Categories
ಭಕ್ತಿ ಮಾಹಿತಿ ಸಂಗ್ರಹ

ಈ ದೇವಾಲಯದಲ್ಲಿ ಯಾವುದೇ ದೇವರಿಲ್ಲ ಅದರ ಬದಲಾಗಿ ನಾಯಿ ಬೆಕ್ಕುಗಳಿಗೆ ಹಾಗೂ ಇಲಿಗಳಿಗೆ ಪೂಜೆ ಮಾಡಲಾಗುತ್ತದೆ… ಇದರ ಹಿಂದಿನ ಮರ್ಮ ಏನು ಅಂತ ನೀವು ತಿಳಿದುಕೊಳ್ಳಲೇ ಬೇಕು …. !

ನಮ್ಮ ದೇಶದಲ್ಲಿ ಕೆಲವೊಂದು ಆಚಾರ-ವಿಚಾರಗಳು ವಿಚಿತ್ರ ಅಂದರೂ ಕೂಡ ಕೆಲವೊಂದು ಸಾರಿ ಅವುಗಳನ್ನು ನಾವು ನಂಬಲೇಬೇಕು ಏಕೆಂದರೆ ಅವುಗಳು ಕೂಡ ಇವೆ ಇವಾಗಲು ಕೂಡ ನಡೆಯುತ್ತಲೇ ಇವೆ, ಆದರೆ ಇವುಗಳ ಹಿಂದೆ ಒಂದು ಮಾತು ವಿಚಾರ ಇದ್ದೇ ಇರುತ್ತದೆ ಹಾಗಾದರೆ ಬನ್ನಿ ಈ ದೇವಾಲಯದಲ್ಲಿ ಯಾಕೆ ದೇವರಿಲ್ಲ ದೇವರ ಬದಲಾಗಿ ಯಾಕೆ ನಾಯಿ ಬೆಕ್ಕು ಇಲಿಗಳಿಗೆ ಪೂಜೆ ಮಾಡುತ್ತಾರೆ ಎನ್ನುವಂತಹ ಒಂದು ವಿಚಿತ್ರ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ ಬನ್ನಿ.

ಈ ತರದ ಒಂದು ವಿಚಿತ್ರವಾದ ಆಚಾರ-ವಿಚಾರವನ್ನು ಮಾಡುತ್ತಿರುವಂತಹ ಪ್ರದೇಶವಾದರೂ ಯಾವುದು ಎನ್ನುವಂತಹ ಪ್ರಶ್ನೆಗೆ ಉತ್ತರ ಅದು ಇರುವುದು ಬುಲಂದ್ ನಗರದಿಂದ ಹದಿನೈದು ಕಿಲೋಮೀಟರ್ ದೂರ ಇರುವಂತಹ ಒಂದು ದೇವಸ್ಥಾನ, ಈ ದೇವಸ್ಥಾನ ಸ್ಥಳೀಯರು ಹೇಳುವ ಹಾಗೆ ನೂರು ವರ್ಷಗಳ ಹಿಂದಿನ ದೇವಸ್ಥಾನ ಅಂತಹ ಉಲ್ಲೇಖ ಮಾಡಲಾಗಿದೆ. ಇಲ್ಲಿ ಒಂದು ನಾಯಿಯ ಸಮಾಧಿಯ ಮೇಲೆ ಮೂರ್ತಿಯನ್ನು ಕೆತ್ತಿ ಅದನ್ನ ಪೂಜೆ ಮಾಡಲಾಗುತ್ತದೆ.

ನಿಮಗೆ ಗೊತ್ತಿದೆ ಅಥವಾ ಗೊತ್ತಿಲ್ಲವೋ ನಮ್ಮ ಹಿಂದೂ ಸಂಪ್ರದಾಯದಲ್ಲಿ ಭೈರವನ ವಾಹನವಾಗಿ ನಾಯಿಯನ್ನ ಬಳಸಲಾಗುತ್ತದೆ, ಅದಲ್ಲದೆ ಯಾರಿಗಾದರೂ ಶನಿದೋಷ ಇದ್ದರೆ ನಾಯಿಗೆ ತಿಂಡಿ ಕೊಟ್ಟರೆ ಶನಿ ದೋಷ ನಿವಾರಣೆ ಆಗುತ್ತದೆ ಎನ್ನುವುದು ಒಂದು ನಂಬಿಕೆ. ಅಲ್ಲದೆ ಈ ದೇವಸ್ಥಾನದಲ್ಲಿ ಇರುವಂತಹ ಇನ್ನೊಂದು ವಿಶೇಷತೆ ಏನೆಂದರೆ ನದ ಎನ್ನುವಂತಹ ಮೂರ್ತಿಯ ಕಾಲಿಗೆ ಕರಿ ಕಪ್ಪು ಹಗ್ಗವನ್ನು ಕಟ್ಟಿದರೆ ಯಾವುದೇ ಕಷ್ಟಗಳಲ್ಲಿ ಹಾಗೂ ಯಾವುದೇ ಕೋರಿಕೆ ಇರಲಿ ಅದು ನೆರವೇರುತ್ತದೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆ.

ನಮಗೆ ನಿಮಗೆ ಗೊತ್ತಿರುವ ಹಾಗೆ ಬೆಕ್ಕು ಏನಾದರೂ ನಮ್ಮ ಎದುರುಗಡೆ ಹೋದರೆ ಅದನ್ನು ನಾವು ಅಪಶಕುನ ಅಂತ ಕರೆಯುತ್ತೇವೆ ಆದರೆ ಈ ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತದೆ, ಕರ್ನಾಟಕದಲ್ಲಿ ಇರುವಂತಹ ಮಂಡ್ಯ ಜಿಲ್ಲೆಯಲ್ಲಿ ಇರುವಂತಹ ಬೆಕ್ಕಳಲೇ ಎನ್ನುವಂತಹ ಒಂದು ಹಳ್ಳಿಯಲ್ಲಿ ಬೆಕ್ಕಿನ ದೇವಸ್ಥಾನವಿದೆ. ಇಲ್ಲಿರುವಂತಹ ಬೆಕ್ಕನ್ನ ಮಂಗಮ್ಮ ದೇವಿಯ ರೂಪದಲ್ಲಿ ಇಲ್ಲಿನ ಜನರು ಕಾಣುತ್ತಾರೆ.

ಗಣಪತಿಯ ವಾಹನ ಅಂತಹ ತುಂಬಾ ಫೇಮಸ್ ಆಗಿರುವಂತಹ ಪ್ರಾಣಿ ಎಂದರೆ ಅದು ಇಲಿ, ಏನು ಕೂಡ ಸಿಕ್ಕಾಪಟ್ಟೆ ಪೂಜಿಸಲಾಗುತ್ತದೆ, ರಾಜಸ್ಥಾನದಲ್ಲಿ ಇರುವಂತಹ ಕರಣಿ ಮಾತಾ ಮಂದಿರದಲ್ಲಿ ಇಲಿಯನ್ನು ಪೂಜೆ ಮಾಡಲಾಗುತ್ತದೆ, ಮಂದಿರದಲ್ಲಿ ಸುಮಾರು 20,000 ಇಲಿಗಳು,  ಗಳು ಇವೆ ಇಲ್ಲಿರುವಂತಹ ದೇವಿಗೆ ನೈವೇದ್ಯ ನೀಡುವ ಸಂದರ್ಭದಲ್ಲಿ ಇಲಿಗಳು ಕೂಡ ನೈವೇದ್ಯವನ್ನು ನೀಡಲಾಗುತ್ತದೆ. ಇಲ್ಲಿರುವಂತಹ ಗುಹೆಯಲ್ಲಿ ಧರಣಿದೇವಿ ತಪಸ್ಸು ಮಾಡಿದ್ದಾರೆ ಎನ್ನುವಂತಹ ಉಲ್ಲೇಖ ಕೂಡ ಇದೆ.

ಹೀಗೆ ಕೆಲವೊಂದು ಪ್ರಾಣಿಗಳನ್ನು ಕೂಡ ನಮ್ಮ ದೇಶದಲ್ಲಿ ಪೂಜೆ ಮಾಡಲಾಗುತ್ತದೆ ಎನ್ನುವುದಕ್ಕೆ ಮೇಲೆ ಕೊಟ್ಟಿರುವಂತಹ ದೇವಸ್ಥಾನಗಳು ಸಾಕ್ಷಿ, ಈ ಲೇಖನವೇ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನ ಶೇರ್ ಮಾಡುವುದಾಗಲಿ ಹಾಗೂ ಲೈಕ್ ಮಾಡುವುದಾಗಲಿ ಮರೆಯಬೇಡಿ ಹಾಗೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ.

Leave a Reply