತಿಳಿಯುತ್ತದೆ ನಮ್ಮ ಕರ್ನಾಟಕ ರಾಜ್ಯ ಭಾರತ ಸರ್ಕಾರದಿಂದ ಅಂದರೆ ಕೇಂದ್ರ ಸರ್ಕಾರದಿಂದ ಯಾವ ಮಟ್ಟಿಗೆ ರೈಲ್ವೆ ಇಲಾಖೆಯಲ್ಲಿ ವಂಚಿತ ಆಗಿದೆ ಎಂದು .
ಸಾವಿರದ ಒಂಬೈನೂರ ಐವತ್ತಾ ಒಂದರವರೆಗೆ ಮೈಸೂರು ಸರ್ಕಾರದ ಅಡಿಯಲ್ಲಿದ್ದ ರೈಲ್ವೆ ಮಾರ್ಗಗಳು ಭಾರತೀಯ ರೈಲ್ವೆಗೆ ಸೇರ್ಪಡೆಯಾಗುತ್ತದೆ.

ಅದಾದ ನಂತರ ಪ್ರತಿಯೊಂದಕ್ಕೂ ಕೂಡ ನಾವು ದೆಹಲಿಯ ಮಂತ್ರಾಲಯದ ಬಾಗಿಲಿಗೆ ಕಾಯಬೇಕಾಗುತ್ತದೆ ಈಗಲೂ ಕೂಡಾ ಅಂದರೆ ಪ್ರಸ್ತುತ ಎಂಬತ್ತೊಂದು ತಾಲ್ಲೂಕುಗಳಲ್ಲಿ ರೈಲ್ವೆ ಮಾರ್ಗ ಇಲ್ಲದಿರುವುದನ್ನು ಕಾಣಬಹುದು.ಇದೆಲ್ಲಾ ಏನೇ ಆಗಲಿ ಇನ್ನು ಮುಂದೆಯಾದರೂ ಕೂಡ ನಮ್ಮ ರಾಜ್ಯವು ಈ ರೀತಿ ವಲಯಗಳಲ್ಲಿ ಮುಂದುವರೆಯಲಿ ಎಂಬುದೇ ನಮ್ಮ ಆಶಯ ಧನ್ಯವಾದಗಳು .